ಸಿದ್ದಲಿಂಗಯ್ಯ ನುಡಿನಮನ : ತಮ್ಮನ್ನು ತಾವೇ ಹಾಸ್ಯಕ್ಕೆ ಒಳಪಡಿಸಿಕೊಳ್ಳುತ್ತಿದ್ದುದರ ಹಿಂದೆ ತಾತ್ವಿಕತೆ ಇತ್ತು

Obituary : ‘ಅಪ್ಪಟ ರಾಜಕಾರಣ ಮಾಡುವುದು ಬೇರೆ. ಆದರೆ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಖಚಿತವಾದ ರಾಜಕೀಯ ದೃಷ್ಟಿಕೋನವನ್ನು ರೂಪಿಸಿಕೊಳ್ಳಬಹುದಿತ್ತು. ದೇವನೂರು ಮಹದೇವ ಮತ್ತು ಸಿದ್ದಲಿಂಗಯ್ಯನವರನ್ನು ತುಲನಾತ್ಮಕವಾಗಿ ನೋಡಿದಾಗ ನನಗನ್ನಿಸಿದ್ದು ಇದು. ಹೊಲೆಮಾದಿಗರ ಹಾಡಿನಲ್ಲಿ ಇದ್ದಂತಹ ಫೆರೋಶಿಯಸ್​ನೆಸ್​ ಕಳೆದುಹೋಯಿತು ಅನ್ನಿಸಿತು.’ ಡಾ. ಬಸವರಾಜ ಕಲ್ಗುಡಿ

ಸಿದ್ದಲಿಂಗಯ್ಯ ನುಡಿನಮನ : ತಮ್ಮನ್ನು ತಾವೇ ಹಾಸ್ಯಕ್ಕೆ ಒಳಪಡಿಸಿಕೊಳ್ಳುತ್ತಿದ್ದುದರ ಹಿಂದೆ ತಾತ್ವಿಕತೆ ಇತ್ತು
ಡಾ. ಸಿದ್ದಲಿಂಗಯ್ಯ ಮತ್ತು ಡಾ. ಬಸವರಾಜ ಕಲ್ಗುಡಿ
Follow us
ಶ್ರೀದೇವಿ ಕಳಸದ
|

Updated on:Jun 11, 2021 | 11:02 PM

ಸಿದ್ದಲಿಂಗಯ್ಯನವರು ನಾನು ಒಂದೇ ವಯಸ್ಸಿನವರು. ಆಗ ತಾನೇ ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್ಸಿಗೆ ಸ್ಥಳಾಂತರಗೊಂಡಿತ್ತು. ಎಂ.ಎ ಓದುತ್ತಿದ್ದೆವು. ಒಟ್ಟು ನಲವತ್ತು ವರ್ಷಗಳ ಒಡನಾಟ. ದಲಿತ ಚಳವಳಿಗೆ ಬಹಳ ದೊಡ್ಡ ಕ್ರಿಯಾತ್ಮಕ ಶಕ್ತಿಯಾಗಿರತಕ್ಕಂಥವರು. ಅವರ ಹೊಲೆಮಾದಿಗರ ಹಾಡು ಚಳವಳಿಗಳಿಗೆ ವಿಶೇಷ ಲಯ ಕೊಟ್ಟಿತು. ಕಾರ್ಮಿಕ ಸಂಘಟನೆಯಲ್ಲಿ, ದಲಿತರ ಸಂಘಟನೆಯಲ್ಲಿ ಹೆಚ್ಚು ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿದ್ದಂಥ ವ್ಯಕ್ತಿ. ನಮ್ಮ ಡಿಪಾರ್ಟೆಂಟಿನಲ್ಲಿ ಡೆಮಾಕ್ರೆಟಿಕ್ ವಾತಾವರಣವಿತ್ತು. ತಾತ್ವಿಕವಾಗಿ ಪರ ವಿರೋಧ ಚರ್ಚೆಗಳಾಗುತ್ತಿದ್ದವು. ಆದರೆ ಅದು ಎಂದೂ ನಮ್ಮ ಗೆಳೆತನಕ್ಕೆ ಭಂಗ ತರಲಿಲ್ಲ. ಡಾ. ಬಸವರಾಜ ಕಲ್ಗುಡಿ, ಹಿರಿಯ ಸಾಹಿತಿ, ವಿಮರ್ಶಕರು

*

ಅವರು ತಮ್ಮನ್ನೇ ತಾವು ತಮಾಶೆ ಮಾಡಿಕೊಳ್ಳುತ್ತಿದ್ದಂಥ ವ್ಯಕ್ತಿ. ಅವರಿಗಿದ್ದ ಸ್ವವಿಮರ್ಶಾ ಮನೋಭಾವ ಹೊಲೆಮಾದಿಗರ ಹಾಡು ಮತ್ತಿತರ ಕವನಗಳಲ್ಲಿ ಗೋಚರಿಸುತ್ತದೆ. ದಲಿತ ಸಮಸ್ಯೆಗಳನ್ನು ಸಾಹಿತ್ಯದಲ್ಲಿ ಅಡಕಗೊಳಿಸುವುದು ಹೇಗೆ ಎನ್ನುವುದನ್ನು ಬಹಳ ವಿಭಿನ್ನವಾಗಿ ರೂಪಿಸಿದರು. ಹನ್ನೆರಡು ವರ್ಷ ಅವರು ಡಿಪಾರ್ಟ್​ಮೆಂಟ್​ನಿಂದ ದೂರ ಇದ್ದರು. ಎಂಎಲ್​ಸಿ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗುವ ತನಕ. ದಲಿತ ಸಮಸ್ಯೆಗಳ ಬಗ್ಗೆ ಕೆಲಸ ಮಾಡಿದರು. ಆದರೆ ಕ್ರಿಯಾತ್ಮಕ, ಸೃಜನಾತ್ಮಕವಾಗಿ ಇನ್ನಷ್ಟು ದಲಿತ ತತ್ವಜ್ಞಾನವನ್ನು ಮುಂದೆ ತೆಗೆದುಕೊಂಡು ಹೋಗಬಹುದಿತ್ತು ಎನ್ನಿಸುತ್ತದೆ. ಮರಾಠಿಯಲ್ಲಿ ದಲಿತ ಸಾಹಿತ್ಯ ಈ ವಿಷಯವಾಗಿ ಬಹಳ ಮೌಲ್ಯಾತ್ಮಕವಾಗಿ ವಿಸ್ತೃತಗೊಳ್ಳುತ್ತಾ ಹೋಗಿದೆ. ದೇವನೂರು ಅವರು ಮಾಡಿದ ಪ್ರಯತ್ನವನ್ನು ಇವರೂ ಮಾಡಬಹುದಾಗಿತ್ತು. ಅವರಲ್ಲಿ ಆ ಸತ್ವ ಇತ್ತು. ಆದರೆ ಕ್ರಿಯಾತ್ಮಕವಾಗಿ ಹೊಮ್ಮಲಿಲ್ಲ ಎನ್ನುವ ಕೊರಗು ಕಾಡುತ್ತದೆ.

ಅಪ್ಪಟ ರಾಜಕಾರಣ ಮಾಡುವುದು ಬೇರೆ. ಆದರೆ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಖಚಿತವಾದ ರಾಜಕೀಯ ದೃಷ್ಟಿಕೋನವನ್ನು ರೂಪಿಸಿಕೊಳ್ಳಬಹುದಿತ್ತು. ದೇವನೂರು ಮಹದೇವ ಮತ್ತು ಸಿದ್ಧಲಿಂಗಯ್ಯನವರನ್ನು ತುಲನಾತ್ಮಕವಾಗಿ ನೋಡಿದಾಗ ನನಗನ್ನಿಸಿದ್ದು ಇದು. ಹೊಲೆಮಾದಿಗರ ಹಾಡಿನಲ್ಲಿ ಇದ್ದಂಥ ಫೆರೋಶಿಯಸ್​ನೆಸ್​ ಕಳೆದುಹೋಯಿತು ಅನ್ನಿಸಿತು. ಆದರೆ ಇವರ ಇನ್ನೊಂದು ವೈಶಿಷ್ಟ್ಯ, ಹಾಸ್ಯಪ್ರವೃತ್ತಿ. ಬಹುಪಾಲು ಹಾಸ್ಯವನ್ನು ತಮ್ಮ ಸುತ್ತಲೇ ಹೆಚ್ಚು ಮಾಡಿಕೊಳ್ಳುತ್ತಿದ್ದರು ಹಾಗಾಗಿ, ಬೇರೆಯವರ ಬಗ್ಗೆ ಮಾಡಿದ ಹಾಸ್ಯದಲ್ಲಿ ಕಹಿ ಇರುತ್ತಿರಲಿಲ್ಲ. ತನ್ನನ್ನು ತಾ ಸರಳ ನೆಲೆಗಿಂತ ಭಿನ್ನ ನೆಲೆಯಲ್ಲಿ ನೋಡಿಕೊಳ್ಳುತ್ತಿದ್ದ ಈ ಪ್ರವೃತ್ತಿಯಲ್ಲಿ ತಾತ್ವಿಕ ದೃಷ್ಟಿಕೋನವೂ ಕಾಣುತ್ತಿತ್ತು. ಊರುಕೇರಿಯಲ್ಲಿ ಬರುವ ಘಟನೆಗಳೇ ಉದಾಹರಣೆ. ಇಲ್ಲಿ ಕೆಳವರ್ಗದ ದೈವಗಳನ್ನು ಕುರಿತು ಬರೆಯುತ್ತಾರೆ. ಹಾಸ್ಯದ ಹಿನ್ನೆಲೆಯಲ್ಲಿ ಮೇಲ್ವರ್ಗದ ದೇವತೆಗಳನ್ನು ತುಲನೆ ಮಾಡುವ ವಿನ್ಯಾಸ ಇದಕ್ಕಿದೆ. ಮೇಲ್ನೋಟಕ್ಕೆ ಹಾಸ್ಯವಾದರೂ ಇನ್ನೊಂದು ಪದರದಲ್ಲಿ ಗಂಭೀರವಾದ ತುಲನಾತ್ಮಕವಾದಂಥ ನೋಟ ಇದಕ್ಕಿದೆ. ಇವರ ಹಾಸ್ಯದ ಹಿಂದೆ ಸಾಂಸ್ಕೃತಿಕ ರಾಜಕಾರಣದ ಸ್ಪಷ್ಟ ನೋಟ ಕಾಣುತ್ತದೆ.

ಊರು ಕೇರಿ ಬರೆಯುವ ಹೊತ್ತಿಗೆ ದಲಿತ ಚಳವಳಿಗೆ ಒಂದು ದಶಕವೇ ಕಳೆದುಹೋಗಿತ್ತು. ದಲಿತ ಸಮುದಾಯದಲ್ಲಿ ಸಂವಿಧಾನದ ನೆಲೆಯಿಂದ ರೂಪುಗೊಂಡ ಶೈಕ್ಷಣಿಕ ಮತ್ತು ಸಾಮಾಜಿಕ ಅಂತಸ್ತು ಆತ್ಮಪ್ರತ್ಯಯ ಕೊಟ್ಟಿತು. ಈ ಶೈಲಿಯಲ್ಲಿ ಒಂದು ಬಗೆಯ ಆತ್ಮವಿಶ್ವಾಸ ಎದ್ದು ಕಾಣುತ್ತದೆ. ಹೀಗಾಗಿ ನಿರೂಪಣಾಶೈಲಿಯ ಮೇಲೂ ಇದು ಒಂದು ಬಗೆಯ ನಿರಾಳವಾದ ವಿಧಾನವನ್ನು ರೂಪಿಸಿದೆ. ಆದರೆ ಮರಾಠಿ ಆತ್ಮಕಥನಗಳಲ್ಲಿ ನಿಷ್ಠುರ ಫೆರೋಶಿಯಸ್​ನೆಸ್ ಕಾಣಿಸುತ್ತದೆ.

ಇದನ್ನೂ ಓದಿ : ಸಿದ್ದಲಿಂಗಯ್ಯ ನುಡಿನಮನ : ‘ಪ್ರಖರ ಚಿಂತನೆ, ವಿಡಂಬನಾ ಪ್ರಜ್ಞೆ ಏಕಕಾಲಕ್ಕೆ ಸಿದ್ಧಿಸಿತ್ತು’

Published On - 10:22 pm, Fri, 11 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ