AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya: ಅಕ್ಷಯ ತೃತೀಯ ಆಚರಣೆಯ ಮಹತ್ವ, ಶುಭ ಮುಹೂರ್ತ ಮತ್ತು ಇತಿಹಾಸವನ್ನು ತಿಳಿಯಿರಿ

Akshaya Tritiya 2021: ಅಕ್ಷಯ ತೃತೀಯ ಆಚರಣೆಯ ವಿಶೇಷತೆಗಳೇನು? ಇದಕ್ಕೆ ಕೂತೂಹಲ ಮೂಡಿಸುವ ದಂತಕಥೆಗಳಿದೆಯೇ? ಈ ಕುರಿತು ತಿಳಿಯೋಣ.

Akshaya Tritiya: ಅಕ್ಷಯ ತೃತೀಯ ಆಚರಣೆಯ ಮಹತ್ವ, ಶುಭ ಮುಹೂರ್ತ ಮತ್ತು ಇತಿಹಾಸವನ್ನು ತಿಳಿಯಿರಿ
Akshaya Tritiya 2021
shruti hegde
|

Updated on: May 10, 2021 | 2:34 PM

Share

ಭಾರತದಲ್ಲಿ ಹಬ್ಬಗಳ ಅಚರಣೆ ಹೆಚ್ಚು. ಸಾಂಪ್ರದಾಯಿಕವಾಗಿ ಅಚರಿಸುವ ವಿಶೇಷ ಹಬ್ಬಗಳಲ್ಲಿ ಅಕ್ಷಯ ತೃತೀಯವೂ ಕೂಡಾ ಒಂದು. ಹಿಂದೂ ಕ್ಯಾಲೆಂಡರ್​ ಪ್ರಕಾರ ಅಕ್ಷಯ ತೃತೀಯ ಹಬ್ಬ ಅಂತ್ಯಂತ ಅನುಕೂಲ ತಂದು ಕೊಡುವ ಹಬ್ಬ ಎಂದು ಹೇಳಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ವರ್ಷದ ಅಕ್ಷಯ ತೃತೀಯವನ್ನು ಮೇ 14ರಂದು ಆಚರಿಸಲಾಗುತ್ತಿದೆ. ಅಕ್ಷಯ ಎಂಬ ಪದ ಸಂಸ್ಕೃತದಿಂದ ಬಂದಿದ್ದು ‘ಶಾಶ್ವತ’ (ಅಂತ್ಯವಿಲ್ಲದ) ಎಂಬ ಅರ್ಥವನ್ನು ಹೊಂದಿದೆ. ಹಾಗಾಗಿ ಒಳ್ಳೆಯತನ ಮತ್ತು ಶುಭದ ಸಾಂಕೇತಿಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ಹಬ್ಬ ಅಚರಣೆಯ ವಿಶೇಷತೆಗಳೇನು? ಇದಕ್ಕೆ ಕೂತೂಹಲ ಮೂಡಿಸುವ ದಂತಕಥೆಗಳಿದೆಯೇ? ಈ ಕುರಿತು ತಿಳಿಯೋಣ.

ಲಕ್ಷ್ಮಿ ಮತ್ತು ವಿಷ್ಣು ದೇವರ ಆರಾಧನೆಯನ್ನು ಅಕ್ಷಯ ತೃತೀಯ ದಿನದಂದು ಮಾಡಲಾಗುತ್ತದೆ. ಜೀವನದುದ್ದಕ್ಕೂ ಇಷ್ಟೈಶ್ವರ್ಯಗಳನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳಲಾಗುತ್ತದೆ. ಪರಶುರಾಮ ವಿಷ್ಣುವಿನ ಆರನೇ ಅವತಾರ ಎಂದು ಕರೆಯಲಾಗುತ್ತದೆ. ಭಗವಾನ್​ ಪರಶುರಾಮ ಇದೇ ದಿನದಂದು ಜನಿಸಿದನು ಎಂದು ಪುರಾಣಗಳು ಸಾರಿವೆ. ಹಾಗಾಗಿ ಪರಶುರಾಮನ ಜಯಂತಿಯನ್ನೂ ಕೂಡಾ ಇಂದೇ ಆಚರಿಸಲಾಗುತ್ತದೆ.

ಅಕ್ಷಯ ತೃತೀಯ ಆಚರಣೆಯ ಶುಭ ಮೂಹೂರ್ತ ಬೆಳಿಗ್ಗೆಯ ಮುಹೂರ್ತ: ಬೆಳಿಗ್ಗಿನ ಜಾವ 5:30ರಿಂದ 10:36ರವರೆಗೆ ಪೂಜೆ ನೆರವೇರಿಸಲು ಒಳ್ಳೆಯ ಸಮಯವಿದೆ. ಮಧ್ಯಾಹ್ನ 12:38ರಿಂದ 1:59ರವರೆಗೆ ಶುಭ ಮುಹೂರ್ತವಿದೆ. ಸಂಜೆ ಮೂಹೂರ್ತ (ಚರಾ): 5:23 ರಿಂದ 7:04 ರವರೆಗೆ ಇದೆ. ರಾತ್ರಿ ಮುಹೂರ್ತ (ಲಾಭ) 9:41ರಿಂದ 10:59ರವರೆಗೆ ಇದೆ. ಅಕ್ಷಯ ತೃತೀಯ ಮೇ 14ರಂದು ಚಿನ್ನದ ಖರೀದಿಗೆ ಒಳ್ಳೆಯ ಮುಹೂರ್ತ ಬೆಳಿಗ್ಗೆ 5:38ರಿಂದ ಮೇ 15 ಬೆಳಿಗ್ಗೆ 5:30ರವರೆಗೆ ಇದೆ.

ಅಕ್ಷಯ ತೃತೀಯ ಮತ್ತು ಶ್ರೀ ಕೃಷ್ಣ ಅಕ್ಷಯ ತೃತೀಯದ ದಂತಕಥೆಗಳು ಶ್ರೀ ಕೃಷ್ಣ ಮತ್ತು ಸುದಾಮನ ಕಥೆಯನ್ನು ಸಾರುತ್ತದೆ. ದಂತಕಥೆಯ ಪ್ರಕಾರ, ಶ್ರೀ ಕೃಷ್ಣ ಮತ್ತು ಸುದಾಮ ಅಪ್ತ ಸ್ನೇಹಿತರಾಗಿರುತ್ತಾರೆ. ಆ ಒಂದು ದಿನ ಬಡತನದಲ್ಲಿದ್ದ ಸುದಾಮ ತನ್ನ ಸ್ನೇಹಿತನಿಗೆ ಒಂದು ಹಿಡಿ ಅವಲಕ್ಕಿಯನ್ನು ಹಿಡಿದು ಶ್ರೀಕೃಷ್ಣನ ಸಾಮ್ಯಾಜ್ಯಕ್ಕೆ ಭೇಟಿ ನೀಡುತ್ತಾನೆ. ಹಿಂದೆ ಗುರುಕುಲದಲ್ಲಿ ಅವಲಕ್ಕಿಯವನ್ನು ಶ್ರೀ ಕೃಷ್ಣನೊಡನೆ ಹಂಚಿಕೊಳ್ಳದೇ ಒಬ್ಬನೇ ತಿಂದು ನಿಯಮ ಮೀರಿದ್ದರಿಂದ ಬಂದಿದ್ದ ಬಡತನದ ಶಾಪ ಅವಲಕ್ಕಿಯನ್ನು ಶ್ರೀ ಕೃಷ್ಣನಿಗೆ ಹಂಚಿದ್ದರಿಂದ ಕಳೆದು ಹೋಗುತ್ತದೆ. ಇದರಿಂದ ಸುದಾಮನ ಪರಿವಾರಕ್ಕೆ ವೈಭವ ಪ್ರಾಪ್ತಿಯಾಗುತ್ತದೆ. ಈ ಘಟನೆ ತೃತೀಯ ತಿಥಿ, ವೈಶಾಖ, ಶುಕ್ಲ ಪಕ್ಷದಲ್ಲಿ ನಡೆಯುತ್ತದೆ. ಆದ್ದರಿಂದ ಆ ದಿನ ಮಹತ್ವದ ದಿನವಾಗಿದೆ.

ಅಕ್ಷಯ ತೃತೀಯ ಮತ್ತು ಗಂಗಾ ಆಗಮನ ಮತ್ತೊಂದು ದಂಥಕತೆಯ ಪ್ರಕಾರ, ಪೂರ್ವಜರು ಮೋಕ್ಷವನ್ನು ಸಾಧಿಸುವ ಸಲುವಾಗಿ ಸಹಾಯಕ್ಕಾಗಿ ಭಗೀರಥ ರಾಜನ ಆಜ್ಞೆಯ ಮೇರೆಗೆ ಗಂಗಾ ನದಿಗೆ ಇಳಿದ ದಿನವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವುದು ಅದೃಷ್ಟ ತರುತ್ತದೆಯಾ? ಇಲ್ಲಿದೆ ಪೂರ್ಣ ಮಾಹಿತಿ