ಕೊರೆಯುವ ಚಳಿಯಲ್ಲಿ ಹೆತ್ತ ತಾಯಿಯನ್ನ ಮನೆಯಿಂದ ಹೊರ ಹಾಕಿದ ಪಾಪಿ

ಯಾದಗಿರಿ: ತಾಯಿಯನ್ನ ದೇವರಿಗೆ ಹೋಲಿಸುತ್ತಾರೆ. ಮಗು ಏನೇ ತಪ್ಪು ಮಾಡಲಿ ಎಲ್ಲವನ್ನು ಸಯಿಸುವವಳೇ ತಾಯಿ. ಒಬ್ಬಳೇ ತಾಯಿ ಹತ್ತಾರೂ ಮಕ್ಕಳನ್ನ ಸಾಕಬಳ್ಳಲು. ಆದರೆ ಅದೇ ಮಗ ತಾಯಿಯನ್ನು ಬೀದಿ ಪಾಲು ಮಾಡ್ತಾನೆ. ಇದೇ ರೀತಿ ಕೊರೆಯುವ ಚಳಿಯಲ್ಲಿ ಹೆತ್ತ ತಾಯಿಯನ್ನ ಪಾಪಿ ಪುತ್ರನೊಬ್ಬ ಮನೆಯಿಂದ ಹೊರ ದಬ್ಬಿದ್ದಾನೆ.

ಕಳೆದ 4 ತಿಂಗಳಿಂದ ಸುರಪುರ ತಾಲೂಕಿನ ಕೆಂಭಾವಿ ಎಪಿಎಂಸಿ ಆವರಣದಲ್ಲೇ ವೃದ್ಧೆ ಆಶ್ರಯ ಪಡೆದಿದ್ದಾರೆ. ಕೆಂಭಾವಿಯ ಶಿವಾಜಿ ನಗರದ ನಿವಾಸಿ 80 ವರ್ಷದ ಹೊನ್ನಮ್ಮರನ್ನ ಪುತ್ರ ಸಿದ್ದಪ್ಪ ಮನೆಯಿಂದ ಹೊರಹಾಕಿದ್ದಾನೆ. ಅನ್ನ, ನೀರು ಇಲ್ಲದೆ ವಯಸ್ಸಾದ ಸಮಯದಲ್ಲಿ ಜೊತೆಗಿರದೆ ಪಾಪಿ ಮಗ ತಾಯಿಯನ್ನ ಬಿಟ್ಟು ಹೋಗಿದ್ದಾನೆ. ಸದ್ಯ ಸ್ಥಳೀಯ ರೈತರು ವೃದ್ಧೆ ಹೊನ್ನಮ್ಮಗೆ ಉಪಚಾರ ಮಾಡುತ್ತಿದ್ದಾರೆ. ರೈತರು ನೀಡಿದ ಬಿಸ್ಕೆಟ್, ಟೀ ಕುಡಿದೇ ವೃದ್ಧೆ ಜೀವನ ಸಾಗಿಸುತ್ತಿದ್ದಾರೆ.

Related Tags:

Related Posts :

Category: