ಖಾಸಗಿನತಕ್ಕೆ ಸಂಬಂಧಿಸಿ ವಿವಾದ ಹಬ್ಬಿದ ನಂತರ ಭಾರತದಲ್ಲಿ ವಾಟ್ಸಾಪ್ ಡೌನ್ಲೋಡ್ನಲ್ಲಿ ಕುಸಿತ ಕಂಡಿದೆ. ಆದರೆ, ಸಿಗ್ನಲ್ ಆ್ಯಪ್ ಬಳಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ!
ದೆಹಲಿ: ವಾಟ್ಸಾಪ್ ತ್ಯಜಿಸಿ ಸಿಗ್ನಲ್ ಆ್ಯಪ್ ಬಳಕೆಯತ್ತ ಭಾರತದಲ್ಲಂತೂ ಒಲವು ಹೆಚ್ಚುತ್ತ ಸಾಗಿದೆ. ವಾಟ್ಸ್ಆ್ಯಪ್ ಖಾಸಗಿತನಕ್ಕೆ ಧಕ್ಕೆ ತರುವುದಿಲ್ಲವೆಂದು ಸ್ಪಷ್ಟನೆ ನೀಡಿದ ಬಳಿಕವೂ ಭಾರತದಲ್ಲಿ ವಾಟ್ಸ್ಆ್ಯಪ್ಗೆ ಹಿನ್ನಡೆ ತಪ್ಪಿಲ್ಲ. ಈವರೆಗೆ ಭಾರತದಲ್ಲೇ 40 ಲಕ್ಷ ಡೌನ್ಲೋಡ್ಗಳನ್ನು ಕಂಡಿರುವ ಸಿಗ್ನಲ್ ಜನವರಿ 6 ರಿಂದ 10 ರವರೆಗೆ 23 ಲಕ್ಷ ಸಲ ಡೌನ್ಲೋಡ್ ಆಗಿದೆ. ಇದೇ ವೇಳೆ ಟೆಲಿಗ್ರಾಂ 15 ಲಕ್ಷ ಡೌನ್ಗಳನ್ನು ಕಂಡಿದೆ.
ವಾಟ್ಸ್ಆ್ಯಪ್ ಖಾಸಗಿತನದ ವಿವಾದ ಹಬ್ಬುವ ಮುನ್ನ ಸಿಗ್ನಲ್ ಆ್ಯಪ್ ಭಾರತದಲ್ಲಿ ಅಷ್ಟೇನೂ ಪರಿಚಿತ ಆ್ಯಪ್ ಆಗಿರಲಿಲ್ಲ. ಜನವರಿ 1ರಿಂದ 5ರವರೆಗೆ 24 ಸಾವಿರ ಡೌನ್ಲೋಡ್ಗಳನ್ನಷ್ಟೇ ಸಿಗ್ನಲ್ ಕಂಡಿತ್ತು. ಆದರೆ ಜನವರಿ 6 ರಿಂದ ಆದ ಡೌನ್ಲೋಡ್ಗೆ ಈ ಮೊದಲ ಅಂಕಿ ಸಂಖ್ಯೆಗಳನ್ನು ಹೋಲಿಸಿದರೆ ಸಿಗ್ನಲ್ ಡೌನ್ಲೋಡ್ನಲ್ಲಿ ಶೇ.9,483 ರಷ್ಟು ಹೆಚ್ಚಳ ಕಂಡುಬಂದಿದೆ! ಆದರೆ ಇದೇ ವೇಳೆ ವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಜನವರಿ 6 ರಿಂದ 10ರವರೆಗೆ 13 ಲಕ್ಷ ಡೌನ್ಲೋಡ್ಗಳೊಂದಿಗೆ ಶೇ.34ರಷ್ಟು ಕುಸಿತ ಕಂಡಿದೆ.
ವಾಟ್ಸ್ಆ್ಯಪ್ ತನ್ನ ಸೋದರ ಸಂಸ್ಥೆ ಫೇಸ್ಬುಕ್ಗೆ ಬಳಕೆದಾರರ ಖಾಸಗಿ ಮಾಹಿತಿಯನ್ನು ‘ಫೇಸ್ಬುಕ್ ಬ್ಯುಸಿನೆಸ್’ಗಾಗಿ ಅವಕಾಶ ಒದಗಿಸುವುದಾಗಿ ತನ್ನ ಹೊಸ ನೀತಿಯಲ್ಲಿ ಹೇಳಿತ್ತು. ವಾಟ್ಸ್ಆ್ಯಪ್ ಬ್ಯಾಟರಿ ಪ್ರಮಾಣ, ಸಿಗ್ನಲ್ ಸಾಮರ್ಥ್ಯ, ಆ್ಯಪ್ ವರ್ಷನ್, ಬ್ರೌಸಿಂಗ್ ಹಿಸ್ಟರಿ, ಮೊಬೈಲ್ ನೆಟ್ವರ್ಕ್, ಮೊಬೈಲ್ ಸಂಖ್ಯೆ, ಮೊಬೈಲ್ ಆಪರೇಟರ್, ಐಎಸ್ಪಿ, ಭಾಷೆ, ಟೈಮ್ ಜೋನ್, ವಹಿವಾಟಿನ ಮಾಹಿತಿ, ಐಪಿ ಅಡ್ರೆಸ್ ಸೇರಿ ಇತರ ಮಾಹಿತಿಯನ್ನು ವಾಟ್ಸ್ಆ್ಯಪ್ ಇದೀಗ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಜೊತೆ ಹಂಚಿಕೊಳ್ಳುವ ಪಾಲಿಸಿ ತಂದಿತ್ತು.
How to | ಸಿಗ್ನಲ್ ಆ್ಯಪ್ ಬಳಕೆ ಹೇಗೆ? ಡೆಸ್ಕ್ಟಾಪ್ಗೆ ಡೌನ್ಲೋಡ್ ಮಾಡಬಹುದಾ?