ಜನರ ಜೀವ ಉಳಿಸೋ ಬದಲು ಭ್ರಷ್ಟಾಚಾರದಲ್ಲಿ ತೊಡಗಿರೋದು ಸರಿಯೇ ಬಿಎಸ್‌ವೈಗೆ ಸಿದ್ದು ಪ್ರಶ್ನೆ

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ಸರ್ಕಾರದ ನಡುವಿನ ಸಮರ ಮುಂದುವರಿದಿದೆ. ಇವತ್ತು ಮತ್ತೇ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದಿರುವ ಸಿದ್ದರಾಮಯ್ಯ, ಸಾವು-ನೋವಿನ ಕಾಲದಲ್ಲಿ ಸರ್ಕಾರ ಜನರ ಜೀವ ಉಳಿಸಬೇಕೇ ಹೊರತು ಭ್ರಷ್ಟಾಚಾರದಲ್ಲಿ ತೊಡಗಿದೆ ಇದು ಸರಿಯೇ? ಎಂದು ಕಟುಕಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಕೊವಿಡ್​ ಕಷ್ಟದ ಕಾಲದಲ್ಲಿ ವಿಪಕ್ಷಗಳು ಸಹಕಾರ ನೀಡಬೇಕು. ಅದನ್ನು ಬಿಟ್ಟು ಆರೋಪಿಸುವುದು ಸರಿಯೇ ಎಂದು ಸಿಎಂ BSY ಕೇಳ್ತಿದ್ದಾರೆ. ಆದ್ರೆ ನಾನು ಕೇಳುತ್ತಿದ್ದೇನೆ, ಸಾವು-ನೋವಿನ ಕಾಲದಲ್ಲಿ ಜೀವ ಉಳಿಸಬೇಕೇ ಹೊರತು, ಭ್ರಷ್ಟಾಚಾರ ಸರಿಯೇ? ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ ಹೇಳಿ ಎಂದು ಟ್ವೀಟ್ ಮಾಡಿದ್ದಾರೆ.

ನಮ್ಮಿಂದ ಸಹಕಾರ ನಿರೀಕ್ಷಿಸುವಂತಹ ಬಿಜೆಪಿ ಸರ್ಕಾರ, ಕೊವಿಡ್​ ಕಾಲದಲ್ಲಿ ನಮ್ಮ ಸರ್ಕಾರಕ್ಕೆ ಯಾಕೆ ಸಹಕರಿಸಲಿಲ್ಲ? ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದ್ದೇಕೆ? ರಾಜ್ಯಸ್ಥಾನದ ನಮ್ಮ ಸರ್ಕಾರ ಉರುಳಿಸಲು ಹೊರಟಿದ್ಯಾಕೆ? ಎಂದು ಸರಣಿ ಟ್ವೀಟ್‌ ಮೂಲಕ ಬಿಜೆಪಿಗೆ ಮಾಜಿ ಸಿಎಂ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ.

ಕರ್ನಾಟಕದಲ್ಲಿ ನಿತ್ಯ 5,000ಕ್ಕೂ ಹೆಚ್ಚು ಕೊರೊನಾ ಪ್ರಕರಣ ದಾಖಲಾಗುತ್ತಿವೆ. ಪ್ರತಿದಿನ ಕೊರೊನಾದಿಂದ 80-90 ಜನರು ಸಾಯುತ್ತಿದ್ದಾರೆ. ಆದ್ರೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದೆ ಎನ್ನುತ್ತಿದ್ದಾರೆ. ಹೀಗಾಗಿ ವೆಂಟಿಲೇಟರ್ ರಫ್ತಿಗೆ ಅವಕಾಶಕ್ಕೆ ನೀಡುತ್ತಿದ್ದಾರಂತೆ. ಇದು ಹೃದಯಹೀನ‌ ಸರ್ಕಾರವೆಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ರಾಜ್ಯದಲ್ಲಿ ಕೊರೊನಾ ಅನಿಯಂತ್ರಿತವಾಗಿ ಹರಡುವುದಕ್ಕೂ ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೂ ನೇರವಾದ ಸಂಪರ್ಕವಿದೆ. ಈ ಕಾರಣಕ್ಕಾಗಿಯೇ ನಾವು ಅಭಿಯಾನದ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೇವೆ ಸಿಎಂ ಅವರೇ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಬಿಎಸ್‌ವೈಗೆ ಮಾತಿನ ಏಟು ನೀಡಿದ್ದಾರೆ.

 

 

 

Related Tags:

Related Posts :

Category:

error: Content is protected !!