‘ಹಿಂದುತ್ವ ಅನ್ನೋ ಅಫೀಮು ನೀಡಿ BJP ಅಧಿಕಾರಕ್ಕೆ ಬಂದಿದೆ, ಇನ್ನೂ 5 ವರ್ಷ ಇವರೇ ಇದ್ರೇ..’

ಬೆಂಗಳೂರು: ಹಿಂದುತ್ವ ಅನ್ನೋ ಅಫೀಮನ್ನು ದೇಶದಲ್ಲಿರುವ ಯುವಕರಿಗೆ ನೀಡಿ BJP ಅಧಿಕಾರಕ್ಕೆ ಬಂದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈಗ ಅದೇ ಯುವಕರು ಪ್ರಧಾನಿ ಮೋದಿಯ ಹುಟ್ಟುಹಬ್ಬವನ್ನ ನಿರುದ್ಯೋಗ ದಿನವೆಂದು ಆಚರಿಸುತ್ತಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆಯನ್ನು ಮೋದಿ ಹಾಳು ಮಾಡಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಹಾಳಾಗುವುದಕ್ಕೆ ಮೋದಿಯೇ ನೇರ ಕಾರಣ. ಪ್ರಧಾನಿ ಮೋದಿ ಕೊಟ್ಟ ಯಾವುದೇ ಭರವಸೆ ಈಡೇರಿಸಿಲ್ಲ. ಇಡೀ ದೇಶದಲ್ಲಿ ನಿರುದ್ಯೋಗ ತಾಂಡವ ಆಡ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಇನ್ನೂ 5 ವರ್ಷ ಇವರೇ ಇದ್ರೆ..
ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯರು ವಾಗ್ದಾಳಿ ನಡೆಸಿದ್ದು ಬಿಜೆಪಿ ಸರ್ಕಾರ ತನ್ನ ಒಂದು ವರ್ಷದ ಅವಧಿಯಲ್ಲಿ ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ. ಸರ್ಕಾರದಲ್ಲಿ ದುಡ್ಡಿಲ್ಲ ಅಂದ್ರೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಆದರೆ, ಸಾಲ ತೆಗೆದುಕೊಂಡಷ್ಟು ಬಡ್ಡಿ ಜಾಸ್ತಿಯಾಗುತ್ತಾ ಹೋಗುತ್ತೆ ಎಂದು ಹೇಳಿದ್ದಾರೆ. ಇನ್ನೊಂದು ವರ್ಷದಲ್ಲಿ ಮತ್ತೊಂದು ಲಕ್ಷ ಕೋಟಿ ಸಾಲ ಮಾಡಿದ್ರೆ ಯಾರು ಹೊಣೆ? ಇನ್ನೂ 5 ವರ್ಷ ಇವರೇ ಇದ್ರೆ ಸ್ವಾತಂತ್ರ್ಯ ಬಂದಾಗಿನಿಂದ ಎಷ್ಟು ಸಾಲ ಇತ್ತೋ ಅಷ್ಟು ಸಾಲ ಮಾಡಿ ಇವರು ಹೋಗುತ್ತಾರೆ ಅಂತಾ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನನ್ನ 5 ವರ್ಷದ ಅವಧಿಯಲ್ಲಿ ಆರ್ಥಿಕ ಶಿಸ್ತು ಕಾಪಾಡಿದ್ದೆ. ಆದ್ರೆ ಬಿಜೆಪಿ ಸರ್ಕಾರದಲ್ಲಿ ಆರ್ಥಿಕ ಶಿಸ್ತು ದಾಟಿದ್ದಾರೆ. ಈಗ ಸಿಎಂ ಯಡಿಯೂರಪ್ಪ ಖಾಲಿ ಕೈಯಲ್ಲಿ ದೆಹಲಿಯಿಂದ ವಾಪಸ್ ಆಗಿದ್ದಾರೆ. ಇದನ್ನ ಮುಚ್ಚಿಡಲು ಮಂತ್ರಿ ಮಂಡಲ ವಿಸ್ತರಣೆ ಎಂದು ಹೇಳಿದರು. ಇದಕ್ಕೂ ಹೈಕಮಾಂಡ್​ ಒಪ್ಪಿಕೊಂಡಿಲ್ಲ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯನ್ನು ಟೀಕಿಸಿದ್ದಾರೆ.

Related Tags:

Related Posts :

Category:

error: Content is protected !!