ಶುಭ ಅಶುಭ ಹೇಗೆ ಬದಲಾಗುವುದು ಎಂಬುದನ್ನು ತಿಳಿದುಕೊಳ್ಳಿ ಬಾಳು ಬಂಗಾರ

ಜಗತ್ತಿನಲ್ಲಿ ಇರುವ ಪ್ರತೀ ವ್ಯವಸ್ಥೆಯ ಏರು ಪೇರುಗಳಿಗೆ ನವಗ್ರಹರ ಚಲನವಲಗಳೇ ಕಾರಣ ಎಂಬುದು ಸನಾತನ ಧರ್ಮದ ನಂಬಿಕೆ. ನಂಬಿ ಕೆಟ್ಟವರಿಲ್ಲ ಎಂಬುದು ಗಾದೆ. ಆದರೆ ಆ ನಂಬಿಕೆ ಪರಿಶುದ್ಧವಾಗಿರಬೇಕು ಮತ್ತು ಅಲ್ಲಿ ಒಂದಿನಿತೂ ಸಂಶಯವಿರಬಾರದು ಎಂಬುದು ಅಷ್ಟೇ ಸತ್ಯ.

ಶುಭ ಅಶುಭ ಹೇಗೆ ಬದಲಾಗುವುದು ಎಂಬುದನ್ನು ತಿಳಿದುಕೊಳ್ಳಿ ಬಾಳು ಬಂಗಾರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: May 10, 2023 | 7:03 AM

ಜಗತ್ತಿನಲ್ಲಿ ಇರುವ ಪ್ರತೀ ವ್ಯವಸ್ಥೆಯ ಏರು ಪೇರುಗಳಿಗೆ ನವಗ್ರಹರ ಚಲನವಲಗಳೇ ಕಾರಣ ಎಂಬುದು ಸನಾತನ ಧರ್ಮದ ನಂಬಿಕೆ. ನಂಬಿ ಕೆಟ್ಟವರಿಲ್ಲ ಎಂಬುದು ಗಾದೆ. ಆದರೆ ಆ ನಂಬಿಕೆ ಪರಿಶುದ್ಧವಾಗಿರಬೇಕು ಮತ್ತು ಅಲ್ಲಿ ಒಂದಿನಿತೂ ಸಂಶಯವಿರಬಾರದು ಎಂಬುದು ಅಷ್ಟೇ ಸತ್ಯ. ಭಗವದನುಗ್ರಹದಿಂದ ತಾಯಿಯ ಗರ್ಭದಿಂದ ಭೂಸ್ಪರ್ಶ ಮಾಡಿದ ಪ್ರತೀ ಜೀವಿಗೂ ನವಗ್ರಹರು ಶುಭ ಅಶುಭ ಫಲವನ್ನು ನೀಡುತ್ತಲೇ ಇರುತ್ತವೆ. ಶುಭಫಲವನ್ನು ನಾವು ಸಂತೋಷದಿಂದ ಅನುಭವಿಸುತ್ತೇವೆ ಆದರೆ ಅಶುಭ ಫಲ ಗೋಚಾರಕ್ಕೆ ಬಂದಾಗ ಧರ್ಮನಿಂದನೆಯನ್ನೋ ಅಥವಾ ಕೊರಗುವಿಕೆಯನ್ನೋ ಆರಂಭ ಮಾಡಿಬಿಡುತ್ತೇವೆ ಅಲ್ಲವೇ?

ಸಂತೋಷ (ಶುಭ ಫಲ) ಗಳಾದ ಸಂತಾನ ಪ್ರಾಪ್ತಿ ಉದ್ಯೋಗ ವಿವಾಹ ಇತ್ಯಾದಿಗಳನ್ನು ಬಹು ಖರ್ಚು ಮಾಡಿ ಸಂಭ್ರಮಿಸುವಂತೆ ಕಷ್ಟ ಬಂದಾಗ ಭಗವಂತನ ಸೇವಾ ರೂಪದಲ್ಲಿ ಅವನ ಆರಾಧನೆಗಳನ್ನು ಮಾಡಿಕೊಂಡು ಅವನಲ್ಲಿ ಕಷ್ಟ ಸಹಿಸುವ ಶಕ್ತಿಗಾಗಿ ಪ್ರಾರ್ಥಿಸಬೇಕು. ಆಗ ಅವನ ಅನುಗ್ರಹದಿಂದ ಅಶುಭವೂ ಶುಭವಾಗಿ ಫಲಿಸುತ್ತದೆ. ಉದಾಹರಣೆಗೆ ದಶರಥನಿಗೆ ಸಂತಾನವಿರಲಿಲ್ಲ. ಅವನು ತನ್ನ ಅಚಾತುರ್ಯದಿಂದ ಶ್ರವಣಕುಮಾರನ ಮರಣಕ್ಕೆ ಕಾರಣನಾದ.

ಆದರೆ ತನ್ನ ತಪ್ಪಿನ ಅರಿವಾಗಿ ಮಹಾರಾಜನಾಗಿದ್ದರೂ ಅಂಗಾಲಾಚಿ ಕ್ಷಮೆಯಾಚಿಸಿದ. ಆದರೂ ಅವನಿಗೆ ಪುತ್ರರಿಂದ ವಿರಹವುಂಟಾಗಲಿ ಎಂಬ ಶಾಪ ಪ್ರಾಪ್ತವಾಯಿತು. ಶಾಪವೆಂಬುದು ಅಶುಭವಾದರೂ ಸಂತಾನವಿಲ್ಲದಿರುವ ದಶರಥನಿಗೆ ಅದು ವರವಾಯಿತು. ಹೇಗೆಂದರೆ ಮಹಾತ್ಮರಾದ ಶ್ರವಣಕುಮಾರನ ತಂದೆ ನೀಡಿದ್ದು ಪುತ್ರವಿರಹದ ಶಾಪ. ಆ ಶಾಪ ಫಲಿಸಬೇಕಾದರೆ ದಶರಥನಿಗೆ ಸಂತಾನವಾಗಲೇಬೇಕು ಅದೂ ಅವರ ಶಾಪ ಪುತ್ರರಿಂದ ಎಂಬುದಾಗಿ ಬಹುವಚನ ಇದ್ದ ಕಾರಣ ಒಂದಕ್ಕಿಂತ ಹೆಚ್ಚು ಸಂತಾನವುಂಟಾಗುವುದು ನಿಶ್ಚಿತವಾಯಿತು. ಅಂತಯೇ ಹಲವಾರು ಅಶುಭ ಸಂದರ್ಭಗಳು ಶುಭವಾಗಿ ಬಿಡುತ್ತವೆ. ಅದಕ್ಕೆ ಮೊದಲು ಹೇಳಿದಂತೆ ಸಿರಿವಂತ ಬಡವ ಎಂಬ ಬೇಧವಿಲ್ಲ. ಮನಸ್ಸು ಶುಭ್ರವಾಗಿರಬೇಕು ಅಷ್ಟೇ.

ಇದನ್ನೂ ಓದಿ:ಚಾಣಕ್ಯ ನೀತಿ: ಈ ಘಟನೆಗಳು ಜೀವನದಲ್ಲಿ ಉತ್ತಮ ಪಾಠಗಳನ್ನು ಕಲಿಸುತ್ತವೆ! ಅಷ್ಟೇ ಅಲ್ಲ ಭವಿಷ್ಯವನ್ನೂ ಉಜ್ವಲವಾಗಿಸುತ್ತದೆ!

ಹಾಗೆಯೇ ಸಹನೆ ಇಲ್ಲದಿದ್ದರೆ ವರವೂ ಶಾಪವಾಗುವ ಸಂದರ್ಭಗಳೂ ಇವೆ. ಉದಾಹರಣೆಗೆ ಗಾಂಧಾರಿಗೆ ನೂರು ಮಕ್ಕಳಾಗುವ ವರ ಸಾಕ್ಷಾತ್ ಶಿವನೇ ಕರುಣಿಸಿದ್ದ. ನೂರು ಮಕ್ಕಳೂ ಅವಳಿಗೆ ಪ್ರಾಪ್ತವಾಯಿತು. ಆದರೆ ಕುಂತಿಗೆ ಮಕ್ಕಳಾಯಿತು ತಾನು ಹಿರಿಯವಳು ತನಗೆ ಸಂತಾನವಾಗಲಿಲ್ಲ ತನ್ನ ಮಕ್ಕಳಿಗೆ ಸಿಂಹಾನ ಲಭ್ಯವಾಗುವುದಿಲ್ಲ ಎಂಬ ಅಸಮತೋಲನ ಅಸಹನೆಯ ಮನಸ್ಥಿತಿಯಿಂದಾಗಿ ಮನೋವಿಕಾರವಾಗಿ ತಾಳ್ಮೆಯನ್ನು ಕಳೆದುಕೊಂಡವಳಾಗಿ ತನ್ನ ಗರ್ಭವನ್ನು ಹಿಚುಕುತ್ತಾಳೆ. ಗರ್ಭ ಒಡೆದು ನೂರು ಹೋಳಾಗಿ ಭೂಮಿಯನ್ನು ಸೇರುತ್ತದೆ. ಅದನ್ನು ಆಮೇಲೆ ಆಗಿನ ವೈದ್ಯಕೀಯ ಚಿತ್ರಣದಂತೆ ಸಂರಕ್ಷಿಸಿ ಸಂತಾನವನ್ನು ಪಡೆಯುತ್ತಾರೆ.

ಆದರೆ ಅಸಹನೆಯ ಗರ್ಭದ ಸಂತಾನ ಜಗತ್ತಿನ ಧರ್ಮಕ್ಕೇ ಕಂಟಕಪ್ರಾಯವಾಯಿತು ಅಲ್ಲವೇ? ಜಗತ್ತಿನ ವ್ಯವಸ್ಥೆಯೇ ಹೀಗೆ ಎಲ್ಲಾ ರೀತಿಯ ಸಂದರ್ಭಗಳೂ ನಮ್ಮ ಮುಂದೆ ಇರುತ್ತದೆ. ನಾವು ಆಯ್ಕೆ ಮಾಡುವಾಗ ಸರಿಯಾಗಿ ಯೋಚಿಸಿ ಮಾಡಬೇಕು. ಮೇಲ್ನೋಟದ ಲಾಭ ಯಾವತ್ತೂ ಲಾಭವಾಗಿರಲು ಸಾಧ್ಯವೇ ಇಲ್ಲ. ಅದಕ್ಕೆ ಅತ್ಯಂತ ತಾಳ್ಮೆ ಬೇಕು.

ದಶರಥ ತಪ್ಪಿನ ಅರಿವಾಗಿ ಸಹನೆಯನ್ನು ತಂದುಕೊಂಡು ಕಾದ ಕ್ಷಮೆಯಾಚಿಸಿದ ಪರಿತಪಿಸಿದ ಆದ ಕಾರಣ ಶಾಪವೂ ಕೂಡ ಶ್ರೀರಾಮನಂತಹ ಸಂತಾನಕ್ಕೆ ಒಂದು ಸಣ್ಣ ಕಾರಣವಾಯಿತು. ಗಾಂಧಾರಿ ಕಾಯಲಿಲ್ಲ ಸಹನೆ ಮೀರಿ ಅಸೂಯೆಯ ಮೊರೆ ಹೋಗಿ ಲಭ್ಯವಾದ ವರವನ್ನು ಶಾಪವಾಗಿಸಿಕೊಂಡು ಕುರುವಂಶದ ನಾಶಕ್ಕೆ ತನ್ನ ಗರ್ಭವೇ ಕಾರಣವಾಗುವಂತಹ ಸಂದರ್ಭವನ್ನು ತಂದುಕೊಂಡಲು. ಈಗ ಯೋಚಿಸಿ ಸಹನೆ ವಜ್ರದ ಕವಚ ನಿಜವಲ್ಲವೇ? ಎತ್ತರದ ವ್ಯಕ್ತಿಯಾದರೂ ಬಾಗುವುದು ಉತ್ತಮವಲ್ಲವೇ?

ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ