Chanakya Niti: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ; ನಿಮಗೂ ಈ ಕಹಿ ಅನುಭವ ಆಗಿದ್ದರೆ ಅದಕ್ಕೆ ಕಾರಣ ತಿಳಿಯಿರಿ

Chanakya Niti: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ; ನಿಮಗೂ ಈ ಕಹಿ ಅನುಭವ ಆಗಿದ್ದರೆ ಅದಕ್ಕೆ ಕಾರಣ ತಿಳಿಯಿರಿ
ಚಾಣಕ್ಯ

ಕೌಟಿಲ್ಯ ಹಾಗೂ ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧರಾದ ಚಾಣಕ್ಯ ಹೇಳಿರುವ ಸೂಕ್ಷ್ಮ ವಿಚಾರಗಳು ನಮ್ಮ ಬದುಕಿಗೆ ಸೂಕ್ತ ದಿಕ್ಕನ್ನೂ ಗೊತ್ತು ಮಾಡಿಕೊಡಬಲ್ಲವು. ಇಂದು ಜೀವನದ ತಪ್ಪು ಒಪ್ಪುಗಳ ಬಗ್ಗೆ ಕೌಟಿಲ್ಯ ಅವರ ಒಳನೋಟ ಏನಿತ್ತು ಎಂಬುದನ್ನು ತಿಳಿಯೋಣ.

TV9kannada Web Team

| Edited By: Ayesha Banu

Aug 05, 2021 | 6:47 AM

ಚಾಣಕ್ಯ ಎಂಬ ಹೆಸರಿಗೆ ಇಂದಿಗೂ ಮಹತ್ವವಿದೆ. ಅಂದು ಚಂದ್ರಗೌಪ್ತ ಮೌರ್ಯನನ್ನು ತನ್ನ ಬುದ್ಧಿಶಕ್ತಿ, ತಂತ್ರಗಾರಿಕೆ, ರಾಜಕಾರಣದಿಂದ ಸಾಮ್ರಾಟನನ್ನಾಗಿಸಿದ ಚಾಣಕ್ಯ ಪ್ರಸ್ತುತ ಕಾಲಕ್ಕೂ ಅನ್ವಯಿಸಬಲ್ಲ ಅದೆಷ್ಟೋ ವಿಚಾರಗಳನ್ನು ತಿಳಿಸಿದ್ದಾರೆ. ರಾಜತಾಂತ್ರಿಕತೆ, ಆರ್ಥಿಕತೆ, ನೈತಿಕತೆ ವಿಚಾರಗಳಿಂದ ಹಿಡಿದು ಬದುಕಿನ ಹಲವು ತತ್ವಗಳಿಗೆ ಪೂರಕವೆನಿಸುವ ಅವರ ವಿಚಾರಧಾರೆಗಳು ಇಂದಿಗೂ ಅನ್ವಯವಾಗುತ್ತವೆ. ಹೀಗಾಗಿಯೇ ಭಾರತೀಯ ಪರಂಪರೆಯಲ್ಲಿ ಆಚಾರ್ಯ ಚಾಣಕ್ಯರಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಕೌಟಿಲ್ಯ ಹಾಗೂ ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧರಾದ ಚಾಣಕ್ಯ ಹೇಳಿರುವ ಸೂಕ್ಷ್ಮ ವಿಚಾರಗಳು ನಮ್ಮ ಬದುಕಿಗೆ ಸೂಕ್ತ ದಿಕ್ಕನ್ನೂ ಗೊತ್ತು ಮಾಡಿಕೊಡಬಲ್ಲವು. ಇಂದು ಜೀವನದ ತಪ್ಪು ಒಪ್ಪುಗಳ ಬಗ್ಗೆ ಕೌಟಿಲ್ಯ ಅವರ ಒಳನೋಟ ಏನಿತ್ತು ಎಂಬುದನ್ನು ತಿಳಿಯೋಣ.

1. ಒಂದು ದೇಶದ ಜನರೆಲ್ಲರೂ ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದರೆ ಅದರ ಸಂಪೂರ್ಣ ಹೊಣೆಗಾರಿಕೆ ಆ ರಾಷ್ಟ್ರದ ಚುಕ್ಕಾಣಿ ಹಿಡಿದ ನಾಯಕನದ್ದಾಗಿರುತ್ತದೆ ಎನ್ನುವುದು ಚಾಣಕ್ಯರ ಅಭಿಪ್ರಾಯ. ಏಕೆಂದರೆ, ಸಿಂಹಾಸನದಲ್ಲಿ ಕುಳಿತು ಅಧಿಕಾರ ನಡೆಸುವವನು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ಮಾತ್ರ ಸಮಾಜ ದಿಕ್ಕು ತಪ್ಪುವುದು ಸಾಧ್ಯ. ಒಂದು ವೇಳೆ ಆತ ತನ್ನ ಜನರ ಮೇಲೆ ಸದಾ ಗಮನ ಹರಿಸುತ್ತಿದ್ದರೆ, ತಪ್ಪು ಕಂಡ ಕೂಡಲೇ ಎಚ್ಚರಿಸಿ ಸರಿದಾರಿಗೆ ತರುತ್ತಿದ್ದರೆ ಜನರು ನ್ಯಾಯ, ನೀತಿ ಧರ್ಮಗಳ ಪರಿಪಾಲಕರಾಗಿರುತ್ತಾರೆ. ಅದನ್ನು ಬಿಟ್ಟು ತನ್ನದೇ ಲೋಕದಲ್ಲಿ ಮೈಮರೆತು ಹೋದರೆ ಸಮಸ್ಯೆ ಬಿಕ್ಕಟ್ಟಾಗಿ ಜನರು ರಾಜನ ಮಾತನ್ನೂ ಕೇಳದಷ್ಟು ಒರಟಾಗಿ ಬಿಡುತ್ತಾರೆ. ಹೀಗಾಗಿ ರಾಜನಾದವನು ಸದಾ ಎಚ್ಚರದಿಂದಿರಬೇಕು. ಇಲ್ಲದೇ ಹೋದರೆ ಆತ ಮಾಡಿದ ತಪ್ಪಿಗೆ ಇಡೀ ದೇಶ ದೊಡ್ಡ ಬೆಲೆ ತೆರಬೇಕಾಗುತ್ತದೆ.

2. ರಾಜನನ್ನು ಸರಿದಾರಿಯಲ್ಲಿಡುವ ಕರ್ತವ್ಯ ರಾಜಪುರೋಹಿತ ಹಾಗೂ ಮಂತ್ರಿಯದ್ದಾಗಿರುತ್ತದೆ. ಅಂದರೆ ಅಧಿಕಾರದಲ್ಲಿರುವವನ ನಿಕಟವರ್ತಿಗಳು ತಮ್ಮ ಪ್ರಭು ಎಡವುವ ಮುನ್ನವೇ ಎಚ್ಚರಿಸುವಷ್ಟು ತೀಕ್ಷ್ಣ ಮತಿಗಳಾಗಿರಬೇಕು. ಅಧಿಕಾರದ ಮದದಲ್ಲಿ ರಾಜಧರ್ಮ ಮರೆಯಾಗುತ್ತಿದೆ ಎಂದು ಮನಸ್ಸಿಗೆ ಯೋಚನೆ ಬಂದರೆ ತಡಮಾಡದೇ ತಕ್ಷಣವೇ ಎಚ್ಚರಿಸುವುದು ಮಂತ್ರಿ ಹಾಗೂ ರಾಜಪುರೋಹಿತರ ಕರ್ತವ್ಯವಾಗಿರುತ್ತದೆ. ಇವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ ತಪ್ಪೆಸಗಿದರೆ ಅದು ರಾಜನನ್ನೂ ತಪ್ಪಿತಸ್ಥನನ್ನಾಗಿಸುವ ಜತೆಗೆ, ಜನರನ್ನೂ ಸಮಸ್ಯೆಗೆ ಈಡುಮಾಡುತ್ತದೆ.

3. ದಂಪತಿ ಎಂದರೆ ಒಂದು ಜೀವ ಎರಡು ದೇಹ ಎನ್ನಲಾಗುತ್ತದೆ. ಹೀಗಾಗಿ ಪತಿ ತಪ್ಪು ಮಾಡಿದರೆ ಪತ್ನಿ ಹಾಗೂ ಪತ್ನಿ ತಪ್ಪೆಸಗಿದಾಗ ಪತಿ ಅದಕ್ಕೆ ಬೆಲೆ ತೆರುವಂತಾಗುತ್ತದೆ. ಇದು ಆಗಬಾರದೆಂದರೆ ದಾಂಪತ್ಯದಲ್ಲಿ ಪತಿ ಹಾಗೂ ಪತ್ನಿ ಇಬ್ಬರೂ ಪರಸ್ಪರ ಸಾಂಗತ್ಯವನ್ನು ಅನುಭವಿಸುವುದರ ಜತೆಗೆ ಒಬ್ಬರನ್ನೊಬ್ಬರು ಎಚ್ಚರಿಸುತ್ತಾ ಸರಿ ದಾರಿಯಲ್ಲಿ ಸಾಗಬೇಕು. ಇಬ್ಬರಲ್ಲಿ ಒಬ್ಬರು ಮೈಮರೆತರೂ ಇಡೀ ಸಂಸಾರ ಕಷ್ಟವನ್ನು ಅನುಭವಿಸುವಂತಾಗಿ ಬದುಕು ದುಸ್ತರಗೊಳ್ಳುತ್ತದೆ.

4. ಭಾರತೀಯ ಸಂಸ್ಕೃತಿಯಲ್ಲಿ ಇಂದಿಗೂ ಗುರುವಿಗೆ ಪೂಜನೀಯ ಸ್ಥಾನಮಾನವಿದೆ. ಗುರುವೆಂದರೆ ನಮ್ಮನ್ನು ಅಂಧಕಾರದಿಂದ ಬೆಳಕಿಗೆ ತರುವವರು ಎನ್ನಲಾಗುತ್ತದೆ. ಆದರೆ, ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಗುರುವೇ ನಿರ್ಲಕ್ಷ್ಯ ಧೋರಣೆ ತೋರಿದರೆ ಅದು ಶಿಷ್ಯಂದಿರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಮುಂದೇ ಅದೇ ಶಿಷ್ಯರು ತಪ್ಪೆಸಗಿದಾಗ ಗುರುವೇ ಮಾತುಗಳನ್ನು ಕೇಳಬೇಕಾಗುತ್ತದೆ. ಹೀಗಾಗಿ ಗುರುವಿನ ಸ್ಥಾನದಲ್ಲಿರುವವರು ಬಹಳ ಎಚ್ಚರಿಕೆಯಿಂದರಬೇಕು. ಇಲ್ಲದೇ ಹೋದರೆ ಒಬ್ಬ ಗುರು ಮಾಡುವ ತಪ್ಪು ಇಡೀ ಶಿಷ್ಯ ವೃಂದವನ್ನು ಕತ್ತಲಿಗೆ ತಳ್ಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Garuda Purana: ಹುಟ್ಟಿಗೂ ಮೊದಲು ನಾವು, ನೀವು ಅನುಭವಿಸಿದ ಕಷ್ಟ ಎಂಥದ್ದು? ಗರುಡ ಪುರಾಣ ಹೇಳುವುದೇನು? 

Chanakya Niti: ಈ ರೀತಿಯ ನಡವಳಿಕೆಯ ಜನರ ಬಡತನಕ್ಕೆ ಅವರೇ ಜವಾಬ್ದಾರರು- ಚಾಣಕ್ಯ ನೀತಿ

(Chanakya Niti you may have to face punishment for wrong deeds of these people if the situation is like this)

Follow us on

Related Stories

Most Read Stories

Click on your DTH Provider to Add TV9 Kannada