Festivals in February 2024: ಫೆಬ್ರವರಿಯಲ್ಲಿ ಯಾವ ಯಾವ ಹಬ್ಬಗಳ ಆಚರಣೆ ಮಾಡಲಾಗುತ್ತೆ, ಇಲ್ಲಿದೆ ಮಾಹಿತಿ

ಈ ತಿಂಗಳು ಕಾಲಾಷ್ಟಮಿಯ ಉಪವಾಸ, ಷಟ್ತಿಲಾ ಏಕಾದಶಿ ಮತ್ತು ಪ್ರದೋಷ ವ್ರತದೊಂದಿಗೆ ಪ್ರಾರಂಭವಾಗುತ್ತದೆ. ಬಳಿಕ ಎರಡನೇ ವಾರದಲ್ಲಿ ಅಮಾವಾಸ್ಯೆ, ಗಣೇಶ ಜಯಂತಿ ಮತ್ತು ವಸಂತ ಪಂಚಮಿಯಂತಹ ದಿನಗಳಿವೆ. ಇನ್ನು ಮೂರನೇ ವಾರದಲ್ಲಿ, ರಥ ಸಪ್ತಮಿ, ಭೀಷ್ಮ ಅಷ್ಟಮಿ ಹಬ್ಬವಿದ್ದು ನಂತರದ ದಿನಗಳಲ್ಲಿ ಮಾಘ ಹುಣ್ಣಿಮೆ, ಜಯ ಏಕಾದಶಿ ಮತ್ತು ಸಂಕಷ್ಟ ಚತುರ್ಥಿ ಉಪವಾಸದೊಂದಿಗೆ ಈ ಮಾಸ ಮುಕ್ತಾಯವಾಗುತ್ತದೆ. ಈ ತಿಂಗಳು ವಿದ್ಯಾರ್ಥಿಗಳು ಮತ್ತು ಕಲಾವಿದರಿಗೆ ಒಳ್ಳೆಯದು ಎನ್ನಲಾಗುತ್ತದೆ. ಈ ತಿಂಗಳಿನಲ್ಲಿ ಆಚರಣೆ ಮಾಡುವ ಹಬ್ಬ ಮತ್ತು ವ್ರತಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Festivals in February 2024: ಫೆಬ್ರವರಿಯಲ್ಲಿ ಯಾವ ಯಾವ ಹಬ್ಬಗಳ ಆಚರಣೆ ಮಾಡಲಾಗುತ್ತೆ, ಇಲ್ಲಿದೆ ಮಾಹಿತಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 30, 2024 | 7:01 PM

ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಫೆಬ್ರವರಿ ತಿಂಗಳು ಹಲವಾರು ಹಬ್ಬ ವ್ರತಾಚರಣೆಗಳನ್ನು ಹೊಂದಿದೆ. ಚಳಿಗಾಲಕ್ಕೆ ವಿದಾಯ ಹೇಳಿ ಬೇಸಿಗೆಯ ಋತುವನ್ನು ಸ್ವಾಗತಿಸುವ ತಿಂಗಳು ಇದಾಗಿದ್ದು, ಮಾಘ ತಿಂಗಳು ಎಂದೇ ಜನಪ್ರಿಯವಾಗಿದೆ. ಈ ಮಾಸ ಕೇವಲ 28 ಅಥವಾ 29 ದಿನಗಳನ್ನು ಹೊಂದಿರುವುದರಿಂದ ಎಲ್ಲರಿಗೂ ತುಂಬಾ ವಿಶೇಷ. ಚಳಿಗಾಲದಲ್ಲಿ ಪ್ರಯಾಣಿಸಲು ಇಷ್ಟಪಡದವರಿಗೆ ಫೆಬ್ರವರಿ ಸೂಕ್ತ ತಿಂಗಳಾಗಿದೆ.

ಈ ತಿಂಗಳು ಕಾಲಾಷ್ಟಮಿಯ ಉಪವಾಸ, ಷಟ್ತಿಲಾ ಏಕಾದಶಿ ಮತ್ತು ಪ್ರದೋಷ ವ್ರತದೊಂದಿಗೆ ಪ್ರಾರಂಭವಾಗುತ್ತದೆ. ಬಳಿಕ ಎರಡನೇ ವಾರದಲ್ಲಿ ಅಮಾವಾಸ್ಯೆ, ಗಣೇಶ ಜಯಂತಿ ಮತ್ತು ವಸಂತ ಪಂಚಮಿಯಂತಹ ದಿನಗಳಿವೆ. ಇನ್ನು ಮೂರನೇ ವಾರದಲ್ಲಿ, ರಥ ಸಪ್ತಮಿ, ಭೀಷ್ಮ ಅಷ್ಟಮಿ ಹಬ್ಬವಿದ್ದು ನಂತರದ ದಿನಗಳಲ್ಲಿ ಮಾಘ ಹುಣ್ಣಿಮೆ, ಜಯ ಏಕಾದಶಿ ಮತ್ತು ಸಂಕಷ್ಟ ಚತುರ್ಥಿ ಉಪವಾಸದೊಂದಿಗೆ ಈ ಮಾಸ ಮುಕ್ತಾಯವಾಗುತ್ತದೆ. ಈ ತಿಂಗಳು ವಿದ್ಯಾರ್ಥಿಗಳು ಮತ್ತು ಕಲಾವಿದರಿಗೆ ಒಳ್ಳೆಯದು ಎನ್ನಲಾಗುತ್ತದೆ. ಈ ತಿಂಗಳಿನಲ್ಲಿ ಆಚರಣೆ ಮಾಡುವ ಹಬ್ಬ ಮತ್ತು ವ್ರತಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಫೆಬ್ರವರಿ ತಿಂಗಳಲ್ಲಿ ಆಚರಣೆ ಮಾಡುವ ಹಬ್ಬಗಳ ಪಟ್ಟಿ:

ಫೆಬ್ರವರಿ 2 (ಶುಕ್ರವಾರ) -ಕಲಾಷ್ಟಮಿ

ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿಯಂದು ಕಲಾಷ್ಟಮಿ ಉಪವಾಸವನ್ನು ಆಚರಣೆ ಮಾಡಲಾಗುತ್ತದೆ. ಶಿವಪುರಾಣದ ಪ್ರಕಾರ ಕಲಾಭೈರವ ಶಿವನ ಭಾಗದಿಂದ ಹುಟ್ಟಿಕೊಂಡವನು, ಹಾಗಾಗಿ ಈ ದಿನವನ್ನು ಕಾಲಭೈರವಾಷ್ಟಮಿ ಅಥವಾ ಭೈರವಾಷ್ಟಮಿ ಎಂದೂ ಕೂಡ ಕರೆಯಲಾಗುತ್ತದೆ. ಈ ದಿನ, ವ್ರತಾಚರಣೆಯನ್ನು ಕೈಗೊಳ್ಳುವುದರಿಂದ ದೇವ ಶಿವನು, ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ, ಶುಭ ಫಲವನ್ನು ನೀಡುತ್ತಾನೆ ಎನ್ನುವ ನಂಬಿಕೆಯಿದೆ. ಈ ತಿಂಗಳ ಕಲಾಷ್ಟಮಿಯನ್ನು ಫೆಬ್ರವರಿ 2 ರಂದು (ಶುಕ್ರವಾರ) ಆಚರಣೆ ಮಾಡಲಾಗುತ್ತದೆ.

ಫೆಬ್ರವರಿ 6 (ಮಂಗಳವಾರ) – ಷಟ್ತಿಲಾ ಏಕಾದಶಿ

ಪುಷ್ಯ ಮಾಸದ, ಕೃಷ್ಣ ಪಕ್ಷದ ಏಕಾದಶಿಯನ್ನು ಷಟ್ತಿಲಾ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ವಿಷ್ಣುವನ್ನು ಪೂಜಿಸುವುದರ ಜೊತೆಗೆ ಎಳ್ಳನ್ನು ದಾನ ಮಾಡುವುದು ಕೂಡ ಶುಭ ಫಲಗಳನ್ನು ನೀಡುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಷಟ್ತಿಲಾ ಏಕಾದಶಿಯಂದು ಉಪವಾಸವಿದ್ದು ಪೂಜೆ ಮಾಡಲಾಗುತ್ತದೆ. ಜೊತೆಗೆ ಸ್ನಾನ, ನೈವೇದ್ಯದಿಂದ ತರ್ಪಣದ ವರೆಗೆ ಎಲ್ಲಾ ವಸ್ತುಗಳಲ್ಲೂ ಎಳ್ಳನ್ನು ಬಳಸುವುದರಿಂದಾಗಿ ಈ ದಿನವನ್ನು ಷಟ್ತಿಲಾ ಏಕಾದಶಿ ಎಂದು ಕರೆಯಲಾಗುತ್ತದೆ.

ಫೆಬ್ರವರಿ 7 (ಬುಧವಾರ) – ಪ್ರದೋಷ ವ್ರತ

ಪ್ರದೋಷ ವ್ರತವನ್ನು ತ್ರಯೋದಶಿ ವ್ರತ ಎಂದೂ ಕರೆಯುತ್ತಾರೆ. ಈ ವ್ರತವು ಭಗವಾನ್‌ ಶಿವ ಮತ್ತು ಆತನ ಪತ್ನಿ ಪಾರ್ವತಿಗೆ ಸಂಬಂಧಿಸಿದ ವ್ರತವಾಗಿದೆ. ಪ್ರದೋಷ ವ್ರತವನ್ನು ಸಾಮಾನ್ಯವಾಗಿ ಒಂದು ತಿಂಗಳಲ್ಲಿ 2 ಬಾರಿ ಆಚರಿಸಲಾಗುತ್ತದೆ. ಫೆಬ್ರವರಿ ತಿಂಗಳ ಮೊದಲ ಪ್ರದೋಷ ವ್ರತವನ್ನು ಫೆ. 7 ರಂದು ಮತ್ತು ಫೆ. 21 ರಂದು ಬುಧವಾರ ಆಚರಣೆ ಮಾಡಲಾಗುತ್ತದೆ. ಇನ್ನು ಬುಧವಾರ ಪ್ರದೋಷ ವ್ರತ ಬರುವುದರಿಂದ ಮತ್ತು ಅದನ್ನು ಆಚರಣೆ ಮಾಡುವುದರಿಂದ ಎಲ್ಲಾ ರೀತಿಯ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ.

ಫೆಬ್ರವರಿ 8 (ಗುರುವಾರ) -ಮೇರು ತ್ರಯೋದಶಿ

ಮೇರು ತ್ರಯೋದಶಿ ಜೈನ ಧರ್ಮದಲ್ಲಿ ಒಂದು ಮಹತ್ವದ ಹಬ್ಬವಾಗಿದೆ. ಇದನ್ನು ಆಚರಿಸುವ ಹಿಂದಿನ ಉದ್ದೇಶವೆಂದರೆ ತೀರ್ಥಂಕರ ರಿಷಭ ದೇವ್ ಅವರು ನಿರ್ವಾಣದ ದಿನವಾಗಿದೆ. ಹಾಗಾಗಿ ಈ ಶುಭ ದಿನವನ್ನು ರಿಷಭ್ ದೇವನ ನಿರ್ವಾಣ ಕಲ್ಯಾಣಕ ದಿನ ಎಂದೂ ಕೂಡ ಕರೆಯಲಾಗುತ್ತದೆ. ಈ ಬಾರಿ, ಮೇರು ತ್ರಯೋದಶಿಯನ್ನು ಫೆ. 8 ರಂದು ಗುರುವಾರ ಆಚರಿಸಲಾಗುತ್ತದೆ.

ಫೆಬ್ರವರಿ 9 (ಶುಕ್ರವಾರ) – ಮೌನಿ ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ

ದರ್ಶ ಅಮಾವಾಸ್ಯೆಯನ್ನು ಧಾರ್ಮಿಕವಾಗಿ ಧರ್ಮಗ್ರಂಥಗಳಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಪುಷ್ಯ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಪುಷ್ಯ ಅಮಾವಾಸ್ಯೆ ಅಥವಾ ಮೌನಿ ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಅಮವಾಸ್ಯೆಯಂದು ಮೌನವಾಗಿ ಮಾಡುವ ಜಪ, ತಪಸ್ಸು ಮತ್ತು ದಾನದಿಂದ ಭಗವಾನ್ ವಿಷ್ಣುವು ತುಂಬಾ ಪ್ರಸನ್ನನಾಗುತ್ತಾನೆ ಮತ್ತು ವಿಶೇಷ ಫಲಗಳನ್ನು ನೀಡುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಫೆಬ್ರವರಿಯ ಯಾವ ದಿನಗಳಲ್ಲಿ ಏಕಾದಶಿ ಬರುತ್ತೆ ಗೊತ್ತಾ? ಆಚರಣೆಗಳು ಹೇಗೆ?

ಫೆಬ್ರವರಿ 13 (ಮಂಗಳವಾರ) – ಗಣೇಶ ಜಯಂತಿ ಅಥವಾ ವಿನಾಯಕ ಚತುರ್ಥಿ

ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಸಿಕ ವಿನಾಯಕ ಚತುರ್ಥಿಯ ಹಬ್ಬವನ್ನು ಪ್ರತಿ ತಿಂಗಳು ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನದಂದು ಜನರು ಗಣೇಶನನ್ನು ಮೆಚ್ಚಿಸಲು ಉಪವಾಸ ಮಾಡುತ್ತಾರೆ ಮತ್ತು ರಾತ್ರಿಯಲ್ಲಿ ಉಪವಾಸವನ್ನು ಮುರಿಯುತ್ತಾರೆ. ಆದರೆ ಇತರ ಉಪವಾಸಗಳಂತೆ ಈ ಉಪವಾಸದಲ್ಲಿ ಚಂದ್ರ ದರ್ಶನ ಮಾಡುವುದಿಲ್ಲ. ಗಣೇಶ ಜಯಂತಿಯ ದಿನದಂದು ಚಂದ್ರನ ದರ್ಶನವನ್ನು ನಿಷೇಧಿಸಲಾಗಿದೆ. ಈ ಬಾರಿ ಗಣೇಶ ಜಯಂತಿ ಅಥವಾ ವಿನಾಯಕ ಚತುರ್ಥಿಯನ್ನು ಫೆ. 13 ರಂದು ಮಂಗಳವಾರ ಆಚರಿಸಲಾಗುತ್ತದೆ.

ಫೆಬ್ರವರಿ 14 (ಬುಧವಾರ) – ವಸಂತ ಪಂಚಮಿ

ವಸಂತ ಪಂಚಮಿಯನ್ನು ಬಸಂತ ಪಂಚಮಿ ಎಂದು ಕೂಡ ಕರೆಯಲಾಗುತ್ತದೆ. ಈ ಹಬ್ಬವನ್ನು ಸಾಮಾನ್ಯವಾಗಿ ಫೆಬ್ರವರಿಯ ವಸಂತ ಕಾಲದಲ್ಲಿ ಆಚರಿಸಲಾಗುತ್ತದೆ. ಈ ಶುಭ ದಿನದಂದು ಜ್ಞಾನ, ಸಂಗೀತ ಮತ್ತು ವಿದ್ಯೆಗೆ ದೇವತೆಯಾಗಿರುವ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಜೀವನದಲ್ಲಿ ಹೊಸತನ್ನು ಪ್ರಾರಂಭಿಸಲು ವಸಂತ ಪಂಚಮಿ ಒಂದು ಶುಭ ದಿನವಾಗಿದೆ. ಈ ಬಾರಿಯ ವಸಂತ ಪಂಚಮಿಯನ್ನು ಫೆ. 14 ರಂದು (ಬುಧವಾರ) ಆಚರಣೆ ಮಾಡಲಾಗುತ್ತದೆ.

ಫೆಬ್ರವರಿ 16 (ಶುಕ್ರವಾರ) – ರಥ ಸಪ್ತಮಿ

ರಥ ಸಪ್ತಮಿಯನ್ನು ಹಿಂದೂ ಕ್ಯಾಲೆಂಡರ್‌ ಪ್ರಕಾರ, ಮಾಘ ತಿಂಗಳಲ್ಲಿ (ಜನವರಿ – ಫೆಬ್ರವರಿ) ಶುಕ್ಲ ಪಕ್ಷದ ಏಳನೇ ದಿನ ಅಥವಾ ಹುಣ್ಣಿಮೆಯ ಹಂತದಲ್ಲಿ ಆಚರಿಸಲಾಗುತ್ತದೆ. ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ, ಭಗವಾನ್ ಸೂರ್ಯನು ಏಳು ಕುದುರೆಳ ರಥದ ಮೇಲೆ ಸವಾರಿ ಮಾಡುತ್ತಾನೆ ಎನ್ನುವ ನಂಬಿಕೆಯಿದೆ. ಈ ರೂಪವನ್ನು ರಥ ಸಪ್ತಮಿ ಹಬ್ಬದ ಸಮಯದಲ್ಲಿ ಪೂಜಿಸಲಾಗುತ್ತದೆ. ಈ ಬಾರಿ ರಥ ಸಪ್ತಮಿಯನ್ನು ಫೆ.16ರಂದು ಶುಕ್ರವಾರ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಕರ್ನಾಟಕದ 7 ದೇವಸ್ಥಾನಗಳಲ್ಲಿ ಜಾತ್ರೆಯೂ ನಡೆಯುತ್ತದೆ.

ಫೆಬ್ರವರಿ 20 (ಮಂಗಳವಾರ) – ಜಯ ಏಕಾದಶಿ

ಪಂಚಾಂಗದ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯನ್ನು ಅಥವಾ ದಿನವನ್ನು ಜಯ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಜನರು ಉಪವಾಸವನ್ನು ಆಚರಿಸುತ್ತಾರೆ ಮತ್ತು ವಿಷ್ಣುವನ್ನು ಪೂಜಿಸುತ್ತಾರೆ. ಈ ಬಾರಿಯ ಜಯ ಏಕಾದಶಿಯ ವ್ರತವನ್ನು ಫೆ. 20 ರಂದು ಮಂಗಳವಾರ ಆಚರಣೆ ಮಾಡಲಾಗುತ್ತದೆ.

ಫೆಬ್ರವರಿ 24 (ಶನಿವಾರ) – ಮಾಘ ಪೂರ್ಣಿಮಾ ಅಥವಾ ಮಾಘ ಹುಣ್ಣಿಮೆ

ಹಿಂದೂ ಧರ್ಮದಲ್ಲಿ ಮಾಘ ಹುಣ್ಣಿಮೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಮಾಘ ಪೂರ್ಣಿಮಾವನ್ನು ಮಾಘಿ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ. ಈ ಬಾರಿ ಮಾಘ ಹುಣ್ಣಿಮೆಯನ್ನು ಫೆ. 24ರ ಶನಿವಾರ ಆಚರಣೆ ಮಾಡಲಾಗುತ್ತದೆ. ಈ ಹುಣ್ಣಿಮೆಯ ದಿನದಂದು ದೇವತೆಗಳು ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ. ಹಾಗಾಗಿ ಈ ದಿನ ದಾನ- ಧರ್ಮ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಫೆಬ್ರವರಿ 28 (ಬುಧವಾರ) – ದ್ವಿಜಪ್ರಿಯ ಸಂಕಷ್ಟ ಚತುರ್ಥಿ

ಮಾಘ ಮಾಸದ ಕೃಷ್ಣ ಪಕ್ಷದ ಸಂಕಷ್ಟ ಚತುರ್ಥಿಯನ್ನು ದ್ವಿಜಪ್ರಿಯ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನ ಧಾರ್ಮಿಕ ಪಾರ್ವತಿ ಸುತ ಗಣೇಶನನ್ನು ಭಕ್ತಿ, ಶ್ರದ್ದೆಯಿಂದ ಪೂಜಿಸಲಾಗುತ್ತದೆ. ಗಣೇಶ ಪುರಾಣದ ಪ್ರಕಾರ, ಈ ಉಪವಾಸದ ಪರಿಣಾಮವು ಅದೃಷ್ಟ, ಸಮೃದ್ಧಿ ಮತ್ತು ಸಂತಾನದ ಸಂತೋಷವನ್ನು ತರುತ್ತದೆ. ಈ ಬಾರಿಯ ದ್ವಿಜಪ್ರಿಯ ಸಂಕಷ್ಟ ಚತುರ್ಥಿಯನ್ನು ಫೆ. 28 ರಂದು ಬುಧವಾರ ಆಚರಣೆ ಮಾಡಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:53 pm, Tue, 30 January 24

ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ