BSYಗೆ ಕೊರೊನಾ: ಹುಚ್ಚರಾಯಸ್ವಾಮಿಗೆ ವಿಶೇಷ ಪೂಜೆ, ಯಾರಿಂದ?

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಕೊರೊನಾ ಸೋಂಕು ತಗುಲಿದ್ದು, ರಾಜ್ಯಾದ್ಯಂತ ಸಿಎಂ ಬೇಗ ಗುಣಮುಖರಾಗಬೇಕು ಎಂದು ವಿಶೇಷ ಪೂಜೆಗಳು, ಪ್ರಾರ್ಥನೆಗಳು ನೆರವೇರುತ್ತಿವೆ. ಅಭಿಮಾನಿಗಳು, ಹಿತೈಶಿಗಳು ದೇವರ ಮೊರೆ ಹೋಗಿದ್ದಾರೆ.

ಸಿಎಂ ಬಿಎಸ್​ವೈ ಕೊರೊನಾದಿಂದ ಗುಣಮುಖರಾಗಲಿ‌ ಎಂದು ಶಿಕಾರಿಪುರ ತಾಲೂಕಿನ ಜನತೆ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಯಡಿಯೂರಪ್ಪ ಅವರ ಆರಾಧ್ಯ ದೈವ ಹುಚ್ಚರಾಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯಲ್ಲಿ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.

ವೀರಭದ್ರೇಶ್ವರನಿಗೆ ರುದ್ರಾಭಿಷೇಕ
ಇನ್ನು ಗದಗದ ಬೆಟಗೇರಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಿಎಂ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ರುದ್ರಾಭಿಷೇಕ ಮಾಡಿಸಿದ್ದಾರೆ. ನಾಡಿನ ದೊರೆ ಬಿಎಸ್​ವೈ ಕೊರೊನಾ ಗೆದ್ದು ಬರಲೆಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೊರೊನಾ ವೈರಸ್ ಮುಕ್ತ ಮಾಡು ಎಂದು ವೀರಭದ್ರೇಶ್ವರ ದೇವರ ಮೊರೆಹೋಗಿದ್ದಾರೆ.

101 ಗಣಪತಿ ದೇಗುಲದಲ್ಲಿ ಪೂಜೆ
ಯಡಿಯೂರಪ್ಪ ಅಭಿಮಾನಿಗಳ ಬಳಗ ಮೈಸೂರಿನ ಅಗ್ರಹಾರದ 101 ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸಿಎಂ ಯಡಿಯೂರಪ್ಪ, ಗೃಹ ಸಚಿವ ಅಮಿತ್ ಶಾ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಎಸ್‌ವೈ, ಅಮಿತ್ ಶಾ ಫೋಟೋ ಹಿಡಿದು ಕೊರೊನಾ ಮುಕ್ತ ದೇಶವಾಗಲಿ ಎಂದು ಘೋಷಣೆ ಕೂಗಿದ್ದಾರೆ.

Related Tags:

Related Posts :

Category: