ಸಾರಿಗೆ ನಿಗಮದ ನೌಕರರಿಗೆ ವಿಶೇಷ ಕೋವಿಡ್ ಸೆಂಟರ್, ಎಲ್ಲಿ?

ಬೆಂಗಳೂರು:ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಸಾಯುವವರ ಸಂಖ್ಯೆಯು ಸಹ ಏರುತ್ತಲೆ ಇದೆ.

ಹೀಗಾಗಿ ರಾಜ್ಯ ಸಾರಿಗೆ ನಿಗಮ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ BMTC ಹಾಗೂ KSRTC ನೌಕರರಿಗೆ ಕೊರೊನಾ ಸೋಂಕಿನಿಂದ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ BMTC ಮತ್ತು KSRTC ನೌಕರರಿಗೆ ಪ್ರತ್ಯೇಕವಾಗಿ ಕೋವಿಡ್ ಸೆಂಟರ್ ತೆರೆಯಲು ಚಿಂತನೆ ನಡೆಸಿದೆ.

200 ಬೆಡ್ ವ್ಯವಸ್ಥೆ
ಬೆಂಗಳೂರಿನ ಪೀಣ್ಯ ಬಸ್ ನಿಲ್ದಾಣದಲ್ಲಿ ವಿಶೇಷ ಕೋವಿಡ್ ಸೆಂಟರ್ ಓಪನ್ ಮಾಡಲು ಸಾರಿಗೆ ನಿಗಮ ಮುಂದಾಗಿದ್ದು, ಇನ್ನು ಮುಂದೆ ಸಾರಿಗೆ ನೌಕರರಿಗೆ ಕೊರೊನಾ ಬಂದರೆ ಖಾಸಗಿ ಆಸ್ಪತ್ರೆಗಳಿಗೆ ಬೆಡ್ ಗಳಿಗಾಗಿ ಅಲೆದಾಡುವ ಪರಿಸ್ಥಿತಿ ಇರುವುದಿಲ್ಲ.

ಜೊತೆಗೆ ಇತ್ತೀಚಿನ ದಿನಗಳಲ್ಲಿ ಸಾರಿಗೆ ನೌಕರರಿಗೆ ಕೊರೊನಾ ಸೋಂಕು ತಗುಲುವ ಪ್ರಮಾಣ ಹೆಚ್ಚಾಗುತ್ತಿರುವ ಪರಿಣಾಮದಿಂದಾಗಿ ಸಾರಿಗೆ ನಿಗಮ ಈ ತೀರ್ಮಾನಕ್ಕೆ ಬಂದಿದೆ. ಆಗಸ್ಟ್ 5ರಂದು ಪೀಣ್ಯ ಬಸ್ ನಿಲ್ದಾಣದಲ್ಲಿ ಕೋವಿಡ್ ಸೆಂಟರ್ ತೆರೆಯಲು ಮುಂದಾಗಿದ್ದು, ಈ ಕೋವಿಡ್ ಸೆಂಟರ್ ನಲ್ಲಿ 200 ಬೆಡ್ ವ್ಯವಸ್ಥೆ ಇರಲಿದೆ.

Related Tags:

Related Posts :

Category: