ಅತ್ತ ರಾಮಮಂದಿರಕ್ಕೆ ಶಿಲಾನ್ಯಾಸ ನಡೆಯುತ್ತಿದ್ದರೆ.. ಇತ್ತ ಪೇಜಾವರ ಶ್ರೀಗಳ ಸ್ಮರಣೆ ಅನನ್ಯ

ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯುತ್ತಿದ್ದರೆ, ಇತ್ತ ಜಿಲ್ಲೆಯಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೀಠಕ್ಕೆ ವಿಶೇಷ ಪೂಜೆ ನೆರವೇರಿತು. ಅಯೋಧ್ಯೆಯ ರಾಮ ಜನ್ಮಭೂಮಿ ಹಾಗೂ ಮಂದಿರದ ನಿರ್ಮಾಣಕ್ಕಾಗಿ ನಡೆಸಿದ ಹೋರಾಟಕ್ಕೆ ತಮ್ಮ ಕೊನೆಯ ಉಸಿರು ಇರೋವರೆಗೂ ಅಹರ್ನಿಶಿ ಶ್ರಮಿಸಿದ ಶ್ರೀ ವಿಶ್ವೇಶತೀರ್ಥರಿಗೆ ಭಕ್ತಿ ಗೌರವ ಸಮರ್ಪಣೆ ನಡೆಸಲಾಯಿತು.

ಅಯೋಧ್ಯೆ ರಾಮ ಜನ್ಮಭೂಮಿಯ ಪವಿತ್ರ ಆಂದೋಲನಕ್ಕೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಕೊಡುಗೆ, ಮಾರ್ಗದರ್ಶನ ಹಾಗೂ ಶ್ರೀಗಳು ನೀಡಿದ ಸ್ಫೂರ್ತಿ ಮತ್ತು ನೇತೃತ್ವವನ್ನ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲಾಯಿತು. ಪೇಜಾವರ ಶ್ರೀ ವಿಶ್ವೇಶತೀರ್ಥರ ಭಾವಚಿತ್ರ ಮತ್ತು ಪೀಠಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಠದ ಶಿಷ್ಯರು ಪಾರಾಯಣ ನಡೆಸಿ ನಂತರ ಮಂಗಳಾರತಿ ಸಂಪನ್ನಗೊಳಿಸಿದರು. –ಹರೀಶ್ ಪಾಲೇಚ್ಚಾರ್


Related Tags:

Related Posts :

Category: