AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರ ಸ್ತೋತ್ರವನ್ನು ಪಠಿಸಿದ್ರೆ ಆಗುವ ಅನುಕೂಲವೇನು?

ಕೆಲವರು ದೈವ ಸಾನಿಧ್ಯವನ್ನು ಕಂಡುಕೊಳ್ಳಲು ಸದಾ ಭಗವಂತನ ಸ್ಮರಣೆ ಮಾಡ್ತಿರ್ತಾರೆ. ಮತ್ತೆ ಕೆಲವರು ದೇವರ ಸ್ತೋತ್ರಗಳನ್ನು ಹೇಳುತ್ತಾ ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ತಾರೆ. ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ದೇವರುಗಳ ಸ್ತ್ರೋತ್ರ ಪಠಿಸುವುದು ಸರಳ ಉಪಾಯ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ದೇವರ ಸ್ತೋತ್ರವನ್ನು ಪಠಿಸಿದ್ರೆ ಆಗುವ ಅನುಕೂಲವೇನು?
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Apr 21, 2021 | 6:36 AM

ಮಹಾಮಾರಿ ಕೊರೊನಾ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಕೊರೊನಾ ಭಯಕ್ಕೆ ಜನ ನಲುಗಿದ್ದಾರೆ. ಕಳೆದ ವರ್ಷ ಕೊರೊನಾಗೆ ತುತ್ತಾಗಿ ಅದರ ವಿರುದ್ಧ ಹೋರಾಡಿ ಜೀವ ಉಳಿಸಿಕೊಂಡಿದ್ದ ಕೆಲವರು ಮೃತ್ಯುಂಜಯ ಮಂತ್ರ ಪಠಣೆ ಆತ್ಮಕ್ಕೆ ಧೈರ್ಯ ನೀಡುತ್ತೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಹೌದು ಇದು ನಿಜ ಬಹುತೇಕ ಪ್ರಕರಣಗಳಲ್ಲಿ ಇದು ಸಾಭೀತಾಗಿದೆ. ಜೊತೆಗೆ ಕೆಲವರು ದೈವ ಸಾನಿಧ್ಯವನ್ನು ಕಂಡುಕೊಳ್ಳಲು ಸದಾ ಭಗವಂತನ ಸ್ಮರಣೆ ಮಾಡ್ತಿರ್ತಾರೆ. ಮತ್ತೆ ಕೆಲವರು ದೇವರ ಸ್ತೋತ್ರಗಳನ್ನು ಹೇಳುತ್ತಾ ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ತಾರೆ. ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ದೇವರುಗಳ ಸ್ತ್ರೋತ್ರ ಪಠಿಸುವುದು ಸರಳ ಉಪಾಯ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇಷ್ಟಕ್ಕೂ, ಸ್ತೋತ್ರ ಪಠಣೆ ಎಂದರೇನು? ಅಂದರೆ ಪರಮಾತ್ಮನನ್ನು ಮ೦ತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಧ್ಯಾನಿಸುವುದೇ ಸ್ತೋತ್ರ ಪಠಣೆ. ಈ ಸ್ತೋತ್ರ ಪಠಣೆ ಮಾಡೋಕೆ ಕೆಲವೊಂದು ನಿಯಮಗಳಿವೆ. ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ.

ಸ್ತೋತ್ರ ಪಠಿಸುವ ನಿಯಮಗಳು -ನಾವು ಸ್ತೋತ್ರವನ್ನು ಪಠಿಸುವಾಗ ಸಂಪೂರ್ಣ ವಿಧಿ- ವಿಧಾನವನ್ನು ಅನುಸರಿಸಬೇಕು. -ಸ್ತೋತ್ರ ಪಠಣ ಮಾಡುವ ಮುನ್ನ ಅದನ್ನು ಅರಿತಿರುವವರ ಬಳಿ ಸ್ತೋತ್ರದ ಮಹತ್ವ ಹಾಗೂ ವಿಧಿ-ವಿಧಾನಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ನಂತರ ಜಪವನ್ನು ಆರಂಭಿಸಬೇಕು. -ಎಲ್ಲೆಂದರಲ್ಲಿ, ಯಾವ ಸಮಯ ಅಂದ್ರೆ ಆ ಸಮಯದಲ್ಲಿ ಜಪ ಮಾಡುವುದು ಯೋಗ್ಯವಲ್ಲ. -ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ವಿಭೂತಿ ಧರಿಸಿ, ವಿಧಿ ವಿಧಾನದ ಮೂಲಕ ಸ್ತೋತ್ರ ಪಠಿಸಬೇಕು. -ಶ್ರದ್ಧೆಯಿಂದ ಜಪ ಮಾಡಬೇಕು. -ಜಪ ಮಾಡುವಾಗ ಮನಸ್ಸು ಪವಿತ್ರವಾಗಿರಬೇಕು. -ನಂಬಿಕೆಯಿಂದ ಸ್ತೋತ್ರ ಪಾರಾಯಣ ಮಾಡಬೇಕು. -ಸ್ತ್ರೋತ್ರವನ್ನು ಏರು ಧ್ವನಿಯಲ್ಲಿ ಪಠಿಸಬೇಕು. -ತುಟಿಗಳನ್ನು ಅಲುಗಿಸುತ್ತಾ ಶಬ್ದ ಹೊರಗೆ ಕೇಳದಂತೆಯೂ ಜಪಿಸಬಹುದು. -ಮನಸ್ಸಿನಲ್ಲಿಯೇ ಬೇಕಾದ್ರೂ ಮನನ ಮಾಡಬಹುದು.

ನಿತ್ಯ ಪೂಜೆಯ ಮೂಲ ತತ್ವವೇ ದೇವರಿಗೆ ಸ್ತೋತ್ರದ ಮೂಲಕ ವಂದನೆ ಅರ್ಪಿಸುವುದು. ಅದಕ್ಕಾಗಿ ದೇವರುಗಳನ್ನು ಮನೆಯ ದೇವರ ಮಂಟಪದಲ್ಲಿರುವ ಮೂರ್ತಿಗಳಿಗೆ ಆಹ್ವಾನಿಸಲಾಗುತ್ತೆ. ನಂತರ ಮನೆಗೆ ಬಂದ ವಿಶೇಷ ಅತಿಥಿಗಳಿಗೆ ಉಪಚಾರ ಮಾಡುವಂತೆ ಭಗವಂತನಿಗೂ ಉಪಚರಿಸಿ ಬೀಳ್ಕೊಡಲಾಗುತ್ತೆ. ಭಗವಂತನಲ್ಲಿ ನಂಬಿಕೆ ಇರಿಸಿ ಹೇಳುವ ಸ್ತೋತ್ರಗಳಿಂದ ಪರಮಾತ್ಮನು ಸಂತೃಪ್ತನಾಗಿ ಭಕ್ತರ ಕೋರಿಕೆಯನ್ನು ಶೀಘ್ರವಾಗಿ ಈಡೇರಿಸ್ತಾನೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ.

ಇದನ್ನೂ ಓದಿ: Ramadan 2021: ರಂಜಾನ್ ಹಬ್ಬದ ಪ್ರಾಮುಖ್ಯತೆ, ಉಪವಾಸದ ಆರಂಭ.. ಇವೆಲ್ಲದರ ಡಿಟೇಲ್ಸ್ ಇಲ್ಲಿದೆ

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​