ಮಲೆನಾಡಿನಲ್ಲಿ ಖಾಕಿ ಪಿಸ್ತೂಲಿನ ಸದ್ದು: ರೌಡಿ ಲಕ್ಷ್ಮಣನ ಕಾಲಿಗೆ ಗುಂಡೇಟು

ಶಿವಮೊಗ್ಗ: ಆತ ಕುಖ್ಯಾತ ರೌಡಿ, 4 ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ. ಮೂರು ವರ್ಷದಿಂದ ಹುಡುಕ್ತಿದ್ರೂ ಖಾಕಿ ಕೈಗೆ ಸಿಕ್ಕಿರಲಿಲ್ಲ. ಕೊನೆಗೆ ಪೊಲೀಸರಿಗೆ ಸಿಕ್ಕಿದ್ರೂ ತಪ್ಪಿಸಿಕೊಂಡು ಹೋಗೋಕೆ ನೋಡ್ದ. ಇದ್ರಿಂದ ಗುಂಡು ಹಾರಿಸಿ ಪೊಲೀಸರು ಪಾಠ ಕಲಿಸಿದ್ದಾರೆ.

ರೌಡಿ ಲಕ್ಷ್ಮಣನ ಮೇಲೆ ಪೊಲೀಸರ ಫೈರಿಂಗ್..!
ಮಲೆನಾಡಲ್ಲಿ ರೌಡಿಗಳ ಹೆಡೆಮುರಿ ಕಟ್ಟೋಕೆ ಶಿವಮೊಗ್ಗ ಪೊಲೀಸರು ಮುಂದಾಗಿದ್ದಾರೆ. ಬಿಲದಲ್ಲಿರೋ ಒಬ್ಬೊಬ್ಬರನ್ನೂ ಹೊರಗೆ ಎಳೆದು ತರ್ತಿದ್ದಾರೆ. ಮೊನ್ನೆಯಷ್ಟೇ ರೌಡಿ ಲೋಕಿ ಮೇಲೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದ ಪೊಲೀಸರು, ಇದೀಗ ಆತನ ಶಿಷ್ಯನಿಗೆ ಗಾಳ ಹಾಕಿದ್ರು. ರೌಡಿನಿಗ್ರಹ ದಳದ ಸಿಬಿಐ ಗುರುರಾಜ್ & ಅಭಯ್ ಪ್ರಕಾಶ್ ಟೀಂ ರೌಡಿ ಲಕ್ಷ್ಮಣನನ್ನ ಬೆಂಗಳೂರಿನಿಂದ ಶಿವಮೊಗ್ಗಗೆ ಕರೆದೊಯ್ತಿದ್ರು. ಈ ವೇಳೆ ಮೂತ್ರವಿಸರ್ಜನೆಗೆ ಹೋಗೋ ನೆಪದಲ್ಲಿ ತಪ್ಪಿಸಿಕೊಳ್ಳೋಕೆ ಮುಂದಾಗಿದ್ದ.

ಅಷ್ಟೇ ಅಲ್ಲದೇ ಪೊಲೀಸರ ಮೇಲೂ ಹಲ್ಲೆ ನಡೆಸೋಕೆ ಹೋಗಿದ್ದ. ಇದ್ರಿಂದ ಸಿಪಿಐ ಗುರುರಾಜ್, ಶಿವಮೊಗ್ಗ ಹೊರವಲಯದ ಮಲವಗೊಪ್ಪ ಬಳಿ ರೌಡಿ ಲಕ್ಷ್ಮಣನ ಕಾಲಿಗೆ ಗುಂಡು ಹಾರಿಸಿದ್ರು. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ರೌಡಿ ಲಕ್ಷ್ಮಣನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು. ಇನ್ನು 4 ಕೊಲೆ ಕೇಸ್​​ನಲ್ಲಿ ಭಾಗಿಯಾಗಿ 3 ವರ್ಷದಿಂದ ತಪ್ಪಿಸಿಕೊಂಡು ತಿರುಗ್ತಿದ್ದ ಆರೋಪಿಯನ್ನ ಬಂಧಿಸಿರೋ ರೌಡಿನಿಗ್ರಹ ದಳದ ಕಾರ್ಯಕ್ಕೆ ಎಸ್​ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಗುಂಡೇಟು ತಿಂದು ಗಾಯದಿಂದ ನರಳ್ತಿದ್ರೂ ರೌಡಿ ಲಕ್ಷ್ಮಣ ಮಾತ್ರ ತನ್ನ ಗುರು ಲೋಕಿ ಹೆಸ್ರನ್ನ ಜಪಿಸ್ತಿದ್ದ. ಬಳ್ಳಾರಿ ಜೈಲಿನಲ್ಲಿರೋ ಲೋಕಿಗೋಸ್ಕರ ಬದುಕ್ತೀನಿ, ಲೋಕಿಗೋಸ್ಕರನೇ ಸಾಯ್ತೀನಿ ಅಂದ. ಒಟ್ನಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಪೊಲೀಸರು ಹಗಲು ರಾತ್ರಿ ಕಷ್ಟಪಡ್ತಿದ್ದಾರೆ. ರೌಡಿಗಳೆಲ್ಲಾ ಪಾಠ ಕಲಿಸೋಕೆ ಸಜ್ಜಾಗಿದ್ದಾರೆ. ಇದು ಮಲೆನಾಡಿನ ಜನರಿಗೆ ಸಂತಸ ತಂದಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!