AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mauni Amavasya 2023: ಮೌನಿ ಅಮಾವಾಸ್ಯೆಯಂದು ಮೌನವಾಗಿ ಉಪವಾಸ, ದಾನ ಮಾಡಿದರೆ ಈ ಫಲ ನಿಮ್ಮದಾಗುತ್ತೆ

ಪದ್ಮ ಪುರಾಣದ ಪ್ರಕಾರ, ಮೌನಿ ಅಮಾವಾಸ್ಯೆಯಂದು ಮೌನವಾಗಿ ಮಾಡುವ ಜಪ, ತಪಸ್ಸು ಮತ್ತು ದಾನದಿಂದ ಭಗವಾನ್ ವಿಷ್ಣುವು ತುಂಬಾ ಪ್ರಸನ್ನನಾಗುತ್ತಾನೆ ಮತ್ತು ವಿಶೇಷ ಧಾರ್ಮಿಕ ಪ್ರಯೋಜನಗಳನ್ನು ನೀಡುತ್ತಾನೆ ಎನ್ನಲಾಗಿದೆ.

Mauni Amavasya 2023: ಮೌನಿ ಅಮಾವಾಸ್ಯೆಯಂದು ಮೌನವಾಗಿ ಉಪವಾಸ, ದಾನ ಮಾಡಿದರೆ ಈ ಫಲ ನಿಮ್ಮದಾಗುತ್ತೆ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Jan 20, 2023 | 7:15 AM

Share

ಪುಷ್ಯ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಪುಷ್ಯ ಅಮಾವಾಸ್ಯೆ ಅಥವಾ ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ವರ್ಷದ ಮೌನಿ ಅಮಾವಾಸ್ಯೆ ಜನವರಿ 21 ಶನಿವಾರ ಬಂದಿದೆ. ವಿಶೇಷವೆಂದರೆ ಶನಿವಾರದಂದು ಅಮವಾಸ್ಯೆಯ ತಿಥಿ ಬಂದಿರುವುದರಿಂದ ಇದನ್ನು ಶನಿಶ್ಚರಿ ಅಮಾವಾಸ್ಯೆ ಎಂದೂ ಸಹ ಕರೆಯುತ್ತಾರೆ. ಹೀಗಾಗಿ ಇದು ಪಿತೃ ದೋಷ ನಿವಾರಣೆಗೂ ಶ್ರೇಷ್ಟದಿನವಾಗಿದೆ. ಅಲ್ಲದೆ ಈ ಅಮಾವಾಸ್ಯೆಯಂದು ಮೌನವಾಗಿ ದೇವರ ಜಪ ಮಾಡುವುದರಿಂದ ದುಪ್ಪಟ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು, ದೇವರ ಜಪ ಮಾಡುವುದು, ದಾನ-ಧರ್ಮ ಮಾಡುವುದಕ್ಕೆ ವಿಶೇಷ ಮಹತ್ವವಿದೆ.

ಪದ್ಮ ಪುರಾಣದ ಪ್ರಕಾರ, ಮೌನಿ ಅಮಾವಾಸ್ಯೆಯಂದು ಮೌನವಾಗಿ ಮಾಡುವ ಜಪ, ತಪಸ್ಸು ಮತ್ತು ದಾನದಿಂದ ಭಗವಾನ್ ವಿಷ್ಣುವು ತುಂಬಾ ಪ್ರಸನ್ನನಾಗುತ್ತಾನೆ ಮತ್ತು ವಿಶೇಷ ಧಾರ್ಮಿಕ ಪ್ರಯೋಜನಗಳನ್ನು ನೀಡುತ್ತಾನೆ ಎನ್ನಲಾಗಿದೆ. ಈ ದಿನದಂದು ಉಪವಾಸವನ್ನು ಮಾಡಿ ಇಡೀ ದಿನ ಮೌನವಾಗಿದ್ದು ದೇವರ ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳನ್ನು ನಿರ್ವಹಿಸಲು ಮೌನಿ ಅಮಾವಾಸ್ಯೆಯ ದಿನಾಂಕವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಮೌನಿ ಅಮಾವಾಸ್ಯೆ ಶುಭ ಸಮಯ

ಅಮಾವಾಸ್ಯೆ ತಿಥಿ – 2023 ರ ಜನವರಿ 21 ರಂದು ಬೆಳಿಗ್ಗೆ 06:17 ರಿಂದ ಆರಂಭವಾಗಿ 2023 ರ ಜನವರಿ 22 ರಂದು ಬೆಳಿಗ್ಗೆ 02:22 ಕ್ಕೆ ಅಮವಾಸ್ಯೆ ತಿಥಿ ಮುಕ್ತಾಯವಾಗುತ್ತದೆ. ಸೂರ್ಯೋದಯ – 2023 ರ ಜನವರಿ 21 ರಂದು ಬೆಳಿಗ್ಗೆ 07:13 ಕ್ಕೆ ಉದಯ ತಿಥಿಯ ಪ್ರಕಾರ, ಮೌನಿ ಅಥವಾ ಪುಷ್ಯ ಅಮಾವಾಸ್ಯೆಯನ್ನು ಜನವರಿ 21 ರಂದು ಶನಿವಾರ ಆಚರಿಸಲಾಗುತ್ತದೆ.

ಅಮವಾಸ್ಯೆಯ ತಿಥಿಯಂದು ಸ್ನಾನ ಮಾಡಿದ ನಂತರ ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಮಂಗಳಕರ. ಹೊದಿಕೆಗಳು, ಹಣ್ಣುಗಳು, ಬೆಚ್ಚಗಿನ ಬಟ್ಟೆಗಳು, ಧಾನ್ಯಗಳು ಇತ್ಯಾದಿಗಳನ್ನು ದಾನ ಮಾಡುವುದು ಈ ದಿನದಂದು ವಿಶೇಷ ಮಹತ್ವವನ್ನು ಪಡೆದಿದೆ. ಪುಷ್ಯ ಮಾಸವು ಭಗವಾನ್ ವಿಷ್ಣುವಿಗೆ ಬಹಳ ಪ್ರಿಯವಾದ ಮಾಸವಾಗಿದೆ. ಈ ಮಾಸದಲ್ಲಿ ಮಾಡಿದ ಜಪ, ದಾನ ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳಿಂದ ಮುಕ್ತಿ ಸಿಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ. ಮತ್ತೊಂದೆಡೆ, ಕುಂಭ ನದಿಗೆ ಹೋಗಿ ಸ್ನಾನ ಮಾಡಲು ಸಾಧ್ಯವಾಗದವರು ಮನೆಯಲ್ಲೇ ಸ್ನಾನ ಮಾಡುವ ನೀರಿಗೆ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡುವುದರಿಂದ ಎಲ್ಲಾ ತೀರ್ಥಯಾತ್ರೆಗಳಲ್ಲಿ ಸ್ನಾನ ಮಾಡಿದ ಫಲವನ್ನು ಪಡೆದುಕೊಳ್ಳಬಹುದು ಎನ್ನಲಾಗುತ್ತದೆ. ಇನ್ನು ವಿಶೇಷವೆಂದರೆ ಈ ದಿನ ಸರ್ವಾರ್ಥ ಸಿದ್ಧಿ ಯೋಗದೊಂದಿಗೆ 30 ವರ್ಷಗಳ ನಂತರ ಖಪ್ಪರ ಯೋಗವು ರೂಪುಗೊಳ್ಳುತ್ತಿದೆ. ಮೌನಿ ಅಮವಾಸ್ಯೆಯ ಕೆಲವು ದಿನಗಳ ಮೊದಲು ಅಂದರೆ ಜನವರಿ 17 ರಂದು ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಬದಲಾಗಿದ್ದಾನೆ. ಈ ಸಮಯದಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗ ಮತ್ತು ಮಕರ ರಾಶಿಯಲ್ಲಿ ತ್ರಿಕೋನ ಸ್ಥಾನದಿಂದ ಖಪ್ಪರ ಯೋಗವು ಸೃಷ್ಟಿಯಾಗುತ್ತಿದೆ.

ಮೌನಿ ಅಮಾವಾಸ್ಯೆ ಪೂಜೆ

ಮೌನಿ ಅಮಾವಾಸ್ಯೆಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಛಗೊಳಿಸಿ. ಗಂಗಾಜಲ ಹಾಕಿದ ನೀರಿನಲ್ಲಿ ಸ್ನಾನ ಮಾಡಬೇಕು. ಸ್ನಾನ ಮಾಡುವಾಗ, ‘ಗಂಗಾ ಚ ಯಮುನೇ ಚೈವ್ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂಬ ಈ ಮಂತ್ರವನ್ನು ಜಪಿಸಬೇಕು. ಸ್ನಾನದ ನಂತರ, ತಾಮ್ರದ ಪಾತ್ರೆಯಲ್ಲಿ ಕಪ್ಪು ಎಳ್ಳು ಮತ್ತು ಕೆಂಪು ಹೂವುಗಳನ್ನು ಬೆರೆಸಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ ಮತ್ತು ಭಗವಾನ್ ಹರಿಯನ್ನು ಧ್ಯಾನಿಸುತ್ತಾ ಉಪವಾಸ, ಮೌನವಾಗಿರಲು ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ಈ ದಿನದಂದು ಪೂರ್ವಜರನ್ನು ಪೂಜಿಸುವ ಪದ್ಧತಿಯಿದೆ. ಇದರಿಂದಾಗಿ ಪೂರ್ವಜರು ಸಂತುಷ್ಟರಾಗಿ ವರ ಮತ್ತು ಆಶೀರ್ವಾದಗಳನ್ನು ನೀಡುತ್ತಾರೆ. ನದಿ ಅಥವಾ ಸರೋವರದ ದಡದಲ್ಲಿ ಸ್ನಾನ ಮಾಡುತ್ತಿದ್ದರೆ, ಎಳ್ಳು ಮಿಶ್ರಿತ ನೀರನ್ನು ನದಿಯಲ್ಲಿ ಹರಿಯಲು ಬಿಡಬೇಕು. ಹಣ್ಣು, ಹೂವು, ಧೂಪ, ದೀಪ ಇತ್ಯಾದಿಗಳಿಂದ ವಿಷ್ಣುವನ್ನು ಪೂಜಿಸಬೇಕು. ಪೂಜೆಯ ನಂತರ, ಬಡವರಿಗೆ ಅಥವಾ ಬ್ರಾಹ್ಮಣರಿಗೆ ಆಹಾರವನ್ನು ನೀಡಬೇಕು. ಈ ದಿನ ಪಿತೃ ದೋಷದಿಂದ ಮುಕ್ತಿ ಮತ್ತು ಜೀವನದಲ್ಲಿ ಶಾಂತಿ, ನೆಮ್ಮದಿ, ಸಂತೋಷಕ್ಕಾಗಿ ಶಿವನನ್ನು ಪೂಜಿಸಬೇಕು. ಶಿವನ ಕೃಪೆಯಿಂದ ಪಿತೃ ದೋಷದಿಂದ ಮುಕ್ತರಾಗಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಈ ಭಾಗದ ಕನಸು ಸಾಕಾರಗೊಳಿಸಿದ ಮೋದಿ: ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ
ಈ ಭಾಗದ ಕನಸು ಸಾಕಾರಗೊಳಿಸಿದ ಮೋದಿ: ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ