ಯಡಿಯೂರಪ್ಪ ಹಳೆಯ ಕೇಸ್​ಗಳನ್ನು ಕೆದಕಲಾ.. ಅಂತ್ಯಾಕೆ ಸಿಟ್ಟಾದ್ರು ಸಿದ್ರಾಮಯ್ಯ?

ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದಲ್ಲಾಗಿದೆ ಎನ್ನಲಾದ ಭ್ರಷ್ಟಾಚಾರಗಳ ಬಗ್ಗೆ ಇತ್ತೀಚೆಗೆ ಪದೇ ಪದೆ ಪ್ರಸ್ತಾಪಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ತಿರುಗೇಟು ನೀಡಲು ಅವರ ಹಳೆಯ ಹ್ಯೂಬ್ಲೋ ವಾಚ್ ಪ್ರಕರಣ ಟಿಕ್ ಟಿಕ್ ಅನ್ನತೊಡಗಿದೆ.

ಈ ಬಗ್ಗೆ ಮೈಸೂರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹ್ಯೂಬ್ಲೋ ವಾಚ್ ವಿವಾದ‌ ಮುಗಿದು ಹೋದ ಕಥೆ, ಮತ್ಯಾಕೆ ಅದು? ನಾನು ಯಡಿಯೂರಪ್ಪರ ಹಳೆಯ ಕೇಸ್ ಬಗ್ಗೆ ಮಾತಾಡ್ಲಾ? ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ವಾಚ್ ವಿಚಾರ ಮುಗಿದು ಹೋಗಿದೆ. ನಾನು ಸರ್ಕಾರಕ್ಕೆ ಆ ವಾಚ್ ವಾಪಸ್ಸು ಕೊಟ್ಟಿದ್ದೇನೆ. ಎಸಿಬಿ ತನಿಖೆ ಆಗಿ ಕ್ಲೀನ್ ಚಿಟ್ ಸಿಕ್ಕಿದೆ. ನಾನೇನು ವಾಚ್ ಸರ್ಕಾರದ ದುಡ್ಡಿನಿಂದ ತೆಗೆದುಕೊಂಡಿದ್ನಾ ? ಸರ್ಕಾರದಿಂದ ಲೂಟಿ ಮಾಡಿದ ದುಡ್ದಿನಿಂದ ವಾಚ್ ಖರೀದಿಸಿದ್ನಾ ? ಅದನ್ನ ಯಾರೋ ಕೊಟ್ಟಿದ್ರು ಅದಕ್ಕೆ ಅವರು ಅಫಿಡೇವಿಟ್ ಕೊಟ್ಟಿದ್ದಾರೆ. ಈಗ ಅದನ್ನ ಮತ್ಯಾಕೆ ತೆಗೆದಿದ್ದಾರೆ? ಇದು ಜನರನ್ನ ದಾರಿ ತಪ್ಪಿಸುವ ಕೆಲಸ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಖಾರಾವಾಗಿ ಪ್ರತಿಕ್ರಿಯಿಸಿದ್ದಾರೆ.

Related Tags:

Related Posts :

Category:

error: Content is protected !!