ಕೆಟ್ಟ ಮತ್ತು ಹಾನಿಕಾರಕ ಕಂಟೆಂಟ್ ತಡೆಯಲು ಫೇಸ್​ಬುಕ್ ನಿರ್ಧಾರ | Facebook to use Artificial Content to stop bad content

ಫೇಸ್​ಬುಕ್ ನಿಸ್ಸಂದೇಹವಾಗಿ ಅತಿದೊಡ್ಡ ಜಗತ್ತಿನ ಸಾಮಾಜಿಕ ಜಾಲತಾಣ. ಒಂದು ಅಂದಾಜಿನ ಪ್ರಕಾರ ಜಾಗತಿಕ ಮಟ್ಟದಲ್ಲಿ ದಿನಂಪ್ರತಿ 1.82 ಶತಕೋಟಿ ಬಳಕೆದಾರರು ಈ ನೆಟ್​ವರ್ಕ್​ನಲ್ಲಿ ಸಕ್ರಿಯರಾಗಿರುತ್ತಾರೆ. ಫೇಸ್​ಬುಕ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ? ಇದರಿಂದಾಗುತ್ತಿರುವ ಪ್ರಯೋಜನಗಳು ಒಂದೆರಡಲ್ಲ. ಆದರೆ, ಈ ಬಹುಪಯೋಗಿ ಜಾಲತಾಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ಸಂಖ್ಯೆಯೂ ದಿನೇದಿನೆ ಹೆಚ್ಚುತ್ತಿದೆ. ಕೆಲವರು ಅದನ್ನು ಸ್ವಾರ್ಥ ಸಾಧನೆಗೆ, ಬೇರೆಯವರ ಚಾರಿತ್ರ್ಯವಧೆಗೆ, ದ್ವೇಷದ ಕಿಡಿ ಹೊತ್ತಿಸಲು ಉಪಯೋಗಿಸುತ್ತಿದ್ದಾರೆ. ಇವರಲ್ಲಿ ಕೆಲವರು ವಿಕೃತ ಮನಸ್ಸಿನ ಜೀವಿಗಳಾದರೆ ಮತ್ತೆ ಕೆಲವರು ವಿಘ್ನ ಸಂತೋಷಿಗಳು. ಆದರೆ, ಇನ್ನು […]

ಕೆಟ್ಟ ಮತ್ತು ಹಾನಿಕಾರಕ ಕಂಟೆಂಟ್ ತಡೆಯಲು ಫೇಸ್​ಬುಕ್ ನಿರ್ಧಾರ  | Facebook to use Artificial Content to stop bad content
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 17, 2020 | 10:00 PM

ಫೇಸ್​ಬುಕ್ ನಿಸ್ಸಂದೇಹವಾಗಿ ಅತಿದೊಡ್ಡ ಜಗತ್ತಿನ ಸಾಮಾಜಿಕ ಜಾಲತಾಣ. ಒಂದು ಅಂದಾಜಿನ ಪ್ರಕಾರ ಜಾಗತಿಕ ಮಟ್ಟದಲ್ಲಿ ದಿನಂಪ್ರತಿ 1.82 ಶತಕೋಟಿ ಬಳಕೆದಾರರು ಈ ನೆಟ್​ವರ್ಕ್​ನಲ್ಲಿ ಸಕ್ರಿಯರಾಗಿರುತ್ತಾರೆ.

ಫೇಸ್​ಬುಕ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ? ಇದರಿಂದಾಗುತ್ತಿರುವ ಪ್ರಯೋಜನಗಳು ಒಂದೆರಡಲ್ಲ. ಆದರೆ, ಈ ಬಹುಪಯೋಗಿ ಜಾಲತಾಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ಸಂಖ್ಯೆಯೂ ದಿನೇದಿನೆ ಹೆಚ್ಚುತ್ತಿದೆ. ಕೆಲವರು ಅದನ್ನು ಸ್ವಾರ್ಥ ಸಾಧನೆಗೆ, ಬೇರೆಯವರ ಚಾರಿತ್ರ್ಯವಧೆಗೆ, ದ್ವೇಷದ ಕಿಡಿ ಹೊತ್ತಿಸಲು ಉಪಯೋಗಿಸುತ್ತಿದ್ದಾರೆ. ಇವರಲ್ಲಿ ಕೆಲವರು ವಿಕೃತ ಮನಸ್ಸಿನ ಜೀವಿಗಳಾದರೆ ಮತ್ತೆ ಕೆಲವರು ವಿಘ್ನ ಸಂತೋಷಿಗಳು.

ಆದರೆ, ಇನ್ನು ಮುಂದೆ ಇದಕ್ಕೆಲ್ಲ ಬ್ರೇಕ್ ಬೀಳಲಿದೆ. ಫೇಸ್​ಬುಕ್ ಬೇರೆಯವರಿಗೆ ಹಾನಿಯನ್ನುಂಟುವ ಮಾಡುವ, ದ್ವೇಷವನ್ನು ಹುಟ್ಟಿಸುವ ಮತ್ತು ಹಬ್ಬಿಸುವ ಕಂಟೆಂಟನ್ನು ತಡೆಯಲು ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದೆ.

ಫೇಸ್​ಬುಕ್ ಪ್ರೊಡಕ್ಟ್ ಮ್ಯಾನೇಜರ್ ರಿಯಾನ್ ಬಾರ್ನ್ಸ್ ಇಂದು ನಡೆಸಿದ ವರ್ಚ್ಯುಯಲ್ ಬ್ರೀಫಿಂಗ್​ನಲ್ಲಿ, ಸಂಸ್ಥೆಯು ಆರ್ಟಿಫಿಸಿಯಲ್ ಇಂಟೆಲ್ಲಿಜೆನ್ಸ್ (AI, ಅಥವಾ ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಬಳಸಿ ಹಾನಿಕಾರಕ ಕಂಟೆಂಟನ್ನು ತಡೆಯಲು ಅಥವಾ ನಿಯಂತ್ರಿಸಲು ಮತ್ತು ಕಂಟೆಂಟ್​ಗಳಿಗೆ ಆದ್ಯತೆ ನೀಡಲು ನಿರ್ಣಯಿಸಿದೆ ಎಂದು ಹೇಳಿದರು. ಈ ಫೋಸ್ಟ್​ಗಳನ್ನು ಸಂಸ್ಥೆಯ 15,000 ಕ್ಕೂ ಹೆಚ್ಚು ಸಮೀಕ್ಷಕರು ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಂಟೆಂಟನ್ನು ಆದ್ಯತಾನುಸಾರ ಶ್ರೇಣೀಕರಿಸುವುದರ ಹಿಂದೆ ನಾಲ್ಕು ಕಾರಣಗಳಿವೆ ಎಂದು ಬಾರ್ನ್ಸ್ ಹೇಳುತ್ತಾರೆ. ಹಾನಿಕಾರಕ ಕಂಟೆಂಟ್​ಗಳೆಲ್ಲ ಒಂದೇ ತೆರನಾಗಿರುವುದಿಲ್ಲ, ಜಾರಿಗೊಳಿಸಲ್ಪಡುವ ಕೆಲವು ನಿರ್ಣಯಗಳು ಸಂಕೀರ್ಣ ಸ್ವರೂಪದ್ದಾಗಿರುತ್ತವೆ, ಜನ ಯಾವಾಗಲೂ ಘಾಸಿಯನ್ನುಂಟು ಮಾಡುವ ಕಂಟೆಂಟನ್ನು ಪೋಸ್ಟ್ ಮಾಡುವುದಿಲ್ಲ ಮತ್ತು ಕೊನೆಯದಾಗಿ ಈ ಪೋಸ್ಟ್​ಗಳೆಲ್ಲ ಪ್ರತಿಬಾರಿ ನಿಖರವಾಗಿರುವುದಿಲ್ಲ.

ಹಾಗಾಗಿ, ಇನ್ನು ಮುಂದೆ ಫೇಸ್​ಬುಕ್ ಸಂಸ್ಥೆಯು ಕೇವಲ ಬಳಕೆದಾರರ ಪೋಸ್ಟ್​ಗಳ ಮೇಲೆ ಆತುಕೊಳ್ಳದೆ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಿದೆ ಎಂದು ಬಾರ್ನ್ಸ್ ಹೇಳಿದ್ದಾರೆ.

ಸಂಸ್ಥೆಯ ಸಮೀಕ್ಷಕರು ಉಪದ್ರವ ನೀಡುವ ಪೋಸ್ಟ್​ಗಳ ಮೇಲೆ ಗಮನವನ್ನು ಹೆಚ್ಚು ಕೇಂದ್ರೀಕರಿಸಿ, ಸಭ್ಯತೆಯನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ಕೆಟ್ಟ ಮತ್ತು ಅಹಿತಕರ ಅನುಭವಗಳನ್ನು ಕಡಿಮೆ ಮಾಡಲಿದ್ದಾರೆ,’’ ಎಂದು ಬಾರ್ನ್ಸ್ ಹೇಳಿದರು.

Published On - 9:59 pm, Tue, 17 November 20

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ