ಡಿಸೆಂಬರ್ 5 ‘ವಿಶ್ವ ಮಣ್ಣಿನ ದಿನ’ : ಇದು ಬರೀ ಮಣ್ಣಲ್ಲ, ಹೊನ್ನು
ಮಣ್ಣಿನ ವಿಜ್ಞಾನಗಳ ಅಂತರರಾಷ್ಟ್ರೀಯ ಒಕ್ಕೂಟ (ಐಯುಎಸ್ಎಸ್) 2002ರಲ್ಲಿ ವಿಶ್ವ ಮಣ್ಣಿನ ದಿನ ಆಚರಣೆಗೆ ಶಿಫಾರಸು ಮಾಡಿತ್ತು. ಥಾಯ್ಲೆಂಡ್ ನೇತೃತ್ವದಲ್ಲಿ ಎಫ್ಎಒ ಸಹಾಯದೊಂದಿಗೆ ವಿಶ್ವ ಮಣ್ಣಿನ ದಿನ ಆಚರಣೆ ಆರಂಭವಾಯಿತು.
ಮಣ್ಣಿನ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿ ವರ್ಷ ಡಿಸೆಂಬರ್5 ರಂದು ‘ವಿಶ್ವ ಮಣ್ಣಿನ ದಿನ’ ಆಚರಿಸಲ್ಪಡುತ್ತದೆ. ಮಣ್ಣಿಗೂ ಬದುಕಿಗೂ ಅವಿನಾಭಾವ ಸಂಬಂಧ ಇದೆ. ಬದುಕು ಹಸನಾಗಿರಬೇಕಾದರೆ ನಾವು ಬದುಕುವ ಪರಿಸರದಲ್ಲಿ ಫಲವತ್ತತೆಯಿಂದ ಕೂಡಿದ ಮಣ್ಣು ಕೂಡಾ ಮುಖ್ಯ.
ಆಹಾರ ಮತ್ತು ಕೃಷಿ ಸಂಘಟನೆ (ಎಫ್ಎಒ) ಪ್ರಕಾರ 2020 ವಿಶ್ವ ಮಣ್ಣಿನ ದಿನದ ಥೀಮ್, ‘ಮಣ್ಣನ್ನು ಜೀವಂತವಾಗಿರಿಸಿ, ಜೀವವೈವಿಧ್ಯತೆಯನ್ನು ಕಾಪಾಡಿ’ ಎಂಬುದಾಗಿದೆ. ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಲು ಈ ಸಂಘಟನೆಗಳು ಜನರಿಗೆ ಕರೆ ನೀಡಿವೆ.
Most of the ?'s biodiversity lies beneath our feet! #SoilBiodiversity helps ?
?grow our food?develop new medicines ?fight climate change
We need to protect this precious resource. #WorldSoilDay pic.twitter.com/1CIz1GKKOP
— FAO (@FAO) December 4, 2020
ವಿಶ್ವ ಮಣ್ಣಿನ ದಿನ- ಹಿನ್ನೆಲೆಯೇನು? ಮಣ್ಣಿನ ವಿಜ್ಞಾನಗಳ ಅಂತರರಾಷ್ಟ್ರೀಯ ಒಕ್ಕೂಟ (ಐಯುಎಸ್ಎಸ್) 2002ರಲ್ಲಿ ವಿಶ್ವ ಮಣ್ಣಿನ ದಿನ ಆಚರಣೆಗೆ ಶಿಫಾರಸು ಮಾಡಿತ್ತು. ಥಾಯ್ಲೆಂಡ್ ನೇತೃತ್ವದಲ್ಲಿ ಎಫ್ಎಒ ಸಹಾಯದೊಂದಿಗೆ ವಿಶ್ವ ಮಣ್ಣಿನ ದಿನ ಆಚರಣೆ ಆರಂಭವಾಯಿತು. 2013 ಜೂನ್ನಲ್ಲಿ ಎಫ್ಎಒ ಒಕ್ಕೂಟವು ಈ ದಿನಾಚರಣೆಗೆ ಬೆಂಬಲ ಸೂಚಿಸಿದ್ದಲ್ಲದೆ ವಿಶ್ವಸಂಸ್ಥೆಯ 68ನೇ ಸಭೆಯಲ್ಲಿ ಇದನ್ನು ಅಧಿಕೃತವಾಗಿ ಅಂಗೀಕರಿಸುವಂತೆ ಮನವಿ ಮಾಡಿತು. ಇದರ ಪರಿಣಾಮ 2013 ಡಿಸೆಂಬರ್ನಲ್ಲಿ ವಿಶ್ವಸಂಸ್ಥೆ ಡಿಸೆಂಬರ್ 5ರಂದು ವಿಶ್ವ ಮಣ್ಣಿನ ದಿನಾಚರಣೆಗೆ ಸಮ್ಮತಿ ಸೂಚಿಸಿತು. 2014ರಲ್ಲಿ ಮೊದಲ ಬಾರಿ ಡಿಸೆಂಬರ್5ರಂದು ದಿನಾಚರಣೆ ಅಧಿಕೃತವಾಗಿ ಆಚರಿಸಲಾಯಿತು.
ನಾವು ಮಣ್ಣಿನ ಬಗ್ಗೆ ಯಾಕೆ ಕಾಳಜಿ ವಹಿಸಬೇಕು? ಜೀವಂತಿಕೆಯ ಮೂಲವೇ ಮಣ್ಣು. ಭೂಮಿಯಲ್ಲಿರುವ ಶೇ.25ಕ್ಕಿಂತಲೂ ಹೆಚ್ಚು ಜೀವಜಾಲಗಳಿಗೆ ಮೂಲವೇ ಮಣ್ಣು. ಶೇಕಡಾ 95ರಷ್ಟು ನಮ್ಮ ಆಹಾರ ಮೂಲ ಇದು. ಹಣ್ಣು, ತರಕಾರಿ ಮತ್ತು ಧವಸ ಧಾನ್ಯಗಳ ಗುಣಮಟ್ಟ, ಪ್ರಮಾಣ ಎಲ್ಲವೂ ಮಣ್ಣಿನ ಫಲವತ್ತತೆಯನ್ನು ಆಧರಿಸಿರುತ್ತದೆ. ಮಣ್ಣಿನ ಗುಣಮಟ್ಟವು ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನದ ವಿರುದ್ಧ ಹೋರಾಡಲು ಸಹಕಾರಿ
ಮಣ್ಣಿನ ಮಾಲಿನ್ಯ ತಡೆಯಲು ಏನು ಮಾಡಬೇಕು? ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ ಪರಿಸರಕ್ಕೆ ಹಾನಿಯುಂಟುಮಾಡುವ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದಿರಿ ಆಹಾರ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಮಾಡಿ
Published On - 7:43 pm, Sat, 5 December 20