AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀಸು ಹೇಳಿಕೆ ಕೊಡುವ ಮುನ್ನ ಒಮ್ಮೆ ಯೋಚಿಸಿ ಸ್ವಾಮೀಜಿಗಳೇ

‘ಹೈಸ್ಕೂಲಿಗೆ ಹೋಗುವ ಹುಡುಗಿ ಅನ್ಯ ಜಾತಿಯ ಹುಡುಗನ ಮೇಲೆ ಕ್ರಷ್ ಹೊಂದಿದ್ದರೆ ಆಕೆಗೆ ಮುಂದೆ ಓದುವ ಅವಕಾಶವನ್ನು ಕೊಡುತ್ತಾರೆಯೇ, ಇದು ಆ ಸಮುದಾಯಕ್ಕೆ ಮಾರಕವಲ್ಲವೇ? ಈ ಎಲ್ಲಾ ದೃಷ್ಟಿಕೋನದಿಂದ ಈ ವಿಷಯವನ್ನು ಅವಲೋಕಿಸಿದರೆ ಈ ಮಾತೃಮಂಡಳಿಯಂತಹ ಹುಚ್ಚಾಟಗಳು ಅದೇ ಸಮುದಾಯಕ್ಕೆ, ಸ್ತ್ರೀ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತವೆಯೇ ಹೊರತು ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ವಸುದೈವ ಕುಟುಂಬಕಮ್ ಎಂಬ ಉದಾತ್ತ ಆಶಯಉಳ್ಳ ಭಾರತೀಯ ಸಂಸ್ಕೃತಿಯನ್ನು ಜಾತಿ, ಧರ್ಮ‌ ಪಂಗಡಗಳ ಹೆಸರಲ್ಲಿ ಮತ್ತಷ್ಟು ಸಂಕುಚಿತಗೊಳಿಸಿಕೊಳ್ಳುವುದು ಧರ್ಮಕ್ಕೆ ಮಾಡುವ ಅಪಚಾರವಲ್ಲವೇ?‘ ಮೇಘಾ ಎಲೆಗಾರ

ಬೀಸು ಹೇಳಿಕೆ ಕೊಡುವ ಮುನ್ನ ಒಮ್ಮೆ ಯೋಚಿಸಿ ಸ್ವಾಮೀಜಿಗಳೇ
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
| Updated By: Team Veegam

Updated on:Mar 30, 2021 | 7:16 PM

ಉಡುಪಿಯ ಪೇಜಾವರ ಶ್ರೀಗಳು ತಮ್ಮ ಸಮುದಾಯದ ಹೆಣ್ಮಕ್ಕಳು ಬೇರೆ ಜಾತಿಯ ಯುವಕರನ್ನು ಮದುವೆಯಾಗುವುದನ್ನು ತಡೆಗಟ್ಟಲು ಮಾತೃಮಂಡಳಿಯನ್ನು ರಚಿಸಬೇಕು ಎಂಬ ಹೇಳಿಕೆಯನ್ನು ಕನ್ನಡ ಪತ್ರಿಕೆಗಳಲ್ಲಿ ಓದಿ ನನ್ನ ಉತ್ತರ ಭಾರತೀಯ ಸ್ನೇಹಿತರಿಗೆ ಹೇಳಿದೆ.‌ ಜಾತಿ ಧರ್ಮಗಳ ಇಕ್ಕಟ್ಟನ್ನು ನೇರವಾಗಿ ಕಾಣದ, ದೊಡ್ಡ ನಗರಗಳಲ್ಲಿ ಬೆಳೆದ ಆ ಹುಡುಗ ‘Who gives a damn for this uncles rant bro’ ಎಂದು ತಲೆ ಅಲ್ಲಾಡಿಸಿದ. ‌’ಅರೇ ಕರ್ನಾಟಕಾ ಮೇ ಭಿ ಖಾಪ್ ಪಂಚಾಯತ್ ಹೈ ಕ್ಯಾ?’ ಅಂತ ಮತ್ತೊಬ್ಬ ಹರಿಯಾಣದ ಹುಡುಗಿ ಆತಂಕಗೊಂಡಳು. ಒಂದೇ ವಿಷಯವನ್ನು ಒಂದೇ ವಯಸ್ಸಿನ ಇಬ್ಬರು ವ್ಯಕ್ತಿಗಳು ಪರಿಗಣಿಸಿದ ರೀತಿಯನ್ನು ಕಂಡು ನಾನೂ ಮತ್ತಷ್ಟು ಗೊಂದಲಕ್ಕೊಳಗಾದೆ.

ಧರ್ಮ ಸಂಪ್ರದಾಯಗಳನ್ನು ಯಾವುದೇ ಪ್ರಶ್ನೆ ಮಾಡದೇ ಒಪ್ಪಿಕೊಂಡ ಪೀಳಿಗೆ ನಮ್ಮ ತಾಯಿ ತಂದೆಯರದು. ಜಾತಿಯ ಸವಲತ್ತುಗಳನ್ನೂ ಮೀರಿ ಬಹುತೇಕರು ಕಿತ್ತು ತಿನ್ನುವ ಬಡತನವನ್ನು ಕಂಡವರು. ತಮಗೆ ಬೇಕಾದಂತೆ ನೌಕರಿ ಹುಡುಕಿಕೊಂಡು, ತಮ್ಮಿಚ್ಛೆಯಂತೆ ಬದುಕಲು ಸಮಾಜದ ಕಟ್ಟುಪಾಡುಗಳನ್ನು ಸಡಿಲಗೊಳಿಸಿಕೊಂಡು ತಮ್ಮ ಮಕ್ಕಳನ್ನು ಸಾಕಷ್ಟು ಉದಾರತನದಿಂದಲೇ ಬೆಳಿಸಿದ್ದಾರಾದರೂ ಜಾತೀಯತೆಯ ವಿಷಬೀಜ‌ವನ್ನು ಮಾತ್ರ ಶ್ರೇಷ್ಠತೆ ಮತ್ತು ಸಂಸ್ಕೃತಿಯೆಂಬ ಸೋಗಿನಲ್ಲಿ ಯಶಸ್ವಿಯಾಗಿ ದಾಟಿಸಿದ್ದಾರೆ. ಅದರ ಪರಿಣಾಮವಾಗಿ ಉಡುಗೆ ತೊಡುಗೆ ಆಹಾರ ಪಾನೀಯ ಭಾಷೆಯ ವಿಚಾರದಲ್ಲಿ ಸಾಕಷ್ಟು ಉದಾರವಾದಿಯಾಗಿಯೇ ಬೆಳೆದ ನಮ್ಮ ಪೀಳಿಗೆಯವರು ಸಹ ಜಾತಿ, ಧರ್ಮದ ವಿಷಯದಲ್ಲಿ ಕಟ್ಟಲೆಗಳನ್ನು ಮುರಿಯುವುದಕ್ಕೆ ಸಾಧ್ಯವಾಗಿಲ್ಲ.‌

ನಮ್ಮ ಜಾತಿಯೊಂದಿಗೆ ದೊರಕುವ ಸವಲತ್ತುಗಳನ್ನು ಮಾತ್ರ ಧಾರಾಳವಾಗಿ ಬಳಸಿಕೊಳ್ಳುವ ನಾವು ಜಾತಿ ಮತ್ತು ಮೀಸಲಾತಿಯಂತಹ ವಿಷಯಗಳು ಬಂದಾಗ ‘ನಮ್ಮ ಹಿರಿಯರು ಮಾಡಿದ ಪಾಪಕ್ಕೆ ನಾವ್ಯಾಕೆ ದಂಡ ತೆರಬೇಕು’ ಎನ್ನುವ ಧಿಮಾಕಿನ ಮಾತನಾಡುತ್ತೇವೆಯೇ ಹೊರತು ನಮ್ಮ ಜಾತಿಯ ಕಾರಣದಿಂದಾಗಿ ನಮಗೆ ದೊರಕಿರುವ ಸವಲತ್ತುಗಳ ಕುರಿತು ಕಿಂಚಿತ್ತೂ ಪ್ರಜ್ಞೆಯನ್ನು ಬೆಳೆಸಿಕೊಂಡಿಲ್ಲ. ಹಿಂದಿನ ಪೀಳಿಗೆಯಷ್ಟು ಬಡತನವನ್ನು ಕಾಣದೇ ಸಾಕಷ್ಟು ಅನುಕೂಲಗಳೊಂದಿಗೆ ಬೆಳೆದ ಈ ಪೀಳಿಗೆ ಬಹಳ ಸಣ್ಣ ವಯಸ್ಸಿಗೆ ಜಾಗತೀಕರಣಕ್ಕೆ ತೆರೆದುಕೊಂಡಾಗಿದೆ. ಭಾರತೀಯ ಮಧ್ಯಮ ವರ್ಗದ ಜನರ ಕನಸುಗಳನ್ನು ನನಸಾಗಿಸಲು ವಿದೇಶಿ ಶಿಕ್ಷಣ, ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವುದು, ಇಂಗ್ಲಿಷ್ ಭಾಷೆ‌ ಮಾತನಾಡುವುದು ಅನಿವಾರ್ಯ ಎಂಬುದನ್ನು ಅರಿತ ಬ್ರಾಹ್ಮಣರನ್ನು ಒಳಗೊಂಡಂತೆ ಬಹುತೇಕ ಮೇಲ್ಜಾತಿಗಳು ರೇಸಿಗೆ ಕುದುರೆಗಳನ್ನು ತಯಾರು ಮಾಡಿದಂತೆ ತಮ್ಮ‌ ಮಕ್ಕಳನ್ನು ತಯಾರು ಮಾಡಿ, ವಿದೇಶಕ್ಕೆ ಸರಬರಾಜು ಮಾಡಿದ್ದಾರೆ.‌

ಹಾಗೆ ನೋಡಿದರೆ ಭಾರತದಲ್ಲಿ ಸರಕಾರಿ ನೌಕರಿ ಗಿಟ್ಟಿಸಿಕೊಂಡ ಪ್ರಬಲರ ಮಕ್ಕಳೇ ಇಂದು ವಿದೇಶಿ ಪೌರತ್ವ ಹೊಂದಿ ಅಲ್ಲಿಯೇ ನೆಲೆಸಿದ್ದಾರೆ. ಆಗ ಇದೇ ಮಠಗಳ ಅಂಗಣದಲ್ಲಿ ತಮ್ಮ ಮಕ್ಕಳ ಬಯೋಡೇಟಾ ಹಿಡಿದು ತ್ರಿಕಾಲ ಸಂಧ್ಯಾವಂದನೆ ಮಾಡುವ ಹುಡುಗನಿಗಾಗಿ ಹುಡುಕಾಟ ನಡೆಸುವ ಅಧಿಕಾರ ಹೊಂದಿದ ಅಪ್ಪ ಅಮ್ಮನಿಗೆ ಇದೆಂದೂ ತೊಂದರೆಯಾಗಿ ಕಂಡಿರಲಿಕ್ಕಿಲ್ಲ. ಆದರೆ ಯಾವಾಗ ತಮ್ಮ‌ ಮಕ್ಕಳು ತಮ್ಮ ತಾಯ್ತಂದೆಯರ ಹಿಡಿತವನ್ನು ತಪ್ಪಿಸಿಕೊಂಡು ತಮ್ಮ ಇಚ್ಛೆಯಂತೆ ಮದುವೆಯಾಗತೊಡಗಿದರೋ ಅದರ ಬಟರ್ ಫ್ಲೈ ಎಫೆಕ್ಟ್ ಎಂಬಂತೆ‌ ಸಾಧಾರಣ ಶಿಕ್ಷಣ, ಕೆಲಸ ಮಾಡುವ ಹಳ್ಳಿಗಳಲ್ಲಿ ನೆಲೆಸಿರುವ ಬ್ರಾಹ್ಮಣ ಗಂಡುಮಕ್ಕಳಿಗೆ ಹೆಣ್ಣು ಸಿಗದಾದಾಗ ಅದೇ ಮಠದ ಅಂಗಣಗಳಲ್ಲಿ ಇಂತಹ ಚರ್ಚೆಗಳು ಶುರುವಾಗಿವೆ. ಶ್ರೀಗಳ ಮಾತನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಕೇವಲ ಜಾತಿ ಶ್ರೇಷ್ಠತೆಯಿಂದ ಹೊರಹೊಮ್ಮಿದ ಯೋಚನೆಯಲ್ಲ ಎಂಬುದೂ ಗೊತ್ತಾಗಿದೆ.

Let us read between the lines, ಅವರ ತಕರಾರು ಇರುವುದು ಬ್ರಾಹ್ಮಣ ಯುವತಿಯರು ಬೇರೆ ಜಾತಿಯ ಹುಡುಗರನ್ನು ಮದುವೆಯಾಗುತ್ತಿರುವುದರ ಕುರಿತೇ ಹೊರತು ಗಂಡಸರು ಬೇರೆ ಜಾತಿಯ ಹೆಣ್ಮಕ್ಕಳನ್ನು ಮದುವೆಯಾಗುವುದರ ಕುರಿತಲ್ಲ. ಇಂತಹ ಹೇಳಿಕೆಗಳು ಹೆಣ್ಣುಮಕ್ಕಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಪುರುಷ ಪ್ರಧಾನ ವ್ಯವಸ್ಥೆಯ ಮನಸ್ಥಿತಿಯನ್ನು ಪರಿಣಾಮವೇ ಎಂಬದು ಸ್ಪಷ್ಟ. ಇದು ಭಾರತೀಯ ಸಂವಿಧಾನದ ಮೂಲಭೂತ ಹಕ್ಕಾದ ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕ‌ನ್ನು ತಮ್ಮ ಸಮುದಾಯದ ಮಹಿಳೆಯರಿಂದ ಕಿತ್ತುಕೊಂಡಂತೆ ಅಲ್ಲವೇ?  ಕರ್ನಾಟಕದ ಕೆಲವು ಬ್ರಾಹ್ಮಣ ಸಮುದಾಯಗಳಲ್ಲಿ ಲಿಂಗಾನುಪಾತದಲ್ಲಿ ಅಸಮಾನತೆ ಇರುವುದು ಶ್ರೀಗಳಿಗೆ ತಿಳಿಯದೇ ಇರುವುದೇನಲ್ಲ.‌ ಹೀಗಾಗಲೂ ಕಾರಣವೇನು? ಶತಮಾನಗಗಳಿಂದಲೂ ಶೈಕ್ಷಣಿಕವಾಗಿ ಮುಂದಿರುವ ಸಮಾಜದಲ್ಲಿ ಈ ಮಟ್ಟದ ಲಿಂಗ ಅಸಮಾನತೆ ಉಂಟಾಗಲು ಕಾರಣವೇನು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ತಮ್ಮ ಸಮಾಜವನ್ನು ತಿದ್ದಬೇಕಾದ ಮಠಾಧಿಪತಿಗಳು ಈ ರೀತಿಯ ಬೀಸು ಹೇಳಿಕೆಗಳನ್ನು ನೀಡುವುದು ವಿಪರ್ಯಾಸ.‌ ‌

ಸರಿ ಈಗ ಶ್ರೀಗಳ ಹೇಳಿಕೆಯಂತೆ Vigilance Committee ಶುರುವಾಯಿತು ಎಂದುಕೊಳ್ಳಿ ಆಗ ಈ ಮಾತೃಮಂಡಳಿಯ ಮಾತನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಪೂರೈಸಿ ಅಲ್ಲಿಯ ಪೌರತ್ವ ಪಡೆದ ಮಂದಿ ಕೇಳಿಯಾರೆ?  ಮತ್ತೆ ಇಂತಹ ಜಾಗೃತ ಮಂಡಳಿಯ ಕೈಗೆ ಸಿಗುವವರು ಸಣ್ಣ ಊರುಗಳಲ್ಲಿ ವಾಸಿಸುವ ಕೆಳ ಮಧ್ಯಮ ಹುಡುಗಿಯರೇ, ಅವರ ಓದಿನ, ಸ್ವಾತಂತ್ರ್ಯದ ಕನಸಿಗೆ ಇಂತಹ ಮಂಡಳಿಗಳು ಅಡ್ಡಗಾಲು ಹಾಕುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.‌ ಹಾಗೊಂದು ವೇಳೆ ಈ ಮಂಡಳಿಗಳು ಒಂದಿಷ್ಟು ಅಂತರ್ಜಾತಿ ವಿವಾಹಗಳನ್ನು ತಡೆಯಲು ಸಫಲವಾದವು ಎಂದಿಟ್ಟುಕೊಳ್ಳಿ ಇತರ ಸಮುದಾಯಗಳೂ ಇದೇ ಮಾದರಿಯನ್ನು ಅನುಸರಿಸಲು ಪ್ರಾರಂಭಿಸಿದಲ್ಲಿ ಕರ್ನಾಟಕದಲ್ಲಿ ಸ್ತ್ರೀ ಸ್ವಾತಂತ್ರ್ಯ, ಶಿಕ್ಷಣ, ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಏನಾದಾವು. ಈ ಮಾತೃಮಂಡಳಿಯ ಕಾರ್ಯ ವೈಖರಿಯ ಪರಿಣಾಮ ಏನಾಗಬಹುದು?; ಹೈಸ್ಕೂಲಿಗೆ ಹೋಗುವ ಹುಡುಗಿ ಅನ್ಯ ಜಾತಿಯ ಹುಡುಗನ ಮೇಲೆ ಕ್ರಷ್ ಹೊಂದಿದ್ದರೆ ಆಕೆಗೆ ಮುಂದೆ ಓದುವ ಅವಕಾಶವನ್ನು ಕೊಡುತ್ತಾರೆಯೇ, ಇದು ಆ ಸಮುದಾಯಕ್ಕೆ ಮಾರಕವಲ್ಲವೇ? ಈ ಎಲ್ಲಾ ದೃಷ್ಟಿಕೋನದಿಂದ ಈ ವಿಷಯವನ್ನು ಅವಲೋಕಿಸಿದರೆ ಈ ಮಾತೃಮಂಡಳಿಯಂತಹ ಹುಚ್ಚಾಟಗಳು ಅದೇ ಸಮುದಾಯಕ್ಕೆ, ಸ್ತ್ರೀ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತವೆಯೇ ಹೊರತು ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ವಸುದೈವ ಕುಟುಂಬಕಮ್ ಎಂಬ ಉದಾತ್ತ ಆಶಯಉಳ್ಳ ಭಾರತೀಯ ಸಂಸ್ಕೃತಿಯನ್ನು ಜಾತಿ, ಧರ್ಮ‌ ಪಂಗಡಗಳ ಹೆಸರಲ್ಲಿ ಮತ್ತಷ್ಟು ಸಂಕುಚಿತಗೊಳಿಸಿಕೊಳ್ಳುವುದು ಧರ್ಮಕ್ಕೆ ಮಾಡುವ ಅಪಚಾರವಲ್ಲವೇ.

‘Who gives a damn, Khap hai kya?’ ಅನ್ನುವುದು ನಾವೆಲ್ಲ ಯಾವ ಯಾವ ವರ್ಗಕ್ಕೆ ಸೇರಿದ್ದೇವೆ ಅನ್ನುವುದರ ಮೇಲೆ ಅವಲಂಬಿತ.

Inter caste marriage

ಲೇಖಕಿ ಮೇಘಾ ಎಲೆಗಾರ

Published On - 11:44 am, Thu, 18 March 21

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್