ಅತ್ಯಾಚಾರ ಆರೋಪ: ಸಚಿವ ಧನಂಜಯ ಮುಂಡೆ ವಿರುದ್ಧ ದೂರು ಸಲ್ಲಿಸಿದ ಗಾಯಕಿ

ತಮಗೆ ಆಗಿರುವ ಅನ್ಯಾಯದ ಬಗ್ಗೆ ತಮ್ಮ ಟ್ವಿಟ​ರ್ ಖಾತೆಯಲ್ಲಿ ವಿವರಿಸಿರುವ ಗಾಯಕಿ ರೇಣು ಶರ್ಮಾ ತನಗೆ ಸಹಾಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಟ್ಯಾಗ್​ ಮಾಡಿದ್ದಾರೆ.

  • TV9 Web Team
  • Published On - 11:58 AM, 13 Jan 2021
ಸಚಿವ ಧನಂಜಯ ಮುಂಡೆ

ಮುಂಬೈ: ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ  (Nationalist Congress Party) ಹಿರಿಯ ನಾಯಕ ಮತ್ತು ರಾಜ್ಯ ಸಚಿವ ಧನಂಜಯ ಮುಂಡೆ ಅತ್ಯಾಚಾರ ಎಸಗಿದ್ದಾರೆಂದು ಗಾಯಕಿ ರೇಣು ಶರ್ಮಾ ಪೊಲೀಸರಿಗೆ ದೂರನ್ನು ಸಲ್ಲಿಸಿದ್ದಾರೆ.

ತನ್ನ ಮೇಲೆ ಮಹಾರಾಷ್ಟ್ರ ರಾಜ್ಯ ಸಚಿವ ಧನುಂಜಯ ಮುಂಡೆ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ದೂರನ್ನು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್​ಗೆ ಬರೆದಿರುವ ಪತ್ರದಲ್ಲಿ ಗಾಯಕಿ ರೇಣು ಶರ್ಮಾ ತಿಳಿಸಿದ್ದಾರೆ. ತನಗಾದ ಅನ್ಯಾಯಕ್ಕೆ ಸೂಕ್ತ ನ್ಯಾಯ ಒದಗಿಸಬೇಕು. ಧನಂಜಯ ಮುಂಡೆ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪತ್ರದಲ್ಲಿ ಹೇಳಿದ್ದಾರೆ.

ತಮಗೆ ಆಗಿರುವ ಅನ್ಯಾಯದ ಬಗ್ಗೆ ತಮ್ಮ ಟ್ವಿಟ​ರ್ ಖಾತೆಯಲ್ಲಿ ವಿವರಿಸಿರುವ ಗಾಯಕಿ ರೇಣು ಶರ್ಮಾ ತನಗೆ ಸಹಾಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಟ್ಯಾಗ್​ ಮಾಡಿದ್ದಾರೆ.

ಕೆಲವು ಸಮಯದಿಂದ ನನ್ನ ಬಗ್ಗೆ ಅತ್ಯಾಚಾರದ ಆರೋಪಗಳು ಕೇಳಿಬರುತ್ತಿದೆ. ಆದರೆ ಇದು ಸುಳ್ಳು. ಅಲ್ಲದೇ 2003ರಿಂದ ರೇಣು ಶರ್ಮಾಳ ಅಕ್ಕನಾದ ಕರುಣಾ ಶರ್ಮಾದೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿದ್ದೇನೆ. ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಈ ವಿಚಾರ ನನ್ನ ಕುಟುಂಬಕ್ಕೂ ತಿಳಿದಿದೆ ಎಂದು ಸ್ಪಷ್ಟಪಡಿಸಿದ ರಾಜ್ಯ ಸಚಿವ ಧನಂಜಯ ಮುಂಡೆ ಗಾಯಕಿ ರೇಣು ಶರ್ಮಾರವರ ಆರೋಪಗಳು ಸುಳ್ಳಾಗಿವೆ ಎಂದು ತಿಳಿಸಿದ್ದಾರೆ.

IMA caseI ಹೊಸ ಸಾಕ್ಷ್ಯಾಧಾರಗಳ ಹುಡುಕಾಟದಲ್ಲಿ ಸಿಬಿಐ.. ಐಪಿಎಸ್​ ಅಧಿಕಾರಿಗಳ ಆಸ್ತಿ ಜಪ್ತಿ ಯಾವಾಗ?