Makar Sankranti 2024: ಮಕರ ಸಂಕ್ರಾಂತಿ ಹಬ್ಬದಂದು ಸೂರ್ಯ ದೇವ ಮಕರ ರಾಶಿಗೆ ಪ್ರವೇಶ, ಏನಿದರ ವಿಶೇಷತೆ?

ಈ ಬಾರಿ ಮಕರ ಸಂಕ್ರಾಂತಿ ಅಥವಾ ಸಂಕ್ರಾಂತಿ ಹಬ್ಬವನ್ನು ಜನವರಿ 15 (ಸೋಮವಾರ) ರಂದು ಆಚರಣೆ ಮಾಡಲಾಗುತ್ತದೆ. ಜೊತೆಗೆ ಸೂರ್ಯನ ಪಥ ಬದಲಾವಣೆಯ ಹಬ್ಬವಿದು. ಸೂರ್ಯ ದೇವ ಮಕರ ರಾಶಿಗೆ ಪ್ರವೇಶಿಸುವ ಹಬ್ಬವೇ ಮಕರ ಸಂಕ್ರಾಂತಿ. ಇಲ್ಲಿಂದ ಆರು ತಿಂಗಳು ಉತ್ತರಾಯಣ ಪುಣ್ಯಕಾಲ. ಹಾಗಾಗಿ ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಅದರದ್ದೇ ಆದ ಮಹತ್ವವಿದೆ.

Makar Sankranti 2024: ಮಕರ ಸಂಕ್ರಾಂತಿ ಹಬ್ಬದಂದು ಸೂರ್ಯ ದೇವ ಮಕರ ರಾಶಿಗೆ ಪ್ರವೇಶ, ಏನಿದರ ವಿಶೇಷತೆ?
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 10, 2024 | 2:15 PM

ಕರ್ನಾಟಕದಲ್ಲಿ ಸುಗ್ಗಿ ಹಬ್ಬ, ತಮಿಳುನಾಡಿನಲ್ಲಿ ಪೊಂಗಲ್, ದೆಹಲಿ ಹರಿಯಾಣ ಸುತ್ತಮುತ್ತ ಸಕ್ರಾತ್, ಪಂಜಾಬಿನಲ್ಲಿ ಮಾಘಿ ಹೀಗೆ ಮಕರ ಸಂಕ್ರಾಂತಿಯನ್ನು ಭಾರತದಾದ್ಯಂತ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಈ ಬಾರಿ ಮಕರ ಸಂಕ್ರಾಂತಿ ಅಥವಾ ಸಂಕ್ರಾಂತಿ ಹಬ್ಬವನ್ನು ಜನವರಿ 15 (ಸೋಮವಾರ) ರಂದು ಆಚರಣೆ ಮಾಡಲಾಗುತ್ತದೆ. ಜೊತೆಗೆ ಸೂರ್ಯನ ಪಥ ಬದಲಾವಣೆಯ ಹಬ್ಬವಿದು. ಸೂರ್ಯ ದೇವ ಮಕರ ರಾಶಿಗೆ ಪ್ರವೇಶಿಸುವ ಹಬ್ಬವೇ ಮಕರ ಸಂಕ್ರಾಂತಿ. ಇಲ್ಲಿಂದ ಆರು ತಿಂಗಳು ಉತ್ತರಾಯಣ ಪುಣ್ಯಕಾಲ. ಹಾಗಾಗಿ ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಅದರದ್ದೇ ಆದ ಮಹತ್ವವಿದೆ.

ಮಕರ ಸಂಕ್ರಾಂತಿಯ ಮಹತ್ವ;

ಜನವರಿ 15 (ಸೋಮವಾರ) ಪುಷ್ಯ ಶುದ್ಧ ಪಂಚಮಿಯಂದು ಬೆಳಿಗ್ಗೆ 8. 31ರ ಸಮಯದಲ್ಲಿ ಶತಾಭಿಷ ನಕ್ಷತ್ರ, ವರಿಯಾನ್ ಯೋಗ, ಭದ್ರ ಕರಣ, ಮಕರ ಲಗ್ನದಲ್ಲಿ ರವಿಯು ನೀರಯಣ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಬಳಿಕ 1 ತಿಂಗಳ ಕಾಲ ಮಕರ ರಾಶಿಯಲ್ಲಿ ಇರುತ್ತಾನೆ. ಹಿಂದೂ ಧರ್ಮದಲ್ಲಿ ಸಂಕ್ರಾಂತಿಗೆ ಬಲು ಮಹತ್ವ. ಅದರಲ್ಲೂ ಮಕರ ಸಂಕ್ರಮಣ ಹಾಗೂ ಕರ್ಕಾಟಕ ಸಂಕ್ರಮಣಕ್ಕೆ ಇನ್ನಷ್ಟು ವಿಶೇಷತೆಗಳಿವೆ. ಇವೆರಡು ಆಯನ ಸಂಕ್ರಾಂತಿಗಳು. ಉತ್ತರಾಯಣ ಮತ್ತು ದಕ್ಷಿಣಾಯಣ ಈ ಎರಡು ಸಂಕ್ರಮಣದ ಸಂದರ್ಭದಲ್ಲಿ ಶುರುವಾಗುತ್ತದೆ. ಮಕರ ಸಂಕ್ರಮಣದ ಸಂದರ್ಭದಲ್ಲಿ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತದೆ. ಇನ್ನು ಪಂಚಾಂಗದಲ್ಲಿ ನೀಡಿರುವ ಮಕರ ಸಂಕ್ರಾಂತಿಯ ಫಲದ ಆದರದ ಮೇಲೆ ಒಳಿತು, ಕೆಡುಕಿನ ವಿಮರ್ಶೆ ಮಾಡಲಾಗುತ್ತದೆ. ಸಂಕ್ರಾಂತಿ ದೇವಿ ಧರಿಸಿದ ವಸ್ತುಗಳು ದುಬಾರಿಯಾಗುತ್ತದೆ. ಅವಳು ಹೋಗುವ ಮತ್ತು ನೋಡುವ ದಿಕ್ಕಿಗೆ ಕೆಡುಕಾಗುತ್ತದೆ ಎನ್ನುತ್ತದೆ ಪುರಾಣ.

ಮಕರ ಸಂಕ್ರಾಂತಿಯ ದಿನ ಸೂರ್ಯನಿಗೆ ಅರ್ಘ್ಯ ಅರ್ಪಿಸುವ ಸಂಪ್ರದಾಯ ಕೆಲವು ಕಡೆಗಳಲ್ಲಿ ಇದೆ. ಈ ಮೂಲಕ ಸೂರ್ಯನ ಅನುಗ್ರಹಕ್ಕೆ ಧನ್ಯವಾದ ಬೇಡಲಾಗುತ್ತದೆ. ಸೂರ್ಯದೇವನಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಈ ದಿನ ರೈತರು ಕೃಷಿಗೆ ಬಳಸುವ ಉಪಕರಣಗಳನ್ನು ಪೂಜಿಸುತ್ತಾರೆ. ಜತೆಗೆ, ಉತ್ತಮ ಇಳುವರಿಗಾಗಿ ಸೂರ್ಯ ದೇವರಿಗೆ ಕೃತಜ್ಞತೆ ಅರ್ಪಿಸುತ್ತಾರೆ.

ಇದನ್ನೂ ಓದಿ: ಸಂಕ್ರಾಂತಿಯ ಮಕರ ಸ್ನಾನದ ಮಹತ್ವವೇನು? ಅಂದು ಮಾಡುವ ದಾನ ಶ್ರೇಷ್ಠ ಎಂಬ ನಂಬಿಕೆಯಿದೆ

ಆಚರಣೆ ಹೇಗೆ?

ಮನೆ ಮನೆಗಳಲ್ಲಿ ಎಳ್ಳು- ಬೆಲ್ಲವನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿ ಬಳಿಕ ಸುತ್ತಮುತ್ತಲಿರುವವರಿಗೆ ಹಂಚುವುದು ವಾಡಿಕೆ. ಇದರ ಜೊತೆಗೆ ಹಣ್ಣು- ಹಂಪಲು ಕಬ್ಬಿನ ತಂಡುಗಳನ್ನು ಕೂಡ ನೀಡುತ್ತಾರೆ. ಈ ದಿನ ಮನೆಯ ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ ಎಳ್ಳು ಬೆಲ್ಲವನ್ನು ಎಲ್ಲರಿಗೂ ಹಂಚುತ್ತಾ, ಒಳ್ಳೆ ಒಳ್ಳೆ ಮಾತನಾಡಿ ಎನ್ನುತ್ತಾರೆ. ಈ ವಿನಿಮಯ ಒಂದು ರೀತಿಯ ಸಂಬಂಧಗಳ ಬೆಸುಗೆಯಂತೆ. ಇನ್ನು ಕರ್ನಾಟಕದಲ್ಲಿ ಅದರಲ್ಲಿಯೂ ಉತ್ತರ ಕನ್ನಡದಲ್ಲಿ ಈ ದಿನ ಸಂಕ್ರಾಂತಿ ಕಾಳುಗಳನ್ನು ಹಂಚಲಾಗುತ್ತದೆ. ಇದು ತುಂಬಾ ಸಿಹಿಯಾಗಿರುವುದರಿಂದ ಇದನ್ನು ಪ್ರೀತಿ ಮತ್ತು ಸಂತೋಷ ಹಂಚುವ ಕಾಳು ಎಂದು ಕೂಡ ಹೇಳಲಾಗುತ್ತದೆ.

ಅಧ್ಯಾತ್ಮ ಸಂಬಂಧಿತ ಇನ್ನಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!