ಕಾಲಭೈರವನು ಭಯಂಕರನೂ, ಅಭಯಂಕರನೂ, ಶಂಕರನೂ, ಶಿವನ ಈ ರೂಪವನ್ನು ಯಾಕೆ ಪೂಜಿಸಬೇಕು?

ಶಿವನ ರೂಪಗಳಲ್ಲಿ ಭೀಕರರೂಪವೂ ಇದೆ. ಸೃಷ್ಟಿಯ ಸಂಹಾರದ ಕಾಲದಲ್ಲಿ ಅಥವಾ ದುಷ್ಟರ ಸಂಹಾರದ ಸಂದರ್ಭದಲ್ಲಿ ಒಂದೊಂದು ಅವತಾರವನ್ನು ಹೊಂದಿ ಶಿಷ್ಟರ ರಕ್ಷಣೆಯನ್ನೂ ದುಷ್ಟರ ಸಂಹಾರವನ್ನೂ ಮಾಡಿದ್ದಾನೆ.‌

ಕಾಲಭೈರವನು ಭಯಂಕರನೂ, ಅಭಯಂಕರನೂ, ಶಂಕರನೂ, ಶಿವನ ಈ ರೂಪವನ್ನು ಯಾಕೆ ಪೂಜಿಸಬೇಕು?
Follow us
ಅಕ್ಷಯ್​ ಪಲ್ಲಮಜಲು​​
|

Updated on: May 11, 2023 | 12:04 PM

ಶಿವ ಸೃಷ್ಟಿಯ ಅಂತಕ. ಆದರೆ ಆತನ ರೂಪಗಳೂ ಅನಂತ. ಭಕ್ತರ ಅನುಗ್ರಹಕ್ಕೆ ಯಾವ ರೂಪದಲ್ಲಿಯೂ ಆತ ಕಾಣಿಸಿಕೊಳ್ಳಬಹುದು. ಇತಿಹಾಸ, ಪುರಾಣ ಪ್ರಸಿದ್ಧ ಕತೆಗಳು ಶಿವನ ಅವತಾರವನ್ನೂ ಭಕ್ತಾನುಗ್ರಹವನ್ನೂ ತಿಳಿಸುತ್ತವೆ. ರಾವಣನಿಗೆ ಆತ್ಮಲಿಂಗವನ್ನೇ ಕೊಟ್ಟವನಲ್ಲವೇ? ಇನ್ನೇನು ಕೊಡದಿರವನು? ಶಿವನೆಂದರೆ ಮಂಗಲವೆಂದರ್ಥ. ಆತನನ್ನು ಮಂಗಲಮೂರ್ತಿ ಎಂದೂ ಹೇಳುತ್ತಾರೆ. ಆತನಲ್ಲಿ ಮನುಷ್ಯರಿಗೆ ಅಮಂಗಲಕರವಾದ ವಸ್ತುಗಳನ್ನು ಇಟ್ಟುಕೊಂಡಿದ್ದರೂ ಆತ ಮಂಗಲನೇ. ಅತ್ಯಂತ ಶುಭವನ್ನು ನೀಡುವಾತ. ಹಾಗೆಯೇ ಭಯವನ್ನು ನಾಶಮಾಡುವವನು. ದುಷ್ಟರ ಪಾಲಿಗೆ ಭಯಂಕರನೂ ಶಿಷ್ಟರ ಪಾಲಿಗೆ ಅಭಯಂಕರನೂ ಆರಾಧಿಸುವವರ ಪಾಲಿಗೆ ಶಂಕರನೂ ಆಗಿರುವನು.

ಶಿವನ ರೂಪಗಳಲ್ಲಿ ಭೀಕರರೂಪವೂ ಇದೆ. ಸೃಷ್ಟಿಯ ಸಂಹಾರದ ಕಾಲದಲ್ಲಿ ಅಥವಾ ದುಷ್ಟರ ಸಂಹಾರದ ಸಂದರ್ಭದಲ್ಲಿ ಒಂದೊಂದು ಅವತಾರವನ್ನು ಹೊಂದಿ ಶಿಷ್ಟರ ರಕ್ಷಣೆಯನ್ನೂ ದುಷ್ಟರ ಸಂಹಾರವನ್ನೂ ಮಾಡಿದ್ದಾನೆ.‌ ಅಂತಹ ರೂಪಗಳಲ್ಲಿ ಕಾಲಭೈರವ ರೂಪವೂ ಒಂದು.

ಕಾಲಾಷ್ಟಮಿಯ ಮಹತ್ತ್ವ

ಒಮ್ಮೆ ಬ್ರಹ್ಮ, ವಿಷ್ಣು, ಮಹೇಶ್ವರರ ನಡುವೆ ಸಂಭಾಷಣೆ ನಡೆಯವುವಾಗ ಬ್ರಹ್ಮನು ಶಿವನಿಗೆ ಕೋಪ ಬರುವಂತೆ ಮಾಡಿದನು. ಇದರಿಂದ ಶಿವನು ಉಗ್ರರೂಪವನ್ನು ಧರಿಸಿ, ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದನು. ಅಂದಿನಿಂದ ಶಿವನ ಈ ರೂಪವನ್ನು ಕಾಲಭೈರವ ಎಂದು ಪೂಜ್ಯವಾಯಿತು.

ಕಾಲಭೈರವನ ರೂಪ

ಸರ್ಪವನ್ನು ಉಪವೀತವನ್ನಾಗಿ ಮಾಡಿಕೊಂಡಿದ್ದಾನೆ, ಕಪ್ಪಗಿದ್ದಾನೆ, ಅಕ್ಷಮಾಲೆಯನ್ನೂ ಶೂಲವನ್ನೂ ಕೈಯಲ್ಲಿ ಧರಿಸಿದ್ದಾನೆ, ಅಷ್ಟೇ ಅಲ್ಲದೇ ಟಂಕ, ಪಾಶ, ದಂಡವನ್ನು ಹಿಡಿದಿದ್ದಾನೆ, ಸೊಂಟಕ್ಕೆ ಪಟ್ಟಿಯನ್ನು ಸುತ್ತಿಕೊಂಡಿದ್ದಾನೆ ಹಾಗೂ ಆತ ದಿಗಂಬರ, ಶ್ವಾನವಾಹನನೂ ಹೌದು.

ತೀಕ್ಷ್ಣದಂಷ್ಟ್ರ ಮಹಾಕಾಯ, ಕಲ್ಪಾಂತದಹನೋಪಮಾ |

ಭೈರವಾಯ ನಮಸ್ತುಭ್ಯಮ್, ಅನುಜ್ಞಾಂ ದಾತುಮರ್ಹಸಿ ||

ಚೂಪಾದ ಹಲ್ಲುಗಳು, ದೊಡ್ಡ ಶರೀರ, ಪ್ರಳಯಕಾಲದ ಅಗ್ನಿಗೆ ಸಮಾನವಾದ ತೇಜಸ್ಸಿನಿಂದ ಕೂಡಿದವನು ಭೈರವ. ಪೂಜೆಯ ಆರಂಭದಲ್ಲಿ ಭೈರವನ ಪ್ರಾರ್ಥನೆ ಇರಲಿದೆ. ಆತನಲ್ಲಿ ನಾವು ಮಾಡುವ ಮುಂದಿನ ಎಲ್ಲ ಕಾರ್ಯಗಳಿಗೂ ಅನುಮತಿಯನ್ನು ಬೇಡಿ ಮುಂದುವರಿಸುವುದಾಗಿದೆ. ಏಕೆಂದರೆ ಮುಂಬರುವ ಯಾವುದೇ ವಿಘ್ನಗಳನ್ನೂ ಆತ ನಾಶಮಾಡುವ ಸಾಮರ್ಥ್ಯ ಉಳ್ಳವನಾಗಿರುತ್ತಾನೆ.‌

ಇದನ್ನೂ ಓದಿ:Spiritual: ಗ್ರಹಣದಿಂದ ಈ ರಾಶಿಯವರಿಗೆ ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು? ಇಲ್ಲಿದೆ ಮಾಹಿತಿ

ಅಷ್ಟಮಿಯೇ ಏಕೆ?

ಅಷ್ಟಮಿಯು ಪಕ್ಷದ ಮಧ್ಯ ದಿನ. ಕೃಷ್ಣಪಕ್ಷವಾಗಲೀ ಶುಕ್ಲಪಕ್ಷವಾಗಲೀ ಅಷ್ಟಮಿಯಂದು ಆಗಸದಲ್ಲಿ ಅರ್ಧಚಂದ್ರನಿರುತ್ತಾನೆ. ಈ ದಿನವು ಶಿವನ ದಿನವೇ ಆಗಿದೆ. ಪಕ್ಷದ ಎರಡು ದಿನ ಶಿವನ ದಿನ. ‌ಅಷ್ಟಮೀ ಹಾಗೂ ಚತುರ್ದಶೀ ತಿಥಿಗಳು. ಆದ್ದರಿಂದಲೇ ಶಿವರಾತ್ರಿಯನ್ನು ಚತುರ್ದಶಿಯಂದು ಶಿವನ ಮಂಗಲಮೂರ್ತಿಯನ್ನು ಆರಾಧಿಸುತ್ತಾರೆ. ಅಷ್ಟಮಿಯಂದು ಶಿವನ ಭಯಂಕರರೂಪವು ಆರಾಧ್ಯವಾಗಿರುತ್ತದೆ. ಹಾಗೆಯೇ ಶಿವನು ಎಂಟುರೂಪವನ್ನು ಹೊಂದಿದವನು. ಶರ್ವ ಎನ್ನುವ ಹೆಸರಿನಿಂದ ಕ್ಷಿತಿಮೂರ್ತಿ, ಭವ ಹೆಸರಿನಿಂದ ಜಲಮೂರ್ತಿ, ರುದ್ರನ ರೂಪದಿಂದ ಅಗ್ನಿಮೂರ್ತಿ, ಉಗ್ರ ಹೆಸರಿನಿಂದ ವಾಯುಮೂರ್ತಿ, ಭೀಮ ಹೆಸರಿನಿಂದ ಆಕಾಶಮೂರ್ತಿ, ಪಶುಪತಿ ಹೆಸರಿನಿಂದ ಯಜಮಾನಮೂರ್ತಿ, ಮಹಾದೇವ ಹೆಸರನಿಂದ ಚಂದ್ರಮೂರ್ತಿ, ಈಶಾನ ಹೆಸರಿನಿಂದ ಸೂರ್ಯಮೂರ್ತಿಯಾಗಿ ಇರುವನು. ಹಾಗಾಗಿ ಶಿವನನ್ನು ಅಷ್ಟಮೂರ್ತಿ ಎಂದೂ ಕರೆಯುತ್ತಾರೆ.

ಪೂಜಾ ವಿಧಾನ

ಕಾಲಭೈರವನ್ನು ಮೂರ್ತಿಯಾಗಿಯೂ ಪೂಜಿಸಬಹುದು, ಯಂತ್ರದ ರೂಪದಲ್ಲಿಯೂ, ಕಲಶದ ಮೂಲಕವೂ ಕಾಲಭೈರವನನ್ನು ಆರಾಧಿಸುವ ಕ್ರಮವಿದೆ. ಕಾಲಭೈರವನ ಬೀಜಮಂತ್ರವನ್ನು ಹೇಳಿ ಅಥವಾ ಕಾಲಭೈರವನ ಸ್ತೋತ್ರವನ್ನು ಪಠಿಸಿ ಷೋಡಶೋಪಚಾರದಿಂದ ಪೂಜಿಸಬಹುದು. ಕೆಂಪು ಹೂವುಗಳು ಹೆಚ್ಚು ಶ್ರೇಷ್ಠವಾದವಾಗಿರುತ್ತದೆ.

ಯಾಕೆ ಪೂಜಿಸಬೇಕು?

ಕಾಲಭೈರವನನ್ನು ದುಷ್ಟಶಕ್ತಿಗಳ ಸಂಹಾರಕ್ಕಾಗಿ ಪೂಜಿಸುವ ಕ್ರಮವಿದೆ. ಯಾರಿಂದಲಾದರೂ ತೊಂದರೆ ಉಂಟಾದರೆ ಅದನ್ನು ಪರಿಹರಿಸಿಕೊಳ್ಳಲು ಕಾಶಿಯ ಅಧಿಪತಿಯಾದ ಭಯಂಕರಮೂರ್ತಿ ಕಾಲಭೈರವನನ್ನೇ ಸ್ಮರಣೆ ಮಾಡುವುದು. ಆತನು ಅಧರ್ಮವನ್ನೂ ಆಧರ್ಮಮಾರ್ಗವನ್ನೂ ನಾಶಮಾಡುವವನೂ ಆಗಿದ್ದಾನೆ.

ಲೇಖನ: ಲೋಹಿತಶರ್ಮಾ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್