ಕೊರೊನಾ ಆರ್ಭಟದ ಮಧ್ಯೆ ಕಲಬುರಗಿ DC ಗೆ ಉರಗ ಕಾಟ

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹಗಲುರಾತ್ರಿ ದುಡಿಯುತ್ತಿರುವ ಜಿಲ್ಲಾಧಿಕಾರಿ ಶರತ್ ಬಿ ನಿವಾಸದಲ್ಲಿ ಇಂದು ಇದಕ್ಕಿದ್ದಂತೆ ಒಂದು ಹಾವು ಪ್ರತ್ಯಕ್ಷವಾಗಿದೆ.

ಜಿಲ್ಲಾಧಿಕಾರಿಯ ನಿವಾಸದ ಗಾರ್ಡನ್ ಮೂಲಕ ಮನೆಯೊಳಕ್ಕೆ ಬಂದಿದ್ದ ಹಾವನ್ನು ಕಂಡ ಶರತ್​ಗೆ ಒಂದು ಕ್ಷಣ ಅಚ್ಚರಿಯೂ ಸಹ ಆಯಿತು. ಕೂಡಲೇ, ಉರಗ ತಜ್ಞರನ್ನು ಕರೆಸಿದರು. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸ್ನೇಕ್ ಪ್ರಶಾಂತ್ ಹಾವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಟ್ರಿಂಕೆಟ್ ಜಾತಿಗೆ ಸೇರಿದ್ದ ಹಾವನ್ನು ಕಂಡ ಶರತ್ ತಮ್ಮ ಮೊಬೈಲ್‌ನಲ್ಲಿ ಅದನ್ನು ಚಿತ್ರೀಕರಿಸಿದರು.

Related Tags:

Related Posts :

Category:

error: Content is protected !!