ಕೃತಜ್ಞತೆ ಇಲ್ಲದ ಕಾರಣಕ್ಕೆ ಎಚ್. ವಿಶ್ವನಾಥ್​ ಮಂತ್ರಿ ಆಗಲಿಲ್ಲ: ಟ್ವೀಟ್ ಮೂಲಕ ಕುಟುಕಿದ ಸಿದ್ದರಾಮಯ್ಯ

2008ರಲ್ಲಿ ವಿಧಾನಸಭೆಗೆ ಟಿಕೆಟ್ ಕೊಡಿಸಿದ್ದು ಯಾರೆಂದು ವಿಶ್ವನಾಥ್ ನೆನಪು ಮಾಡಿಕೊಳ್ಳಬೇಕು. ಆ ಮೇಲೆ ನನ್ನ ವಿರುದ್ಧ ಮಾತನಾಡಲಿ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

  • TV9 Web Team
  • Published On - 22:59 PM, 13 Jan 2021
ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಎಚ್. ವಿಶ್ವನಾಥ್​ಗೆ ಟಿಕೆಟ್ ಕೊಡಿಸಿದ್ದು ಯಾರೆಂದು ನೆನಪಿಸಿಕೊಳ್ಳಲಿ. ಲೋಕಸಭೆ, 2008ರಲ್ಲಿ ವಿಧಾನಸಭೆಗೆ ಟಿಕೆಟ್ ಕೊಡಿಸಿದ್ದು ಯಾರೆಂದು ವಿಶ್ವನಾಥ್ ನೆನಪು ಮಾಡಿಕೊಳ್ಳಬೇಕು. ಆ ಮೇಲೆ ನನ್ನ ವಿರುದ್ಧ ಮಾತನಾಡಲಿ ಎಂದು ಟ್ವೀಟ್​ ಮೂಲಕ ಎಚ್​.ವಿಶ್ವನಾಥ್​​ಗೆ ಸಿದ್ದರಾಮಯ್ಯ ಕುಟುಕಿದ್ದಾರೆ. ಕೃತಜ್ಞತೆ ಇಲ್ಲದೆ ಇರುವ ಕಾರಣಕ್ಕೆ ಎಚ್. ವಿಶ್ವನಾಥ್​ರನ್ನ ಮಂತ್ರಿ ಮಾಡಿಲ್ಲ ಎಂದು ವಿಶ್ವನಾಥ್ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಪಕ್ಷದ ಶಾಸಕರನ್ನು ಖರೀದಿಸಿ, ಅವರ ಬಲದಿಂದ ಅಧಿಕಾರ ಅನುಭವಿಸುತ್ತಿರುವ ಬಿಜೆಪಿಯವರು ಕಾಂಗ್ರೆಸ್ ಪಕ್ಷಕ್ಕೆ ನಾಯಕರಿಲ್ಲ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ಹೇಳುವ ಈ ವಿಚಾರ ತಮಾಷೆಯಾಗಿದೆ. ಸ್ವಂತಬಲದಲ್ಲಿ ಚುನಾವಣೆ ಗೆದ್ದು ಪೂರ್ಣಾವಧಿ ಸರ್ಕಾರ ನಡೆಸಿದ್ದು ಕಾಂಗ್ರೆಸ್ ಪಕ್ಷ. ಅವರೇನಾದರೂ ಐದು ಪೂರ್ತಿ ವರ್ಷ ಮುಖ್ಯಮಂತ್ರಿಯಾಗಿದ್ದಾರಾ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ.

ರಾಜಕೀಯ ಜೀವನ ಮುಗಿದ ಮೇಲೆ ಮೈಸೂರಿನಲ್ಲಿ ಇರುತ್ತೇನೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ