ಯಮುನಾ ಛಾತ್ ಅಥವಾ ಯಮುನಾ ಜಯಂತಿಯನ್ನು ಮುಖ್ಯವಾಗಿ ಮಥುರಾದಲ್ಲಿ ಆಚರಿಸಲಾಗುತ್ತದೆ. ಇದು ಯಮುನಾ ದೇವಿಯು ಭೂಮಿಗೆ ಇಳಿದ ದಿನವನ್ನು ಸೂಚಿಸುತ್ತದೆ. ಆದ್ದರಿಂದ ಈ ದಿನವನ್ನು ಯಮುನಾ ಜಯಂತಿ ಅಥವಾ ಯಮುನಾ ದೇವಿಯ ಜನ್ಮ ವಾರ್ಷಿಕೋತ್ಸವ ಎಂದು ಪರಿಗಣಿಸಲಾಗಿದೆ. ಇದನ್ನು ಚೈತ್ರ ಮಾಸದ ಶುಕ್ಲ ಪಕ್ಷ ಷಷ್ಠಿಯಂದು ಆಚರಿಸಲಾಗುತ್ತದೆ ಮತ್ತು ಚೈತ್ರ ನವರಾತ್ರಿಯ ಸಮಯದಲ್ಲಿ ಬರುತ್ತದೆ. ಭಗವಾನ್ ಶ್ರೀ ಕೃಷ್ಣನ ಪತ್ನಿಯಾದ ಯಮುನಾ ದೇವಿಯ ಯಮುನಾ ಛತ್ ಅನ್ನು ಮುಖ್ಯವಾಗಿ ಮಥುರಾ ಮತ್ತು ವೃಂದಾವನದ ಜನರು ಆಚರಿಸುತ್ತಾರೆ.
ಯಮುನಾ ಜಯಂತಿ 2022 ದಿನಾಂಕ
ತಿಥಿ ಆರಂಭ: ಏಪ್ರಿಲ್ 06ರ ಸಂಜೆ 6:01
ತಿಥಿ ಕೊನೆಗೊಲ್ಳುವುದು: ಏಪ್ರಿಲ್ 07ರ ರಾತ್ರಿ 8:33ಕ್ಕೆ
ಯಮುನಾ ಜಯಂತಿ ಆಚರಣೆಗಳು:
ಭಕ್ತರು ಮುಂಜಾನೆಯೇ ಬೇಗ ಎದ್ದು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಈ ದಿನ ಯಮುನಾ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಾಗೂ ಈ ದಿನ ಭಕ್ತರು ಶ್ರೀಕೃಷ್ಣನನ್ನು ಪೂಜಿಸುತ್ತಾರೆ. ಅವರು ಈ ದಿನ ಉಪವಾಸವನ್ನು ಮಾಡುತ್ತಾರೆ. ಮರುದಿನ ಬೆಳಗಿನ ಪೂಜಾ ವಿಧಿವಿಧಾನಗಳನ್ನು ಮುಗಿಸಿದ ನಂತರ ಉಪವಾಸವನ್ನು ಮುಗಿಸುತ್ತಾರೆ. ದೇವಿಗೆ ವಿಶೇಷ ಆಹಾರವನ್ನು ನೈವೇದ್ಯಗಳನ್ನು ತಯಾರಿಸಲಾಗುತ್ತದೆ. ಪೂಜೆಯ ನಂತರ, ಬ್ರಾಹ್ಮಣರಿಗೆ ಅನ್ನದಾನವನ್ನು ಮಾಡಲಾಗುತ್ತೆ. ಸ್ನೇಹಿತರು ಮತ್ತು ಸಂಬಂಧಿಕರಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ.
ಯಮುನಾ ಜಯಂತಿ ಪ್ರಾಮುಖ್ಯತೆ
ಯಮುನಾ ಜಯಂತಿ ಒಂದು ಪ್ರಮುಖ ಹಬ್ಬವಾಗಿದೆ, ವಿಶೇಷವಾಗಿ ಶ್ರೀಕೃಷ್ಣನ ಭಕ್ತರಿಗೆ. ಹಿಂದೂ ಪುರಾಣಗಳ ಪ್ರಕಾರ ಯಮುನಾ ದೇವಿಯು ಶ್ರೀಕೃಷ್ಣನ ಪತ್ನಿ. ಅದಕ್ಕಾಗಿಯೇ ಈ ಹಬ್ಬವು ಬ್ರಜ್, ಮಥುರಾ ಮತ್ತು ವೃಂದಾವನದ ಜನರಿಗೆ ಅಂತಹ ಗೌರವವನ್ನು ಹೊಂದಿದೆ. ಯಮುನಾ ನದಿಯನ್ನು ಹಿಂದೂ ಸಂಸ್ಕೃತಿಯಲ್ಲಿ ಗಂಗಾ, ಬ್ರಹ್ಮಪುತ್ರ, ಸರಸ್ವತಿ ಮತ್ತು ಗೋದಾವರಿಯಂತೆ ಪವಿತ್ರ ನದಿ ಎಂದು ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಈ ದಿನವು ಯಮುನಾ ದೇವಿಯ ಅವರೋಹಣವನ್ನು ಮತ್ತು ಆಕೆಯ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.
ಇದನ್ನೂ ಓದಿ: ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ನಿಗೆ ಜನ್ಮಾಷ್ಟಮಿ ದಿನ ಸಾರಥಿಯ ಶುಭ ಹಾರೈಕೆ!
Krishna Janmashtami 2021 ಶ್ರೀ ಕೃಷ್ಣನ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಆಸಕ್ತಿಕರ ಸಂಗತಿಗಳು