Om: ಸರ್ವೋಚ್ಚ ಸಂತೋಷ ಪಡೆಯಲು ಓಂ ಮಂತ್ರ ಪಠಿಸಿ, ಇದರಿಂದ ಆಧ್ಯಾತ್ಮವಷ್ಟೇ ಅಲ್ಲ ಆರೋಗ್ಯಕರ ಪ್ರಯೋಜವೂ ಇದೆ!

ಓಂ ಮಂತ್ರವು ಹಿಂದೂ, ಜೈನ ಮತ್ತು ಬೌದ್ಧ ಧರ್ಮದವರಿಂದ ಅಂಗೀಕರಿಸಲ್ಪಟ್ಟ ವಿಜ್ಞಾನವಾಗಿದೆ. ಈ ಮಂತ್ರವನ್ನು ಜಪಿಸುವ ಜನರು ಪ್ರಶಾಂತ ಮತ್ತು ಶಾಂತ ಭಾವ ಹೊಂದುತ್ತಾರೆ. ಇದು ರಕ್ತದೊತ್ತಡ, ಹೃದಯದ ತೊಂದರೆಗಳಂತಹ ದೇಹದ ವಿವಿಧ ಕಾಯಿಲೆಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಮಕ್ಕಳಿಗೆ ಓಂಕಾರ ಜಪದ ಅಭ್ಯಾಸ ಮಾಡಿಸಿದರೆ ಓದಿನಲ್ಲಿ ಏಕಾಗ್ರತೆ ಮೂಡುವುದರ ಜೊತೆಗೆ ನೆನಪಿನ ಶಕ್ತಿಯೂ ಹೆಚ್ಚುತ್ತದೆ!

Om: ಸರ್ವೋಚ್ಚ ಸಂತೋಷ ಪಡೆಯಲು ಓಂ ಮಂತ್ರ ಪಠಿಸಿ, ಇದರಿಂದ ಆಧ್ಯಾತ್ಮವಷ್ಟೇ ಅಲ್ಲ ಆರೋಗ್ಯಕರ ಪ್ರಯೋಜವೂ ಇದೆ!
Om: ಸರ್ವೋಚ್ಚ ಸಂತೋಷ ಪಡೆಯಲು ಓಂ ಮಂತ್ರ ಪಠಿಸಿ, ಇದರಿಂದ ಆಧ್ಯಾತ್ಮವಷ್ಟೇ ಅಲ್ಲ ಆರೋಗ್ಯಕರ ಪ್ರಯೋಜನಗಳೂ ಇವೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 03, 2022 | 6:55 AM

ಹಿಂದೂ ಧರ್ಮದ ದೇವರುಗಳನ್ನು ಒಲಿಸಿಕೊಳ್ಳಲು ಹಾಗೂ ಪ್ರಾರ್ಥಿಸಲು ಮಂತ್ರಗಳು ಪ್ರಾಮುಖ್ಯತೆ ವಹಿಸುತ್ತವೆ ಎಂಬುದು ಹಲವರ ನಂಬಿಕೆ. ಈ ಹಿನ್ನೆಲೆ ಮಂತ್ರಗಳು ಮನುಷ್ಯನ ಜೀವನದಲ್ಲಿ ಉತ್ತಮ ಬದಲಾವಣೆ ತರಲು, ಮಂತ್ರಗಳು ಎಲ್ಲಾ ವೇದ ಗ್ರಂಥಗಳು ಮತ್ತು ಪುಸ್ತಕಗಳ ಸಂಪೂರ್ಣ ಪಠ್ಯಗಳ ಆಧಾರವಾಗಿವೆ ಮತ್ತು ವ್ಯಕ್ತಿಯಲ್ಲಿ ಆಧ್ಯಾತ್ಮಿಕತೆಯ ಭಾವನೆಗಳನ್ನು ಪ್ರಚೋದಿಸುವ ಪ್ರಬಲ ಮಾಧ್ಯಮವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ಋಷಿಮುನಿಗಳು, ಜ್ಯೋತಿಷಿಗಳು ಮತ್ತು ಸಾಮಾನ್ಯ ಜನರು ಧಾರ್ಮಿಕ ಮತ್ತು ಶುಭ ಆಚರಣೆಗಳಿಗಾಗಿ ಮತ್ತು ಧ್ಯಾನ ಉದ್ದೇಶಕ್ಕಾಗಿ ವಿವಿಧ ಪವಿತ್ರ ಮಂತ್ರಗಳನ್ನು ಜಪಿಸುತ್ತಾರೆ. ಈ ಪೈಕಿ, ಒಂದು ನಿರ್ದಿಷ್ಟ ಶಕ್ತಿಶಾಲಿ ಮಂತ್ರ ಜೊತೆಗೆ ಅದರ ಪ್ರಯೋಜನಗಳನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ. ಓಂಕಾರ ಮಂತ್ರ: ಹಿಂದೂ ಧರ್ಮದಲ್ಲಿ, ಈ ಏಕ ಉಚ್ಚಾರ ಮಂತ್ರ (ಓಂ Om) ಎಲ್ಲಾ ವೇದ, ಮಂತ್ರಗಳು, ಆಚರಣೆಗಳು ಮತ್ತು ಎಲ್ಲದರ ಮೂಲತತ್ತ್ವವಾಗಿದೆ (sacred and spiritual). ಇದು ಹಿಂದೂ ಧರ್ಮ, ಜೈನ ಮತ್ತು ಬೌದ್ಧ ಧರ್ಮದ ಜನರಿಂದ ಅಂಗೀಕರಿಸಲ್ಪಟ್ಟ ವಿಜ್ಞಾನವೇ ಆಗಿದೆ. ಇದನ್ನು ಧ್ಯಾನ ಅಥವಾ ಯೋಗದ ಮಹತ್ವದ ಭಾಗವಾಗಿ ಸಹ ಅಳವಡಿಸಿಕೊಳ್ಳಲಾಗಿದೆ. ಈ ಮಂತ್ರವನ್ನು ಜಪಿಸುವ ಜನರು ಪ್ರಶಾಂತ ಮತ್ತು ಶಾಂತ ಭಾವನೆ ಹೊಂದುತ್ತಾರೆ. ಇದು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡ, ಹೃದಯದ ತೊಂದರೆಗಳಂತಹ ದೇಹದ ವಿವಿಧ ಕಾಯಿಲೆಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಜತೆಗೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ದೇಹದೊಳಗೆ ಸೇರಿಕೊಂಡಿರುವ ವಿಷವನ್ನು ತೆಗೆದುಹಾಕುತ್ತದೆ (Om chanting health benefits).

ಓಂ ಉಚ್ಛಾರ ಮಾಡದೇ ಯಾವುದೇ ಪೂಜೆ ಸಂಪೂರ್ಣ ಆಗುವುದಿಲ್ಲ. ಮಂತ್ರಗಳಲ್ಲಿ ಓಂ ಉಚ್ಛಾರ ಮಾಡದೇ ಮಂತ್ರ ಹೇಗೆ ಪೂರ್ಣಗೊಳ್ಳುವುದು? ಆದರೆ ಓಂಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ. ಓಂ ನಿಂದ ಉಂಟಾಗುವ ಅಗಾಧ ಶಾರೀರಿಕ ಉಪಯೋಗಗಳು ಹೀಗಿವೆ. ಇದನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತವೆ.

ಪಚನ ಕ್ರಿಯೆ: ಓಂ ಉಚ್ಛಾರಣೆ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ.

ಸ್ಫೂರ್ತಿ: ಓಂ ಉಚ್ಛಾರಣೆ ಮಾಡುವುದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ.

ಸುಸ್ತು: ಆಯಾಸವನ್ನು ದೂರ ಮಾಡಲು ಸುಲಭ ಉಪಾಯ ಓಂ ಉಚ್ಛಾರ ಮಾಡುವುದು.

ನಿದ್ರೆ: ಸರಿಯಾಗಿ ನಿದ್ರೆ ಬಾರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

ಶ್ವಾಸಕೋಶ: ಓಂ ಉಚ್ಛಾರಣೆಯಿಂದ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ.

ಭಯ: ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ದೀರ್ಘ ಶ್ವಾಸ ತೆಗೆದುಕೊಂಡು, ಐದು ಬಾರಿ ಓಂ ಎಂದು ಉಚ್ಛರಿಸಿ.

ಒತ್ತಡ: ಇದು ಶರೀರದ ವಿಷ ಅಂಶಗಳನ್ನು ಹೊರ ಹಾಕುತ್ತದೆ. ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.

ರಕ್ತ ಸಂಚಾರ: ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಓಂ ಎಂದು ಹೇಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.

ಬೆನ್ನೆಲುಬು: ಓಂ ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ.

ಥೈರಾಯ್ಡ್‌: ಓಂ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್‌ ಗ್ರಂಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.

ಓಂ ಕಾರ ಎಂಬ ಮಂತ್ರದ ಹಿಂದಿರುವ ವಿಜ್ಞಾನ: ಭಾರತೀಯ ವೇದ ಪರಂಪರೆಗೆ ಬಹುದೊಡ್ಡ ಇತಿಹಾಸ ಇದೆ. ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ವೇದ ಮಂತ್ರಗಳು ಮನುಷ್ಯನನ್ನು ಆರೋಗ್ಯಕರವಾದ ಮಾರ್ಗದಲ್ಲಿ ಮುನ್ನಡೆಸಲು ಸಹಕಾರಿಯಾಗಿದೆ. ಈ ಮಾರ್ಗದಲ್ಲಿ ಪ್ರಥಮವಾಗಿ ಬರುವುದೇ ಓಂ ಕಾರದ ಮಂತ್ರ. ಈ ಓಂ ಕಾರವನ್ನು ಮಹಿಳೆಯರು ಮತ್ತು ಪುರುಷರು ಯಾರೇ ಆಗಲಿ ಸ್ವರ ಕ್ರಮ ಅನುಸರಿಸಿ ಉಚ್ಚರಿಸಿದರೆ ದೇಹ ಮತ್ತು ಆತ್ಮದ ಸಾಕ್ಷಾತ್ಕಾರವನ್ನು ಅನುಭವಿಸಬಹುದು.

ಓಂ ಎನ್ನುವ ಮಂತ್ರ ಅ ಉ ಮ ಎಂಬ ಮೂರು ಶಬ್ದಗಳನ್ನು ಒಳಗೊಂಡಿದೆ. ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಸೂರ್ಯೋದಯದ ಸಮಯದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಏಕಾಂತದಲ್ಲಿ ಕುಳಿತು ಓಂಕಾರ ಮಂತ್ರವನ್ನು ಜಪಿಸಿದರೆ ನಿಮ್ಮ ಇಡೀ ದೇಹ (ಮೆದುಳಿನಿಂದ ಪಾದದವರೆಗೂ) ಕಂಪಿಸುತ್ತದೆ. ಪರಿಣಾಮ ದೇಹದ ಜೊತೆಯಲ್ಲಿ ಆತ್ಮವೂ ಜಾಗೃತವಾಗುವುದರಿಂದ ದೇಹದ ನರ ನಾಡಿಗಳು ಚೈತನ್ಯಪೂರ್ವಕವಾಗಿ ಕೆಲಸ ಮಾಡುತ್ತವೆ.

ಓಂಕಾರವನ್ನು ಕಣ್ಣು ಮುಚ್ಚಿಕೊಂಡು ಹೀಗೆ ಜಪಿಸಬೇಕು. ಆರಂಭದ ಓ ಎನ್ನುವ ಶಬ್ದವನ್ನು ಜೋರಾಗಿ ಕನಿಷ್ಟ ಪಕ್ಷ 10 ಸೆಕೆಂಡು ಹೇಳುತ್ತಾ ತುಟಿಗಳನ್ನು ತೆರೆದು ಉಚ್ಚರಿಸಿ ಅಂ ಎನ್ನುವ ಶಬ್ಧ ಬಂದಾಗ ತುಟಿಗಳನ್ನು ಮುಚ್ಚಿಕೊಂಡು ಮ್ ಎಂದು ಹತ್ತು ಸೆಕೆಂಡು ಉಚ್ಚರಿಸಿ. ಹೀಗೆ ತುಟಿಗಳನ್ನು ಮುಚ್ಚಿಕೊಂಡು ಮ್ ಶಬ್ದವನ್ನು ನೀವು ಉಚ್ಚರಿಸುವಾಗ ನಿಮ್ಮ ಮೆದುಳಿನ ನರಗಳು ಅಲುಗಾಡುವ ಅದ್ಭುತವಾದ ಅನುಭವ ನಿಮಗಾಗುತ್ತದೆ. ಈ ಕ್ರಮವನ್ನು ಅನುಸರಿಸಿ ಪ್ರತಿನಿತ್ಯ ಓಂ ಕಾರ ಮಂತ್ರವನ್ನು 100 ಸಲ ಜಪಿಸುತ್ತಾ ಬಂದರೆ ಮಾನಸಿಕ ಖಾಯಿಲೆಗಳು ಮತ್ತು ದೈಹಿಕ ಖಾಯಿಲೆಗಳಾದ ಸುಸ್ತು, ತಲೆ ನೋವು, ಹೃದಯ ಸಂಬಂಧಿ ಖಾಯಿಲೆಗಳು, ರಕ್ತದೊತ್ತಡ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

ಮಕ್ಕಳಿಗೆ ಈ ಓಂಕಾರದ ಮಂತ್ರದ ಜಪದ ಅಭ್ಯಾಸ ಮಾಡಿಸಿದರೆ ಓದಿನಲ್ಲಿ ಏಕಾಗ್ರತೆ ಮೂಡುವುದರ ಜೊತೆಗೆ ನೆನಪಿನ ಶಕ್ತಿಯೂ ಹೆಚ್ಚುತ್ತದೆ! (ಆಕರ – ನಿತ್ಯಸತ್ಯ)

Also Read: Yelahanka engineer kidnap: ಯಲಹಂಕದ ರೈತ ಸಂತೆ ಬಳಿಯಿಂದ ಎಂಜಿನಿಯರ್ ಕಿಡ್ನ್ಯಾಪ್

Published On - 6:52 am, Thu, 3 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್