ಮಾಂಗಲ್ಯದೊಂದಿಗೆ ಕರಿಮಣಿ ಧರಿಸುವುದರ ಮಹತ್ವ ಏನು ಗೊತ್ತಾ?

ಸಂಪ್ರದಾಯವನ್ನು ಎತ್ತಿ ಹಿಡಿಯುವ ಮಂಗಳಕರ ಆಭರಣಗಳನ್ನು ಧರಿಸುವುದರಿಂದ ನಾರಿ ಪೂಜನೀಯಳಾಗ್ತಾಳೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ದುಷ್ಟಶಕ್ತಿಗಳ ದೃಷ್ಟಿ ಮಾಂಗಲ್ಯದ ಮೇಲೆ ಬೀಳದಂತಿರಲು ಕರಿಮಣಿಯನ್ನು ಗೃಹಿಣಿಯರು ಧರಿಸ್ತಾರೆ.

ಮಾಂಗಲ್ಯದೊಂದಿಗೆ ಕರಿಮಣಿ ಧರಿಸುವುದರ ಮಹತ್ವ ಏನು ಗೊತ್ತಾ?
ಮಾಂಗಲ್ಯ ಸರ
Follow us
ಆಯೇಷಾ ಬಾನು
|

Updated on: Apr 10, 2021 | 6:58 AM

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಆಚರಣೆಗೂ ಒಂದೊಂದು ಸಾಂಪ್ರದಾಯಿಕ ಮಹತ್ವವಿದೆ. ಹಾಗೆಯೇ ಅದರ ಹಿಂದೆ ವೈಜ್ಞಾನಿಕ ಪ್ರಜ್ಞೆಯೂ ಇರುತ್ತೆ. ಅದಕ್ಕೊಂದು ಉತ್ತಮ ಉದಾಹರಣೆ ಎಂದರೆ ಸುಮಂಗಲಿಯರು ಧರಿಸುವ ಕರಿಮಣಿ. ಕರಿಮಣಿ ಸರ ಸ್ತ್ರೀಯರು ಮದುವೆಯಾಗಿರುವುದರ ಸಂಕೇತ. ಮಂಗಳಕರವಾದ, ಸೌಭಾಗ್ಯವಾದ ಆಭರಣ.

ಮುತ್ತೈದೆಯರು ಕರಿಮಣಿ ಜೊತೆಗೆ ತಾಳಿ, ಕುಂಕುಮ, ಗಾಜಿನ ಬಳೆ, ಕಾಲುಂಗುರ, ಮುಡಿಗೆ ಅರಳಿದ ಹೂವು ಧರಿಸಿದ್ದರೆ ಸುಮಂಗಲಿ ಎನಿಸಿಕೊಳ್ತಾರೆ. ಆದ್ರೆ ಇಂದು ಆಧುನಿಕತೆಯ ಮೋಹಕ್ಕೆ ಒಳಗಾಗಿರುವ ಗೃಹಿಣಿಯರು ಸೌಭಾಗ್ಯದ ಸೂಚಕವಾದ ಇವುಗಳನ್ನು ಧರಿಸುವುದರಲ್ಲಿ ಆಸಕ್ತಿ ವಹಿಸುತ್ತಿಲ್ಲ. ನಿಮಗೆ ಗೊತ್ತಾ? ಸಂಪ್ರದಾಯವನ್ನು ಎತ್ತಿ ಹಿಡಿಯುವ ಮಂಗಳಕರ ಆಭರಣಗಳನ್ನು ಧರಿಸುವುದರಿಂದ ನಾರಿ ಪೂಜನೀಯಳಾಗ್ತಾಳೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ದುಷ್ಟಶಕ್ತಿಗಳ ದೃಷ್ಟಿ ಮಾಂಗಲ್ಯದ ಮೇಲೆ ಬೀಳದಂತಿರಲು ಕರಿಮಣಿಯನ್ನು ಗೃಹಿಣಿಯರು ಧರಿಸ್ತಾರೆ. ಅಷ್ಟೇ ಅಲ್ಲದೇ, ಕರಿಮಣಿಯು ಸಂತಾನ ಸಾಫಲ್ಯ, ಧನ, ಸುಖದ ಚಿಹ್ನೆಯಾಗಿದೆ. ಕೆಲವರು ಇದರ ಸ್ಥಾನದಲ್ಲಿ ಹವಳವನ್ನು ಉಪಯೋಗಿಸ್ತಾರೆ. ಅದೂ ಸಹ ಶ್ರೇಷ್ಠವಾದುದ್ದೇ ಆಗಿದೆ.

ಕರಿಮಣಿಸರದ ವೈಶಿಷ್ಟ್ಯವೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಅದು ಹೀರಿಕೊಳ್ಳುತ್ತೆ. ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆಹಾಲಿನ ಉಷ್ಣತೆಯನ್ನು ಹೀರಿಕೊಂಡು ಎದೆಹಾಲು ಕೆಡದಂತೆ ಕಾಪಾಡುತ್ತೆ. ಈ ಮೂಲಕ ಎದೆಹಾಲು ಶಿಶುವಿಗೆ ಸಮ ಉಷ್ಣತೆಯಲ್ಲಿರಲು ಸಹಾಯ ಮಾಡುತ್ತೆ. ಆಧ್ಯಾತ್ಮಿಕವಾಗಿ ಕರಿಮಣಿಸರ ಕತ್ತಿನ ಸುತ್ತ ಸುಷುಮ್ನಾ ನಾಡಿಗೆ, ಸಮ್ಮಿಲನ ಚಕ್ರಗಳ ಆಧಾರವಾದ ಬೆನ್ನೆಲುಬಿನ ಮೇಲ್ಭಾಗ ವಿಶುದ್ಧ ಚಕ್ರಕ್ಕೆ ಹೊಂದಿಕೊಂಡಂತೆ ಇರುತ್ತೆ. ಅಲ್ಲದೇ, ಇದು ಹೃದಯದ ಭಾಗದಲ್ಲಿರುವ ಅನಾಹತ ಚಕ್ರದಲ್ಲಿ ಸಮ್ಮಿಲನಗೊಳ್ಳುತ್ತೆ. ಹೃದಯ ಜ್ಯೋತಿಯು ಸದಾ ದರ್ಶನೀಯವೆಂದು ಸೂಚಿಸುವುದೇ ಮಾಂಗಲ್ಯದ ಸಂಕೇತ. ಜ್ಯೋತಿಷ್ಯಶಾಸ್ತ್ರ ಗ್ರಂಥಗಳಲ್ಲಿ ದ್ವಾದಶ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿಕೊಳ್ಳಬೇಕೆಂಬುದನ್ನು ಉಲ್ಲೇಖಿಸಲಾಗಿದೆ. ಹೀಗೆ ಕರಿಮಣಿಸರವು ಸ್ತ್ರೀಯ ಸೌಭಾಗ್ಯವೆನಿಸುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ.

ಇದನ್ನೂ ಓದಿ: ಕೊಡಗು ಸಂಸ್ಕೃತಿಯ ಅನಾವರಣ; ವಿಶಿಷ್ಟ ಸ್ಪರ್ಧೆಯ ಮೂಲಕ ಯುವ ಪಿಳಿಗೆಗೆ ಸಂಪ್ರದಾಯವನ್ನು ತಿಳಿಸುವ ಪ್ರಯತ್ನ

(Why Women Wear Black Beads in Mangalsutra)

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ