ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ಪ್ರಬಲ ಸ್ಫೋಟ: ಸಾವಿನ ಸಂಖ್ಯೆ ಆರಕ್ಕೆ ಏರಿಕೆ, ಹಲವರಿಗೆ ಗಾಯ

ಟರ್ಕಿಯ ಇಸ್ತಾಂಬುಲ್​ನಲ್ಲಿ ಪ್ರಬಲ ಸ್ಫೋಟವಾಗಿದ್ದು, ಹಲವರಿಗೆ ಗಾಯಗಳಾಗಿವೆ.

ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ಪ್ರಬಲ ಸ್ಫೋಟ: ಸಾವಿನ ಸಂಖ್ಯೆ ಆರಕ್ಕೆ ಏರಿಕೆ, ಹಲವರಿಗೆ ಗಾಯ
ಸಾಂದರ್ಭಿಕ ಚಿತ್ರ
TV9kannada Web Team

| Edited By: Ramesh B Jawalagera

Nov 13, 2022 | 9:19 PM

ಇಸ್ತಾಂಬುಲ್: ಟರ್ಕಿಯ ಇಸ್ತಾಂಬುಲ್​ನ (Turkey’s Istanbul) ಜನನಿಬಿಡ ಪ್ರದೇಶದಲ್ಲಿ ಇಂದು(ಭಾನುವಾರ ) ಸಂಜೆ ಪ್ರಬಲ ಸ್ಫೋಟ(Blast) ಸಂಭವಿಸಿದೆ. ಘಟನೆಯಲ್ಲಿ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗದ್ದು, ಹಲವು ಜನರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.  ಇನ್ನು ಘಟನಾ ಸ್ಥಳಕ್ಕೆ ಅಂಬ್ಯುಲೆನ್ಸ್, ಅಗ್ನಿಶಾಮಕದಳ ಹಾಗೂ ಪೊಲೀಸರು ಧಾವಿಸಿದ್ದಾರೆ.

ಇಸ್ತಾಂಬುಲ್​ನ ಹೃದಯ ಭಾಗವಾಗಿರುವ ಇಸ್ತಿಕ್ಲಾಲ್ ಅವೆನ್ಯೂದಲ್ಲಿ ಸ್ಫೋಟ ಸಂಭವಿಸಿದ್ದು, 11 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ, ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಅಂಬ್ಯುಲೆನ್ಸ್, ಅಗ್ನಿಶಾಮಕದಳ ಹಾಗೂ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಸ್ಫೋಟದ ಭಯಾನಕ ಶಬ್ಧ ಕೇಳಿ ಜನರು ಭಯಭೀತರಾಗಿ ಹಿಂದಕ್ಕೆ ಓಡಿ ಹೋಗಿದ್ದಾರೆ. ಆ ವಿಡಿಯೋವನ್ನು NonMua ಖಾತೆಯಿಂದ ಟ್ವಿಟ್ಟರ್​ನಲ್ಲಿ ಶೇರ್ ಮಾಡಲಾಗಿದೆ.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada