Body Shaming; ಸುಮ್ಮನಿರುವುದು ಹೇಗೆ? : ಗೊಬ್ಬರ ಹಾಕಿ ಬೆಳಸಿರಬೇಕಲೇ ಇಕಿ ಗ್ಯಾರಂಟೀ!

‘ನಮ್ಮ ಕಡೆ ಒಂದ ಗಾದೀಮಾತದರೀ; ‘ಮಲಿ ಬಂದಾಕಿಗೆ ನೆಲ ಕಾಣಂಗಿಲ್ಲ ಅಂತ’ ಹಿರಿಯರು ಹಿಂಗ ಗಾದೀಮಾತ ಹಾಕಿ ಹೋಗಿದ್ದಕ್ಕ ಸಣ್ಣವರು ಅನ್ನೂದಲ್ಲೇನ್ರಿ? ಅದ ತಮ್​ ತಮಗ ಏನರ ಗಾದೀಮಾತು ಹಾಕ್ಕೊಂಡಾರೇನ್ರಿ? ಮೀಸಿನೋ ಮತ್ತೊಂದೇ ಬಂದಾಂವಗ ನೆಲಾ ಕಾಣಂಗಿಲ್ಲ ಅಂತೇನರ ನಾವ್ ಈತನಕಾ ಅಂದಿದ್ದೈತೇನ್ರಿ? ಕಾಲ ಯಾವದ ಆಗಲೀರೀ ಈ ನಯಾ ನಾಜೂಕು ಹೆಣ್ಣಿಗಷ್ಟ ಯಾಕ?‘ ವಿಜಯಾ ಕುಲಕರ್ಣಿ

Body Shaming; ಸುಮ್ಮನಿರುವುದು ಹೇಗೆ? : ಗೊಬ್ಬರ ಹಾಕಿ ಬೆಳಸಿರಬೇಕಲೇ ಇಕಿ ಗ್ಯಾರಂಟೀ!
ಲೇಖಕಿ ವಿಜಯಾ ಕುಲಕರ್ಣಿ
Follow us
ಶ್ರೀದೇವಿ ಕಳಸದ
|

Updated on:Apr 14, 2021 | 2:50 PM

ಜನಪ್ರತಿನಿಧಿಗಳೇ, ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

ಅಲ್ಲಿಂದಲ್ಲೇ ಪರತ್ ಪಾವತಿ ಮಾಡಿ ಬರಲಿಲ್ಲಂದ್ರ ಅವರು ಧಾರವಾಡದ ವಿಜಯಾ ಕುಲಕರ್ಣಿನ ಅಲ್ಲಾ!

ಡಿಪ್ಲೊಮಾ ಮೊದಲ ವರ್ಷದ ಮೆಟ್ಟಿಲು ಹತ್ತುವಾಗ ಮೂರು ನಾಲ್ಕು ಹುಡುಗರ ಗುಂಪು ಹೀಗೆ ಕಮೆಂಟ್ ಮಾಡಿದ್ರು. ಗೊಬ್ಬರ ಹಾಕಿ ನಾ ಏನ್ ಬೆಳೆಸಿದೆ? ಅದ ಗುಂಗಿನೊಳಗ ಕ್ಲಾಸ್​ರೂಮಿಗೆ ಬಂದು, ಬೆಂಚ್​ ಮೇಲೆ ಕೂತ್ಕೊಂಡೆ. ಅದರ ಅರ್ಥ ಏನಿರಬಹುದು ಅಂತ ಹದಿನೇಳರ ನನಗ ಗೊತ್ತಾಗಿರ್ಲಿಲ್ಲ. ‘ಅವನೌನ ಹೊಲದಾಗ ಗೊಬ್ಬರ…’ ಹಾಕಿದ್ದಷ್ಟ ಕೇಳಿ ಬೆಳೆದ ಮಂದಿ ನಾವು. ಗೆಳತಿ ಸರಸ್ವತಿಗೂ ಕೇಳಿದೆ ನಿನಗೇನರ ಅರ್ಥ ಆತೇನಲೇ ಅಂತ. ಅಕಿ ನನಗಿಂತ ಪೆದ್ದಿ. ‘ಯಾವ ಗೊಬ್ಬರ, ಎದಕ್ಕ? ಗೊತ್ತಿಲ್ಲಲೇಪಾ. ಸಂಜಿಕ ಅಕ್ಕನ್ನ ಕೇಳೋಣ ತಡಿ’ ಅಂದಾಗ ಸಮಾಧಾನ ಆತು. ಮತ್ತೆ ಸಂಜೆ ಕಾಲೇಜಿನಿಂದ ಹೊರಗ ಬೀಳುವಾಗ ಅದೇ ಕಮೆಂಟು, ಕಿಸಿಕಿಸಿ ನಗು. ಸಿಟ್ಟು ಬಂದು ಕಪಾಳಕ್ಕ ಬಿಗಿದು ಅದರ ಅರ್ಥಾ ಕೇಳಬೇಕು ಅನ್ನಿಸ್ತು. ಆದರ ನನ್ನ ಗೆಳತಿ, ‘ಏ ಸುಮ್ಮನಿರಲೇ  ಅಕ್ಕಗ ಕೇಳೋಣಂತ’ ಮತ್ ಅಂದ್ಲು.  ಅವರ ಮನೀಗೆ ಹೋಗಿ ಅವರಮ್ಮ ಮಾಡಿದ ಚಹಾ ಕುಡದು ಹೊರಗ ಭಾವಿ ಕಟ್ಟಿ ಮ್ಯಾಲೆ ಕೂತು, ಅವರಕ್ಕಗ ಅಗ್ಗದೀ ಸಿಕ್ರೆಟ್ ಅನ್ನೋವರ ಹಂಗ ಮತ್ತ ಹಿಂಗಿಂಗಾತು ಅಂದ್ವಿ. ಡಿಗ್ರಿ ಫೈನಲ್ ಇಯರ್ ಇದ್ದ ಅಕಿ, ಹೋಗಲಿ ಬಿಡರೇ ಆ ಹುಡುಗರು ಛೊಲೊ ಇಲ್ಲ, ಅವರ ಸುದ್ದಿಗೆ ಹೋಗಬ್ಯಾಡರೀ ಅಂದಳು. ಜಗಮಂಡಿ ನಾನು, ಹಂಗಂದರ ಏನ ಹೇಳಕ್ಕಾ ಅಂತ ಗಂಟಬಿದ್ದೆ. ಅಕಿ ಭಾಳ ಮುಜಗರಪಟಗೊಂಡು, ಎದಕ್ಕ ಅಂದಾರ ಅಂದರ, ನಿನ್ನವು ದೊಡ್ಡೂ ಅದಾವಲ್ಲ ಅದಕ್ಕ ಅಂದಳು. ನನ್ನವು ಏನ ದೊಡ್ಡೂವವ ಅಂದೆ. ಬೆರಗಗಣ್ಣಿಂದ, ಅವನ ಬ್ರೆಸ್ಟ್! ನಿಂಗ ಈ ವಯಸ್ಸಿಗೆ ದೊಡ್ಡೂ ಅದಾವಲ್ಲ ಅದಕ್ಕ ಹಂಗಂದಾರ. ಹುಡುಗುರು ಉಡಾಳ ಇರತಾರ, ಅವರ ಸುದ್ದಿಗೆ ಹೋಗಬ್ಯಾಡ ಅಂದ್ಳು. ಧಗಾಧಗಾ ಮೈಯೆಲ್ಲ ಉರದ ಹೋಗಿತ್ತರೀ.

ಹರೇದರಾಗ ಕತ್ತಿನೂ ಛಂದಂತ ಹಂಗ ನಂಗ ವಯಸ್ಸಿಗೆ ಮೀರೀ ದೇಹದ ಬೆಳವಣಿಗೆ ಇದದ್ದು ಸಹಜ. ಆದರ ಹಿಂಗ ಹುಡುಗರ ಕಡೆಂದ ಅವಮಾನ ಆತಲ್ಲ ಅಂತ ರಾತ್ರಿ ಇಡೀ ನಿದ್ದಿ ಹತ್ತಿರಲಿಲ್ಲ. ಮರದಿನ ಕಾಲೇಜಿಗೆ ಹೋಗಿ ಯಾವಾಗ ಆ ಹುಡುಗರ ಜೋಡಿ ಜಗಳ ತಗದೇನೋ ಅಂತ ಆಗಿತ್ತು. ತೆಳ್ಳಗ ಬಳ್ಳಿ ಹಂಗ ನಾನು ಬಳಕಿದ್ದು ಎಂದೂ ಕನ್ನಡಿಯೊಳಗ ಕಾಣಲೇ ಇಲ್ಲ. ಕಾಲೇಜಿನ್ಯಾಗ ಇದ್ದಾಗಿಂದ ಗುಂಡಗುಂಡಗನರೀ. ಮರದಿನ ಧುಮಧುಮು ಉರಕೋತ ಕಾಲೇಜಿಗೆ ಹೋಗಿದ್ದೆ. ಆ ಹುಡುಗರು ದಿನಾ ಮುಂಜಾನೆ ಲಗೂ ಬಂದು ಹುಡಗ್ಯಾರನ ಕಾಡಸೋದ ಕೆಲಸ ಆಗಿತ್ತರೀ. ಅವರು ಏನಾದರೂ ಅನ್ನೋಕಿಂತ ಮುಂಚೆ, ನಾನ ಕಾಲಕೆದರಿ ಜಗಳಕ್ಕ ನಿಂತಬಿಟ್ಟೇ.  ಗೊಬ್ಬರ ಹಾಕೇ ಬೆಳಸೇನಿ ಆದರ ನಮ್ಮಪ್ಪನ ರೊಕ್ಕದಾಗ ಗೊಬ್ಬರ ಹಾಕಿ ಬೇಳೇಸೇನಿ, ನಿಮಗ ಏನಾತರೀಪಾ ಅಂತ ಕೇಳಿದೆ. ಹುಡುಗರು ಫುಲ್ ಶಾಕ್! ಯಾಕಂದರ ನಮ್ಮ ಕಾಲೇಜು ದಿನಗಳಲ್ಲಿ ಹುಡುಗೂರು ಕಾಡಸಿದರ ಕಾಡಿಸಗೊಂಡು ತಲಿ ಕೆಳಗ ಹಾಕ್ಕೊಂಡು ಹೋಗೋದು ನಮ್ಮ ಕರ್ತವ್ಯ ಅನ್ನೋ ಹಂಗಿತ್ತು ಆಗ. ಅದರಾಗ ಒಂದ ಹುಡುಗ ‘ಏ Sorry ಇನ್ನೊಮ್ಮೆ ಅನ್ನಂಗಿಲ್ಲ’ ಅಂದ. ನಾನೇನ್​ ಬಿಡಲಿಲ್ಲರೀ. ನಿಮ್ಮ ಮನಿ ಒಳಗ ಯಾವ ಗೊಬ್ಬರ ಉಪಯೋಗಸ್ತೀರೀ ಕೇಳೋಣ ನಡೀರೀ ನಿಮ್ಮ ಅಕ್ಕ ತಂಗಿ ಇಲ್ಲ ಅಮ್ಮಗ, ಆಮೇಲೇ ನೋಡೋಣಂತ ಏನಂತಾರ ನಿಮ್ಮ ಮನ್ಯಾಗ ಅಂತ ಜಗಳಕ್ಕ ನಿಂತಾಗ, ಸರಳಾ ಮ್ಯಾಡಮ್ ಅನ್ನೋ ಇಂಗ್ಲೀಷ್ ಟೀಚರ್ ಬಂದು, ಏನದು ಗಲಾಟೆ ಅಂದ್ರು. ನಾನು ನೇರವಾಗಿ, ಮ್ಯಾಡಮ್ ನನ್ನ ಬ್ರೆಸ್ಟ್ ದೊಡ್ಡೂ ಇದ್ದದ್ದಕ್ಕ ಯಾವ ಗೊಬ್ಬರ ಹಾಕಿ ಬೆಳಸ್ತಿ ಅಂತ ಅಂತಾರ್ರೀ ನಂಗ ಅಂದೆ. ಟೀಚರು ಫಟಾರಂತ ಒಂದ ಹುಡುಗನ ಕಪಾಳಕ್ಕ ಕೊಟ್ರು. ಹೆಣ್ಣು ದೇವರ ಸೃಷ್ಟಿಯಲ್ಲಿ ಅತ್ಯಂತ ಸುಂದರವಾದ ಸೃಷ್ಟಿ, ಅದನ್ನ ಆರಾಧಿಸಬೇಕು, ಪ್ರೀತಿಸಬೇಕು, ಮೋಹಿಸಬೇಕು, ಗೌರವಿಸಬೇಕು. ಯಾರಿಗೂ ಚೀಪ್ ಆಗಿ ಮಾತಾಡಬಾರದು ಅಂದ್ರು.

ಮೊದಲಿಂದಾನ ಡುಮ್ಮಿ ಅನ್ನೋ ಟ್ಯಾಗ್ ಹುಟ್ಟಿಸಿಕೊಂಡೇ ಬೆಳೆದ ನಂಗ ಮದಲನೇ ಸರಿ ನನ್ನ ದೇಹದ ಬಗ್ಗೆ ಅಸಹ್ಯ ಅಥವಾ ನಾನು ಡುಮ್ಮಿ ಅಲ್ಲ ಅಂತ ಅನ್ನಿಸ್ತು. ಆ ಹುಡುಗರ ಮಾರಿ ನೋಡಬಾರದು. ಜನಮದಾಗ ಅವರು ಇನ್ನೊಮ್ಮೆ ತಮ್ಮ ಹೊಲದಾಗೂ ಗೊಬ್ಬರ ಅಂತ ಬಾಯಿಲೇ ಅಂದಿರಲಿಕ್ಕಿಲ್ಲ. ಎಂಥಾ ಮನಸ್ಥಿತೀರೀ ಇದು? ಹೆಣ್ಣಿನ ದೇಹದ ಬಗ್ಗೆ ಹೆಂಗ ಬೇಕ ಹಂಗ ಮಾತಾಡಲಿಕ್ಕೆ ಇವರಿಗೆ ಏನಾದರೂ ಹುಟ್ಟುತ್ತಲೇ ಲೈಸೆನ್ಸ್ ಕೊಡತಾರೇನಂತ ಒಮ್ಮೊಮ್ಮೆ ಡೌಟರೀ ನಂಗ. ನಾನು ಕೆಲಸ ಮಾಡೋದು ಗಂಡಸರ ನಡಕ್ಕನ. ಯಾರಾದರೂ ಮುಖ ನೋಡಿ ಮಾತಾಡಲಿಲ್ಲ ಅಂದರ ಡೈರೆಕ್ಟ್ ಆಗಿ ಸ್ವಲ್ಪ ಮಾರಿನೂ ನೋಡಿ ಮಾತಾಡರೀ ಅನ್ನೋ ರೇಂಜಿಗೆ ಮನಸ್ಥಿತಿ ಬೆಳಸಿಗೊಂಡು ಬಂದೇನಿ.

body shaming

ಸೌಜನ್ಯ : ಅಂತರ್ಜಾಲ

ನಾವು ಹೆಣಮಕ್ಕಳು ಇವರ ಕಣ್ಣಿಗೆ ನೀಟಾಗಿ ಇರಬೇಕು, ಎದೆಭಾಗ, ಸೊಂಟದ ಭಾಗ, ಹಿಂಭಾಗ, ಬೆನ್ನು ಇವರ ಕಣ್ಣಿಗೆ ಕಂಡು ಕಾಣಲಾರದ ಹಂಗ ಇದ್ದರ ಎಲ್ಲಾ ಬರೋಬರ್ ಅಲ್ರೀ? ಅದೊಂದ ಸರಿ ಫೈನಲ್ ಇಯರ್ ಇದ್ದಾಗ ಸಾರಿ ಡೇ ಇತ್ತು. ಅಮ್ಮನ ಸೀರೆ ಮತ್ತು ಬ್ಲೌಸ್ ಹಾಕ್ಕೋಂಡ್ ಹೋಗಿದ್ದೆ. ಅಮ್ಮನ ಬ್ಲೌಸ್ ನಂಗ್ ಸ್ವಲ್ಪ ಡೀಪ್ ಆಗಿತ್ರಿ. ‘ಕುಳ್ಳ ಬಡಿಬೋದು ನೋಡಪಾ’ ಅಂದಿದ್ದ ಒಬ್ಬ ಹುಡುಗ.  ‘ಮದಲ ಶಗಣಿ ಮುಟ್ಟಲಿಕ್ಕೆ ಕಲಕೋ ಆಮೇಲೇ, ಕುಳ್ಳ ಬಡಿಲಿಕ್ಕೆ ಕಲಿಸಿ ಕೊಡತೇವಿ ಪಾ ನಿಂಗ ಅಂತ ಅಂದೆ.’ ಗೆಳತೀರೆಲ್ಲ ಕಿಸಕ್ಕಂತ ನಕ್ರು. ಅನಿಸಗೊಂಡ ಬರೋದು ನನ್ನ ಜನಮಕ್ಕ ಬರಲೇ ಇಲ್ಲ ನೋಡ್ರೀ. ಏನಿದ್ದರೂ, ಏಕ ಮಾರ್ ದೋ ತುಕಡಾ. ಈ ಪರಿ ಘಾಟಿಯಿಂದ ನಮ್ಮನ್ನ ಬೆಳಸಿದ ಅಜ್ಜಿಗೆ ಇಲ್ಲಿಂದ ಒಂದು ದೊಡ್ಡ ಸಲಾಮು. ದೇಹ ನಮ್ಮದು, ಬಳ್ಳಿ ಹಂಗ ಬಳಕಬೇಕಾಗಿಲ್ಲರೀ ನಾವು. ಎಲ್ಲಾ ಬಳ್ಳಿ ಹಂಗ ಬಳಕಿದರ ಭಾರ ತಡಕೋಳೋ ಬಳ್ಳಿನೂ ಬೇಕಲ್ಲರೀ?

ನಮ್ಮ ಕಡೆ ಒಂದ ಗಾದಿಮಾತದರೀ; ‘ಮಲಿ ಬಂದಾಕಿಗೆ ನೆಲ ಕಾಣಂಗಿಲ್ಲ ಅಂತ’ ಹಿರಿಯರು ಹಿಂಗ ಗಾದೀಮಾತ ಹಾಕಿದ್ದಕ್ಕ ಸಣ್ಣವರೂ ಅಂತಾರ್ರಿ. ಅದ ತಮ್​ ತಮಗ ಏನರ ಗಾದೀಮಾತು ಹಾಕ್ಕೊಡಾರೇನ್ರಿ? ಮೀಸಿನೋ ಮತ್ತೊಂದೇ ಬಂದಾಂವಗ ನೆಲಾ ಕಾಣಂಗಿಲ್ಲ ಅಂತೇನರ ನಾವ್ ಈತನಕಾ ಅಂದಿದ್ದೈತೇನ್ರಿ? ಕಾಲ ಯಾವದ ಆಗಲೀರೀ ಈ ನಯಾ ನಾಜೂಕು ಹೆಣ್ಣಿಗಷ್ಟ ಯಾಕ? ನಾವು ಒಂದೊಂದ ಹಡದ ಮ್ಯಾಲೆ ದೇವರು ಒಂದೊಂದ ಕೂಸಿಗೆ ಮುಷ್ಠಿ ಹೊಟ್ಟಿ ಉಳಸತಾನಂತರೀ, ಮತ್ತ ಗಂಡಜಾತಿನೂ ಅಪ್ಪ ಆಗಿರತಾರಲ್ಲರೀ, ಅವರಿಗೆ ಯಾಕ ಈ ಮುಷ್ಠಿ ಹೊಟ್ಟಿ ಕೊಡಲಿಲ್ಲಪಾ ನೀನು ಅಂತ ಮ್ಯಾಲೆ ಹೋದಾಗ ದೇವರನ ನಾನಂತೂ ಕೇಳತೇನರೀ. ನಾವು ಯಾವ ಆಕಾರದಾಗರ ಇರಲೀರೀ. ನಮ್ಮ ದೇಹಾ ನಾವು ಯಾವಾಗ ಪ್ರೀತಿಸಲಿಕ್ಕೆ ಕಲಿತೀವೋ, ಆವಾಗ ಈ ನಮ್ಮ ದೇಹದ ಬಗ್ಗೆ ಯಾರೂ ಕೊಂಕ ಮಾತಾಡಲಿಕ್ಕೆ ಆಗೂದಿಲ್ಲರೀ. ಮಂದೀನ್ನ ಮಾತ ಮದಲ ತಗದ ಒಗದ ಬಿಡಬೇಕು. ಮಂದಿ ಕೆಲಸಾನ ಅದ.

ತೆಳ್ಳಗ ಇರೂವವರ್ದೇನೂ ನೆಟ್ಟಗ ನಡೀತಿರೂದಿಲ್ರಿ ಮತ್ತ ಅಯ್ಯಯ್ಯ ತಿನ್ನಲಿಕ್ಕಿ ಹಾಕತಾರೀಲ್ಲವಾ ಮನ್ಯಾಗ? ನಾಯಿಗೆ ಬಡಿಯೋ ಕೋಲಾಗ್ಯಾಳ ನೋಡ ಹಂಗ. ಗಾಳಿ ಬೀಸೀದರ ಹಾರಕೊಂಡ ಹೋಗತಾಳ ನೋಡ ಹಂಗ. ಹಿಂಗರೀ ಮಂದಿಗೆ ಹೆಂಗಿದ್ದರೂ ತ್ರಾಸರೀ. ಇದ್ದಂಗ ಛಂದ ಇರಲಿಕ್ಕ ಕಲತರ ಚಂದಪ್ಪನೂ ನೋಡಿ ಕಿಸ್ಸಕ್ಕಂತ ನಕ್ಕ ಕಣ್ಣ ಹೊಡಿತಾನರೀ.

ಇದನ್ನೂ ಓದಿ : Body Shaming ; ಸುಮ್ಮನಿರುವುದು ಹೇಗೆ? : ಹಳ್ಳಿಯಲ್ಲಿ ಹುಡುಗ ಹುಡುಗಿ ಮಾತನಾಡಿದರೆ ಈಗಲೂ ‘ಹೊಟ್ಟೆ ಬರೂದು’!

Summaniruvudu Hege series on body shaming controversial statement by Dindigul Leoni and response from writer Vijaya Kulkarni

Published On - 10:59 am, Wed, 14 April 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!