Chanakya Niti: ಜೀವನದಲ್ಲಿ ಈ ಮೂರು ಕೆಲಸ ಮಾಡುವಾಗ ಜಾಗ್ರತೆ ವಹಿಸಿ, ಇಲ್ಲಾಂದ್ರೆ ಅದರಿಂದ ಸಂಕಷ್ಟ ತಪ್ಪಿದ್ದಲ್ಲ!

| Updated By: ಸಾಧು ಶ್ರೀನಾಥ್​

Updated on: Nov 24, 2021 | 7:21 AM

ಆಚಾರ್ಯ ಚಾಣಕ್ಯ ಹೇಳುವುದೇನೆಂದರೆ ನೀವು ಯಾರಿಗಾದರೂ ಸಾಲ ಕೊಟ್ಟಿದ್ದರೆ ಅದನ್ನು ವಾಪಸ್​ ಪಡೆಯುವ ಪ್ರಯತ್ನದಲ್ಲಿ ಸಾಲ ಪಡೆದವರಿಗೆ ಯಾವುದೇ ರೀತಿಯಲ್ಲಿ ಅಪಮಾನ ಮಾಡಬೇಡಿ. ಹಾಗೊಮ್ಮೆ ನೀವು ಮಾಡಿದರೆ ಅದರ ನಷ್ಟ ನಿಮಗೇ ಆಗುವುದು ಕಟ್ಟಿಟ್ಟಬುತ್ತಿ. ಅಷ್ಟಕ್ಕೂ ನೀವು ವಾಪಸ್​ ಕೇಳುತ್ತಿರುವುದು ನೀವು ಕೊಟ್ಟಿರುವ ಹಣವನ್ನಷ್ಟೆ.

Chanakya Niti: ಜೀವನದಲ್ಲಿ ಈ ಮೂರು ಕೆಲಸ ಮಾಡುವಾಗ ಜಾಗ್ರತೆ ವಹಿಸಿ, ಇಲ್ಲಾಂದ್ರೆ ಅದರಿಂದ ಸಂಕಷ್ಟ ತಪ್ಪಿದ್ದಲ್ಲ!
ಜೀವನದಲ್ಲಿ ಈ ಮೂರು ಕೆಲಸಗಳನ್ನು ಮಾಡುವುದಕ್ಕೆ ಹಿಂಜರಿಯಬೇಡಿ, ಇಲ್ಲಾಂದ್ರೆ ಅದರಿಂದ ನಿಮಗೆ ಸಂಕಷ್ಟ ತಪ್ಪಿದ್ದಲ್ಲ! ಅವು ಯಾವುವು?
Follow us on

ಆಚಾರ್ಯ ಚಾಣಕ್ಯ ಪ್ರಕಾಂಡ ಪಂಡಿತ ಮತ್ತು ಅತ್ಯುತ್ತಮ ಗುರು. ನಂದ ವಂಶವನ್ನು ನಾಶಗೊಳಿಸಿ, ಮೌರ್ಯ ವಂಶವನ್ನು ಸ್ಥಾಪಿಸಿದ ಶ್ರೇಯಸ್ಸು ಆಚಾರ್ಯ ಚಾಣಕ್ಯನಿಗೆ ಸಲ್ಲುತ್ತದೆ. ಮ್ಯಾನೇಜ್ಮೆಂಟ್​ ಗುರು ಅಥವಾ ಒಬ್ಬ ಒಳ್ಳೆಯ ಕೋಚ್​ ಎಂಬ ಮಾನ್ಯತೆ ಆಚಾರ್ಯ ಚಾಣಕ್ಯನಿಗೆ ಇಂದಿಗೂ ಎಂದೆಂದಿಗೂ ಸಲ್ಲುತ್ತದೆ. ಇಂತಿಪ್ಪ ಆಚಾರ್ಯ ಚಾಣಕ್ಯನ ಅಷ್ಟೂ ರೀತಿ ನೀತಿಗಳನ್ನು ಆಲಿಸಿ, ಪಾಲಿಸಿದರೆ ನಮ್ಮ ಜೀವನ ಸುಖಮಯವಾಗಿ, ಸಮೃದ್ಧವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಷ್ಟಾಗಿ ಆಚಾರ್ಯ ಚಾಣಕ್ಯ ಸ್ವಯಂ ತನ್ನ ಜೀವನದಲ್ಲಿ ಅನೇಕ ಪರೆಶಾನಿಗಳನ್ನು ಅನುಭವಿಸಿದ್ದ. ಅನೇಕ ಸಂಕಷ್ಟಗಳನ್ನು ಎದುರಿಸಿದ್ದ. ಆದರೆ ಆ ಸಂಕಷ್ಟಗಳು, ಪಡಿಪಾಟಲುಗಳು, ಜಿಂದಗಿಯ ಆ ಪರೆಶಾನಿಗಳೆ ಆತನಿಗೆ ದಾರಿದೀಪವನ್ನಾಗಿ, ಜೀವನದ ಯಶಸ್ಸಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಾನೆ. ಅದುವೇ ಚಾಣಕ್ಯ ನೀತಿಗಳು. ಅದುವೇ ಕೂಟನೀತಿ, ರಾಜನೀತಿ, ಅರ್ಥಶಾಸ್ತ್ರ, ಸಮಾಜಶಾಸ್ತ್ರಗಳಾಗಿ ಜನಪ್ರಯವಾಗಿವೆ. ಆಚಾರ್ಯ ಚಾಣಕ್ಯನ ನೀತಿ ಮಾತುಗಳನ್ನು ಆಲಿಸಿ, ಪಾಲಿಸುವುದರಲ್ಲೇ ನಮ್ಮ ಜಾಣತನವೂ ಆಡಗಿದೆ. ಅದರಿಂದ ನಮ್ಮ ಜೀವನವೂ ಉತ್ತಮಗೊಳ್ಳುತ್ತದೆ.

ಕೊಟ್ಟ ಸಾಲ ವಾಪಸ್​ ಕೇಳುವಾಗ ಅವಮಾನ ಮಾಡಬೇಡಿ:
ಆಚಾರ್ಯ ಚಾಣಕ್ಯ ಹೇಳುವುದೇನೆಂದರೆ ನೀವು ಯಾರಿಗಾದರೂ ಸಾಲ ಕೊಟ್ಟಿದ್ದರೆ ಅದನ್ನು ವಾಪಸ್​ ಪಡೆಯುವ ಪ್ರಯತ್ನದಲ್ಲಿ ಸಾಲ ಪಡೆದವರಿಗೆ ಯಾವುದೇ ರೀತಿಯಲ್ಲಿ ಅಪಮಾನ ಮಾಡಬೇಡಿ. ಅಥವಾ ಯಾವುದೇ ಸಂಬಂಧಗಳನ್ನು ಮಧ್ಯೆ ತರಬೇಡಿ. ಹಾಗೊಮ್ಮೆ ನೀವು ಮಾಡಿದರೆ ಅದರ ನಷ್ಟ ನಿಮಗೇ ಆಗುವುದು ಕಟ್ಟಿಟ್ಟಬುತ್ತಿ. ಒಂದು ತಿಳಿದುಕೊಂಡುಬಿಡಿ. ನೀವು ವಾಪಸ್​ ಕೇಳುತ್ತಿರುವುದು ನೀವು ಕೊಟ್ಟಿರುವ ಹಣವನ್ನಷ್ಟೆ. ಮತ್ತೆ ಇನ್ಯಾವುದನ್ನೂ ಅಲ್ಲ. ಹಾಗಿದ್ದ ಮೇಲೆ ಅಪಮಾನ ಮತ್ತಿತರ ವ್ಯತ್ಯಾಸಗಳಿಗೆ ಅಲ್ಲೇನು ಕೆಲಸ! ಅಲ್ವೇ?

ಸಂಕೋಚ ಪಟ್ಕೋಬೇಡಿ, ಹೊಟ್ಟೆ ತುಂಬಾ ಊಟ ಮಾಡಿ:
ಯಾವಾಗಲೂ ಊಟ ಹೊಟ್ಟೆ ತುಂಬಾ ಮಾಡಬೇಕು. ಆದರೆ ಕೆಲವರು ತಮ್ಮ ಬಂಧುಗಳ ಮನೆಗೆ ಹೋದಾಗ ಅಥವಾ ಪರಿಚಯಸ್ಥರ ಮನೆಗೆ ಹೋದಾಗಲೊ ಸಂಕೋಷಪಟ್ಟುಕೊಂಡು ಹೊಟ್ಟೆ ತುಂಬಾ ಊಟ ಮಾಡುವುದಕ್ಕೆ ಹಿಂಜರಿಯುತ್ತಾರೆ. ಅರೆ ಹೊಟ್ಟೆ ತುಂಬಿಸಿಕೊಂಡೇ ಊಟದಿಂದ ಏಳುತ್ತಾರೆ. ಹಾಗೆ ಮಾಡಬಾರದು. ಊಟ ಮಾಡಲು ಕುಳಿತಿದ್ದೀರಿ ಎಂದಮೇಲೆ ಹೊಟ್ಟೆ ತುಂಬಾ ತಿನ್ನಬೇಕು. ಅದಕ್ಕೇ ಊಟಕ್ಕೆ ಕುಳಿತಾಗ ಆ ಮನೆಯವರು ಹೇಳುವುದು ಅಯ್ಯೋ ಸಂಕೋಚ ಪಟ್ಕೋಬೇಡಿ. ಹೊಟ್ಟೆ ತುಂಬಾ ಊಟ ಮಾಡಿ ಎಂದು.

ಗುರುವಿನಿಂದ ಜ್ಞಾನ ಸಂಪಾದಿಸಲು ಯಾವುದೇ ಸಂಕೋಚ ಬೇಡ:
ಗುರುವಿನ ಬಳಿ ವ್ಯಾಸಂಗ ಮಾಡುವಾಗ, ಅವರಿಂದ ಜ್ಞಾನ ಸಂಪಾದಿಸುವಾಗ ಯಾವುದೇ ಸಂಕೋಚಪಟ್ಟುಕೊಳ್ಳದೇ ಜ್ಞಾನ ಪಡೆಯಿರಿ. ಏಕೆಂದರೆ ಜ್ಞಾನ ಎಷ್ಟು ಸಂಪಾದಿಸಿದರೂ ಅದು ಕಡಿಮೆಯಾಗಿಯೇ ಇರುತ್ತದೆ. ಕೆಲವರು ತಮ್ಮ ಗುರುಗಳ ಬಳಿ ಜ್ಞಾನ ಪಡೆಯಲು ಜಿಜ್ಞಾಸೆ ಪಡುತ್ತಾರೆ. ಏ ಏನು ಬಿಡು ಅವರಿಂದ ಕಲಿಯುವುದು ಎಂದು ಉದಾಸೀನತೆ, ನಿರ್ಲಕ್ಷ್ಯ ತೋರುತ್ತಾರೆ. ಆದರೆ ಹೀಗೆ ಮಾಡುವುದರಿಂದ ನಿಮಗೆ ನೀವೇ ಮೋಸ, ನಷ್ಟವನ್ನುಂಟು ಮಾಡಿಕೊಳ್ಳುವಿರಿ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆ ಮಾಡುವುದರಿಂದ ಸಮಸ್ಯೆಗಳು ನಿಮ್ಮ ಮುಂದೆ ಬೆಟ್ಟದ ಹಾಗೆ ಹಾಗೆಯೇ ಉಳಿದುಬಿಡುತ್ತದೆ. ಜೀವನದಲ್ಲಿ ಉನ್ನತಿ ತಲುಪಬೇಕು ಅಂದರೆ ಆ ಸಮಸ್ಯೆಗಳನ್ನು ಕರಗಿಸಲೇಬೇಕು. ಎಷ್ಟು ಸಾಧ್ಯವೋ ಅಷ್ಟು ಪ್ರಶ್ನೆಗಳನ್ನು ಕೇಳಿ, ಅದಕ್ಕೆ ತಕ್ಕ ಉತ್ತರ ಪಡೆಯಿರಿ. ಇದರಿಂದ ನಿಮ್ಮ ಜಿಜ್ಞಾಸೆಯ ಹೊರೆಯನ್ನು ಹಗುರವಾಗಿಸಿಕೊಳ್ಳಿ. ಅದರಿಂದ ಜೀವನಮಟ್ಟವನ್ನೂ ಸುಧಾರಿಸಿಕೊಳ್ಳಿ.