CLP, ವಿಪಕ್ಷ ನಾಯಕ ಸ್ಥಾನ ಪ್ರತ್ಯೇಕಿಸಿದ್ರೆ ರಾಜೀನಾಮೆ ನೀಡ್ತೇನೆ -ಸಿದ್ದರಾಮಯ್ಯ

, CLP, ವಿಪಕ್ಷ ನಾಯಕ ಸ್ಥಾನ ಪ್ರತ್ಯೇಕಿಸಿದ್ರೆ ರಾಜೀನಾಮೆ ನೀಡ್ತೇನೆ -ಸಿದ್ದರಾಮಯ್ಯ

ಬೆಂಗಳೂರು: ವಿಪಕ್ಷ ಮತ್ತು ಶಾಸಕಾಂಗ ನಾಯಕತ್ವ ಬೇರ್ಪಡಿಸಿದರೆ ರಾಜೀನಾಮೆ ನೀಡುವುದಾಗಿ ಆಪ್ತರ ಸಭೆಯಲ್ಲಿ ಸಿದ್ದರಾಮಯ್ಯ ಅಂತಿಮ ತೀರ್ಮಾನವನ್ನು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯರ ‘ಕಾವೇರಿ’ ನಿವಾಸದಲ್ಲಿ ನಡೆದ ಆಪ್ತರ ಸಭೆಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಸಿಎಲ್‌ಪಿ ಮತ್ತು ವಿಪಕ್ಷ ನಾಯಕ ಸ್ಥಾನ ಪ್ರತ್ಯೇಕಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಮಾದರಿ ಕರ್ನಾಟಕದಲ್ಲಿ ಅನುಸರಿಸುವುದು ಬೇಡ ಎಂದು ಒತ್ತಡ ಹಾಕಿದ್ದಾರೆ.

ರಾಜ್ಯದಲ್ಲಿ CLP ನಾಯಕರೇ ವಿಪಕ್ಷ ನಾಯಕರಾಗಿರುತ್ತಾರೆ. ಎರಡು ಹುದ್ದೆ ಪ್ರತ್ಯೇಕಿಸುವ ಪರಿಸ್ಥಿತಿ ಕರ್ನಾಟಕದಲ್ಲಿ ಇಲ್ಲ ಎಂದು ಸಿದ್ದರಾಮಯ್ಯ ಎಐಸಿಸಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ವಿಪಕ್ಷ ನಾಯಕನಾಗಿ ಮುಂದುವರಿಯಬೇಕೆಂದು ಇಲ್ಲ. ಬೇರೆ ನಾಯಕರಿಗೆ ಬೇಕಾದ್ರೂ ವಿಪಕ್ಷ ಸ್ಥಾನವನ್ನು ನೀಡಿ. ಆದರೆ ಸಿಎಲ್‌ಪಿ ನಾಯಕರೇ ವಿಪಕ್ಷ ನಾಯಕರಾಗಬೇಕು. ಹುದ್ದೆಯನ್ನು ಪ್ರತ್ಯೇಕಿಸುವುದರಿಂದ ಅನಗತ್ಯ ಗೊಂದಲವೇ ಹೆಚ್ಚಾಗುತ್ತದೆ. ಅಲ್ಲದೆ ಶಾಸಕಾಂಗ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಸದನದಲ್ಲಿ ಮಂಡಿಸಲು 2 ಹುದ್ದೆ ಒಬ್ಬರಿಗಿದ್ರೆ ಅನುಕೂಲವಾಗುತ್ತದೆ. ಮಹಾರಾಷ್ಟ್ರ ಮಾದರಿ ರಾಜ್ಯದಲ್ಲಿ ಅನುಸರಿಸೋದು ಬೇಡ. 2 ಹುದ್ದೆ ಪ್ರತ್ಯೇಕಿಸಿದ್ರೆ ನಾನು ವಿಪಕ್ಷ ನಾಯಕನಾಗಿ ಇರಲ್ಲ ಎಂದು ಆಪ್ತರಿಗೆ ಒತ್ತಡ ಹೇರಿದ್ದಾರೆ.

ಈಗಾಗಲೇ CLP ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಲು ಹೈಕಮಾಂಡ್​ಗೆ ಮನವಿ ಮಾಡುತ್ತೇನೆ ಎಂದು ಆಪ್ತರ ಜೊತೆ ಅಸಮಾಧಾನ ಹೊರಹಾಕಿದ್ದಾರೆ. ಆತುರದ ನಿರ್ಧಾರ ಬೇಡವೆಂದು ಆಪ್ತರು ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!