Menstrual Hygiene Day 2021: ಸ್ಯಾನಿಟರಿ ಪ್ಯಾಡ್​​ಗಳೆಷ್ಟು ಸುರಕ್ಷಿತ..? ಮುಟ್ಟಿನಲ್ಲಿ ಸ್ವಚ್ಛತೆ ನಿರ್ಲಕ್ಷ್ಯ ಮಾಡಿದರೆ ಕ್ಯಾನ್ಸರ್ ಅಪಾಯ!

ವಿಶ್ವ ಋತುಚಕ್ರ ನೈರ್ಮಲ್ಯ ದಿನ: ಮುಟ್ಟಿನ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಗರ್ಭಿಣಿಯಾಗುವ ಸಂಭವ ಇರುವುದಿಲ್ಲ ಎಂದು ಅನೇಕ ಮಹಿಳೆಯರು ಭಾವಿಸುತ್ತಾರೆ. ಹಾಗೇ ಸೆಕ್ಸ್​ಗೆ ಮುಂದಾಗುತ್ತಾರೆ ಕೂಡ. ಆದರೆ ಇದು ಸರಿಯಾದ ಕ್ರಮವಲ್ಲ.

Menstrual Hygiene Day 2021: ಸ್ಯಾನಿಟರಿ ಪ್ಯಾಡ್​​ಗಳೆಷ್ಟು ಸುರಕ್ಷಿತ..? ಮುಟ್ಟಿನಲ್ಲಿ ಸ್ವಚ್ಛತೆ ನಿರ್ಲಕ್ಷ್ಯ ಮಾಡಿದರೆ ಕ್ಯಾನ್ಸರ್ ಅಪಾಯ!
ಸ್ಯಾನಿಟರಿ ಪ್ಯಾಡ್​
Follow us
Lakshmi Hegde
| Updated By: Digi Tech Desk

Updated on:May 28, 2021 | 4:06 PM

ಮುಟ್ಟು ನಿಸರ್ಗ ಸಹಜ ಕ್ರಿಯೆ..ಆದರೆ ಆ ನಾಲ್ಕರಿಂದ ಏಳು ದಿನಗಳ ಕಾಲ ಮಹಿಳೆಯ ದೈಹಿಕ ಮತ್ತು ಮಾನಸಿಕ ಸ್ಥಿತಿ ಸಹಜವಾಗಿ ಇರುವುದಿಲ್ಲ..ಗರ್ಭಕೋಶದ ಒಳಪದರ ಕಳಚಿ ಅದು ರಕ್ತದ ರೂಪದಲ್ಲಿ ಯೋನಿಯ ಮೂಲಕ ವಿಸರ್ಜನೆ ಆಗುವ ಆ 4-7ದಿನಗಳಲ್ಲಿ ಸ್ತ್ರೀಯರು ತಮ್ಮ ಆರೋಗ್ಯ, ಜನನಾಂಗ-ದೇಹದ ಸ್ವಚ್ಛತೆಯ ಕಡೆಗೆ ಗಮನಕೊಡಬೇಕು. ಈ ಸಮಯದಲ್ಲಿ ಮಹಿಳೆಯರು ಜನನಾಂಗಕ್ಕೆ ಧರಿಸುವ ಒಳ ಉಡುಪಿನೊಟ್ಟಿಗೆ ಕಾಟನ್​ ಬಟ್ಟೆಯಾಗಲಿ, ಸ್ಯಾನಿಟರಿ ನ್ಯಾಪ್​ಕಿನ್​ಗಳಾಗಲಿ ಬಳಸಬೇಕು. ಈಗಂತೂ ಟಾಂಪೂನ್​, ಮುಟ್ಟಿನ ಕಪ್​ಗಳಂಥ ಇನ್ನಷ್ಟು ಸಲಕರಣೆಗಳು ಲಭ್ಯ ಇವೆ. ಆದರೆ ಒಂದೇ ಬೇಸರದ ಸಂಗತಿಯೆಂದರೆ ಅವೆಲ್ಲ ಬಡವರ್ಗದ ಮಹಿಳೆಯರ ಕೈಗೆಟಕುವುದಿಲ್ಲ. ದುಬಾರಿ ಬೆಲೆ..ಅರಿವಿನ ಕೊರತೆ..ಹೀಗೆ ಕೆಲವು ಕಾರಣಗಳಿಂದ ಅನೇಕ ಮಹಿಳೆಯರು ಅದೇ ಕಾಟನ್​ ಬಟ್ಟೆಯ ಮೊರೆ ಹೋಗುತ್ತಿದ್ದಾರೆ. ಮತ್ತೆ ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಾಧ್ಯವಾಗದೆ ಹಲವು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಬಳಸುತ್ತಿರುವ ಸ್ಯಾನಿಟರಿ ಪ್ಯಾಡ್​ಗಳು ಎಷ್ಟು ಸುರಕ್ಷಿತ? ಇನ್ನು ಮಹಿಳೆಯರು ಸಾಮಾನ್ಯವಾಗಿ ಬಳಸುವುದು ಸ್ಯಾನಿಟರಿ ಪ್ಯಾಡ್​ಗಳನ್ನು. ಅದೆಷ್ಟೋ ಜನರ ಪ್ರಥಮ ಆದ್ಯತೆ ಈ ಸ್ಯಾನಿಟರಿ ನ್ಯಾಪಕಿನ್​ (ಪ್ಯಾಡ್ ಅಥವಾ ಟವೆಲ್​ ಎಂದೂ ಕರೆಯಲಾಗುತ್ತದೆ)ಗಳು. ಆದರೆ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಪ್ಲಾಸ್ಟಿಕ್​-ಕೆಮಿಕಲ್​ ಯುಕ್ತ ಸ್ಯಾನಿಟರಿ ಪ್ಯಾಡ್​ಗಳು ಪರಿಸರಕ್ಕೂ ಮಾರಕ. ಅಷ್ಟೇ ಅಲ್ಲ ಆರೋಗ್ಯದ ಮೇಲೆಯೂ ಕ್ರಮೇಣ ದುಷ್ಪರಿಣಾಮ ಬೀರುತ್ತವೆ. ಬಳಸಿದ ಸ್ಯಾನಿಟರಿ ಪ್ಯಾಡ್​​ಗಳನ್ನು ಸೂಕ್ತರೀತಿಯಲ್ಲಿ ವಿಲೇವಾರಿ ಮಾಡಲು ಎಲ್ಲರಿಗೂ ಅವಕಾಶ ಇರುವುದಿಲ್ಲ. ಬೇಕಾಬಿಟ್ಟಿ ಬಿಸಾಕಿದರೆ ಅದು ಮಣ್ಣಿಗೆ ಮಾರಕ. ಹಾಗೆ ಎಸೆಯುವ ಪ್ಯಾಡ್​ಗಳು ಎಲ್ಲೆಲ್ಲೋ ಬಿದ್ದು ಮಣ್ಣಿನೊಳಗೆ ಸೇರಬಹುದು. ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಸ್ಯಾನಿಟರಿ ಪ್ಯಾಡ್​ಗಳಲ್ಲಿ ಶೇ.90ರಷ್ಟು ಪ್ಲಾಸ್ಟಿಕ್​ ಬಳಕೆಯಾಗುತ್ತಿದ್ದು, ಜೈವಿಕ ವಿಘಟನೆ ಆಗುವುದಿಲ್ಲ. ಸಂಪೂರ್ಣವಾಗಿ ಮಣ್ಣಿನಲ್ಲಿ ಕರಗಲು ಏನಿಲ್ಲವೆಂದರೂ 500 ರಿಂದ 800 ವರ್ಷಗಳು ಬೇಕು.

ಇನ್ನು ಈ ಪ್ಯಾಡ್​​ಗಳನ್ನು ಆಗಾಗ ಬದಲಿಸಬೇಕು. ಇಲ್ಲದಿದ್ದರೆ ಸ್ರಾವ ಸೋರಿಕೆಯಾಗುತ್ತದೆ. ಹಾಗೇ, ಸ್ರಾವ ಕಡಿಮೆ ಇದ್ದರೂ ದಿನದಲ್ಲಿ ತುಂಬ ಹೊತ್ತು ಒಂದೇ ಪ್ಯಾಡ್​​ನ್ನು ಧರಿಸಿರಬಾರದು. ಹಾಗೇ ಮಾಡುವುದರಿಂದ ಅದರಲ್ಲಿರುವ ರಾಸಾಯನಿಕಗಳು ದೇಹಕ್ಕೆ ಮಾರಕ ಆಗಬಹುದು ಎನ್ನುತ್ತಾರೆ ತಜ್ಞರು. ಇನ್ನು ಕೆಲವರಿಗಂತೂ ಸ್ಯಾನಿಟರಿ ನ್ಯಾಪ್​ಕಿನ್​ಗಳನ್ನು ಬಳಸಿದರೆ ಜನನಾಂಗದ ಸುತ್ತಮುತ್ತ ಕೆಂಪು ಕಲೆ, ತುರಿಕೆಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

ಸ್ಯಾನಿಟರಿ ಪ್ಯಾಡ್​​ಗಳನ್ನು ಎಷ್ಟು ಗಂಟೆಗೊಮ್ಮೆ ಬದಲಿಸಬೇಕು? ಸ್ಯಾನಿಟರಿ ಪ್ಯಾಡ್​ಗಳಿಂದ ಟಾಕ್ಸಿಕ್​ ಶಾಕ್​ ಸಿಂಡ್ರೋಮ್ ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇದು ಅಪರೂಪವಾದರೂ ತೀರ ನಿರ್ಲಕ್ಷ್ಯ ಮಾಡುವಂಥದ್ದಲ್ಲ. ಒಂದೇ ಪ್ಯಾಡ್​​ನ್ನು ಸುದೀರ್ಘ ಸಮಯದವರೆಗೆ ಧರಿಸಿದರೆ ಈ ಸಿಂಡ್ರೋಮ್​ ಕಾಣಿಸಿಕೊಳ್ಳುತ್ತದೆ. ಇನ್ನು ಒಂದು ಪ್ಯಾಡ್​ನ್ನು ದಿನಗಟ್ಟಲೆ ಹಾಕಿಕೊಂಡಿದ್ದರೆ ಬೇರೆ ರೀತಿಯ ಕೆಲವು ಅಲರ್ಜಿಗಳೂ ಉಂಟಾಗಬಹುದು. ವಾಸನೆಯೂ ಬರಲು ಶುರುವಾಗುತ್ತದೆ. (ಕಾಟನ್​ ಬಟ್ಟೆಗಳೂ ಅಷ್ಟೇ, ಬಿಸಿನೀರಿನಲ್ಲಿ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅದರಿಂದಲೂ ಸೋಂಕು ಉಂಟಾಗುತ್ತದೆ. ಒಂದೇ ಬಟ್ಟೆಯನ್ನು ಐದಾರು ತಿಂಗಳ ಋತುಸ್ರಾವಕ್ಕೆ ಬಳಸಬಾರದು. ) ಹೀಗಾಗಿ ನಾಲ್ಕು ಗಂಟೆಗೊಮ್ಮೆಯಾದರೂ ಪ್ಯಾಡ್​ ಬದಲಿಸಬೇಕು. ನಿಮಗೆ ಅಷ್ಟೇನೂ ರಕ್ತಸ್ರಾವ ಆಗುತ್ತಿಲ್ಲವಾದ 6 ತಾಸಿನವರೆಗೂ ಪ್ಯಾಡ್​ ಬದಲಿಸಬೇಕು ಎಂದೇನಿಲ್ಲ. ಕೆಲವರು 10- 12ಗಂಟೆಯಾದರೂ ಸ್ಯಾನಿಟರಿ ಪ್ಯಾಡ್ ಬದಲಿಸುವುದಿಲ್ಲ. ತಜ್ಞರು ನೀಡುವ ಸಲಹೆ ಪ್ರಕಾರ ಹಾಗೇ ಮಾಡುವುದು ತಪ್ಪು. ಇದರಿಂದ ಯೋನಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. ಅಲರ್ಜಿ, ತುರಿಕೆ, ವಾಸನೆ ಸಮಸ್ಯೆ ಕಾಣಿಸಿಕೊಳ್ಳಬಹುದಾಗಿದೆ.

ಸ್ಯಾನಿಟರಿ ಪ್ಯಾಡ್​ ಬಳಸುವ ಮಹಿಳೆಯರು ಗಮನಿಸಲೇಬೇಕಾದ ಅಂಶಗಳಿವು.. 1. ಈಗಂತೂ ಸಿಕ್ಕಾಪಟೆ ವಿಧದ ಸ್ಯಾನಿಟರಿ ಪ್ಯಾಡ್​ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಮಹಿಳೆಯರು ಉತ್ತಮ ಗುಣಮಟ್ಟದ ಪ್ಯಾಡ್​ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಗ್ಗದ, ಅಶುದ್ಧ ಸ್ಯಾನಿಟರಿ ಪ್ಯಾಡ್​ಗಳ ಬಳಕೆಯಿಂದ ಮೂತ್ರನಾಳದ ಸೋಂಕು, ಫಂಗಲ್​ ಸೋಂಕು ಉಂಟಾಗಬಹುದು. 2. ಒಂದೇ ಪ್ಯಾಡ್​​ನ್ನು ದೀರ್ಘ ಅವಧಿಯವರೆಗೆ ಧರಿಸಿಕೊಂಡಿದ್ದರೆ ಯೋನಿಯಲ್ಲಿ ಶಿಲೀಂದ್ರ ಸೋಂಕು ಕಾಣಿಸಿಕೊಳ್ಳುತ್ತದೆ. ಅಲರ್ಜಿ, ತುರಿಕೆ ಉಂಟಾಗುತ್ತದೆ. ವಾಸನೆಯೂ ಬರುತ್ತದೆ. 3. ದೊಡ್ಡ ಬಟ್ಟೆ, ಮೂರ್ನಾಲ್ಕು ಪ್ಯಾಡ್​ಗಳನ್ನು ಒಟ್ಟಿಗೆ ಬಳಸುವುದರಿಂದ ತೊಡೆ ಸಂದು ಕೊರೆಯುತ್ತದೆ. ಇಲ್ಲವೆ ಕೆಂಪಾಗಿ ಉರಿಯಲು ಪ್ರಾರಂಭವಾಗುತ್ತದೆ. 4. ಮುಟ್ಟಿನ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಗರ್ಭಿಣಿಯಾಗುವ ಸಂಭವ ಇರುವುದಿಲ್ಲ ಎಂದು ಅನೇಕ ಮಹಿಳೆಯರು ಭಾವಿಸುತ್ತಾರೆ. ಹಾಗೇ ಸೆಕ್ಸ್​ಗೆ ಮುಂದಾಗುತ್ತಾರೆ ಕೂಡ. ಆದರೆ ಇದು ಸರಿಯಾದ ಕ್ರಮವಲ್ಲ. ಹೀಗೆ ರಕ್ತಸ್ರಾವ ಆಗುತ್ತಿರುವ ಸಂದರ್ಭದಲ್ಲಿ ಸಂಭೋಗ ನಡೆಸುವುದರಿಂದ ಹೆಪಟೈಟಿಸ್​ ಬಿಯಂಥ ಹಲವು ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. 5.ಸ್ಯಾನಿಟರಿ ನ್ಯಾಪ್​​ಕಿನ್​ಗಳನ್ನು ಮುಟ್ಟಿದ ನಂತರ, ಪ್ಯಾಡ್ ಬದಲಿಸಿಕೊಂಡ ನಂತರ ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕು. ಇಲ್ಲದಿದ್ದರೆ ಅದೇ ಕೈಯಿಂದ ಆಹಾರ ಸೇವನೆ ಮಾಡುವುದು ಹಲವು ಕಾಯಿಲೆಗಳಿಗೆ ಕಾರಣವಾಗಬಹುದು. 6. ಮುಟ್ಟಿನ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದೆ ಇದ್ದರೆ ಗರ್ಭಕಂಠದ ಕ್ಯಾನ್ಸರ್​ ಬರುವ ಸಾಧ್ಯತೆ ಇದೆ. ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್​ ಪ್ರಮಾಣ ಹೆಚ್ಚಿದೆ. ಪ್ರತಿವರ್ಷ ಸರಾಸರಿ 70,000 ಮಹಿಳೆಯರು ಈ ಕ್ಯಾನ್ಸರ್​ಗೆ ತುತ್ತಾಗುತ್ತಿದ್ದಾರೆ.

ಇದನ್ನೂ ಓದಿ: ವಿಶ್ವ ಋತುಚಕ್ರ ನೈರ್ಮಲ್ಯ ದಿನ: ಮುಟ್ಟಿನ ಬಗ್ಗೆ ಮೌಢ್ಯ, ಮುಜುಗರ ಬೇಡವೇ ಬೇಡ; ಆ ದಿನಗಳಲ್ಲಿ ಸ್ವಚ್ಛತೆಯೇ ಆದ್ಯತೆಯಾಗಲಿ

(Menstrual Hygiene Day 2021 Special Story about use of sanitary napkins and side effects)

Published On - 8:09 am, Fri, 28 May 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್