Nagchandreshwar temple: ಸರ್ಪದೋಷ ನಿವಾರಣೆಗಾಗಿ ಈ ದೇವಾಲಯ ವರ್ಷಕ್ಕೊಮ್ಮೆ ಮಾತ್ರ ತೆರೆಯುತ್ತದೆ.. ಸ್ಥಳ ಮಹಾತ್ಮೆ ಏನು?
Nag Panchami 2024: ಭಕ್ತರು ವರ್ಷಕ್ಕೊಮ್ಮೆ ಮಾತ್ರ ಇಲ್ಲಿ ಸೇರುತ್ತಾರೆ. ದೇವಸ್ಥಾನದ ಗರ್ಭ ಗುಡಿಯಲ್ಲಿ ಪೂಜಿಸಲ್ಪಡುವ ವಿಗ್ರಹದಲ್ಲಿ ಶಿವ ಪಾರ್ವತಿಯು ದಶಮುಖ ಸರ್ಪರಾಜನನ್ನು ಪೀಠವಾಗಿಸಿಕೊಂಡು ತಮ್ಮ ಮಗ ಗಣಪತಿಯೊಂದಿಗೆ ಕುಳಿತಿದ್ದಾರೆ. ಪ್ರಪಂಚದಲ್ಲಿ ಇಂಥ ದೇವಸ್ಥಾನ ಇದೊಂದೇ ಅಂತಾರೆ.
ನಾಗ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ನಾಗ ಪಂಚಮಿಯಂದು ಶಿವನೊಂದಿಗೆ ನಾಗದೇವರನ್ನು ಪೂಜಿಸುವ ಸಂಪ್ರದಾಯವಿದೆ. ನಾಗ ಪಂಚಮಿ ಹಬ್ಬವನ್ನು ಈ ವರ್ಷ ಆಗಸ್ಟ್ 9 ಶುಕ್ರವಾರ ಆಚರಿಸಲಾಗುತ್ತದೆ. ಪವಿತ್ರ ಹಬ್ಬದ ನಿಮಿತ್ತ ವರ್ಷವಿಡೀ ಮುಚ್ಚಿರುವ.. ನಾಗಪಂಚಮಿ ದಿನದಂದು ಮಾತ್ರ 24 ಗಂಟೆಗಳ ಕಾಲ ತೆರೆದಿರುವ ವಿಶೇಷವಾದ ದೇವಾಲಯವಿದೆ ಎಂದು ನಿಮಗೆ ತಿಳಿದಿದೆಯೇ.. ಆ ದೇವಾಲಯ ಎಲ್ಲಿದೆ.. ಇದರ ಮಹತ್ವದ ಬಗ್ಗೆ ತಿಳಿಯೋಣ.
Nagchandreshwar temple- ಈ ವಿಶಿಷ್ಟ ದೇವಾಲಯದ ಹೆಸರೇನು?:
ವರ್ಷದಲ್ಲಿ ಒಂದು ದಿನ ಮಾತ್ರ ತೆರೆದಿರುವ ದೇವಾಲಯದ ಹೆಸರು ನಾಗಚಂದ್ರೇಶ್ವರಾಲಯ. ಈ ದೇವಾಲಯವು ಮಧ್ಯಪ್ರದೇಶದ ಉಜ್ಜಯಿನಿ ನಗರದ ಪ್ರಸಿದ್ಧ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯದ ಮೂರನೇ ಮಹಡಿಯಲ್ಲಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನವಾದ ನಾಗ ಪಂಚಮಿಯಂದು ಮಾತ್ರ ಭಕ್ತರ ದರ್ಶನಕ್ಕಾಗಿ ದೇವಾಲಯವನ್ನು ತೆರೆಯಲಾಗುತ್ತದೆ.
Nagchandreshwar temple- ದೇವಸ್ಥಾನದ ಬಗ್ಗೆ ಇರುವ ನಂಬಿಕೆ ಏನು?:
ರಾಜ ತಕ್ಷಕನು ಈ ದೇವಾಲಯದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಈ ದೇವಾಲಯವು 11 ನೇ ಶತಮಾನದಷ್ಟು ಹಿಂದಿನ ನಾಗದೇವತೆಯ ವಿಶಿಷ್ಟ ವಿಗ್ರಹವನ್ನು ಹೊಂದಿದೆ ಮತ್ತು ನೇಪಾಳದಿಂದ ಇಲ್ಲಿಗೆ ತರಲಾಗಿದೆ ಎಂದು ಹೇಳಲಾಗುತ್ತದೆ. ಈ ವಿಗ್ರಹವೂ ಬಹಳ ವಿಶಿಷ್ಟವಾಗಿದೆ. ಈ ನಾಗೇಂದ್ರನ ಪ್ರತಿಮೆಯಲ್ಲಿ ವಿಷ್ಣು ಮತ್ತು ಲಕ್ಷ್ಮಿಯ ಬದಲಿಗೆ ಶಿವ ಪಾರ್ವತಿಯರು ಆಸೀನರಾಗಿದ್ದಾರೆ. ಈ ಮಾದರಿಯ ಪ್ರತಿಮೆ ಇದೊಂದೆ. ಇಡೀ ವರ್ಷದಲ್ಲಿ ನಾಗ ಪಂಚಮಿಯಂದು ಮಾತ್ರ ಈ ದೇವಾಲಯ ತೆರೆದಿರುತ್ತದೆ ಮತ್ತು ನಾಗ ಪಂಚಮಿಯಂದು ಮೂರು ಬಾರಿ ಪೂಜಿಸಲಾಗುತ್ತದೆ.
Also Read: ಸ್ಥಳ ಮಹಾತ್ಮೆ- ನವ ವಿವಾಹಿತರು ಶಿವ-ಪಾರ್ವತಿ ಸಪ್ತಪದಿ ತುಳಿದ ಸ್ಥಳಕ್ಕೆ ಇಂದಿಗೂ ಭೇಟಿ ನೀಡುತ್ತಾರೆ! ಯಾಕೆ ಗೊತ್ತಾ?
ಭಕ್ತರು ವರ್ಷಕ್ಕೊಮ್ಮೆ ಮಾತ್ರ ಇಲ್ಲಿ ಸೇರುತ್ತಾರೆ. ದೇವಸ್ಥಾನದ ಗರ್ಭ ಗುಡಿಯಲ್ಲಿ ಪೂಜಿಸಲ್ಪಡುವ ವಿಗ್ರಹದಲ್ಲಿ ಶಿವ ಪಾರ್ವತಿಯು ದಶಮುಖ ಸರ್ಪರಾಜನನ್ನು ಪೀಠವಾಗಿಸಿಕೊಂಡು ತಮ್ಮ ಮಗ ಗಣಪತಿಯೊಂದಿಗೆ ಕುಳಿತಿದ್ದಾರೆ. ಪ್ರಪಂಚದಲ್ಲಿ ಇಂಥ ದೇವಸ್ಥಾನ ಇದೊಂದೇ ಅಂತಾರೆ. ಇಲ್ಲಿ ಬಿಟ್ಟರೆ ಬೇರೆಲ್ಲೂ ಇಂಥ ಮೂರ್ತಿ ಇಲ್ಲ.
Nagchandreshwar temple- ಈ ವರ್ಷ ನಾಗಚಂದ್ರೇಶ್ವರ ದೇವಸ್ಥಾನ ಯಾವಾಗ ತೆರೆಯುತ್ತದೆ?
ಪ್ರತಿ ವರ್ಷ ನಾಗ ಪಂಚಮಿಯಂದು ಮಾತ್ರ ಈ ದೇವಾಲಯವನ್ನು ತೆರೆಯಲಾಗುತ್ತದೆ. ಈ ಬಾರಿ ನಾಗ ಪಂಚಮಿಯನ್ನು ಆಗಸ್ಟ್ 9 ರಂದು ಆಚರಿಸಲಾಗುವುದು. ಆದ್ದರಿಂದ ಈ ವರ್ಷ ನಾಗಚಂದ್ರೇಶ್ವರ ದೇವಸ್ಥಾನವು ಆಗಸ್ಟ್ 8 ರಂದು ಮಧ್ಯಾಹ್ನ 12 ಗಂಟೆಗೆ ಬಾಗಿಲು ತೆರೆಯಲಿದ್ದು, ಮರುದಿನ ಆಗಸ್ಟ್ 9 ರಂದು ರಾತ್ರಿ 12 ಗಂಟೆಯವರೆಗೆ ಮಾತ್ರ ದೇವಾಲಯದ ಬಾಗಿಲು ತೆರೆದಿರುತ್ತದೆ. ಇದಾದ ನಂತರ ನಾಗಚಂದ್ರೇಶ್ವರ ದೇವಸ್ಥಾನವನ್ನು ಮತ್ತೆ ಒಂದು ವರ್ಷ ಮುಚ್ಚಲಾಗುವುದು. ನಾಗಚಂದ್ರೇಶ್ವರನ ದರ್ಶನಕ್ಕೆ ಭಕ್ತರಿಗೆ ಕೇವಲ 24 ಗಂಟೆಗಳ ಕಾಲಾವಕಾಶವಿದೆ.
ಆದ್ದರಿಂದ ನಾಗಚಂದ್ರೇಶ್ವರನ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಗಚಂದ್ರೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಾರೆ. ನಾಗಪಂಚಮಿಯಂದು ಭಕ್ತರು ಇಲ್ಲಿಯ ಭಗವಂತನ ದರ್ಶನ ಮಾಡಿದರೆ ಸರ್ವವಿಧವಾದ ಸರ್ಪದೋಷಗಳಿಂದ ಮುಕ್ತಿ ದೊರೆಯುತ್ತದೆ ಎಂಬ ಪ್ರತೀತಿ ಇದೆ. ಹಾಗಾಗಿ ದೂರದ ಊರುಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
Also Read: ಈ ದೇವಸ್ಥಾನದಲ್ಲಿ ಭಕ್ತರು ಗಂಟೆ ಬಾರಿಸುವಂತಿಲ್ಲ, ಹಾಡುವಂತಿಲ್ಲ, ಆಡುವಂತಿಲ್ಲ! ಎಲ್ಲವೂ ನಿಷಿದ್ಧ -ಯಾಕೆ ಗೊತ್ತಾ?
Nagchandreshwar temple- ಈ ದೇವಾಲಯವನ್ನು ವರ್ಷಕ್ಕೆ ಒಮ್ಮೆ ಮಾತ್ರ ಏಕೆ ತೆರೆಯಲಾಗುತ್ತದೆ?
ನಾಗಚಂದ್ರೇಶ್ವರ ದೇವಸ್ಥಾನ ವರ್ಷಕ್ಕೊಮ್ಮೆ ಮಾತ್ರ ಏಕೆ ತೆರೆಯುತ್ತದೆ ಎಂಬುದಕ್ಕೆ ಪೌರಾಣಿಕ ಕಥೆಯೂ ಇದೆ. ಅದರ ಪ್ರಕಾರ ಒಮ್ಮೆ ಸರ್ಪ ರಾಜ ತಕ್ಷಕನು ಶಿವನನ್ನು ಮೆಚ್ಚಿಸಲು ಕಠಿಣ ತಪಸ್ಸು ಮಾಡಿದನು. ಅವನ ತಪಸ್ಸಿಗೆ ಶಿವಯ್ಯ ಪ್ರಸನ್ನನಾದ. ತಕ್ಷಕುವಿಗೆ ಅಮರತ್ವವನ್ನು ಅನುಗ್ರಹಿಸಿದನು. ಇದಾದ ನಂತರ ತಕ್ಷಕನು ಶಿವನ ಸನ್ನಿಧಿಯಲ್ಲಿ ವಾಸಿಸಲು ಪ್ರಾರಂಭಿಸಿದನು. ಆದರೆ ಮಹಾಕಾಲ ಕಾಡಿನಲ್ಲಿ ವಾಸಿಸುವ ಮೊದಲು ತಕ್ಷಕನು ತನ್ನ ಏಕಾಂತ ಸೇವೆಯಲ್ಲಿ ಯಾವುದೇ ಅಡಚಣೆಗಳು ಇರಬಾರದು ಎಂದು ಬಯಸಿದನು. ಹಾಗಾಗಿ ನಾಗಪಂಚಮಿಯಂದು ಮಾತ್ರವೇ ದರ್ಶನಕ್ಕೆ ಲಭ್ಯವಾಗುವಂತೆ ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ವರ್ಷದ ಉಳಿದ ದಿನಗಳಲ್ಲಿ ತಕ್ಷಕನ ಆಶಯದ ಗೌರವಾರ್ಥವಾಗಿ ದೇವಾಲಯವನ್ನು ಸಾಂಪ್ರದಾಯಿಕವಾಗಿ ಮುಚ್ಚಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)