Chanakya Niti: ಜೀವನದಲ್ಲಿ ಉದ್ಧಾರ ಆಗಬೇಕು ಅಂದರೆ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
ಆಚಾರ್ಯ ಚಾಣಕ್ಯ ತನ್ನ ನೀತಿಶಾಸ್ತ್ರ ಪುಸ್ತಕದಲ್ಲಿ ಜೀವನಕ್ಕೆ ಸಂಬಂಧಪಟ್ಟ ಅಷ್ಟೂ ಅಂಶಗಳನ್ನು ಉಲ್ಲೇಖಿಸಿ, ತಿಳಿಯ ಹೇಳಿದ್ದಾನೆ. ಜೀವನದಲ್ಲಿ ಉತ್ತಮ ಸ್ಥಾನಮಾನ, ಸನ್ಮಾನ ಗಳಿಸುವ ನಿಟ್ಟಿನಲ್ಲಿ ಏನು ಮಾಡಬಾರದು ಎಂಬುದರ ಬಗ್ಗೆ ಆಚಾರ್ಯ ಚಾಣಕ್ಯ ಹೇಳಿದ್ದು, ಅಂತಹ ಗುಣಗಳನ್ನು ಬಿಟ್ಟುಬಿಡುವುದೇ ಒಳಿತು ಎಂದಿದ್ದಾರೆ.
ಆಚಾರ್ಯ ಚಾಣಕ್ಯ (Acharya Chanakya) ತನ್ನ ನೀತಿಶಾಸ್ತ್ರ ಪುಸ್ತಕದಲ್ಲಿ ಜೀವನಕ್ಕೆ ಸಂಬಂಧಪಟ್ಟ ಅಷ್ಟೂ ಅಂಶಗಳನ್ನು ಉಲ್ಲೇಖಿಸಿ, ತಿಳಿಯ ಹೇಳಿದ್ದಾನೆ. ಜೀವನದಲ್ಲಿ ಉತ್ತಮ ಸ್ಥಾನಮಾನ, ಸನ್ಮಾನ ಗಳಿಸುವ ನಿಟ್ಟಿನಲ್ಲಿ ಏನು ಮಾಡಬಾರದು ಎಂಬುದರ ಬಗ್ಗೆ ಆಚಾರ್ಯ ಚಾಣಕ್ಯ ಹೇಳಿದ್ದು, ಅಂತಹ ಗುಣಗಳನ್ನು ಬಿಟ್ಟುಬಿಡುವುದೇ ಒಳಿತು ಎಂದಿದ್ದಾರೆ.
ಆಚಾರ್ಯ ಚಾಣಕ್ಯ ಅತ್ಯಂತ ವಿದ್ವತ್ತು ಉಳ್ಳ ವ್ಯಕ್ತಿಗಳಲ್ಲಿ ಒಬ್ಬರು ರಂದು ಪರಿಗಣಿತರಾಗಿದ್ದಾರೆ. ಅವರು ಕುಶಲ ಕೂಟನೀತಿ, ರಾಜನೀತಿ ಮತ್ತು ಅರ್ಥಶಾಸ್ತ್ರದಲ್ಲಿ ಮಹಾನ್ ಜ್ಞಾನಿ ಎಂದು ಜನಜನಿತರಾಗಿದ್ದಾರೆ. ಆಚಾರ್ಯ ಚಾಣಕ್ಯ ತನ್ನ ಜೀವನದ ವಿಕಟ ಪರಿಸ್ಥಿತಿಗಳಲ್ಲಿ, ಕಠಿಣ ಸಂದರ್ಭಗಳಲ್ಲಿ ಸೋಲನ್ನು ಎಂದಿಗೂ ಒಪ್ಪುವುದಿಲ್ಲ. ಆಚಾರ್ಯ ಚಾಣಕ್ಯ ತನ್ನ ಬದ್ಧಶತೃನನ್ನು ನಾಶ ಮಾಡಿ, ಸಾಧಾರಣ ಬಾಲಕ ಚಂದ್ರಗುಪ್ತನನ್ನು ಮೌರ್ಯ ಸಾಮ್ರಾಟನನ್ನಾಗಿಸಿದ್ದಾನೆ. ಆಚಾರ್ಯ ಚಾಣಕ್ಯನನ್ನು ಕೌಟಿಲ್ಯ ಮತ್ತು ವಿಷ್ಣು ಗುಪ್ತಾ ಎಂದೂ ಕರೆಯುತ್ತಾರೆ.
ಚಾಣಕ್ಯ ತನ್ನ ಕೌಟಿಲ್ಯ ನೀತಿಯಲ್ಲಿ ಜೀವನದ ವಿಭಿನ್ನ ಸ್ತರಗಳನ್ನು, ಆಯಾಮಗಳನ್ನು ತೆರೆದಿಟ್ಟಿದ್ದಾನೆ. ನೀತಿಶಾಸ್ತ್ರದಲ್ಲಿ ಧನ, ಸುಧಾರಣೆ, ದೋಸ್ತಿ, ಶತೃ, ಸಾಫಲ್ಯತೆಗೆ ಸಂಬಂಧಪಟ್ಟಂತೆ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾನೆ. ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಕೆಲವು ಸಂಗತಿಗಳನ್ನು ಹೇಳಿದ್ದು, ಅವುಗಳನ್ನು ಜೌನದಲ್ಲಿ ಬಿಟ್ಟುಬಿಡುವುದೇ ಕ್ಷೇಮಕರ, ಒಳ್ಳೆಯದು ಎಂದು ತಿಳಿಯಹೇಳಿದ್ದಾನೆ. ಇಲ್ಲವಾದಲ್ಲಿ ಜೀವನದಲ್ಲಿ ಅಷ್ಟೂ ಸ್ಥಾನಮಾನ, ಸನ್ಮಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾನೆ.
ನಿಂದಿಸುವುದು: ಆಚಾರ್ಯ ಚಾಣಕ್ಯನ ಪ್ರಕಾರ ಯಾರೇ ಆಗಲಿ ಇತರರ ನಿಂದಿಸುವುದನ್ನು ಬಿಟ್ಟುಬಿಡಬೇಕು. ಯಾರು ಬೇರೆಯವರನ್ನು ನಿಂದಿಸುವುದರಲ್ಲೇ ಕಾಲ ಕಳೆಯುತ್ತಾರೋ, ಯಾರ ಬೆನ್ನ ಹಿಂದೆ ಕೆಟ್ಟ ಮಾತುಗಳನ್ನು ಹೇಳುತ್ತಾರೋ ಅವರಿಂದ ದೂರವಿರಬೇಕಾಗುತ್ತದೆ. ಇನ್ನು ಹಾಗೆ ವರ್ತಿಸುವ ಜೀವನದಲ್ಲಿ ಮಾನ ಸಮ್ಮಾನಗಳು ಎಂದಿಗೂ ದಕ್ಕುವುದಿಲ್ಲ. ಬೇರೆಯವರ ಮುಂದೆ ಅವರು ನಗೆಪಾಟಲಿಗೀಡಾಗುತ್ತಾರೆ, ದ್ವೇಷವನ್ನಷ್ಟೇ ತುಂಬಿಕೊಳ್ಳುತ್ತಾರೆ.
ಸುಳ್ಳು ಹೇಳುವುದು: ನಮಗೆ ಚಿಕ್ಕಂದಿನಿಂದಲೂ ಇದನ್ನೇ ಹೇಳಿಕೊಡುತ್ತಾರೆ.. ಏನು ಅಂದರೆ ಏನೇ ಆಗಲಿ ಸುಳ್ಳು ಹೇಳಬಾರದು. ಸದಾ ಸನ್ಮಾರ್ಗದಲ್ಲಿಯೇ ಹೆಜ್ಜೆಹಾಕಬೇಕು. ನಾವು ಸಾಗುವ ಮಾರ್ಗದಲ್ಲಿ ಏನೇ ಕಷ್ಟಕಾರ್ಪಣ್ಯಗಳು ಬರಲಿ ಎಂದಿಗೂ ಸತ್ಯದ ಮಾರ್ಗವನ್ನು ಬಿಟ್ಟು ಆಚೀಚೆ ಹೋಗಬಾರದು. ಯಾವುದೇ ವ್ಯಕ್ತಿಯಾಗಲಿ ಜೀವನದಲ್ಲಿ ಯಶಸ್ಸು ಸಾಧಿಸಲು ಸುಳ್ಳು ಮಾರ್ಗ ಆರಿಸಿಕೊಂಡರೆ ಅಂತಹವರ ಸಾಫಲ್ಯತೆ ಹೆಚ್ಚು ದಿನ ಊರ್ಜಿತವಾಗುವುದಿಲ್ಲ. ಅಂತಹ ವ್ಯಕ್ತಿಯ ನೀತಿ ನಿಜಾಯಿತಿ ಬಹಿರಗವಾದಾಗ ಆತನಿಗೇ ನಾಚಿಕೆ, ಅವಮಾನಗಳು ನಿಶ್ಚಿತವಾಗುತ್ತದೆ. ಹಾಗಾಗಿ ಯಾವತ್ತೇ ಆಗಲಿ ಎಂತಹುದೇ ಪರಿಸ್ಥಿತಿಯಾಗಲಿ ಸುಳ್ಳಿನ ಆಸರೆ ಪಡೆಯಲೇಬಾರದು.
ಇಷ್ಟಿದ್ದರೆ ಅಷ್ಟು ಎಂದು ಬಡಾಯಿ ಹೇಳುವುದು: ವಿಷಯ ಇಷ್ಟೇ ಒಷ್ಟು ಇದ್ದರೂ ಅದನ್ನು ದೊಡ್ಡದಾಗಿ ಹೇಳಿಕೊಂಡು ತಿರುಗಬಾರದು. ತನ್ನ ಬಗ್ಗೆ ತಾನೇ ಕೊಚ್ಚಿಕೊಂಡು ಅಂತಹ ಜನರ ಬೂಟಾಟಿಕೆ ಹೊರಬಿದ್ದಾಗ ಜನರ ಎದುರು ಲಜ್ಜೆ ಕಳೆದುಕೊಂಡು ಹಗುರವಾಗಬೇಕಾಗುತ್ತದೆ. ಯಾವುದೇ ವ್ಯಕ್ತಿ ತನ್ನ ಸಾಧಾರಣ ಪ್ರತಿಭೆಯನ್ನೇ ಅಗಾಧ ಪಾಂಡಿತ್ಯ ಎಂದು ಪ್ರದರ್ಶಿಸುವುದು ತರವಲ್ಲ. ತನ್ನ ಸಂಸ್ಕಾರ ಮತ್ತು ಬುದ್ಧಿಯ ಮೇಲೆ ಭರವಸೆಯಿಟ್ಟು ನಡೆದುಕೊಳ್ಳಬೇಕು.
(chanakya niti do not allow and follow these mistakes that bring down your self respect)