Rang Panchami 2022: ರಂಗ ಪಂಚಮಿ ಹಬ್ಬದಂದು ಆಕಾಶಕ್ಕೆ ಎರಚುವ ಬಣ್ಣಕ್ಕಿದೆ ವಿಶೇಷ ಮಹತ್ವ, ತಿಳಿಯಿರಿ ಹಬ್ಬದ ವಿಶೇಷತೆ

ಈ ಹಬ್ಬವನ್ನು ಹೆಚ್ಚಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಭಾಗಗಳಲ್ಲಿ ಆಚರಿಸಲಾಗುತ್ತದೆ. ಮಧ್ಯಪ್ರದೇಶದ ಇಂದೋರ್ ನ ರಂಗಪಂಚಮಿಯು ಎಲ್ಲೆಡೆ ಪ್ರಸಿದ್ಧಿ ಪಡೆದಿದೆ. ಈ ದಿನ ಇಂದೋರ್‌ನಲ್ಲಿ ಬೃಹತ್ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ ಮತ್ತು ಬಣ್ಣಗಳನ್ನು ಆಕಾಶಕ್ಕೆ ಎರಚಿ ಸಂಭ್ರಮಿಸುತ್ತಾರೆ.

Rang Panchami 2022: ರಂಗ ಪಂಚಮಿ ಹಬ್ಬದಂದು ಆಕಾಶಕ್ಕೆ ಎರಚುವ ಬಣ್ಣಕ್ಕಿದೆ ವಿಶೇಷ ಮಹತ್ವ, ತಿಳಿಯಿರಿ ಹಬ್ಬದ ವಿಶೇಷತೆ
ರಂಗ ಪಂಚಮಿ
Follow us
TV9 Web
| Updated By: ಆಯೇಷಾ ಬಾನು

Updated on: Mar 22, 2022 | 6:40 AM

ಹೋಳಿ ಹಬ್ಬದ(Holi) ನಂತರ ರಂಗ ಪಂಚಮಿ ಹಬ್ಬವನ್ನು(Rang Panchami) ಆಚರಿಸಲಾಗುತ್ತೆ. ಬಿದಿರಿನ ಕಡ್ಡಿಯಿಂದ ಬೃಹತ್ ಗಾತ್ರದ ಕಾಮಣ್ಣನ ನಿರ್ಮಾಣ ಮಾಡಿ ಹುಣ್ಣಿಮೆಯಂದು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಹಣ್ಣಿಮೆಯ ಐದು ದಿನದ ನಂತರ ಪಂಚಮಿಯಂದು ಕಾಮಣ್ಣನ ದಹನ ಮಾಡುವ ಮೂಲಕ ರಂಗ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ರಂಗ ಪಂಚಮಿ ಮಾರ್ಚ್ 22 ಮಂಗಳವಾರದಂದು ಬಂದಿದೆ. ಹೋಳಿ ಹಬ್ಬದ ಐದು ದಿನಗಳ ನಂತರ ರಂಗ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ.

ರಂಗ ಪಂಚಮಿ ಹಬ್ಬವನ್ನು ಹೆಚ್ಚಾಗಿ ಎಲ್ಲಿ ಆಚರಿಸಲಾಗುತ್ತದೆ? ಈ ಹಬ್ಬವನ್ನು ಹೆಚ್ಚಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಭಾಗಗಳಲ್ಲಿ ಆಚರಿಸಲಾಗುತ್ತದೆ. ಮಧ್ಯಪ್ರದೇಶದ ಇಂದೋರ್ ನ ರಂಗಪಂಚಮಿಯು ಎಲ್ಲೆಡೆ ಪ್ರಸಿದ್ಧಿ ಪಡೆದಿದೆ. ಈ ದಿನ ಇಂದೋರ್‌ನಲ್ಲಿ ಬೃಹತ್ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ ಮತ್ತು ಬಣ್ಣಗಳನ್ನು ಆಕಾಶಕ್ಕೆ ಎರಚಿ ಸಂಭ್ರಮಿಸುತ್ತಾರೆ. ರಂಗ ಪಂಚಮಿಯ ದಿನದಂದು ದೈವಿಕ ಶಕ್ತಿಗಳು ನಕಾರಾತ್ಮಕ ಶಕ್ತಿಗಳನ್ನು ಮೀರಿಸುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ದಿನದಂದು ರಾಧಾರಾಣಿಯ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಹಾಗೂ ದೇವಿಯ ದರ್ಶನಕ್ಕೆ ಜನ ಸಾಗರವೇ ಹರಿದು ಬರುತ್ತದೆ. ಈ ದಿನದಂದು ಶ್ರೀ ಕೃಷ್ಣನು ಗೋಪಿಕೆಯರೊಂದಿಗೆ ರಾಸಲೀಲೆಯನ್ನು ಆಡಿದ್ದನು ಎನ್ನಲಾಗಿದೆ. ಹಾಗೂ ಎರಡನೇ ದಿನ ಬಣ್ಣಗಳ ಹಬ್ಬವನ್ನು ಆಚರಿಸಿದನು ಎಂದು ನಂಬಲಾಗಿದೆ.

ರಂಗ ಪಂಚಮಿ 2022 ರ ಶುಭ ಸಮಯ ಪಂಚಮಿ, ಮಾರ್ಚ್ 22ರ ಮಂಗಳವಾರ ಬೆಳಗ್ಗೆ 06:24 ಕ್ಕೆ ಪ್ರಾರಂಭವಾಗಿ ಮಾರ್ಚ್ 23ರ ಬುಧವಾರ ಬೆಳಗ್ಗೆ 04:21ಕ್ಕೆ ಕೊನೆಗೊಳ್ಳುತ್ತದೆ.

ರಂಗ ಪಂಚಮಿಯನ್ನು ಹೇಗೆ ಆಚರಿಸುವುದು ರಂಗ ಪಂಚಮಿಯನ್ನು ರಾಧಾ ಕೃಷ್ಣನ ಆರಾಧನೆಯ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಜನರು ಪರಸ್ಪರ ಬಣ್ಣಗಳನ್ನು ಎರಚುವ ಮೂಲಕ ಬಣ್ಣಗಳನ್ನು ಹಚ್ಚಿ ರಂಗ ಪಂಚಮಿಯಂದು ಪರಸ್ಪರ ಶುಭಾಶಯ ಕೋರುತ್ತಾರೆ. ಈ ದಿನದಂದು ರಾಧಾ-ಕೃಷ್ಣರಿಗೆ ಬಣ್ಣಗಳನ್ನು ಅರ್ಪಿಸಲಾಗುತ್ತದೆ. ಹೀಗೆ ಮಾಡಿದರೆ ವ್ಯಕ್ತಿಯ ಜಾತಕದಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ. ಮತ್ತು ಜೀವನವು ಪ್ರೀತಿಯಿಂದ ತುಂಬುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಕೆಲ ಕಡೆ ದಿನದಂದು ಲಕ್ಷ್ಮಿ ಮತ್ತು ಶ್ರೀಹರಿಯನ್ನು ಪೂಜಿಸುತ್ತಾರೆ. ಈ ಕಾರಣಕ್ಕಾಗಿ ರಂಗ ಪಂಚಮಿಯನ್ನು ಶ್ರೀ ಪಂಚಮಿ ಎಂದೂ ಕರೆಯುತ್ತಾರೆ. ಹಾಗೂ ಈ ದಿನ ಬೃಹತ್ ಸಮೂಹದೊಂದಿಗೆ ಯಾತ್ರೆಗಳನ್ನು ಮಾಡಿ ಸಂಭ್ರಮಿಸುತ್ತಾರೆ. ಮತ್ತೆ ಕೆಲ ಕಡೆ ಬಿದಿರಿನ ಕಡ್ಡಿಯಿಂದ ಬೃಹತ್ ಗಾತ್ರದ ಕಾಮಣ್ಣನ ನಿರ್ಮಾಣ ಮಾಡಿ ಹುಣ್ಣಿಮೆಯಂದು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಹಣ್ಣಿಮೆಯ ಐದು ದಿನದ ನಂತರ ಪಂಚಮಿಯಂದು ಕಾಮಣ್ಣನ ದಹನ ಮಾಡುವ ಮೂಲಕ ರಂಗ ಪಂಚಮಿಯನ್ನು ಆಚರಿಸಲಾಗುತ್ತದೆ.

ರಂಗ ಪಂಚಮಿ ಪೂಜೆ ರಂಗ ಪಂಚಮಿಯ ದಿನದಂದು ರಾಧಾ ಕೃಷ್ಣ ಅಥವಾ ಲಕ್ಷ್ಮೀ ನಾರಾಯಣನನ್ನು ಪೂಜಿಸುತ್ತಾರೆ. ದೇವರ ವಿಗ್ರಹ ಅಥವಾ ಚಿತ್ರವನ್ನು ಉತ್ತರ ದಿಕ್ಕಿಗೆ ಇರಿಸಿ ನೀರು ತುಂಬಿದ ತಾಮ್ರದ ಕಲಶವನ್ನು ಇರಿಸಿಬೇಕು. ನಂತರ ಶ್ರೀಗಂಧ, ಅಕ್ಷತೆ, ಗುಲಾಬಿ ಹೂವುಗಳು, ಸಿಹಿ ತಿಂಡಿ, ಪಂಚಾಮೃತ, ಬೆಲ್ಲ, ಬೇಳೆ ಇತ್ಯಾದಿಗಳನ್ನು ಅರ್ಪಿಸಬೇಕು. ಸ್ಫಟಿಕ ಅಥವಾ ಕಮಲದ ಮಾಲೆಯೊಂದಿಗೆ ಆಸನದ ಮೇಲೆ ಕುಳಿತುಕೊಂಡು ಭಗವಂತನಿಗೆ ಬಣ್ಣಗಳನ್ನು ಅರ್ಪಿಸಿ ಮತ್ತು ‘ಓಂ ಶ್ರೀಂ ಶ್ರೀಯೇ ನಮಃ’ ಎಂಬ ಮಂತ್ರವನ್ನು ಜಪಿಸಬೇಕು. ಪೂಜೆ ಮಾಡಿದ ನಂತರ, ಆರತಿ ಮಾಡಿಬೇಕು. ಕಲಶದಲ್ಲಿ ಇಟ್ಟಿರುವ ನೀರನ್ನು ಮನೆಯ ಮೂಲೆ ಮೂಲೆಯಲ್ಲಿ ಚಿಮುಕಿಸಿ. ಹಣವನ್ನು ಇಡಲು ಸುರಕ್ಷಿತ ಅಥವಾ ವ್ಯವಸ್ಥೆ ಇರುವ ಸ್ಥಳದಲ್ಲಿ ಚಿಮುಕಿಸಬೇಕು. ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ರಂಗ ಪಂಚಮಿ ಮಹತ್ವ ಪುರಾಣಗಳ ಪ್ರಕಾರ, ರಂಗ ಪಂಚಮಿಯ ದಿನವನ್ನು ದೇವ ಮತ್ತು ದೇವತೆಗಳಿಗೆ ಸಮರ್ಪಿಸಲಾಗುತ್ತದೆ. ಈ ದಿನದಂದು ಬಣ್ಣಗಳನ್ನು ಬಳಸುವುದರಿಂದ ಜಗತ್ತಿನಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ ಎಂದು ಹೇಳಲಾಗುತ್ತದೆ. ಈ ದಿನದಂದು ಒಬ್ಬರಿಗೊಬ್ಬರು ಪರಸ್ಪರ ಬಣ್ಣಗಳು ಎರಚಿ ಸಂಭ್ರಮಿಸುವುದರಿಂದ ಬಣ್ಣಗಳು ಆಕಾಶದ ಕಡೆಗೆ ಹಾರುತ್ತವೆ ಇದರಿಂದ ದೇವತೆಗಳು ಆಕರ್ಷಿತರಾಗುತ್ತಾರೆ ಮತ್ತು ಅವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ: Holi 2022: ಕೆಟ್ಟದರ ಮೇಲಿನ ಒಳ್ಳೆತನದ ವಿಜಯವೇ ಹೋಲಿಕಾ ದಹನ, ಇಲ್ಲಿದೆ ಮಹತ್ವ ಶುಭ ಮುಹೂರ್ತ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?