ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) ಇದು ದಕ್ಷಿಣ ಭಾರತದ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ, ಬೆಂಗಳೂರಿನಿಂದ ಸುಮಾರು 100 ಕಿಮೀ ದೂರದಲ್ಲಿರುವ ಗಣಿಗಾರಿಕ ಪ್ರದೇಶವಾಗಿದೆ. ಇದನ್ನು ‘ಲಿಟಲ್ ಇಂಗ್ಲೆಂಡ್’ ಎಂದು ಕೂಡ ಕರೆಯುತ್ತಾರೆ. ಒಂದು ಕಾಲದಲ್ಲಿ ಇದು ಚಿನ್ನದ ಗಣಿಯಾಗಿತ್ತು. ಇತಿಹಾಸವನ್ನು ನೋಡಿದರೆ ಈ ಜಾಗದಲ್ಲಿ ಅನೇಕ ಜನರು ಚಿನ್ನವನ್ನು ಹುಡುಕಲು ತಮ್ಮ ಅದೃಷ್ಟವನ್ನು ಪ್ರಯತ್ನಿಸಿದ್ದಾರೆ. ಕೆಜಿಎಫ್ ಇತಿಹಾಸಕ್ಕೆ ಸಂಬಂಧಿಸಿದ ದಾಖಲೆಗಳ ಪ್ರಕಾರ, 1700 ರ ದಶಕದಲ್ಲಿಯೇ ಇಲ್ಲಿ ಚಿನ್ನದ ಬೇಟೆ ಪ್ರಾರಂಭವಾಯಿತು. ಬ್ರಿಟಿಷ್ ಅಧಿಕಾರಿ ಜಾನ್ ವಾರೆನ್ ಅವರ ವರದಿಯು ಬ್ರಿಟಿಷರು ಈ ಚಿನ್ನದ ಗಣಿಯನ್ನು ಹೇಗೆ ಆಳುತ್ತಿದ್ದರು ಎಂದು ಹೇಳುತ್ತದೆ. ಹಾಗಾದರೆ ಜಾನ್ ವಾರೆನ್ ಏನು ಹೇಳಿದ್ದಾರೆ, ಕೆಜಿಎಫ್ ಇತಿಹಾಸವೇನು?, ಈಗಲೂ ಇಲ್ಲಿ ಚಿನ್ನ ಇದೆಯೇ, ಇದನ್ನು ಮುಚ್ಚಲು ಏನು ಕಾರಣ?. ಈ ಕುರಿತ ಮಾಹಿತಿ ಇಲ್ಲಿದೆ. 1799 ರ ಶ್ರೀರಂಗಪಟ್ಟಣ ಯುದ್ಧದಲ್ಲಿ ಟಿಪ್ಪು ಸುಲ್ತಾನನನ್ನು ಕೊಂದ ನಂತರ, ಬ್ರಿಟಿಷರು ಮೈಸೂರು ಮಹಾರಾಜರಿಗೆ ಸಂಪೂರ್ಣ ಸಾಮ್ರಾಜ್ಯವನ್ನು ನೀಡಿದರು, ಆದರೆ ಕೋಲಾರದಲ್ಲಿ ಈ ಚಿನ್ನವನ್ನು ಉಗುಳುವ ಭೂಮಿಯ ಮೇಲಿನ ಎಲ್ಲಾ ಹಕ್ಕುಗಳನ್ನು ಬ್ರಿಟಿಷ್ ಸರ್ಕಾರವು ಉಳಿಸಿಕೊಂಡಿತು ಎಂದು ವಾರೆನ್ ತಮ್ಮ ವರದಿಯಲ್ಲಿ ಬರೆದಿದ್ದಾರೆ. ಭಾರತವನ್ನು ‘ಚಿನ್ನದ ಹಕ್ಕಿ’ ಎಂದು ಏಕೆ ಕರೆಯಲಾಯಿತು ಎಂಬುದಕ್ಕೆ ಈ ಭೂಮಿ ಅತ್ಯುತ್ತಮ ಉದಾಹರಣೆಯಾಗಿದೆ. ಬ್ರಿಟಿಷರು ಈ ಮಣ್ಣಿನಿಂದ ಸುಮಾರು 900 ಟನ್ ಚಿನ್ನವನ್ನು ಹೊರತೆಗೆದರು ಎಂದು ದಾಖಲೆಗಳು ಹೇಳುತ್ತವೆ. ಹಿಂದೆ, ರಾಜರು ಕೂಡ ಇಲ್ಲಿಂದ ಚಿನ್ನವನ್ನು ಹೊರತೆಗೆಯಲು ಪ್ರಯತ್ನಿಸಿದರು. ಆದರೆ ಅಂತಹ ದೊಡ್ಡ ಗಣಿಗಾರಿಕೆಗೆ ಸಂಪನ್ಮೂಲಗಳು ಇರಲಿಲ್ಲ, ಆದ್ದರಿಂದ ಅವರ...