Deepavali 2021: ದೀಪಗಳ ಹಬ್ಬ ದೀಪಾವಳಿ ಆಚರಣೆಯ ಮಹತ್ವ, ಶುಭ ಮುಹೂರ್ತ
Diwali 2021: ದೀಪಾವಳಿ ಹಬ್ಬದ ಶುಭ ಮುಹೂರ್ತ, ಇತಿಹಾಸ ಜೊತೆಗೆ ಮಹತ್ವ ತಿಳಿಯಿರಿ. ನೀವು ತಿಳಿದುಕೊಳ್ಳಬೇಕಾದ ಅಂಶಗಳು ಈ ಕೆಳಗಿನಂತಿವೆ.
ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಈ ವರ್ಷದ ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದಂದು ಅಂದರೆ ನವೆಂಬರ್ 4ನೇ ತಾರೀಕಿನಂದು ಗುರುವಾರ ಆಚರಿಸಲಾಗುತ್ತಿದೆ. ಎಲ್ಲೆಲ್ಲೂ ಬೆಳಕನ್ನು ಚೆಲ್ಲುತ್ತಾ ಕತ್ತಲೆಯನ್ನು ಹೊಡೆದೋಡಿಸುವ ದಿನವಿದು, ಅಂದರೆ ಜೀವನದಲ್ಲಿನ ನೋವು, ದುಖಃ ಎಲ್ಲವನ್ನೂ ಮರೆತು ಸಂತೋಷದ ಬದುಕು ಮತ್ತು ಬೆಳಕು ಕಳೆಟ್ಟಲಿ ಎಂಬ ಆಶಯದೊಂದಿಗೆ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಮನೆಮನೆಗಳಲ್ಲಿ ದೀಪದ ಬೆಳಕು, ಸಿಹಿ ತಿಂಡಿ, ಹೊಸ ಬಟ್ಟೆಯು ಹಬ್ಬದ ಮೆರಗು ಹೆಚ್ಚಿಸುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ದೊಡ್ಡ ಹಬ್ಬ ದೀಪಾವಳಿಯ ಇತಿಹಾಸ, ಮಹತ್ವ ಮತ್ತು ಶುಭ ಮುಹೂರ್ತದ ವಿವರ ಇಲ್ಲಿದೆ.
ಈ ದಿನವನ್ನು ದೀಪಗಳ ಸಾಲು ಎಂದು ಗುರುತಿಸಲಾಗುತ್ತದೆ. ಅಂದರೆ ಹಬ್ಬದಲ್ಲಿ ಎಲ್ಲೆಲ್ಲೂ ದೀಪ ಬೆಳಗುತ್ತದೆ. ದೀಪಾವಳಿಯ ಮೂಲ ಹುಡುಕುತ್ತಾ ಹೋದಾಗ ಪ್ರಾಚೀನ ಭಾರತದಲ್ಲಿ ದೀಪಾವಳಿಯ ಗುರುತಿದೆ. ಅದು ಸುಗ್ಗಿಯ ಹಬ್ಬವಾಗಿ ಮೊದಲಿಗೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಆದಾಗ್ಯೂ ಇತಿಹಾಸಕ್ಕೆ ಲಗತ್ತಿಸಲಾದ ದಂತಕಥೆಗಳ ಅನುಗುಣವಾಗಿ ಕೆಲವರು ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿನ ಮದುವೆಯ ಆಚರಣೆಯ ನಂಬಿಕೆಯಿಂದ ಎಲ್ಲೆಲ್ಲೂ ದೀಪ ಬೆಳಗುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಕೆಲವರು ಕಾರ್ತಿಕ ಅಮವಾಸ್ಯೆಯ ದಿನದಂದು ಲಕ್ಷ್ಮಿ ದೇವಿಯ ಜನ್ಮ ದಿನದ ಆಚರಣೆ ಎಂದು ಸಹ ನಂಬಿದ್ದಾರೆ.
ಬಂಗಾಳದಲ್ಲಿ, ಈ ಹಬ್ಬವು ಶಕ್ತಿಶಾಲಿ ದೇವತೆಯಾದ ಕಾಳಿ ದೇವಿಯ ಆರಾಧನೆಯ ದಿನ. ಕೆಲವರ ಮನೆಯಲ್ಲಿ ಮಂಗಳಕರ ಗಣೇಶನ ಪೂಜೆಯನ್ನು ಸಹ ಕೈಗೊಳ್ಳುತ್ತಾರೆ. ಈ ರೀತಿಯಲ್ಲಿ ವಿವಿದೆಡೆ ದೀಪಾವಳಿಯನ್ನು ಭಕ್ತಿಯಿಂದ ಸಾಂಪ್ರಾದಾಯಿಕವಾಗಿ ಆಚರಿಸುತ್ತಾರೆ. ಹಿಂದೂಗಳಿಗೆ ದೀಪಾವಳಿ ಹಬ್ಬವು 14 ವರ್ಷಗಳ ವನವಾಸದ ಬಳಿಕ ರಾಮನು ಅಯೋಧ್ಯೆಗೆ ಹಿಂತಿರುಗಿನ ದಿನ. ರಾಮನನ್ನು ಅಯೋಧ್ಯೆಯ ಜನರು ಸಂತೋಷದಿಂದ ದೀಪ ಬೆಳಗುವ ಮೂಲಕ ರಾಮನನ್ನು ಸ್ವಾಗತಿಸಿದ ದಿನ ಎಂದು ಪುರಾಣಗಳು ತಿಳಿಸುತ್ತವೆ.
ಮಹತ್ವ ದೀಪಾವಳಿಯು ಸಂತೋಷ ಖಷಿಯನ್ನೇ ಹಂಚುವ ದಿನ. ಜೀವನದಲ್ಲಿ ಎಲ್ಲಾ ಕೆಟ್ಟ ಸಂದರ್ಭಗಳು ಇಲ್ಲೇ ಕೊನೆಗೊಂಡು ಖುಷಿಯ ದಿನಗಳಷ್ಟೇ ಇನ್ನು ಮುಂದೆ ನಮ್ಮದಾಗಲಿ ಎಂದು ಭಕ್ತಿಯಿಂದ ದೇವರ ಮೊರೆ ಹೋಗುವ ದಿನವಿದು. ಬೆಳಕಿನೆಡೆಗೆ ಬದುಕು ಎಂಬ ಸಾರವನ್ನು ಸಾರುತ್ತಾ ಹೊಸ ಆರಂಭವನ್ನು ಕಂಡುಕೊಳ್ಳುವ ದಿನವಿದು. ಕುಟುಂಬಸ್ಥರು, ಸ್ನೇಹಿತರು, ಮನೆಯವರು ಎಲ್ಲರೂ ಖುಷಿಯಿಂದ ಸೇರಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮೊಳಗಿನ ಅಂಧಕಾರವನ್ನು ತೊರೆದು ಅಂತರಂಗವನ್ನು ಬೆಳಗಿಸುವ ಸಂದೇಶವನ್ನು ಸಾರುವ ದೀಪಾವಳಿ ಹಬ್ಬ ವಿಶೇಷವಾದುದು.
ದೀಪಾವಳಿ ಪೂಜೆಯ ಶುಭ ಮುಹೂರ್ತ ದೀಪಾವಳಿ ದಿನಾಂಕ: 2021 ನವೆಂಬರ್ 4, ಗುರುವಾರ ಅಮವಾಸ್ಯೆ ತಿಥಿ ಆರಂಭ: 2021 ನವೆಂಬರ್ 4 ಗುರಯವಾರ ಬೆಳಿಗ್ಗೆ 6:30 ಅಮವಾಸ್ಯೆ ತಿಥಿ ಮುಕ್ತಾಯ: 2021 ನವೆಂಬರ್ 5, ಶುಕ್ರವಾರ ಮುಂಜಾನೆ 02:44
ಲಕ್ಷ್ಮೀ ಪೂಜೆಯ ಸಮಯ: ಸಮಜೆ 06:09 ರಿಂದ 08:20 ಅವಧಿ: 1 ಗಂಟೆ 55 ನಿಮಿಷ ಪ್ರದೋಶ ಕಾಲ: ಸಂಜೆ 5:52 ರಿಂದ 8:21 ವೃಷಭ ಕಾಲ: ಸಂಜೆ 6:32 ರಿಂದ 8:34ರವರೆಗೆ
ಇದನ್ನೂ ಓದಿ:
Diwali Festival: ದೀಪಾವಳಿ ಹಬ್ಬಕ್ಕೆ ಜ್ಯುವೆಲ್ಲರಿಗಳಿಂದ ಆಕರ್ಷಕ ಆಫರ್ಗಳು
ದೀಪಾವಳಿ ಹಬ್ಬದಂದು ದೇಗುಲಗಳಲ್ಲಿ ಗೋಪೂಜೆ ಮಾಡುವಂತೆ ಕರ್ನಾಟಕ ಸರ್ಕಾರದ ಆದೇಶ
Published On - 11:24 am, Mon, 1 November 21