Maha Shivaratri 2021: ಮಹಾಶಿವರಾತ್ರಿಯಂದು ಉಪವಾಸ ಮಾಡುವುದು ಹೇಗೆ? ಇದರ ಹಿಂದಿರುವ ಕಾರಣವೇನು?

ಪ್ರತಿ ತಿಂಗಳ ಕೃಷ್ಣಪಕ್ಷದ ಚತುರ್ದಶಿಯೂ ಶಿವಪೂಜೆಗೆ ಶ್ರೇಷ್ಠ. ಆದರೆ ಮಾಘ ಮಾಸ ಕೃಷ್ಣಪಕ್ಷದ ಚತುರ್ದಶಿಯು ಅತ್ಯಂತ ವಿಶೇಷವಾಗಿರುವುದರಿಂದ ಅದು ಮಹಾಶಿವರಾತ್ರಿ ಆಗಿದೆ. ಶಿವರಾತ್ರಿ ಆಚರಣೆ ಹೇಗೆ ಮಾಡಬೇಕು.. ಇಲ್ಲಿದೆ ವಿವರ.

Maha Shivaratri 2021: ಮಹಾಶಿವರಾತ್ರಿಯಂದು ಉಪವಾಸ ಮಾಡುವುದು ಹೇಗೆ? ಇದರ ಹಿಂದಿರುವ ಕಾರಣವೇನು?
ಮಹಾಶಿವರಾತ್ರಿಯಂದು ಶಿವನ ಆರಾಧನೆ ಹೇಗಿರಬೇಕು
Follow us
ಆಯೇಷಾ ಬಾನು
|

Updated on:Mar 11, 2021 | 7:59 AM

ಕೈಲಾಸವಾಸಿ, ಸಂಕಟಹರ ಶಂಕರ, ದೇವರದೇವ ಮಹಾದೇವನ ಭಕ್ತರಿಗೆ ಶಿವರಾತ್ರಿ ವಿಶೇಷ ದಿನ. ಈ ದಿನ ಶಿವನು ಲೋಕ ಕಲ್ಯಾಣಕ್ಕಾಗಿ ವಿಷವನ್ನು ಆಪೋಶನ ಮಾಡಿದ ದಿನ. ಹೀಗಾಗಿ ಇಡೀ ರಾತ್ರಿ ಶಿವ ದೇಗುಲಗಳಲ್ಲಿ ಹಾಗೂ ಮನೆಗಳಲ್ಲಿ ನಿರಂತರ ಭಜನೆಗಳು ನಡೆಯುತ್ತವೆ. ಭಕ್ತರೆಲ್ಲರೂ ಉಪವಾಸವಿದ್ದು, ಇಡೀ ರಾತ್ರಿ ಜಾಗರಣೆಯನ್ನು ಮಾಡುತ್ತಾರೆ. ಉಪವಾಸ-ಜಾಗರಣೆ ಶಿವಧ್ಯಾನಗಳ ತ್ರಿವೇಣಿ ಸಂಗಮವೇ ಶಿವರಾತ್ರಿ. ಹಲವು ಶಿವಾಲಯಗಳಲ್ಲಿ 11 ಸಲ ರುದ್ರಾಭಿಷೇಕ ಮಾಡುತ್ತಾರೆ. ನೂರಾ ಒಂದು ಅಥವಾ ಸಾವಿರದ ಒಂದು ಬಿಲ್ವಪತ್ರೆಗಳನ್ನು ಪಂಚಾಕ್ಷರಿ ಮಂತ್ರ ಪಠನದೊಂದಿಗೆ ಶಿವನಿಗೆ ಸಮರ್ಪಿಸುತ್ತಾರೆ. ಮಾಘ ಮಾಸದಲ್ಲಿನ ಕೃಷ್ಣಪಕ್ಷದ ಚತುರ್ದಶಿಯು ಅತ್ಯಂತ ವಿಶೇಷವಾಗಿರುವುದರಿಂದ ಅದು ಮಹಾಶಿವರಾತ್ರಿ ಆಗಿದೆ. ಮಹಾಶಿವರಾತ್ರಿಯನ್ನು ವಿವಿಧ ರೀತಿಗಳಲ್ಲಿ ಆಚರಿಸಲಾಗುತ್ತೆ.

ಶಿವರಾತ್ರಿಯ ಸಮಯದಲ್ಲಿ ಪ್ರಾರ್ಥನೆಯ ಸಮಯ ಇಡೀ ದಿನ ಶಿವನಿಗೆ ಅರ್ಪಿತವಾಗಿದೆ. ಆದ್ದರಿಂದ ಶಿವ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಬೆಳಿಗ್ಗೆಯಿಂದಲೇ ಪ್ರಾರ್ಥನೆಯನ್ನು ಪ್ರಾರಂಭಿಸಬಹುದು. ಶಿವರಾತ್ರಿಯಂದು ದೇವಾಲಯಗಳಲ್ಲಿ 12 ಯಾಮಗಳಲ್ಲಿ (2 ಗಂಟೆಗೆ 1ಯಾಮ) ಅಭಿಷೇಕ ಮಾಡಿ ಪೂಜೆ ಮಾಡಲಾಗುತ್ತೆ. ಬೆಳಗ್ಗೆ 6 ಯಾಮ, ಸಂಜೆ 6 ಯಾಮಗಳಲ್ಲಿ ಅಭಿಕಷೇಕ ರೂಪದಲ್ಲಿ ಪೂಜೆ ಮಾಡಲಾಗುತ್ತೆ. ಹೆಚ್ಚಿನ ಶಿವ ಭಕ್ತರು ಸಂಜೆ  8 ಗಂಟೆಯ ನಂತರ ಪೂಜೆಗಳನ್ನು ಪ್ರಾರಂಭಿಸುತ್ತಾರೆ. ಬೆಳಿಗ್ಗೆ 4 ಗಂಟೆಯವರೆಗೂ ಪೂಜೆಗಳು ಮುಂದುವರಿಯುತ್ತವೆ. ಏಕೆಂದರೆ ಶಿವನು ಈ ಸಮಯದಲ್ಲಿ ಮಾನವನ ಕಣ್ಣಿಗೆ ಸರಿಹೊಂದುವಂತಹ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ನಂಬಲಾಗಿದೆ. ಈ ವೇಳೆ ಶಿವನಿಗೆ ಬಿಲ್ವಪತ್ರೆ, ಹಣ್ಣು, ಹಾಲಿನ ಅಭಿಷೇಕ ಸೇರಿದಂತೆ ವಿವಿಧ ನೈವೇದ್ಯಗಳನ್ನು ಅರ್ಪಿಸಿ, ಪೂಜೆ ಮಾಡಲಾಗುತ್ತೆ.

ಶಿವರಾತ್ರಿ ಪೂಜೆ ಮಾಡುವುದು ಹೇಗೆ? ಬೇಗನೆ ಎದ್ದು ಸ್ನಾನ ಮಾಡಿ. ಹಣೆಯ ಮೇಲೆ ವಿಭೂತಿ ಹಚ್ಚಿ. ದೇವರ ಮನೆ ಸ್ವಚ್ಛಗೊಳಿಸಿ ಶಿವ ವಿಗ್ರಹದ ಮುಂದೆ ದೀಪವನ್ನು ಬೆಳಗಿಸಿ. ಬಳಿಕ ಬಿಲ್ವಪತ್ರೆಗಳನ್ನು ಶಿವನಿಗೆ ಅರ್ಪಿಸಿ. ಇಡೀ ದಿನ ಉಪವಾಸ ಮತ್ತು ಮೌನವ್ರತ ಮಾಡಬೇಕು. ಸಂಜೆ ಸ್ನಾನ ಮಾಡಿ, ದೀಪ ಬೆಳಗಿಸಿ. ಬಿಲ್ವಪತ್ರೆಗಳನ್ನು ಅರ್ಪಿಸಿ ಶಿವಪೂಜೆ ಮಾಡಿ. ರಾತ್ರಿ ಜಾಗರಣೆ ಮಾಡುವವರು ನಿಯಮಿತವಾಗಿ ಪೂಜೆಯನ್ನು ಮಾಡಬಹುದು ಮತ್ತು ಶಿವಮಂತ್ರಗಳನ್ನು ಪಠಿಸುತ್ತಿರಬಹುದು ಅಥವಾ ಮೌನವಾಗಿದ್ದು ಧ್ಯಾನ ಮಾಡಬೇಕು. ಇನ್ನು ಹೆಚ್ಚಿನ ಭಕ್ತರು ಶಿವ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮಹಾದೇವನನ್ನು ರಾತ್ರಿಯ ಹೊತ್ತು ಪೂಜಿಸುತ್ತಾ, ಮಂತ್ರಗಳನ್ನು ಪಾರಾಯಣ ಮಾಡುತ್ತಾ ಭಕ್ತಿಯಿಂದ ರಾತ್ರಿ ಕಳೆಯುತ್ತಾರೆ.

Maha Sivaratri

ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನ

ಕೃತೋಪವಾಸಾಯೇತಸ್ಯಾಂ ಶಿವಮರ್ಚನಿ ಜಾಗ್ರತಾಃ ಬಿಲ್ವಪತ್ರೈತ್ತೈಶ್ಚತುರ್ಯಾಮಂತೇಯಾನಿ ಶಿವತುಲ್ಯತಾಂ ಎಂದು ಶಿವನನ್ನು ಆರಾಧಿಸಲಾಗುತ್ತೆ. ಮಹಾಶಿವರಾತ್ರಿಯಂದು ಉಪವಾಸ ಮಾಡಿ ಜಾಗರಣೆಯಲ್ಲಿದ್ದು ಬಿಲ್ವಪತ್ರೆಗಳಿಂದ ಶಿವನನ್ನು ನಾಲ್ಕು ಯಾಮಗಳಲ್ಲೂ ಅರ್ಚಿಸಿ, ಪೂಜಿಸುವವರು ಶಿವನಿಗೆ ಸಮಾನರಾಗಿಬಿಡುತ್ತಾರೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಮಂತ್ರಪಠನೆ ಕಷ್ಟವಾದ್ರೆ ಕೇವಲ ‘ಓಂ ನಮಃ ಶಿವಾಯ’ ಎಂದು ಶಿವನನ್ನು ಸ್ಮರಿಸುವ ಮೂಲಕ ಮಹಾ ಶಿವರಾತ್ರಿ ಪುಣ್ಯಫಲವನ್ನು ಪಡೆಯಬಹುದು.

ಇನ್ನು ಕೆಲವರು ಶಿವರಾತ್ರಿಯಂದು ಮಜ್ಜಿಗೆ ಕಡಿಯುವ ಕಡಗೋಲು, ಮುದ್ದೆ ಮಾಡುವ ಮುದ್ದೆ ಕೋಲು ಸೇರಿದಂತೆ ಮನೆಯಲ್ಲಿ ಬಳಸುವ ಕೋಲುಗಳನ್ನು ಶುದ್ಧಿ ಮಾಡಿ ಅವುಗಳನ್ನು ಇಟ್ಟು ಪೂಜೆ ಮಾಡಿ ಎಡೆ ಇಡುತ್ತಾರೆ. ಆ ದಿನ ಅವುಗಳನ್ನೇ ಶಿವ ಎಂದು ಭಾವಿಸಲಾಗುತ್ತೆ. ನೈವೇದ್ಯಕ್ಕೆ ಮಜ್ಜಿಗೆ ಅನ್ನ, ಅವಲಕ್ಕಿ, ಬಾಳೆ ಹಣ್ಣು ಇಡಲಾಗುತ್ತೆ. ಉಪ್ಪು, ಎಣ್ಣೆ ಬಳಸದೇ ಇವುಗಳನ್ನು ತಯಾರಿಸಲಾಗುತ್ತೆ. ಈ ಪೂಜೆ ನಂತರವೇ ಉಪವಾಸ ಆರಂಭವಾಗುತ್ತೆ. ಕೊನೆಗೆ ಇದೇ ನೈವೇದ್ಯದಿಂದಲೇ ವ್ರತ ಬಿಡಲಾಗುತ್ತೆ. ಇದರ ಜೊತೆಗೆ ಕೆಲವರು ಒಂದು ತಿಂಗಳ ಹಿಂದೆಯೇ ಮಹಾಶಿವರಾತ್ರಿಗೆಂದು ಮಲೆ ಮಹಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಆರಂಭಿಸಿ ಮಹಾಶಿವರಾತ್ರಿಯನ್ನು ಬೆಟ್ಟದಲ್ಲಿಯೇ ಆಚರಿಸುತ್ತಾರೆ. ಇನ್ನು ವಿಶೇಷ ಎಂಬಂತೆ ಪುರಾಣಗಳ ಕಥೆ ಪ್ರಕಾರ ಮಹಾಶಿವರಾತ್ರಿಯಂದು ಗಿರಿಜಾ ಕಲ್ಯಾಣವನ್ನೂ ಸಹ ಮಾಡಲಾಗುತ್ತೆ.

Maha Sivaratri

ತೆಂಗಿನಕಾಯಿ ಬಳಸಿ ನಿರ್ಮಿಸಲಾಗಿರುವ ಶಿವಲಿಂಗ ವಿಗ್ರಹ

ಉಪವಾಸದ ವಿಧಾನ ಹೆಚ್ಚಿನ ಜನರು ಕಟ್ಟುನಿಟ್ಟಾಗಿ ಇಡೀ ದಿನ ಉಪವಾಸ ಮಾಡುತ್ತಾರೆ. ಆದರೆ 24 ಗಂಟೆಗಳ ಕಾಲ ಉಪವಾಸವಿರಲು ಸಾಧ್ಯವಾಗದಿದ್ದರೆ, ನೀರು ಮತ್ತು ಹಣ್ಣುಗಳನ್ನು ಸ್ವೀಕರಿಸಿ ದಿನವಿಡೀ ಶಿವನ ಆರಾಧನೆ ಹಾಗೂ ಧ್ಯಾನವನ್ನು ಮಾಡಬಹುದು. ಶಿವರಾತ್ರಿಯಂದು ಭಕ್ತರು ನಿರಾಹಾರ ವ್ರತ ಕೈಗೊಳ್ಳುತ್ತಾರೆ. ಕೆಲವರು ಅಕ್ಕಿ, ಗೋಧಿ ಅಥವಾ ಯಾವುದೇ ಧಾನ್ಯಗಳಿಂದ ತಯಾರಿಸಿದ ಆಹಾರ ಸೇವಿಸುವುದಿಲ್ಲ ಎಂದು ಸಂಕಲ್ಪ ಮಾಡಿಕೊಳ್ಳುತ್ತಾರೆ. ನಿರಾಹಾರ ವ್ರತ ಆಚರಿಸುತ್ತಿಲ್ಲ ಎಂದಾದರೆ ಹಾಲು, ಹಣ್ಣು ಮಾತ್ರ ಸೇವಿಸಿ ಶಿವನ ಧ್ಯಾನ ಮಾಡುವುದು ಪದ್ಧತಿ. ಮುಖ್ಯವಾಗಿ ಮನಸ್ಸು ಏಕಾಗ್ರತೆ ಹೊಂದಬೇಕಾದರೆ ಖಾಲಿ ಹೊಟ್ಟೆಯಿಂದಿರಬೇಕು ಎಂಬುವುದು ಇದರ ಸಿದ್ಧಾಂತವಾಗಿದೆ.

ಶಿವನ ನಾಮ ಜಪ ಮಾಡಿ ಉಪವಾಸ ಮತ್ತು ಜಾಗರಣೆ ಮಾಡಿದ ನಂತರ ಮರುದಿನ ಅನ್ನ ಮತ್ತು ಮೇಲೊಗರಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ದೇವರ ನೈವೇದ್ಯಕ್ಕೆ ಇಡುತ್ತಾರೆ. ಈ ಅರ್ಪಣೆಯ ನಂತರವೇ ಕುಟುಂಬದ ಸದಸ್ಯರು ಆಹಾರವನ್ನು ಸ್ವೀಕರಿಸುವರು. ಈ ರೀತಿಯ ಪೂಜಾ ವಿಧಿ ಹಾಗೂ ಆಚರಣೆಯನ್ನು ಭಾರತೀಯರು ಸಾಮಾನ್ಯವಾಗಿ ಆಚರಿಸುತ್ತಾರೆ.

ಉಪವಾಸದ ಹಿಂದಿರುವ ವೈಜ್ಞಾನಿಕ ಕಾರಣ ಧ್ಯಾನ ಹಾಗೂ ಬಾಹ್ಯ ಪೂಜೆಗಳಿಗೆ ಪೂರಕವಾಗಿ ನಿರಾಹಾರದಿಂದ ಇರುವುದೇ ಉಪವಾಸ. ಇದಕ್ಕೆ ಪೌರಾಣಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಷ್ಟೇ ಅಲ್ಲ, ವೈಜ್ಞಾನಿಕ ಕಾರಣಗಳೂ ಇವೆ. ಲೋಕ ಕಲ್ಯಾಣಕ್ಕಾಗಿ ಶಿವನು ನಂಜನ್ನು (ವಿಷ) ಉಂಡು ನಂಜುಂಡನಾದ ಪೌರಾಣಿಕ ಘಟನೆಗೂ ಶಿವರಾತ್ರಿಯಂದು ಆಚರಿಸುವ ಜಾಗರಣೆ ಹಾಗೂ ಉಪವಾಸಕ್ಕೂ ಪರಸ್ಪರ ಸಂಬಂಧವಿದೆ. ಯಾವುದೇ ಕಾರಣದಿಂದ ವಿಷವು ಮನುಷ್ಯನ ದೇಹದೊಳಗೆ ಪ್ರವೇಶಿಸಿದರೆ ಅದು ಶರೀರದ ಎಲ್ಲೆಡೆ ವ್ಯಾಪಿಸದಂತೆ ತಡೆಯುವುದಕ್ಕಾಗಿ ನಿದ್ರಿಸಲು ಬಿಡಬಾರದು ಎಂದು ವೈದ್ಯರು ಹೇಳುತ್ತಾರೆ. ಅಲ್ಲದೆ ವಿಷದ ತೀವ್ರತೆ ಕುಗ್ಗಿಸಲು ಎಳನೀರು, ಪಾನಕ ಹಾಗೂ ಹಣ್ಣುಗಳನ್ನಷ್ಟೇ ಸೇವಿಸಬೇಕು ಎಂದು ವೈದ್ಯ ವಿಜ್ಞಾನ ಹೇಳುತ್ತದೆ. Maha Sivaratri

ಉಪವಾಸ ಮುರಿಸುವ ಕ್ರಮ ರಾತ್ರಿ ಜಾಗರಣೆ ಮುಗಿಸಿದ ಬಳಿಕ, ಮರುದಿನ ಭಕ್ತರು ಸ್ನಾನ ಮಾಡಬೇಕು. ನಂತರ ಉಪವಾಸ ಕ್ರಮವನ್ನು ಮುರಿಯಬೇಕು. ಉಪವಾಸವನ್ನು ಮುರಿಯಲು ಸೂಕ್ತವಾದ ಸಮಯ ಎಂದರೆ ಉಪವಾಸ ಮಾಡಿದ ಮರುದಿನದ ಸೂರ್ಯೋದಯದ ನಂತರ ಆಹಾರ ಸೇವನೆ ಮಾಡಬಹುದು. ಅಂದರೆ ಸೂರ್ಯೋದಯ ಆಗುವ ಮೊದಲು ಸ್ನಾನ ಮಾಡಿ ಆಹಾರವನ್ನು ಸೇವಿಸಬೇಕು. ಗ್ರಂಥಗಳ ಪ್ರಕಾರ ಚತುರ್ದಶಿ ತಿಥಿ ಮುಗಿಯುವ ಮೊದಲು ವ್ರತದಿಂದ ಗರಿಷ್ಠ ಲಾಭವನ್ನು ಪಡೆಯಬೇಕು.

ಇದನ್ನೂ ಓದಿ: Maha Sivaratri 2021: ಕರ್ನಾಟಕ ರಾಜ್ಯದ ಪ್ರಸಿದ್ಧ ಶಿವನ ದೇವಾಲಯಗಳು ಇಲ್ಲಿವೆ

Published On - 5:57 pm, Wed, 10 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ