Mauni Amavasya 2023: ಶನಿವಾರ ಅಮಾವಾಸ್ಯೆ ಬಂದರೆ ಶುಭವೋ? ಅಶುಭವೋ? ಶನಿವಾರವಕ್ಕೂ ಅಮಾವಾಸ್ಯೆಗೂ ಏನಿದೆ ಅಂತಹ ಸಂಗತಿ?

TV9kannada Web Team

TV9kannada Web Team | Edited By: ಅಕ್ಷಯ್​ ಕುಮಾರ್​​

Updated on: Jan 20, 2023 | 10:03 AM

ಶನಿವಾರ ಅಮಾವಾಸ್ಯೆ ಬಂದರೆ ಅಶುಭವೇ ಹೆಚ್ಚು. ಅದು ಹೇಗೆ ಎಂದು ವಿಚಾರ ಮಾಡೋಣ. ತಿಳಿದು ಕಾರ್ಯಗಳನ್ನು ಮಾಡೋಣ ಅಲ್ಲವೇ ?

Mauni Amavasya 2023: ಶನಿವಾರ ಅಮಾವಾಸ್ಯೆ ಬಂದರೆ ಶುಭವೋ? ಅಶುಭವೋ? ಶನಿವಾರವಕ್ಕೂ ಅಮಾವಾಸ್ಯೆಗೂ ಏನಿದೆ ಅಂತಹ ಸಂಗತಿ?
ಸಾಂದರ್ಭಿಕ ಚಿತ್ರ
Image Credit source: google image

ಶನಿವಾರ (Saturday) ಅಮಾವಾಸ್ಯೆ (Amavasya) ಬಂದರೆ ಅಶುಭವೇ ಹೆಚ್ಚು. ಅದು ಹೇಗೆ ಎಂದು ವಿಚಾರ ಮಾಡೋಣ. ತಿಳಿದು ಕಾರ್ಯಗಳನ್ನು ಮಾಡೋಣ ಅಲ್ಲವೇ ಅಮಾವಾಸ್ಯೆ ಎಂದರೆ ಅಮಾ ಸಹ ವಸತಃ ಚಂದ್ರಾರ್ಕೌಯಸ್ಯಾಮ್ ಇಲ್ಲಿ ಅಮಾ ಎಂದರೆ ಚಂದ್ರನ ಹದಿನಾರನೇ ಕಲೆ. ಈ ಹದಿನಾರನೇ ಕಲೆಯ ದಿನ ಚಂದ್ರ ಮತ್ತು ಸೂರ್ಯ ಒಂದೇ ವೇಳೆಯಲ್ಲಿ ಉದಯವಾಗುತ್ತಾರೆ. ಈಗ ನಿಮಗೆ ಆಶ್ಚರ್ಯವೆನಿಸಬಹುದು ಚಂದ್ರ ಮತ್ತು ಸೂರ್ಯರು ಏಕಕಾಲದಲ್ಲಿ ಉದಯವೇ ಎಂದು. ಹೌದು ಏಕಕಾಲದಲ್ಲೇ ಉದಯ. ಕೃಷ್ಣ ಪಕ್ಷದಲ್ಲಿ ಚಂದ್ರನು ಪ್ರತೀದಿನ ಒಂದೊಂದು ಕಲೆಯಿಂದ ಕ್ಷೀಣನಾಗುತ್ತಾ ಸೂರ್ಯೋದಯಕ್ಕೆ ಸಮೀಪದಲ್ಲಿ ಉದಯವಾಗುತ್ತಾ ಹುಣ್ಣಿಮೆಯಿಂದ ಹದಿನಾರನೇ ದಿನ ಸೂರ್ಯನೊಂದಿಗೆ ಉದಯವನ್ನು ಹೊಂದುತ್ತಾನೆ/ವಾಸವಾಗಿರುತ್ತಾನೆ. ಆದ್ದರಿಂದ ಅಂದು ಗಗನದಲ್ಲಿ ಚಂದ್ರನ ಗೋಚರವಿರುವುದಿಲ್ಲ. ಮತ್ತು ಅಮಾ ಎಂಬ ಕಲೆಯಲ್ಲಿ ಚಂದ್ರಸೂರ್ಯರು ಜೊತೆಯಾಗಿ ಉದಯವಾಗುವುದರಿಂದ/ವಾಸವಾಗಿರುವುದರಿಂದ ಆ ದಿನಕ್ಕೆ ಅಮಾವಾಸ್ಯ ಅಥವಾ ಅಮಾವಾಸ್ಯೆ ಎಂದು ಹೆಸರು.ಅದಕ್ಕೆ ಶಾಸ್ತ್ರದಲ್ಲಿ “ದರ್ಶಃ ಸೂರ್ಯೇಂದು ಸಂಗಮಃ” ಎಂದಿದ್ದಾರೆ. ದರ್ಶಃ ಅಂದರೆ ಅಮಾವಾಸ್ಯೆಯ ಇನ್ನೊಂದು ಹೆಸರು. ಅಥವಾ ಸೂರ್ಯ ಮತ್ತು ಚಂದ್ರರ ಸಂಗಮಕ್ಕೆ (ಜೊತೆಯಾದ ಉದಯದ/ವಾಸದ ದಿನಕ್ಕೆ) ದರ್ಶ ಎಂದು ಹೆಸರು.ಈ ದಿನಕ್ಕೆ ಕುಹೂ ಎಂಬ ಹೆಸರೂ ಇದೆ. ಕುಹೂ ಎಂದರೆ ಚಂದ್ರನ ಕಲೆಯು ಕಾಣದಿರುವ ದಿನ ಎಂದರ್ಥ.

ಇನ್ನು ಶನಿವಾರದ ಬಗ್ಗೆ ಹೇಳುವುದಾದರೆ – ಸೈದ್ಧಾಂತಿಕವಾಗಿ ಶನಿವಾರವೆನ್ನುವುದು ವಾರದ ಕೊನೆಯ ದಿನವಾಗಿದೆ. ಆದಿತ್ಯ ಎಂದರೆ ಸೂರ್ಯ. ಸೂರ್ಯನ ಅನಿವಾರ್ಯತೆ ಸಕಲ ಜೀವಿಗಳಿಗೂ ಅತ್ಯವಶ್ಯವಾದ್ದರಿಂದ ವಾರದ ಮೊದಲ ದಿನ ಸೂರ್ಯನ ದಿನವಾಗಿದೆ. ಈ ಕಾರಣದಿಂದ ಮತ್ತು ಶನಿಯ ನಡಿಗೆ ಅತ್ಯಂತ ನಿಧಾನವಾದ್ದರಿಂದ ಕೊನೆಯ ಭಾಗ / ಕೊನೆಯ ವಾರ ಅವನ ಸಂಬಂಧಿತವಾಗಿ ಹೇಳುವುದು ಸಂಪ್ರದಾಯ. ಹಾಗೆಯೇ ಶನಿವಾರವೆಂಬುದು ಶುಭಕಾರ್ಯಗಳಿಗೆ ಅಷ್ಟು ಸೂಕ್ತವಲ್ಲ. ಜ್ಯೌತಿಷ ಶಾಸ್ತ್ರಪ್ರಕಾರ ಹೀಗೆ ಹೇಳುತ್ತಾರೆ.

ತಾಜಾ ಸುದ್ದಿ

ಇದನ್ನು ಓದಿ:Mauni Amavasya 2023: ಮೌನಿ ಅಮಾವಾಸ್ಯೆಯಂದು ಮೌನವಾಗಿ ಉಪವಾಸ, ದಾನ ಮಾಡಿದರೆ ಈ ಫಲ ನಿಮ್ಮದಾಗುತ್ತೆ

ಮಧ್ಯಧನೋಂಗ ಹೀನಃ, ತಮೋಗುಣಃ ಕ್ಲೇಷಕರೋ ನರಣಾಂ ಮಂದಸ್ಯ ವಾರಪ್ರಭವೋ ಅತಿಮಂದಃ ಎಂಬುದಾಗಿ. ಅಂದರೆ ತಮೋಗುಣನಾದ ಶನಿಯು ಕ್ಲೇಷಕರನೂ ಮಂದನೂ (ನಿಧಾನಿಯೂ) ಆಗಿರುವುದರಿಂದ ಮನುಷ್ಯರ ಕಾರ್ಯವನ್ನು ತನ್ನ ವಾರಪ್ರಭಾವದಿಂದ ಇನ್ನೂ ನಿಧಾವಾಗುವಂತೆ ಮಾಡುವನು. ಆದ್ದರಿಂದ ಶನಿವಾರ ಹೊಸಕಾರ್ಯಗಳ ಆರಂಭ ಉತ್ತಮವಲ್ಲ (ಕೆಲವೊಂದು ವಿಶೇಷ ಸಂದರ್ಭಗಳನ್ನು ಹೊರತು ಪಡಿಸಿ) . ಅಲ್ಲದೇ ಶಾಸ್ತ್ರ ಹೇಳುವಂತೆ ಸಂತ್ಯಜೇದ್ದಿವಸೇ ಯಾತ್ರಾಂ ಸೂರ್ಯಾರಾರ್ಕೀಂದು ವಕ್ರಿಣಾಮ್” ಅಂದರೆ ಯಾವ ದಿನದಂದು ಶನಿಯು ತನ್ನ ತಂದೆಯನ್ನು ವಕ್ರದೃಷ್ಟಿಯಿಂದ ನೋಡಿದ್ದಾನೋ ಆ ದಿನವಾದ ಶನಿವಾರದಂದು ಯಾತ್ರೆ ಆರಂಭಿಸುವುದು ಅಥವಾ ಶುಭಕಾರ್ಯಗಳ ಕುರಿತಾಗಿ ಪ್ರಯಾಣ ಮಾಡುವುದು ಉತ್ತಮವಲ್ಲ.ಉದಾಹರಣೆಗೆ ವಿವಾಹ ಸಂಬಂಧಿತವಾಗಿ ಹುಡುಗಿ ನೋಡಲು ಹೋಗುವುದು ಇತ್ಯಾದಿ.

ಮೊದಲಿಗೆ ಅಮಾವಾಸ್ಯೆ ಬಗ್ಗೆ ತಿಳಿದುಕೊಂಡು ಆಮೇಲೆ ಶನಿವಾರದ ಬಗ್ಗೆ ತಿಳಿದುಕೊಂಡೆವು. ಈಗ ಇವೆರಡೂ ಒಂದೇ ದಿನ ಬಂದರೆ ಹೇಗೆ ಎಂದು ವಿಚಾರ ಮಾಡೋಣ. ಯಾವುದೇ ಶುಭಕಾರ್ಯಗಳಿಗೆ ತಾರಾನುಕೂಲ ಬೇಕು. ತಾರಾನುಕೂಲವನ್ನು ಚಂದ್ರನನ್ನು ಆಧರಿಸಿ ನೋಡುತ್ತೇವೆ.ಅಮಾವಾಸ್ಯೆಯಂದು ಚಂದ್ರದರ್ಶನ ಆಗದೇ ಇರುವುದರಿಂದ ಈ ದಿನ ತಾರಾನುಕೂಲ ಸಿಗುವುದು ಅಸಾಧ್ಯ. ಅಲ್ಲದೇ ಶನಿವಾರಕ್ಕೆ ವಾರದೋಷವಿರುವುದರಿಂದ ಶುಭಕಾರ್ಯಕ್ಕೆ ಅಷ್ಟು ಉತ್ತಮವಲ್ಲ. ಅಮಾವಾಸ್ಯೆಯಂದು ಸೂರ್ಯಪ್ರಾಬಲ್ಯ ಅಧಿಕವಿರುತ್ತದೆ. ವಾರ ಶನಿವಾರವಾಗಿದೆ. ಸೂರ್ಯ ಮತ್ತು ಶನಿಗೆ ಅಪ್ಪ ಮಗನ ಸಂಬಂಧವಿದ್ದರೂ ಇಬ್ಬರಿಗೂ ಜನ್ಮತಃ ವೈರತ್ವ ಎನ್ನುವುದು ಸ್ಪಷ್ಟವಾಗಿದೆ. ಹಾಗಿರುವಾಗ ಅಮಾವಾಸ್ಯೆ ಶನಿವಾರದಂದು ಬಂದಿದೆ ಎಂದಾದರೆ ಈ ದಿನದಂದು ನಿಶ್ಚಯವಾಗಿ ಶುಭಕಾರ್ಯ ಅಥವಾ ಹೊಸತಾಗಿ ಯಾವುದೇ ಕೆಲಸವನ್ನು / ಕಾರ್ಯವನ್ನು ಮಾಡುವುದು ಸರಿಯಲ್ಲ. ಕಾರ್ಯಹಾನಿ , ಕಾರ್ಯಮಂದಗತಿಯಲ್ಲಿ ಸಾಗುವಿಕೆ, ದೈಹಿಕ ಅಥವಾ ಮಾನಸಿಕ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಶಕ್ತಿಯಿದೆಯೆಂದು ಪ್ರವಾಹಕ್ಕೆ ಎದುರಾಗಿ ಈಜುವುದು ಕ್ಷೇಮವಲ್ಲ.

ಡಾ.ಕೇಶವ ಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada