AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಿತಕವಿತೆ: ಇಡೀ ಜೀವಯಾನವೇ ಒಂದು ಬೊಗಸೆ ನೀರಾದದ್ದು

‘ಕವಿತೆಯ ಬರವಣಿಗೆಯು ನಮ್ಮ ಒಳಗಿನ ಅಗತ್ಯದಿಂದ ಆಗುವಂತಹದ್ದು. ಆ ಅಗತ್ಯವನ್ನು ಅನುಸರಿಸಿ ಮೂಡುವ ಪ್ರತಿಮೆ/ರೂಪಕವು ತನ್ನ ಅರ್ಥ ಮತ್ತು ಸಮೃದ್ಧತೆಯಿಂದ ನನ್ನನ್ನು ಆವರಿಸಿಕೊಳ್ಳುತ್ತದೆ. ಕೆಲವೊಮ್ಮೆ ತತ್‍ಕ್ಷಣಕ್ಕೆ ಅದರ ಅರ್ಥ ಹೊಳೆಯದೆ ಹೋಗಬಹುದು. ಆದರೆ ಆ ಪ್ರತಿಮೆಯು ತನ್ನ ಚೈತನ್ಯದಿಂದ ಸ್ಪಷ್ಟ ರೂಪ ಪಡೆಯತೊಡಗುತ್ತ, ತನ್ನ ತೀವ್ರತೆಯಿಂದಲೇ ಮತ್ತೊಂದು ಪ್ರತಿಮೆಯನ್ನು ತನ್ನೆಡೆಗೆ ಸೆಳೆಯುತ್ತದೆ ಅಥವಾ ಮತ್ತೊಂದು ಪ್ರತಿಮೆಯ ಕಡೆಗೆ ನಿರ್ದೇಶಿಸುತ್ತದೆ.‘ ಜ. ನಾ. ತೇಜಶ್ರೀ

ಅವಿತಕವಿತೆ: ಇಡೀ ಜೀವಯಾನವೇ ಒಂದು ಬೊಗಸೆ ನೀರಾದದ್ದು
ಶ್ರೀದೇವಿ ಕಳಸದ
|

Updated on:Jan 31, 2021 | 11:54 AM

Share

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಅಂದಹಾಗೆ ಈವತ್ತಿಗೆ ಮೂರು ವರುಷಗಳಾದವು ಕವಿ ಎಸ್.​ ಮಂಜುನಾಥ ಅವರು ಮರೆಯಾಗಿ. ಈ ಸಂದರ್ಭದಲ್ಲಿ ಕವಿ ಜ. ನಾ ತೇಜಶ್ರೀ ಅವರ ‘ಈ ಜೀವಯಾನ’ ನಿಮ್ಮ ಓದಿಗೆ. ಜೊತೆಗೆ ಕಾಲದ ಸೊಕ್ಕು’.

ಪರಿಕಲ್ಪನೆ : ಶ್ರೀದೇವಿ ಕಳಸದ

ಬೇಂದ್ರೆಯವರು ಹೇಳುತ್ತಾರೆ; ‘ಭಾಷೆ ಬೆದರಿ ಕಾವ್ಯವಾಗುತ್ತದೆ.’ ತೇಜಶ್ರೀ ಕವನದಲ್ಲಿ ಭಾಷೆ ಬೆದರಿ, ಬೆವರಿ, ಮಿಂಚಿ, ಮಳೆಗರೆದು ಸುಖದ ಅನುಭವವನ್ನೂ, ಸಾವಿನ ಅನುಭವವನ್ನೂ, ಮರುಹುಟ್ಟಿನ ವಿಸ್ಮಯವನ್ನೂ ಕೊಡುತ್ತ ಕಾವ್ಯವಾಗುತ್ತದೆ. ಡಾ. ಯು. ಆರ್. ಅನಂತಮೂರ್ತಿ

ಈ ಜೀವಯಾನ

ಆ ನಿಮ್ಮ ಮೊಗ್ಗುನಗು ಏನಕ್ಕೆಳಸುತ್ತಿತ್ತು ಸುಮ್ಮನೇ ಅದು ಏನ ಹಂಬಲಿಸುತ್ತಿತ್ತು?

ಅರಳೀಮರದಡಿಯಲ್ಲಿ ಕುಳಿತು ಆಗಷ್ಟೆ ಅರಳಿದ ಕೆಂಪು ಚಿಗುರೆಲೆಯ ನೋಡುತ್ತ ನೋಡುತ್ತ ಹೊರಟಿತ್ತು ಮೊಗ್ಗನಗುವಂಥ ಉದ್ಗಾರ ‘…ದುಃಖಗೀತೆ!’

ಎಂಥಾ ದುಃಖವದು ಮಾತಲ್ಲಿ, ಆ ನಗುವಲ್ಲಿ! ಗಂಟಲಿಂದ ಹೊರಟು ಎದೆಹೊಕ್ಕಿ ಕರುಳ ಮುಟ್ಟಿ ಮತ್ತೆ ಗಂಟಲಿಗೇ ಒದ್ದುಕೊಳ್ಳುವ ದುಃಖ ಅದೆಂಥಾ ದುಃಖ

ದನಿಗೂ ಅದೇ ತೂಕ ಭವದ ಭಾರ ಕಳಚುವ ಮಾತು, ಅದು ಸದಾ ಆಗುತ್ತಿದ್ದ ಕವಿತೆ.

ಆ ಕ್ಷಣವೇ ‘ಹಕ್ಕಿಪಲ್ಟಿ’ ಹೊಡೆದದ್ದು, ಅಗೋ ಅಲ್ಲಿ, ‘ಕಲ್ಲ ಪಾರಿವಾಳಗಳು ಬೇಟ’ವಾಡಿದ್ದು, ‘ನಂದಬಟ್ಟಲಿ’ನಂತ ಸತಿಯ ಸ್ನೇಹ ಕಣ್ಣಕಾಡಿಗೆಯಾದದ್ದು, ಮಗಳೇ ಸೃಜಿಸುವ ಸಮುದ್ರವಾದದ್ದು, ಕಣ್ಣಾಚೆ ಮರೆಯಾಗುವ ಮೊದಲು ಊರಿದ ಕವಿತೆಯ ಬೀಜಕ್ಕಾಗಿ ಇಡೀ ಜೀವಯಾನವೇ ಒಂದು ಬೊಗಸೆ ನೀರಾದದ್ದು

ಕವಿ ಎಸ್​​. ಮಂಜುನಾಥ್

ತೇಜಶ್ರೀ ನುರಿತ ಕವಿ. ಭಾಷೆಯ ಬಗ್ಗೆ ತುಂಬಾ ಸೂಕ್ಷ್ಮ ಗ್ರಹಿಕೆಗಳಿರುವ ಪ್ರಬುದ್ಧೆ. ಭಾಷೆಯನ್ನು ಎಚ್ಚರಿಕೆಯಿಂದ ಬಳಸುವ ಮತ್ತು ತನ್ನ ಸಂವೇದನೆಗಳ ಬಗ್ಗೆ ವಿಮರ್ಶಾತ್ಮಕ ಎಚ್ಚರವೂ, ಸೃಜನಶೀಲ ಅಭಿರುಚಿಯೂ ಜಂಟಿಯಾಗಿಯೇ ಕೆಲಸ ಮಾಡುವ ಲೇಖಕಿ. ಕವಿ ಭಾವ ಪ್ರತಿಮಾ ಪುನರ್​ಸೃಷ್ಟಿ ಅವರ ಕವಿತೆಗಳ ಮೂಲಕ ಸಿದ್ಧಿಸುವುದನ್ನು ಮತ್ತೆ ಮತ್ತೆ ಕಂಡಾಗ ಇವರ ಬಗ್ಗೆ ಮೂಡುವ ಅಭಿಮಾನ, ಹೆಮ್ಮೆ ಸಣ್ಣದಲ್ಲ. ನರೇಂದ್ರ ಪೈ

***

ಕಾಲಸೊಕ್ಕು ಬಾಗಿಲ ಬಳಿ ಏನೋ ಸದ್ದಾಗಿ ಅಗುಳಿ ತೆಗೆದರೆ ಕುಳಿತಿತ್ತು ಕಪ್ಪೆಯೊಂದು ಹೊಸ್ತಿಲ ಹೊರಗೆ, ಪಕಪಕನಾಡುವ ಅದರ ಗಂಟಲು ಭಯಹುಟ್ಟಿಸುವ ದೊಡ್ಡ ಕಣ್ಣುಗಳು.

ಕರೆ ಬೇಕಿರಲಿಲ್ಲ ಅದಕ್ಕೆ ಒಳಬರಲು ಬರುವುದು-ಹೋಗುವುದು ಎರಡೂ ಕಣ್ಣುಮುಚ್ಚಾಲೆಯಾಟವಷ್ಟೆ ಎಂಬಂತೆ ಬಂತದು ಕುಪ್ಪಳಿಸುತ್ತ, ಎಷ್ಟೊಂದು ಅರ್ಥಗಳಿವೆ ಕುಪ್ಪಳಿಸುವುದಕ್ಕೆಂದು ನನಗೆ ತೋರಿಸಲೆಂಬಂತೆ.

ಕಪ್ಪೆಯಂತೆ ಕುಪ್ಪಳಿಸಿ ಕಾಲ ನನ್ನೊಳಗೆ ಒಮ್ಮೆ ಆಗ ಹಕ್ಕಿಯಂತೆ ಜೀವ ಹಾರಿ, ಮಿದುಳು ಮಿಡಿದಾಗಲೆ ಕರುಳೂ ಮಿಡಿದು ಎಲ್ಲವೂ ಕಾಲನೆದೆಯ ಮೇಲೆ ಕುಣಿವ ಕಾಲಸೊಕ್ಕು.

***

ಕೈಬರಹದೊಂದಿಗೆ ತೇಜಶ್ರೀ

ಕವಿಮಾತು:  ಕವಿತೆಯ ಬರವಣಿಗೆಯು ನಮ್ಮ ಒಳಗಿನ ಅಗತ್ಯದಿಂದ ಆಗುವಂತಹದ್ದು. ಆ ಅಗತ್ಯವನ್ನು ಅನುಸರಿಸಿ ಮೂಡುವ ಪ್ರತಿಮೆ/ರೂಪಕವು ತನ್ನ ಅರ್ಥ ಮತ್ತು ಸಮೃದ್ಧತೆಯಿಂದ ನನ್ನನ್ನು ಆವರಿಸಿಕೊಳ್ಳುತ್ತದೆ. ಕೆಲವೊಮ್ಮೆ ತತ್‍ಕ್ಷಣಕ್ಕೆ ಅದರ ಅರ್ಥ ಹೊಳೆಯದೆ ಹೋಗಬಹುದು. ಆದರೆ ಆ ಪ್ರತಿಮೆಯು ತನ್ನ ಚೈತನ್ಯದಿಂದ ಸ್ಪಷ್ಟ ರೂಪ ಪಡೆಯತೊಡಗುತ್ತ, ತನ್ನ ತೀವ್ರತೆಯಿಂದಲೇ ಮತ್ತೊಂದು ಪ್ರತಿಮೆಯನ್ನು ತನ್ನೆಡೆಗೆ ಸೆಳೆಯುತ್ತದೆ ಅಥವಾ ಮತ್ತೊಂದು ಪ್ರತಿಮೆಯ ಕಡೆಗೆ ನಿರ್ದೇಶಿಸುತ್ತದೆ. ಕಾವ್ಯದಲ್ಲಿ ‘ಕ್ಷಣ’ ಅನ್ನುವುದೂ ಇದೆ, ‘ಪ್ರಕ್ರಿಯೆ’ (ಪ್ರಾಸೆಸ್) ಅನ್ನುವುದೂ ಇದೆ. ಒಂದು ‘ಕ್ಷಣ’ ದಲ್ಲಿ ಹೊಳೆಯುವ ರೂಪಕ/ಪ್ರತಿಮೆಯು ಕವಿತೆಯ ‘ಪ್ರಕ್ರಿಯೆ’ಯಲ್ಲಿಯೂ ಬೆಳೆದಿರಬೇಕು. ಹೀಗೆ ಇವೆರಡು ಪರಸ್ಪರ, ಪರಸ್ಪರರಿಗಾಗಿ ತುಡಿಯಲು ಶುರುವಾದಾಗ ಹೃದಯದ ಭಾಷೆಯಾಗಿ ಆರಂಭವಾಗುವ ಕಾವ್ಯವು ವಿಚಾರ, ತರ್ಕ, ರಕ್ತದ ಭಾಷೆ, ಸಂವೇದನೆ, ಅನ್ವೇಷಣೆ, ಹೊಳಹು, ಹುಡುಕಾಟ, ಸತ್ಯಕ್ಕಾಗಿ ಹುಡುಕಾಟ, ವಿಚಾರದ ಮರುಪರೀಕ್ಷೆ, ನುಗ್ಗಿ ಬರುವ ಶಬ್ದಜಾಲವನ್ನು ಭೇದಿಸಿ ನೋಡುವ ಧ್ಯಾನ… ಹೀಗೆ ಇನ್ನೂ ಏನೇನೋ ಇದರೊಳಗೆ ಸೇರಿಕೊಳ್ಳತೊಡಗುತ್ತ, ನನ್ನನ್ನೇ ನಾನು ಹೊಸದಾಗಿ ನೋಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆ ಸೋಜಿಗಕ್ಕಾಗಿ ನಾನು ಕವಿತೆ ಬರೆಯುತ್ತೇನೆ, ಓದುತ್ತೇನೆ. ಜ. ನಾ. ತೇಜಶ್ರೀ

***

ಪರಿಚಯ: ಜ. ನಾ. ತೇಜಶ್ರೀ ಅವರ ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಮಾಗಿಕಾಲದ ಸಾಲುಗಳು, ಕ್ಯಾಪ್ಟನ್ ಕವಿತೆಗಳು- ಕವನ ಸಂಕಲನಗಳು ಪ್ರಕಟಗೊಂಡಿವೆ . ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ- ಅನುವಾದಿತ ಕೃತಿಗಳು. ಇತ್ತೀಚೆಗೆ ಬೆಳ್ಳಿಮೈ ಹುಳ ಕಥಾ ಸಂಕಲನ ಪ್ರಕಟಗೊಂಡಿದೆ.

ಅವಿತಕವಿತೆ: ಮಿದುಳಿನಲಿ ಹುಟ್ಟಿದ ಅವನ ಚಿತ್ರ

Published On - 11:40 am, Sun, 31 January 21

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ