ಆಡಿದ ಮಾತಿನಂತೆ ನಡೆದುಕೊಳ್ಳಲಿಲ್ಲ ಶಾರುಖ್ ಖಾನ್ -ಗಂಗೂಲಿ

BCCI ಬಿಗ್​​ಬಾಸ್ ಆಗಿರೋ ಸೌರವ್ ಗಂಗೂಲಿ ಮೊನ್ನೆ ತಾನೇ ನಾನು ತಂಡದಿಂದ ಹೊರ ಹೋಗಲು ಕೋಚ್ ಗ್ರೇಗ್ ಚಾಪೆಲ್ ಒಬ್ಬರೇ ಕಾರಣರಲ್ಲ ಅನ್ನೋ ವಿಷಯವನ್ನ ಬಾಯ್ಬಿಟ್ಟಿದ್ರು. ಆದರೆ ಈಗ ದಾದಾ IPL​ನಲ್ಲಿ ಕಿಂಗ್ ಖಾನ್ ಶಾರುಖ್ ಖಾನ್​​ ತಮ್ಮನ್ನ ನಂಬಿಸಿ ಕೈಕೊಟ್ಟ ವಿಚಾರವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಸೀಸನ್​ನಲ್ಲಿ ಸೌರವ್ ಗಂಗೂಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ರು. ಆಗ ತಂಡದ ಮಾಲೀಕ ಶಾರುಖ್ ಖಾನ್, ಗಂಗೂಲಿಗೆ ತಂಡದ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನ ನೀಡೋದಾಗಿ ಭರವಸೆ ಕೊಟ್ಟಿದ್ರಂತೆ. ಆದರೆ ನಂತರದ ದಿನಗಳಲ್ಲಿ ಶಾರುಖ್ ಸೌರವ್ ಬೆನ್ನಿಗೆ ನಿಲ್ಲಲಿಲ್ಲ. ಇದರಿಂದಲೇ ನನ್ನ ನಾಯಕತ್ವದಲ್ಲಿ KKR ವೈಫಲ್ಯ ಅನುಭವಿಸಿತ್ತು ಅನ್ನೋದನ್ನ ಗಂಗೂಲಿ ಬಾಯ್ಬಿಟ್ಟಿದ್ದಾರೆ.

ಇದು ನಿನ್ನ ತಂಡ. ನಾನು ತಂಡದ ಆಯ್ಕೆ ಮತ್ತು ಇತರೆ ವಿಚಾರಗಳಲ್ಲಿ ತಲೆ ಹಾಕುವುದಿಲ್ಲ ಅಂತಾ ಶಾರುಖ್ ಖಾನ್ IPLಸೀಸನ್-4ರಲ್ಲಿ ಭರವಸೆ ನೀಡಿದ್ರು ಅಂತಾ ಗೌತಮ್ ಗಂಭೀರ್ ಸಂದರ್ಶನ ಒಂದರಲ್ಲಿ ಹೇಳಿದ್ದನ್ನ ಗಮನಿಸಿದ್ದೆ. ನಾನು ನಾಯಕನಾಗಿದ್ದಾಗ ಶಾರುಖ್​ಗೆ ಹೇಳಿದ್ದು ಇದೆ. ಆದ್ರೆ ಶಾರುಖ್, ನನ್ನ ಮಾತಿಗೆ ಗೌರವ ನೀಡಲಿಲ್ಲ. ಎಲ್ಲದರಲ್ಲೂ ತಲೆಹಾಕುತ್ತಿದ್ರು ಎಂದು ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ.

ತಂಡಕ್ಕೆ ಒಬ್ಬನೇ ನಾಯಕನಿದ್ದಾಗ ಮಾತ್ರ ಅದು ಯಶಸ್ವಿಯಾಗಿ ಮುನ್ನಡೆಯೋದಕ್ಕೆ ಸಾಧ್ಯ. ಆದ್ರೆ ಕೊಲ್ಕತ್ತಾ ತಂಡದಲ್ಲಿ ನಾಯಕತ್ವದ ವಿಚಾರವಾಗಿಯೇ ಕಲಹ ಎದ್ದಿತ್ತು ಅನ್ನೋದನ್ನು ದಾದಾ ಬಿಚ್ಚಿಟ್ಟಿದ್ದಾರೆ. ನೀವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ನೋಡಿ. ಅಲ್ಲಿ ಧೋನಿ ಮಾತ್ರ ಎಲ್ಲವನ್ನು ನಿರ್ಧಾರ ಮಾಡ್ತಾರೆ. ಹಾಗೇ ಮುಂಬೈ ಇಂಡಿಯನ್ಸ್ ತಂಡದಲ್ಲೂ ಯಾರೂ ರೋಹಿತ್ ಶರ್ಮಾ ಬಳಿ ಹೋಗಿ ಈ ಆಟಗಾರರನ್ನ ಆಯ್ಕೆ ಮಾಡಿ ಅಂತಾ ಹೇಳೋದಿಲ್ಲ ಎಂದು ಸೌರವ್ ಗಂಗೂಲಿ ಪರೋಕ್ಷವಾಗಿ ಶಾರುಖ್​ಗೆ ಚಾಟಿಯೇಟು ಬೀಸಿದ್ದಾರೆ.

ಚಿಂತನಾ ಪ್ರಕ್ರಿಯಿಯೇ ಅಲ್ಲಿ ಸಮಸ್ಯೆಯಾಗಿತ್ತು. ನಮಗೆ ನಾಲ್ಕು ನಾಯಕರು ಬೇಕು ಎಂದು ಕೋಚ್ ಜಾನ್ ಬುಕಾನನ್ ನಂಬಿದ್ದರು. ಇದು ಕೇವಲ ಭಿನ್ನಾಭಿಪ್ರಾಯವಾಗಿತ್ತು, ನಾಲ್ವರು ನಾಯಕರು ನೇಮಕಗೊಂಡ ಬಳಿಕ ನಾನು ನನ್ನ ರೀತಿಯಲ್ಲಿ ತಂಡವನ್ನ ಮುನ್ನಡೆಸುತ್ತೇನೆ ಎಂದು ಬುಕಾನನ್ ಹಠ ಹಿಡಿದಿದ್ರು. ಆದ್ರೆ ಆ ವ್ಯವಸ್ಥೆಗೆ ಒಬ್ಬ ನಾಯಕನ ಅವಶ್ಯಕತೆಯಿದೆ ಅನ್ನೋದನ್ನ ಎಲ್ರೂ ಮರೆತೆ ಬಿಟ್ಟಿದ್ರು ಎಂದು ಹೇಳೋ ಮೂಲಕ ದಾದಾ KKR ಫ್ರಾಂಚೈಸ್​ ಅವತ್ತಿಗೆ ನಾವಿಕನಿಲ್ಲದ ದೋಣಿಯಂತಾಗಿತ್ತು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.

Related Tags:

Related Posts :

Category:

error: Content is protected !!