ಬಿ.ಎಲ್.ಶಂಕರ್ ಬರಹ | ಸರ್ಕಾರ ಸಂವಿಧಾನದ ಆಶಯ ಉಲ್ಲಂಘಿಸಿದಾಗ ನ್ಯಾಯಾಂಗ ನಮ್ಮ ನೆರವಿಗೆ ಬರಬೇಕಿತ್ತು

ಪ್ರತಿನಾಯಕ ಇದ್ದಾಗ ಮಾತ್ರ ನಾಯಕನ ಸಾಮರ್ಥ್ಯ ಸಾಬೀತಾಗುವ ರೀತಿಯಲ್ಲೇ, ಸಮಾಜದಲ್ಲಿ ಒಂದು ಪ್ರತಿರೋಧ ಇದ್ದಾಗಲೇ ಜನ ನಾಯಕರು ಮಾಡಿರುವ ಕಾನೂನು ಜನಪರವಾಗಿದೆಯೋ ಅಥವಾ ಇಲ್ಲವೋ ಎಂಬುದು ಗೊತ್ತಾಗುತ್ತದೆ.

ಬಿ.ಎಲ್.ಶಂಕರ್ ಬರಹ | ಸರ್ಕಾರ ಸಂವಿಧಾನದ ಆಶಯ ಉಲ್ಲಂಘಿಸಿದಾಗ ನ್ಯಾಯಾಂಗ ನಮ್ಮ ನೆರವಿಗೆ ಬರಬೇಕಿತ್ತು
ಬಿ.ಎಲ್. ಶಂಕರ್
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 26, 2021 | 12:27 PM

ಸೂಕ್ಷ್ಮ ಮನಸ್ಸಿನ ಮೃದು ಭಾಷಿಕ ರಾಜಕಾರಣಿ ಬಿ.ಎಲ್.ಶಂಕರ್ ಸಂವಿಧಾನದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ಅದೇ ವಿಚಾರವಾಗಿ ಪಿಎಚ್​ಡಿ ಪಡೆದವರು. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಗಣತಂತ್ರದ ಆಧಾರವಾಗಿರುವ ಸಂವಿಧಾನ, ಆಡಳಿತ ಮತ್ತು ನ್ಯಾಯಾಂಗಗಳ ಬಗ್ಗೆ ತಮ್ಮ ವಿಚಾರ ಲಹರಿಯಲ್ಲಿ ಈ ಬರಹದಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಸಂವಿಧಾನ ಅನೇಕ ಕಾರಣಗಳಿಂದ ವಿಶಿಷ್ಠ ಸ್ಥಾನ ಪಡೆದುಕೊಂಡಿದೆ. ಸಂವಿಧಾನ ಸುದೀರ್ಘವಾಗಿದೆ ಎನ್ನುವುದು ಒಂದು ಕಾರಣವಾದರೆ, ಬಹು ಆಯಾಮಗಳನ್ನು ಹೊಂದಿದೆ ಎಂಬುದು ಮತ್ತೊಂದು ಕಾರಣ. ಸಾಕಷ್ಟು ಚರ್ಚೆಗಳ ನಂತರ 1949ರಲ್ಲಿ ಸಂವಿಧಾನ ರಚನೆ ಆಗಿತ್ತು.

ಸಂಸದೀಯ ಪ್ರಜಾಪ್ರಭುತ್ವ ಆಯ್ಕೆ ಮಾಡಿಕೊಳ್ಳಬೇಕೋ ಅಥವಾ ಅಧ್ಯಕ್ಷೀಯ ಆಡಳಿತ ಆಯ್ಕೆ ಮಾಡಿಕೊಳ್ಳಬೇಕೋ ಎನ್ನುವ ವಿಚಾರದಲ್ಲಿ ಸುದೀರ್ಘ ಚರ್ಚೆಗಳು ನಡೆದಿದ್ದವು. ಇದಲ್ಲದೆ, ಮತದಾನದ ಹಕ್ಕು ಯಾರಿಗೆ ನೀಡಬೇಕು, ಯಾರಿಗೆ ನೀಡಬಾರದು ಎನ್ನುವ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆ ಆಗಿತ್ತು. ಪ್ರಪಂಚದಲ್ಲಿ ಮಾದರಿ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಂಡಿರುವ ಅಮೆರಿಕ ಹಾಗೂ ಬ್ರಿಟನ್​ ಎಲ್ಲರಿಗೂ ಮತದಾನದ ಹಕ್ಕು ಕೊಟ್ಟಿರಲಿಲ್ಲ. ಅಮೆರಿಕ ಸಾಕಷ್ಟು ವರ್ಷಗಳ ಕಾಲ ಮಹಿಳೆಯರಿಗೆ ಮತದಾನ ಮಾಡೋಕೆ ಅವಕಾಶ ನೀಡಿರಲಿಲ್ಲ. ಕಪ್ಪುಬಣ್ಣದವರಿಗೆ, ಆಸ್ತಿ ಇಲ್ಲದವರಿಗೆ ಮತದಾನದ ಹಕ್ಕು ಇರಲೇ ಇಲ್ಲ. ಬ್ರಿಟನ್​ ಕೂಡ ಆರಂಭದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಟ್ಟಿರಲಿಲ್ಲ. ಹೀಗಾಗಿ ಭಾರತ ಯಾರ್ಯಾರಿಗೆ ಮತದಾನದ ಹಕ್ಕನ್ನು ನೀಡಲಿದೆ ಎನ್ನುವ ಕುತೂಹಲ ಇತ್ತು.

ಸಂವಿಧಾನ ರಚನೆ ಮಾಡುವಾಗ ಸಾಕಷ್ಟು ಅನುಭವಿಗಳು ಸಮಿತಿಯಲ್ಲಿದ್ದರು. ಬಾಬು ರಾಜೇಂದ್ರ ಪ್ರಸಾದ್ ಸಂವಿಧಾನ ಸಮಿತಿಯ ಅಧ್ಯಕ್ಷರಾಗಿದ್ದರು. ಅಂಬೇಡ್ಕರ್​, ನೆಹರು ಸೇರಿ ಸಾಕಷ್ಟು ಅನುಭವಿಗಳು ಸಭೆಯಲ್ಲಿದ್ದರು. ಭಾರತ-ಪಾಕ್​ ವಿಭಜನೆಯ ಬಿಸಿ ಇನ್ನೂ ಇತ್ತು. ಹೀಗಾಗಿ, ಭಾರತ ಒಂದು ಧರ್ಮದ ಆಧಾರದಮೇಲೆ ರಾಷ್ಟ್ರವಾಗಿ ಉಳಿಯುತ್ತದೆಯೋ ಅಥವಾ ಜಾತ್ಯಾತೀತ ರಾಷ್ಟ್ರವಾಗುತ್ತದೆಯೋ ಎನ್ನುವ ಪ್ರಶ್ನೆ ಅನೇಕರಲ್ಲಿತ್ತು. ಅಂತಿಮವಾಗಿ ಪ್ರಪಂಚಕ್ಕೆ ಮಾದರಿ ಆಗುವ ಸಂವಿಧಾನ ರಚನೆ ಆಯ್ತು. ಸಂವಿಧಾನ ನಮ್ಮ ಹಕ್ಕನ್ನು ರಕ್ಷಣೆ ಮಾಡುತ್ತದೆ ಎನ್ನುವ ನಂಬಿಕೆ ಜನರಲ್ಲಿತ್ತು.

ಸಂವಿಧಾನವು ‘ವಿ ದಿ ಪೀಪಲ್​ ಆಫ್​ ಇಂಡಿಯಾ’ ಎನ್ನುವ ವಾಕ್ಯದಿಂದ ಆರಂಭವಾಗುತ್ತದೆ. ನಾವು ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ ಎಂದು ಸಂವಿಧಾನ ಹೇಳುತ್ತದೆ. ಸಂವಿಧಾನವನ್ನು ನಾವು ಒಪ್ಪಿಕೊಂಡು 71 ವರ್ಷ ಪೂರೈಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಒಂದು ಅವಲೋಕನ ಮಾಡಿಕೊಳ್ಳಲು ಇದು ಸೂಕ್ತ ಕಾಲ.

ಚಳುವಳಿಗಳು ಸಂವಿಧಾನ ನಮಗೆ ಕೊಟ್ಟ ಹಕ್ಕು… ಕಾಲಾನುಕ್ರಮವಾಗಿ ಸಂವಿಧಾನದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಆರಂಭದಲ್ಲಿ ಜನರಿಗೆ ಆಸ್ತಿ ಹಕ್ಕು ಇತ್ತು. ನಂತರ ಅದನ್ನು ತೆಗೆದು ಹಾಕಲಾಯಿತು. ಖಾಸಗಿತನ ಒಂದು ಹಕ್ಕೇ ಎನ್ನುವ ಪ್ರಶ್ನೆ ಇತ್ತೀಚೆಗೆ ಬಂದಿತ್ತು. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ ಕೋರ್ಟ್​ ಖಾಸಗಿತನ ಎನ್ನುವುದು ಒಂದು ಹಕ್ಕು ಎಂದು ಹೇಳಿತ್ತು. ಹೀಗೆ ತರಲಾದ ಸಾಕಷ್ಟು ಬದಲಾವಣೆಗಳು ಸಂವಿಧಾನವನ್ನು ಪರಿಪಕ್ವತೆ ಕಡೆಗೆ ಕೊಂಡೊಯ್ಯಲು ಸಹಕಾರಿ ಆಯಿತು. ನಮ್ಮ ಹಕ್ಕುಗಳಿಗೋಸ್ಕರ, ನಮ್ಮ ಧ್ವನಿ ಆಡಳಿತದವರಿಗೆ ಕೇಳಬೇಕು ಎನ್ನುವ ಕಾರಣಕ್ಕೆ ಸಾಕಷ್ಟು ಪ್ರತಿಭಟನೆಗಳು ನಡೆದವು. ಆದರೆ, ಕೆಲವು ಸರ್ಕಾರದ ಕಾರಣದಿಂದ ಹಾಗೂ ಕೆಲವು ನ್ಯಾಯಾಲಯದ ಕಾರಣದಿಂದ ಫಲ ನೀಡಲಿಲ್ಲ.

ಇತ್ತೀಚಿಗಿನ ವಿಚಾರ ತೆಗೆದುಕೊಳ್ಳುವುದಾದರೆ ರೈತರ ಪ್ರತಿಭಟನೆ, ವಿಚಾರವಂತರು, ಪ್ರಜ್ಞಾವಂತರು ನಡೆಸುತ್ತಿರುವ ಚಳುವಳಿಗಳೆಲ್ಲವೂ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕಿನ ಪ್ರಕಾರವೇ ನಡೆಯುತಿರುವ ಪ್ರತಿರೋಧಗಳು. ಪ್ರತಿನಾಯಕ ಇದ್ದಾಗ ಮಾತ್ರ ನಾಯಕನ ಸಾಮರ್ಥ್ಯ ಸಾಬೀತಾಗುವ ರೀತಿಯಲ್ಲೇ, ಸಮಾಜದಲ್ಲಿ ಒಂದು ಪ್ರತಿರೋಧ ಇದ್ದಾಗಲೇ ಜನ ನಾಯಕರು ಮಾಡಿರುವ ಕಾನೂನು ಜನಪರವಾಗಿದೆಯೋ ಅಥವಾ ಇಲ್ಲವೋ ಎಂಬುದು ಗೊತ್ತಾಗುತ್ತದೆ.

ಬ್ರಿಟಿಷರು ಇದ್ದಾಗ ನಾವು ಪ್ರತಿರೋಧ ಮಾಡದಿದ್ದರೆ ನಮಗೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಇಂದಿರಾ ಗಾಂಧಿ ಜಾರಿಗೆ ತಂದ ತುರ್ತು ಪರಿಸ್ಥಿತಿ ವಿರುದ್ಧ ಜಯಪ್ರಕಾಶ್​ ನಾರಾಯಣ್​ ಹೋರಾಡಿದ್ದರಿಂದಲೇ ಸಂವಿಧಾನದಲ್ಲಿ ತಿದ್ದುಪಡಿ ತರಲಾಯಿತು. ಹೊರಗಿನಿಂದ ದಾಳಿ ಆದಾಗ ಮಾತ್ರ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕು ಎಂಬ ಅಂಶವನ್ನು ಕಾನೂನಿನಲ್ಲಿ ಸೇರಿಸಲಾಯಿತು. ಇವೆಲ್ಲವೂ ಚಳುವಳಿಗಳ ಪರಿಣಾಮವಾಗಿಯೇ ಆಗಿರುವಂತದ್ದು.

ನ್ಯಾಯಾಂಗ ನಮ್ಮ ಸಹಾಯಕ್ಕೆ ಬರುತ್ತಿಲ್ಲ! ಅನೇಕ ಸಂದರ್ಭದಲ್ಲಿ ಸಂವಿಧಾನದತ್ತವಾಗಿ ಸರ್ಕಾರ ಕಾರ್ಯ ನಿರ್ವಹಿಸದೆ ಇದ್ದರೆ ನ್ಯಾಯಾಂಗ ನಮ್ಮ ನೆರವಿಗೆ ಬರಬೇಕಿತ್ತು. ಆದರೆ, ಈಗ ನ್ಯಾಯಾಲಯ ನಮ್ಮ ಸಹಾಯಕ್ಕೆ ಬಂದಿಲ್ಲ. ವಲಸೆ ಕಾರ್ಮಿಕರು ಸಾವಿರಾರು ಕಿ.ಮೀ ನಡೆದು ಬರುವ ಅಸಹಾಯಕ ಪರಿಸ್ಥಿತಿ ಬಂದಾಗಲೂ ಕೋರ್ಟ್​ ಸಹಾಯಕ್ಕೆ ಬಂದಿಲ್ಲ. 60 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಆರಂಭದಲ್ಲಿ ಕೋರ್ಟ್​ ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ನಡೆದುಕೊಂಡಿತ್ತು. ಈಗ ಮಧ್ಯಂತರ ತಡೆ ನೀಡುವ ಕೆಲಸ ಮಾಡಿದೆ. ಅನೇಕ ಒಪಿನಿಯನ್​ ಮೇಕರ್​ಗಳನ್ನು ರಾಷ್ಟ್ರೀಯ ಭದ್ರತೆ​ ಅಡಿಯಲ್ಲಿ ತಿಂಗಾಳನುಗಟ್ಟಲೆ ಕೂಡಿಟ್ಟಾಗಲೂ ಅವರಿಗೆ ಸಿಗಬೇಕಿದ್ದ ಕನಿಷ್ಠ ಮೂಲಭೂತ ಸೌಕರ್ಯ ಸಿಕ್ಕಿಲ್ಲ. ಈ ವಿಚಾರದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸಲೇ ಇಲ್ಲ.

ಪ್ರಜಾಪ್ರಭುತ್ವ, ಸಂವಿಧಾನ ಮತ್ತು ನ್ಯಾಯಾಲಯಗಳು ಉಳ್ಳವರು, ಬಲಾಡ್ಯರ ರಕ್ಷಣೆ ಮಾಡುವುದಕ್ಕೆ ಮಾತ್ರ ಸೀಮೀತವಾಗಿ, ಬಡವರು, ಕೂಲಿ ಕಾರ್ಮಿಕರು, ಧ್ವನಿ ಇಲ್ಲದವರ ಪರವಾಗಿ ನಿಲ್ಲುತ್ತಿಲ್ಲ ಎನ್ನುವ ಅನುಮಾನ ಮೂಡುತ್ತಿದೆ. ಹೀಗಾಗಿ, ಸಂವಿಧಾನಕ್ಕೆ ಒಂದು ಸರಿಯಾದ ಅರ್ಥ ಬರಬೇಕಾದರೆ, ಅದು ಬಡವರು, ಕೂಲಿ ಕಾರ್ಮಿಕರ ಪರವಾಗಿ ನಿಲ್ಲುವ ಸಂವಿಧಾನ ಆಗಬೇಕು. ವ್ಯವಸ್ಥೆ ಅಥವಾ ಆಡಳಿತ ಬಡವರ ಪರವಾಗಿ ನಿಲ್ಲದಿದ್ದಾಗ ನ್ಯಾಯಾಲಯಗಳು ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಬೇಕು. ಈ ಸಂದರ್ಭದಲ್ಲಿ ನ್ಯಾಯಾಲಯ ಮತ್ತು ವ್ಯವಸ್ಥೆ ಯಾರ ಪರವಾಗಿದೆ ಎನ್ನುವುದರ ಬಗ್ಗೆಯೂ ಆರೋಗ್ಯಕರ ಚರ್ಚೆ ಆಗಬೇಕು.

ಬಲಿಪಶು ಜನಸಾಮಾನ್ಯರು ನಾವು ಇಂದು ರಚನೆ ಮಾಡಿರುವ ಸಂವಿಧಾನ ವರವೂ ಆಗಬಹುದು ಶಾಪವೂ ಆಗಬಹುದು. ನಾಳೆ ಯಾವ ಕೆಲಸವೂ ಸರಿಯಾಗಿ ಆಗುತ್ತಿಲ್ಲ ಎಂದರೆ, ಅದಕ್ಕೆ ಸಂವಿಧಾನ ಕಾರಣ ಆಗುವುದಿಲ್ಲ. ಬದಲಿಗೆ ಅಸಮರ್ಥ ನಾಯಕರು ಇದಕ್ಕೆ ಕಾರಣವಾಗುತ್ತಾರೆ. ಅದರರ್ಥ ಇಂದು, ಕಾರ್ಯಾಂಗ ಹಾಗೂ ಶಾಸಕಾಂಗದಲ್ಲಿದ್ದ ಇಬ್ಬರೂ ಸ್ವಾರ್ಥಿಗಳಾಗಿದ್ದಾರೆ. ಇದರ ಪರಿಣಾಮ ಇದು. ಇದಕ್ಕೆ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ನ್ಯಾಯಾಂಗ ಕೂಡ ಇದೆ.

ನ್ಯಾಯಾಲಯ ಉಳ್ಳವರಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ನ್ಯಾಯಾಲಯ ಉಳ್ಳವರಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ, ಖ್ಯಾತ ಪತ್ರಕರ್ತ ಅರ್ನಬ್​ ಗೋಸ್ವಾಮಿ. ಅವರ ವಿರುದ್ಧ ಕೇಳಿ ಬಂದ ಪ್ರಕರಣದಲ್ಲಿ, ಅವರು ನೇರವಾಗಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಅಷ್ಟೇ ಅಲ್ಲ, ದುಬಾರಿ ವಕೀಲರನ್ನು ನೇಮಕ ಮಾಡಿಕೊಂಡಿದ್ದರು. ಸಾಮಾನ್ಯರಿಗಾದರೆ, ಜಿಲ್ಲಾ ನ್ಯಾಯಾಲಯಕ್ಕೆ ಹೋಗಿ, ನಂತರ ಹೈಕೋರ್ಟ್​ಗೆ ಹೋಗಿ, ಆಮೇಲೆ ಇಲ್ಲಿ ಬನ್ನಿ ಎಂದು ಸುಪ್ರೀಂಕೋರ್ಟ್​ ಹೇಳುತ್ತಿತ್ತು. ಅಲ್ಲದೆ, ಖ್ಯಾತ ವಕೀಲರು ಜನಸಾಮಾನ್ಯರ ಕೈಗೆ ಸಿಗುವಂಥವರಲ್ಲ. ಹೀಗಾಗಿ, ಇಡೀ ವ್ಯವಸ್ಥೆ ಹಾಳಾಗಿದೆ.

ಜನರ ಅಭಿಪ್ರಾಯ ರೂಪಿಸಬೇಕು.. ರೈತರ ಚಳುವಳಿ ಸೇರಿ ಸಾಕಷ್ಟು ಹೋರಾಟಗಳಿಂದಲೇ ಬದಲಾವಣೆ ಸಾಧ್ಯ. ಹೀಗಾಗಿ, ಪ್ರತಿಭಟನೆಗಳು ನಡೆಯಬೇಕು. ಅದರಿಂದ ಒಂದು ಅಭಿಪ್ರಾಯ ರೂಪುಗೊಳ್ಳುತ್ತದೆ. ಎಲ್ಲ ಪಕ್ಷಗಳಲ್ಲೂ ಇಂದು ಪ್ರಧಾನಿಗಳು, ಮುಖ್ಯಮಂತ್ರಿಗಳು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದೇ ಅಂತಿಮ ನಿರ್ಧಾರ ಎನ್ನುವ ಆಗಿದೆ. ಮತ ತಂದುಕೊಡುವ ವ್ಯಕ್ತಿ ಪಕ್ಷದಲ್ಲಿದ್ದರೆ ಅವರೇ ಕಾನೂನು ಮೇಕರ್​ಗಳು. ಎಲ್ಲಾ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದರು.

(ನಿರೂಪಣೆ: ರಾಜೇಶ ಹೆಗಡೆ)

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ