Ellora’s Kailasa: 1,200 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು ಒಂದೇ ಬಂಡೆಯಿಂದ ಕೆತ್ತಲಾಗಿದೆ

ಎಲ್ಲೋರಾದ ದೇವಾಲಯಗಳು ಸೊಗಸಾದ ಕರಕುಶಲತೆಗೆ ಉದಾಹರಣೆಗಳಾಗಿದ್ದರೂ, ಇಲ್ಲಿರುವ 16 ರ ಗುಹೆ ವಿಶ್ವದ ಅತಿದೊಡ್ಡ ಏಕಶಿಲಾ ದೇವಾಲಯವಾಗಿದೆ. ಈ ಕೈಲಾಸ ಅಥವಾ ಕೈಲಾಸನಾಥ ದೇವಾಲಯವು ಶಿವನಿಗೆ ಸಮರ್ಪಿತವಾದ ರಥಾಕಾರದ ಸ್ಮಾರಕವನ್ನು ಹೊಂದಿದೆ. ಅಲ್ಲದೆ ಈ ದೇಗುಲವು 164 ಅಡಿ ಆಳ, 109 ಅಡಿ ಅಗಲ ಮತ್ತು 98 ಅಡಿ ಎತ್ತರ ಇರುವ ಒಂದೇ ಬಂಡೆಯಿಂದ ನಿರ್ಮಿಸಲಾಗಿದೆ.

Ellora’s Kailasa: 1,200 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು ಒಂದೇ ಬಂಡೆಯಿಂದ ಕೆತ್ತಲಾಗಿದೆ
ಎಲ್ಲೋರಾದ ಕೈಲಾಸ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 22, 2024 | 12:10 PM

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಎಲ್ಲೋರಾ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಇದು 100 ಕ್ಕೂ ಹೆಚ್ಚು ಗುಹೆಗಳ ನೆಲೆಯಾಗಿದೆ, ಅದರಲ್ಲಿ 34 ಗುಹೆಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಈ ಗುಹೆಯ ಸಂಕೀರ್ಣವನ್ನು ಚರಣಾಂದ್ರಿ ಬೆಟ್ಟಗಳ ಘನ ಬಂಡೆಗಳಿಂದ ಕತ್ತರಿಸಲಾಗಿದೆ. ಅಲ್ಲದೆ ಎಲ್ಲೋರಾ ಸಂಕೀರ್ಣವು 12 ಬೌದ್ಧ, 17 ಹಿಂದೂ ಮತ್ತು 5 ಜೈನ ಗುಹೆಗಳನ್ನು ಒಳಗೊಂಡಿದೆ. 1 ರಿಂದ 12 ರ ಗುಹೆಗಳು ಬೌದ್ಧ ಮಠಗಳು, ಚೈತರು ಮತ್ತು ವಿಹಾರಗಳು, 13 ರಿಂದ 29 ಗುಹೆಗಳು ಹಿಂದೂ ದೇವಾಲಯಗಳಾಗಿವೆ. 30 ರಿಂದ 34ರ ಗುಹೆಗಳು ಜೈನ ದೇವಾಲಯಗಳಾಗಿವೆ. ಮೂರು ವಿಭಿನ್ನ ಧರ್ಮಗಳ ರಚನೆಗಳು ಭಾರತದ ಪ್ರಚಲಿತ ಧಾರ್ಮಿಕ ಸಹಿಷ್ಣುತೆಯ ಅದ್ಭುತ ದೃಶ್ಯ ನಿರೂಪಣೆಯಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲೋರಾದಲ್ಲಿನ ಹಿಂದೂ ಮತ್ತು ಬೌದ್ಧ ಗುಹೆಗಳನ್ನು ರಾಷ್ಟ್ರಕೂಟ ರಾಜವಂಶದ (ಸಾ.ಶ. 753-982) ಅವಧಿಯಲ್ಲಿ ನಿರ್ಮಿಸಲಾಯಿತು ಮತ್ತು 1187 ರಿಂದ 1317 ರವರೆಗೆ ಆಳಿದ ಯಾದವ ರಾಜವಂಶವು ಹೆಚ್ಚಿನ ಜೈನ ಗುಹೆಗಳನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ.

ಕೈಲಾಸನಾಥ ದೇವಾಲಯದ ವಿಶೇಷತೆ!

ಇವೆಲ್ಲವೂ ಸೊಗಸಾದ ಕರಕುಶಲತೆಗೆ ಉದಾಹರಣೆಗಳಾಗಿದ್ದರೂ, ಇಲ್ಲಿರುವ 16ರ ಗುಹೆ ವಿಶ್ವದ ಅತಿದೊಡ್ಡ ಏಕಶಿಲಾ ದೇವಾಲಯವಾಗಿದೆ. ಈ ಕೈಲಾಸ ಅಥವಾ ಕೈಲಾಸನಾಥ ದೇವಾಲಯವು ಶಿವನಿಗೆ ಸಮರ್ಪಿತವಾದ ರಥಾಕಾರದ ಸ್ಮಾರಕವನ್ನು ಹೊಂದಿದೆ. ಈ ದೇಗುಲವು 164 ಅಡಿ ಆಳ, 109 ಅಡಿ ಅಗಲ ಮತ್ತು 98 ಅಡಿ ಎತ್ತರ ಇರುವ ಒಂದೇ ಬಂಡೆಯಿಂದ ನಿರ್ಮಿಸಲಾಗಿದೆ. ಅದರ ಗಾತ್ರದ ಹೊರತಾಗಿ, ಕಲ್ಲಿನಿಂದ ಕೆತ್ತಲಾದ ಗುಹಾ ದೇವಾಲಯವು ಅದರ ವಿವರವಾದ ವಾಸ್ತುಶಿಲ್ಪ, ಹಿಂದೂ ದೇವತೆಗಳ ಶಿಲ್ಪಗಳು ಮತ್ತು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಸಂಕ್ಷಿಪ್ತಗೊಳಿಸುವ ಫಲಕಗಳನ್ನು ಒಳಗೊಂಡಿದೆ. ಅಲ್ಲದೆ ಈ ದೇವಾಲಯವು ಭಾರತೀಯ ವಾಸ್ತುಶಿಲ್ಪದ ಗತವೈಭವವನ್ನು ಸಾರುತ್ತದೆ. ಜೊತೆಗೆ ದ್ರಾವಿಡ ಕಲೆಯ ಉತ್ಕೃಷ್ಟತೆಗೆ ಸಾಕ್ಷಿಯಾಗಿದೆ. ಕೈಲಾಶ್ ಅಥವಾ ಕೈಲಾಸ ದೇವಾಲಯವು ಒಂದು ಅದ್ಭುತವಾದ ವಾಸ್ತುಶಿಲ್ಪವಾಗಿದ್ದು, ಇದನ್ನು ರಾಷ್ಟ್ರಕೂಟ ರಾಜ ಕೃಷ್ಣ I (756-773) ಪ್ರಾರಂಭಿಸಿದನೆಂದು ನಂಬಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಕೈಲಾಸದ ದೇವಾಲಯದ ದಂತಕಥೆ;

ದಂತಕಥೆಯ ಪ್ರಕಾರ, ಇಲ್ಲಿನ ರಾಜನು ತೀವ್ರ ಅನಾರೋಗ್ಯಕ್ಕೆ ಒಳಗಾದಾಗ, ಅವನ ರಾಣಿ ಶಿವನನ್ನು ಪ್ರಾರ್ಥಿಸಿ, ತನ್ನ ಪತಿ ಗುಣಮುಖನಾದರೆ ದೇವಾಲಯವನ್ನು ನಿರ್ಮಿಸುವುದಾಗಿ ಪ್ರತಿಜ್ಞೆ ಮಾಡಿದಳು. ಜೊತೆಗೆ ದೇವಾಲಯದ ಮೇಲ್ಭಾಗ ಅಥವಾ ಶಿಖರವನ್ನು ನಿರ್ಮಿಸುವವರೆಗೂ ಉಪವಾಸವನ್ನು ಆಚರಿಸುವುದಾಗಿ ಅವಳು ಹರಕೆ ಹೊತ್ತಳು. ಬಳಿಕ ರಾಜನು ಗುಣಮುಖನಾದ ನಂತರ, ರಾಣಿಯು ದೇವಾಲಯದ ಮೇಲ್ಭಾಗವನ್ನು ಆದಷ್ಟು ಬೇಗ ನಿರ್ಮಿಸಲು ಬಯಸಿದಳು. ಆದರೆ ಎಲ್ಲಾ ವಾಸ್ತುಶಿಲ್ಪಿಗಳು ದೇವಾಲಯವನ್ನು ನಿರ್ಮಿಸಲು ತಿಂಗಳುಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಆದರೆ ಕೊಕಾಸಾ ಎಂಬ ವಾಸ್ತುಶಿಲ್ಪಿ ಈ ದೇವಾಲಯವನ್ನು ಒಂದು ವಾರದೊಳಗೆ ನಿರ್ಮಿಸುವ ಭರವಸೆ ನೀಡಿದನು. ದೇವಾಲಯ ನಿರ್ಮಾಣ ಮಾಡಲು ಬಂಡೆಯನ್ನು ಮೇಲಿನಿಂದ ಕೆತ್ತುವ ಮೂಲಕ ಅವನು ಕೆಲಸ ಪ್ರಾರಂಭಿಸಿದನು ಮತ್ತು ಏಳು ದಿನಗಳಲ್ಲಿ ಶಿಖರವನ್ನು ಪೂರ್ಣಗೊಳಿಸಿದನು, ರಾಣಿಗೆ ತನ್ನ ಉಪವಾಸವನ್ನು ಕೊನೆಗೊಳಿಸಲು ಅನುವು ಮಾಡಿಕೊಟ್ಟನು.

11 ಮತ್ತು 13ನೇ ಶತಮಾನಗಳ ನಡುವಿನ ಅನೇಕ ಶಾಸನಗಳು ಕೊಕಾಸಾದ ಪ್ರಸಿದ್ಧ ಕುಟುಂಬದಲ್ಲಿ ಜನಿಸಿದ ವಾಸ್ತುಶಿಲ್ಪಿಗಳನ್ನು ಉಲ್ಲೇಖಿಸುತ್ತವೆ. ಇನ್ನು ಶಿವನ ಹಿಮಾಲಯದ ವಾಸಸ್ಥಾನವಾದ ಕೈಲಾಸ ಪರ್ವತವನ್ನು ಪ್ರತಿನಿಧಿಸಲು ಇದನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಜೊತೆ ಈ ಕೈಲಾಸ ದೇವಾಲಯವು ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ ಮತ್ತು ಕಂಚಿಯ ಕೈಲಾಸ ದೇವಾಲಯವನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ. ಚಾಲುಕ್ಯ ಮತ್ತು ಪಲ್ಲವ ಕುಶಲಕರ್ಮಿಗಳು ಇದರ ನಿರ್ಮಾಣದಲ್ಲಿ ಭಾಗಿಯಾಗಿದ್ದರಿಂದ ದೇವಾಲಯದ ವಾಸ್ತುಶಿಲ್ಪವು ದಕ್ಷಿಣದ ಪ್ರಭಾವವನ್ನು ಹೊಂದಿದೆ. ಈ ದೇವಾಲಯವು ಕೆಳಮಟ್ಟದ ಗೋಪುರವನ್ನು (ಪ್ರವೇಶ ಗೋಪುರ) ಹೊಂದಿದೆ. ಗೋಪುರದ ಎಡಭಾಗದಲ್ಲಿರುವ ದೇವತೆಗಳು ಶಿವನಿಗೆ (ಶೈವ) ಮತ್ತು ಬಲಭಾಗದಲ್ಲಿ ವಿಷ್ಣುವಿಗೆ (ವೈಷ್ಣವೈತರು) ಸಂಬಂಧಿಸಿದ ದೇವತೆಗಳಾಗಿವೆ.

ಇದನ್ನೂ ಓದಿ: ಫಾಲ್ಗುಣ ಮಾಸದಲ್ಲಿ ಬರುವ ಪ್ರಮುಖ ವ್ರತ, ಹಬ್ಬಗಳ ಬಗ್ಗೆ ತಿಳಿದುಕೊಳ್ಳಿ

ಅಂಗಳದೊಳಗೆ ಶಿವನಿಗೆ ಅರ್ಪಿತವಾದ ಕೇಂದ್ರ ದೇವಾಲಯ ಮತ್ತು ನಂದಿಯ (ದಿ ಸೆಕ್ರೇಡ್‌ ಬುಲ್) ಚಿತ್ರವಿದೆ. ಈ ದೇವಾಲಯದಲ್ಲಿ ರಾಮಾಯಣ ಮತ್ತು ಮಹಾಭಾರತದ ಘಟನೆಗಳನ್ನು ಚಿತ್ರಿಸುವ ಅನೇಕ ಶಿಲ್ಪಕಲೆಗಳಿವೆ. ದೇವಾಲಯದ ಆವರಣದಲ್ಲಿ ಗಣೇಶ, ರುದ್ರ, ಗಂಗಾ, ಯಮುನಾ ಮತ್ತು ಸರಸ್ವತಿ ದೇವರ ಬೇರ್ಪಟ್ಟ ದೇವಾಲಯಗಳಿವೆ, ಜೊತೆಗೆ ಅಂಗಳದಲ್ಲಿ ಎರಡು ಧ್ವಜಸ್ಥಂಭಗಳಿವೆ. ಈ ದೇವಾಲಯನ್ನು 250,000 ಟನ್ ಬಂಡೆಯಿಂದ ಕೆತ್ತಲಾಗಿದ್ದು, ಪೂರ್ಣಗೊಳ್ಳಲು 100 ವರ್ಷಗಳನ್ನು ತೆಗೆದುಕೊಂಡಿತು ಎಂದೂ ಕೂಡ ಹೇಳಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?