AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Biodiversity: ಜೀವವೆಂಬ ಜಾಲದೊಳಗೆ: ಚಿನ್ನದ ಬಣ್ಣದ ಅಲ್ಪಾಯುಷಿ ಆಮೆಕೀಟ

Leaf Bug : ಈ ಕೀಟದ ಹೆಸರೇನು, ಇದರ ಜೀವನ ವಿಧಾನ ಹೇಗಿರುತ್ತದೆ? ಎಂದು ಫೋಟೋ ಕಳಿಸಿ ಪ್ರಶ್ನೆ ಕೇಳಿದ್ದು ಬೆಂಗಳೂರಿನ ಹತ್ತನೆಯ ತರಗತಿಯ ವಿದ್ಯಾರ್ಥಿ ಸುಧಾಂಶು. ಮಲೆನಾಡಿನಲ್ಲಿರುವ ಅಜ್ಜನ ಮನೆಗೆ ಭೇಟಿಯಿತ್ತಾಗ ಇದನ್ನು ಗಮನಿಸಿದ್ದಾನೆ .

Biodiversity: ಜೀವವೆಂಬ ಜಾಲದೊಳಗೆ: ಚಿನ್ನದ ಬಣ್ಣದ ಅಲ್ಪಾಯುಷಿ ಆಮೆಕೀಟ
ಚಿನ್ನದ ಬಣ್ಣದ ಆಮೆಕೀಟ
ಶ್ರೀದೇವಿ ಕಳಸದ
|

Updated on: May 06, 2022 | 7:49 AM

Share

ಜೀವವೆಂಬ ಜಾಲದೊಳಗೆ | Jeevavemba Jaaladolage : ಅರ್ಧ ಗೋಲಾಕಾರದ ದೇಹ, ಹೊಳೆವ ಚಿನ್ನದ ಬಣ್ಣದ ಕವಚವುಳ್ಳ ಪುಟ್ಟ ಕೀಟಗಳು. ಲೀಫ್ ಬಗ್ (Chrysomelidae) ಕುಟುಂಬಕ್ಕೆ ಸೇರಿದ ಈ ಕೀಟಗಳಿಗೆ ಹೆಸರೇ ಹೇಳುವಂತೆ ಎಲೆಗಳೇ ಆಹಾರ. ನೋಡಲು, ಆಮೆಯಂತೆಯೇ ಕಾಣಿಸುವುದರಿಂದ ಹಾಗೂ ಮುಟ್ಟಿದರೆ ಆಮೆಗಳಂತೆ ಕಾಲುಗಳನ್ನೆಲ್ಲ ಒಳಗೆಳೆದುಕೊಳ್ಳುವುದರಿಂದ Golden tortoise beetle ಎಂಬ ಹೆಸರು ಕೂಡ ಇದೆ. ಸಿಹಿಗೆಣಸು ಮೊದಲಾದ ಮಾರ್ನಿಂಗ್ ಗ್ಲೋರಿ ಜಾತಿಗೆ ಸೇರಿದ ಸಸ್ಯಗಳ ಮೇಲೆ ಹೆಚ್ಚಾಗಿ ಕಂಡುಬರುತ್ತವೆ. ಮೂಲತಃ ಅಮೆರಿಕಾ ಖಂಡವಾಸಿಯಾದರೂ ಈಗ ಉಷ್ಣವಲಯದ ದೇಶಗಳೆಲ್ಲೆಡೆ ಕಂಡುಬರುತ್ತವೆ. ಕೈತೋಟಗಳಲ್ಲಿ, ರೈತರ ಹೊಲಗಳಲ್ಲಿ, ಕಾಡುಮೇಡುಗಳಲ್ಲಿ ಇವುಗಳ ಜೀವಾಧಾರ ಸಸ್ಯಗಳು ಇರುವಲ್ಲೆಲ್ಲ ಈ ಪುಟ್ಟ ಕೀಟಗಳು ಇರುತ್ತವೆ. ಅದರ ಬಣ್ಣವು ಚಿನ್ನದ ಬಣ್ಣವಾದರೂ ಮಾನವರು ಮುಟ್ಟಿದಾಗ ಹಾಗು ಅದರ ಸಂತಾನೋತ್ಪತ್ತಿ ಕಾಲದಲ್ಲಿ ಅದರ ಬಣ್ಣವು ಬದಲಾಗುವುತ್ತದೆ. ಸುಮಾ ಸುಧಾಕಿರಣ, ಪರಿಸರ ವಿಜ್ಞಾನ ಲೇಖಕಿ (Suma Sudhakiran) 

ಈ ಕೀಟದ ಎದೆಯ ಭಾಗ ಮತ್ತು ಪರಿವರ್ತಿತ ಮೇಲ್ರೆಕ್ಕೆಗಳು ಅದರ ಕಾಲುಗಳನ್ನು ಮುಚ್ಚುವಂತೆ ಮುಂದುವರೆದಿರುತ್ತದೆ. ಹೀಗೆ ಮುಂದುವರೆದ ಕವಚವು ಪಾರದರ್ಶಕವಾಗಿರುತ್ತದೆ. ಹೆಣ್ಣುಕೀಟವು ಎಲೆಗಳ ಹಿಂಭಾಗದಲ್ಲಿ ಮೊಟ್ಟೆಗಳನ್ನಿಡುತ್ತದೆ. ಹೊರಬರುವ ಮರಿಗಳು ಎಲೆಗಳನ್ನು ತಿನ್ನುತ್ತವೆ. ಎಲೆಗಳ ಮಧ್ಯೆಮಧ್ಯೆ ವೃತ್ತಾಕಾರದಲ್ಲಿ ತಿನ್ನುವುದು ಇವುಗಳ ಕ್ರಮ. ಎರಡರಿಂದ ಮೂರು ಬಾರಿ ಗಾತ್ರದಲ್ಲಿ ಬೆಳೆವ ಮರಿಗಳು ಚಿಕ್ಕದಾದ ತಮ್ಮ ಹೊರಕವಚವನ್ನು ಕಳಚಿ ಹೊಸ ಚರ್ಮವನ್ನು ಧರಿಸುತ್ತವೆ.  ತಮ್ಮ ಕಳಚಿದ ಸತ್ತ ಹೊರಕವಚ ಮತ್ತು ತಮ್ಮದೇ ವಿಸರ್ಜನೆಗಳನ್ನೆಲ್ಲ ದೇಹದ ಹಿಂಭಾಗದಲ್ಲಿರುವ ಮುಳ್ಳಿನಂತಹ ಅಂಗಕ್ಕೆ  ಅಂಟಿಸಿಕೊಂಡು ಬೆನ್ನಮೇಲೆ ಕವಚದಂತೆ ಇಟ್ಟುಕೊಂಡಿರುತ್ತದೆ. ಪ್ರತಿಬಾರಿಯೂ ವಿಸರ್ಜಿಸುವಾಗ ಈ ಕವಚದಂತಹ ಕಸದ ಮುದ್ದೆಯ ಮೇಲೆಯೇ ವಿಸರ್ಜಿಸುತ್ತವೆ. ಇದು ಆ ಮರಿಯನ್ನು ಭಕ್ಷಕಗಳಿಂದ ಕಾಪಾಡುತ್ತದೆ. ಚಲಿಸುವಾಗ ಕಸದ ಮುದ್ದೆ ಗಾಳಿಗೆ ಮುಂದೆ ಸಾಗುವಂತೆ ಕಾಣಿಸುವುದರಿಂದಾಗಿ ಭಕ್ಷಕಗಳಿಗೆ ಇದರ ಇರುವಿಕೆಯೇ ತಿಳಿಯುವುದಿಲ್ಲ.

14ರಿಂದ 21 ದಿನಗಳಲ್ಲಿ ಮರಿಗಳು ಬೆಳೆಯುತ್ತವೆ. ಬೆಳೆದ ಮರಿಗಳು ತಮ್ಮ ಹಿಂಭಾಗವನ್ನು ಎಲೆಗೆ ಅಂಟಿಸಿಕೊಂಡು  ಪ್ಯೂಪ ಹಂತಕ್ಕೆ ಹೋಗುತ್ತವೆ. ಈ ಹಂತದಲ್ಲಿ 7 ರಿಂದ 14 ದಿನ ಇರುತ್ತವೆ. ನಂತರ ಬೆಳೆದ ಕೀಟವಾಗಿ ಹೊರಬರುತ್ತವೆ. ಸುಮಾರು 40 ರಿಂದ 45 ದಿನಗಳಷ್ಟೇ ಇವುಗಳ ಆಯುಷ್ಯ.

The Leaf Bug Jeevavemba Jaaladolage column by Suma Sudhakiran

ಚಿನ್ನದ ಬಣ್ಣದ ಆಮೆಕೀಟ  

ಮರಿಗಳು ಮತ್ತು ಬೆಳೆದ ಕೀಟಗಳು ಎಲೆಗಳನ್ನೇ ತಿನ್ನುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾಗ ಬೆಳೆಗಾರರಿಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗುತ್ತದೆ. ಆದರೆ ಚಿಕ್ಕ ಗಾತ್ರ ಹಾಗು ತಿನ್ನುವ ಪ್ರಮಾಣವು ಕಡಿಮೆಯಾಗಿರುವುದರಿಂದ ಬೆಳೆಗಳಿಗೆ ತೀರಾ ಹಾನಿಯೇನು ಆಗುವುದಿಲ್ಲ.

ಗಿಡದ ಮೇಲೆಲ್ಲಾ ಚುರುಕಾಗಿ ಓಡಾಡುವ ಇವುಗಳು ತಮ್ಮ ಸುಂದರವಾದ ಆಕಾರ ಹಾಗು ಬಣ್ಣದಿಂದಾಗಿ ಬಹು ಜನಪ್ರಿಯ. ಕೀಟ ಜಾತಿಯಲ್ಲೇ ಜನಪ್ರಿಯತೆಯಲ್ಲಿ  ಚಿಟ್ಟೆಗಳ ನಂತರ ಎರಡನೆಯ ಸ್ಥಾನ ಇವುಗಳದ್ದು ಎಂದು ಅಧ್ಯಯನವೊಂದು ಹೇಳುತ್ತದೆ. ಆದರೆ ಅತ್ಯಂತ ಕಡಿಮೆ ಆಯಸ್ಸು ಇರುವುದರಿಂದ ಸಾಕುವವರು ಕಡಿಮೆ.

*

ಗಮನಿಸಿ: ಇನ್ನುಮುಂದೆ ಈ ಅಂಕಣಕ್ಕೆ ವಿಜ್ಞಾನ, ಪರಿಸರ, ಜೀವವೈವಿಧ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ನೀವೂ ಕಳಿಬಹುದು.  tv9kannadadigital@gmail.com

ಈ ಅಂಕಣದ ಎಲ್ಲಾ ಬರಹಗಳನ್ನೂ ಇಲ್ಲಿ ಓದಿ : https://tv9kannada.com/tag/jeevavemba-jaaladolage

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ