‘ಬಿ.ಸಿ.ಪಾಟೀಲರಂತೆ ನಾನು JDS ಪಕ್ಷ ಬಿಡಲಿಲ್ಲ, ಅವರೇ ನನ್ನ ಉಚ್ಚಾಟಿಸಿದ್ದರು’

ದಾವಣಗೆರೆ: ನಾನು ಜೆಡಿಎಸ್ ಪಕ್ಷ ಬಿಡಲಿಲ್ಲ, ನನ್ನನ್ನು ಪಕ್ಷದಿಂದಲೇ ಉಚ್ಚಾಟಿಸಿದ್ರು. ನನ್ನನ್ನು ಉಚ್ಚಾಟಿಸಿದ 1 ವರ್ಷದ ಬಳಿಕ ನಾನು ಕಾಂಗ್ರೆಸ್ ಪಕ್ಷ ಸೇರಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಬಿ.ಸಿ.ಪಾಟೀಲ್‌ರಂತೆ ಅಧಿಕಾರಕ್ಕಾಗಿ ಪಕ್ಷ ಬಿಟ್ಟಿಲ್ಲ:
ಆಗ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ. ಸೋನಿಯಾ ಗಾಂಧಿ ನನಗೆ ಆಫರ್ ಕೊಟ್ಟಿದ್ದು ಗೊತ್ತಿಲ್ಲ. ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್‌ಗೆ ಗೊತ್ತಿಲ್ಲದೆ ಮಾತಾಡ್ತಾರೆ. ನಾನು ಬಿ.ಸಿ.ಪಾಟೀಲ್‌ರಂತೆ ಹಣ, ಅಧಿಕಾರಕ್ಕಾಗಿ ಪಕ್ಷ ಬಿಟ್ಟಿಲ್ಲ. ಶ್ರೀನಿವಾಸ್ ಪಟೇಲ್​ಗೆ ಮನೆಗೆ ಹೋಗಿ ಕೋಟಿಗಟ್ಟಲೆ ಹಣ ನೀಡಿದ ನಿದರ್ಶನಗಳು ಇವೆ. ಯಡಿಯೂರಪ್ಪ ಐಬಿಯಲ್ಲಿ ಕೂತು ವ್ಯವಹಾರ ಮಾಡಿದ್ದು ಗೊತ್ತೇ ಇದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬಿಜೆಪಿ ಆಮಿಷವೊಡ್ಡಿ ಚುನಾವಣೆ ನಡೆಸುತ್ತಿದೆ:
ನಾನು ಈಗಾಗಲೇ 7 ಕ್ಷೇತ್ರಗಳಲ್ಲಿ ಉಪ ಚುನಾವಣೆಯ ಪ್ರಚಾರ ನಡೆಸಿದ್ದೇನೆ. ಎಲ್ಲಾ ಕಡೆ ನಿರೀಕ್ಷೆಗೂ ಮೀರಿ ನಮಗೆ‌ ಬೆಂಬಲ ‌ಸಿಕ್ಕಿದೆ. ಬಿಜೆಪಿಯವರು ಕೋಟಿಗಟ್ಟಲೆ ಖರ್ಚು ‌ಮಾಡುತ್ತಿದ್ದಾರೆ. ಯಡಿಯೂರಪ್ಪ ಹೋದ ಕಡೆಯಲ್ಲ ತಮ್ಮ ಅಭ್ಯರ್ಥಿಗಳನ್ನು ಮಂತ್ರಿ ಮಾಡ್ತೀನಿ ಎನ್ನುತ್ತಿದ್ದಾರೆ. ಹಣ, ಅಧಿಕಾರದ ಆಮಿಷವೊಡ್ಡಿ ಚುನಾವಣೆ ನಡೆಸುತ್ತಿದ್ದಾರೆ. ಈ ಎಲ್ಲದರ ಬಗ್ಗೆ ದೂರು‌ ನೀಡಿದ್ದೇವೆ ಎಂದರು.

ನಾನಂದ್ರೆ ಬಿಜೆಪಿ, ಜೆಡಿಎಸ್​ಗೆ ಭಯ:
ಚುನಾವಣಾ ಆಯೋಗ ಅಡಳಿತ ಪಕ್ಷದ ಕೈಗೊಂಬೆಯಾಗಿದೆ. ಈಗಿನ ಮಹಾರಾಷ್ಟ್ರದ ಪರಿಸ್ಥಿತಿ ನೋಡಿ, ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದ್ದಾರೆ. ಕೇಂದ್ರ ಸರ್ಕಾರವೇ ಖುದ್ದು ನಿಂತು ಮಾಡಿದೆ. ಯಾರೇ ಕಾನೂನು ಮೀರಿ ತಪ್ಪು ಮಾಡಿದ್ರೆ ಅದು ತಪ್ಪು. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತೆ. ಹಾಗಾಗಿ ಬಿಜೆಪಿ ಹಾಗೂ ಜೆಡಿಎಸ್​ಗೆ ನಾನು ಎಂದ್ರೆ ಭಯ ಇದೆ ಎಂದರು

Related Tags:

Related Posts :

Category:

error: Content is protected !!