For a change.. ಕಡುವೈರಿ ಹಾವು-ಮುಂಗುಸಿ ಕಾದಾಟದಲ್ಲಿ ಸೋತಿದ್ದು ಯಾವುದು ಗೊತ್ತಾ!?

  • sadhu srinath
  • Published On - 15:57 PM, 29 Oct 2020

ದಾವಣಗೆರೆ: ಸಾಮಾನ್ಯವಾಗಿ ಕಡುವೈರಿಗಳಾದ ಹಾವು ಮತ್ತು ಮುಂಗುಸಿ ಕಾದಾಟಕ್ಕೆ ಇಳಿದರೆ ಸೋಲುವುದು ಹಾವೇ! ಆದ್ರೆ ಬದಲಾವಣೆಗಾಗಿ ಎಂಬಂತೆ ದಾವಣಗೆರೆಯ ಹೊಸಕುಂದುವಾಡ ಗ್ರಾಮದಲ್ಲಿ ನಡೆದ‌ ಘಟನೆ ಇದನ್ನು ತಿರುವು ಮುರುವು ಗೊಳಿಸಿದೆ. ಹಾವಿಗೆ ಹೆದರಿದ ಮುಂಗುಸಿ ಬದುಕಿದ್ಯಾ ಬಡ ಜೀವವೇ ಎನ್ನುವಂತೆ ಅದರ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಓಡಿ ಹೋಗಿದೆ!

ಹಾವಿನ ಬಿಗಿತಕ್ಕೆ ಒದ್ದಾಡಿದ ಮುಂಗುಸಿ ಪಲಾಯನ ಮಾಡಿತು!
ಮುಂಗುಸಿಯ ತನ್ನ ಹೊಟ್ಟೆಗೆ ಸುತ್ತಿಕೊಂಡ ಹಾವಿನ ಬಿಗಿ ಹಿಡಿತಕ್ಕೆ ಸಿಲುಕಿ ಒದ್ದಾಡಿದೆ. ಹಾವಿನ ಬಿಗಿತದಿಂದ ಬಿಡಿಸಿಕೊಳ್ಳಲು ಸಾಕಷ್ಟು ಒದ್ದಾಡಿದೆ. ಕೊನೆಗೆ ಹಾವಿನಿಂದ ತಪ್ಪಿಸಿ ಕೊಳ್ಳಲು ಆಗದೆ ಹಾವನ್ನೇ ಎಳೆದೆಕೊಂಡ ಹೋಗಿದೆ. ಸ್ಥಳೀಯರು ಹಾವು ಮುಂಗುಸಿಯ ಕಾದಾಟವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕೊನೆಗೆ ಮುಂಗುಸಿ ಪಾರಾಗಿರುವುದು ಸ್ಥಳೀಯರ ಕಣ್ಣಿಗೆ ಬಿದ್ದಿದೆ.