ಪ್ರಧಾನಿ ಮೋದಿಗೆ ಶುಭ ಕೋರಿ, ಆಕ್ರೋಶ ಹೊರ ಹಾಕಿದ ಸಿದ್ದರಾಮಯ್ಯ

ಬೆಂಗಳೂರು: ಇಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೋದಿಯವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ದೇವರು ಅವರಿಗೆ ಆರೋಗ್ಯ, ಆಯುಷ್ಯ ಎಲ್ಲವನ್ನೂ ಕೊಡಲಿ ಎಂದು ಹಾರೈಸಿದ್ದಾರೆ.

ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಸಿದ್ದು ಕೇಂದ್ರ ಸರ್ಕಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇವರು ಅವರಿಗೆ ಆರೋಗ್ಯ, ಆಯುಷ್ಯ ಎಲ್ಲವನ್ನೂ ಕೊಡಲಿ ಆದರೆ, ಅವರು ಮಾಡಿರುವ ಸಾಧನೆ ಬಗ್ಗೆ ಕೋಟ್ಯಂತರ ರೂ. ವೆಚ್ಚದ ಜಾಹೀರಾತು ನೀಡಿದ್ದಾರೆ. ಕೋಟ್ಯಂತರ ಹಣ ವ್ಯಯಿಸಿ ಜಾಹೀರಾತಿಗೆ ನನ್ನ‌ ಸಂಪೂರ್ಣ ವಿರೋಧವಿದೆ. ಮೋದಿ ಪ್ರಧಾನಿಯಾದ ಮೇಲೆ ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ನೋಟ್ ಬ್ಯಾನ್, ಜಿಎಸ್​ಟಿಯಿಂದ ಕೆಟ್ಟ ಆರ್ಥಿಕ ನೀತಿಯಿಂದ ದೇಶದ ಆರ್ಥಿಕ ಪರಿಸ್ಥಿತಿ ತೀರ ಕೆಳಮಟ್ಟಕ್ಕೆ ಹೋಗಿದೆ. ಜಿಡಿಪಿ ದರ ಸಾರ್ವಕಾಲಿಕ ಕುಸಿತ ಕಂಡಿದೆ.

ಜಿಡಿಪಿ ದರ ಮೈನಸ್​ ತಲುಪಿದರೆ ಉದ್ಯೋಗ ಸೃಷ್ಟಿಯಾಗಲ್ಲ. ಕೃಷಿ ಕ್ಷೇತ್ರ ಬಿಟ್ಟರೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಶೂನ್ಯವಾಗಿದೆ. ಹೊಸದಾಗಿ ಉದ್ಯೋಗ ಕೊಟ್ಟೇ ಇಲ್ಲ. ಇರುವ ಉದ್ಯೋಗಗಳೂ ಹೋಗಿರುವುದು ಕಳವಳಕಾರಿ. ಉತ್ಪಾದಕ ವಲಯ ಕುಸಿದಿದೆ, ಎಂಎಸ್​ಎಂಇ ಮುಚ್ಚಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಎತ್ತರಕ್ಕೆ ಹೋಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

Related Tags:

Related Posts :

Category: