AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spiritual: ನಿಮ್ಮಲ್ಲಿ ಭಕ್ತಿ ಇದೆಯೇ ? ಭಕ್ತಿ ಹೇಗಿರಬೇಕು?

ಭಕ್ತಿಯನ್ನು ಕುರಿತಾಗಿ ಒಂದೇ ವಾಕ್ಯದಲ್ಲಿ ಹೇಳುವುದಾದರೆ ಅದು ದೇವತಾ ವಿಷಯಕವಾದ ರತಿ (ಪ್ರೀತಿ) ಎಂದು ಹೇಳಬಹುದು. ಈ ಪ್ರೀತಿ ಭಯದಿಂದ ಆಗಿದ್ದಲ್ಲಿ ಕೇವಲ ಭಯವನ್ನು ಮಾತ್ರ ನಾಶಮಾಡಬಲ್ಲದು.

Spiritual: ನಿಮ್ಮಲ್ಲಿ ಭಕ್ತಿ ಇದೆಯೇ ? ಭಕ್ತಿ ಹೇಗಿರಬೇಕು?
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 29, 2022 | 7:05 AM

Share

ಸಂಸಾರ ಚಕ್ರದಲ್ಲಿ ತಿರುಗುತ್ತಿರುವ ನಾವು ಈ ಹಾಲಾಹಲದಿಂದ ಮುಕ್ತರಾಗಿ ಆನಂದ ಸ್ಥಿತಿಯನ್ನು ಅನುಭವಿಸಲು ಹವಣಿಸುತ್ತಿರುವುದು ಮತ್ತು ಹೇಗೆ ಇದರಿಂದ ಪಾರಾಗುವುದು ಎಂದು ಚಿಂತಿಸುತ್ತಾ ನಮ್ಮ ವಯೋಮಾನವನ್ನು ಕಳೆದುಬಿಡುತ್ತಿದ್ದೇವೆ. ಇದಕ್ಕೆ ಕೆಲವು ದಾರಿಗಳಿವೆ. ಅದರಲ್ಲೊಂದಾದ ಮತ್ತು ಸುಲಭ ಸಾಧ್ಯವಾದ ಸಾಧನವೇ ಭಕ್ತಿ. ಏನೀ ಭಕ್ತಿ? ಶರಣಾಗುವುದೇ? ಕಷ್ಟ ಬರುವುದೆಂಬ ಭಯದಿಂದ ಸೇವೆಮಾಡುವುದೇ? ಅಥವಾ ಅಗರ್ಬತ್ತಿ, ದೀಪ, ನೈವೇದ್ಯವೆಂದು ಪೂಜೆ ಮಾಡುವುದೇ ? ಎಂಬಿತ್ಯಾದಿ ಪ್ರಶ್ನೆಗಳ ಸಾಲುಗಳು ಮೂಡಿಬರುತ್ತದೆ. ಇದಕ್ಕೆ ಪೂರಕವೆಂಬಂತೆ ಜಗತ್ತಿನಲ್ಲಿ ಮೂಢನಂಬಿಕೆಯ ಹೇರಿಕೆಯೂ ಕಾಣಸಿಗುತ್ತದೆ. ಹಾಗಾದರೆ ಈ ರೀತಿ ಆಗಲು ಕಾರಣವೇನು? ಅದಕ್ಕುತ್ತರವೇ ಈ ಲೇಖನ. ಮೊದಲು ನಾವು ಭಕ್ತಿ ಎಂದರೇನು ತಿಳಿಯೋಣ. ಶಾಸ್ತ್ರೀಯವಾಗಿ ಪದದ ಅರ್ಥವನ್ನು ಹೇಳುವುದಾದರೆ ಸೇವೆ, ಆರಾಧನೆ ಅಥವಾ ಒಂದೇ ವಸ್ತು/ವಿಚಾರದಲ್ಲಿ ಚಿತ್ತವನ್ನು ಇಡುವುದು ಎನ್ನಬಹುದು.

ಭಕ್ತಿಯನ್ನು ಕುರಿತಾಗಿ ಒಂದೇ ವಾಕ್ಯದಲ್ಲಿ ಹೇಳುವುದಾದರೆ ಅದು ದೇವತಾ ವಿಷಯಕವಾದ ರತಿ (ಪ್ರೀತಿ) ಎಂದು ಹೇಳಬಹುದು. ಈ ಪ್ರೀತಿ ಭಯದಿಂದ ಆಗಿದ್ದಲ್ಲಿ ಕೇವಲ ಭಯವನ್ನು ಮಾತ್ರ ನಾಶಮಾಡಬಲ್ಲದು. ಹೇಗೆ ಮಾವಿನ ಗೊರೆಟೆಯಿಂದ (ಬೀಜದಿಂದ) ಹಲಸಿನ ಗಿಡ ಬರಲು ಸಾಧ್ಯವಿಲ್ಲವೋ ಅದೇ ರೀತಿ ದೇವತಾ ವಿಷಯಕವಾಗಿ ಯಾವ ರೀತಿಯಲ್ಲಿ ಪ್ರೀತಿಯಭಾವ (ಭಕ್ತಿತುಂಬಿದಭಾವ) ಹರಿದಿದೆಯೋ ಅದೇ ಫಲ ಲಭ್ಯ. ಇದರಲ್ಲಿ ಮುಖ್ಯವಾಗಿ ನಾಲ್ಕು ವಿಧವಾದ ಭಾವವುಳ್ಳ ಜನರಿರುತ್ತಾರೆ. ಆರ್ತ,ಅರ್ಥಾರ್ಥಿ, ಜಿಜ್ಞಾಸು,ಜ್ಞಾನಿ ಎಂಬುದಾಗಿ.

ಇದನ್ನು ಓದಿ : ಮನಸ್ಸಿನ ಶುಭ್ರತೆಗೆ ಏನು ಮಾಡಬೇಕು ? ಚಂದ್ರನ ಆರಾಧನೆ ಹೇಗೆ ?

ಇದನ್ನೂ ಓದಿ
Image
Ashadha Amavasya 2022: ಆಷಾಢ ಅಮಾವಾಸ್ಯೆ ಯಾವಾಗ? ಪೂಜಾ ವಿಧಾನ ಹಾಗೂ ಶುಭ ಮುಹೂರ್ತ
Image
Spiritual: ಶುಕ್ರನ ಆರಾಧನೆ ಮಾಡಲು ಸರಿಯಾದ ಕ್ರಮ ಯಾವುದು ? ಶುಕ್ರನಿಗೆ ಈ ಬಣ್ಣದ ವಸ್ತ್ರ ಅತ್ಯಂತ ಪ್ರಿಯ
Image
Amavasya: ಅಮಾವಾಸ್ಯೆ ದಿನ ಮಗು ಹುಟ್ಟಿದರೆ ಶುಭವೋ? ಅಶುಭವೋ? ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ
Image
Spiritual: ಸೂರ್ಯನನ್ನು ಏಕೆ ಆರಾಧಿಸಬೇಕು? ಮಹತ್ವ, ಪೂಜಾ ವಿಧಿ, ಆರಾಧಿಸುವ ಕ್ರಮ ಹೀಗಿದೆ

ಇದರಲ್ಲಿ ಮೊದಲೆಯವನು ಆರ್ತ. ಜೀವನದಲ್ಲಿ ಅತಿಯಾದ ಸಂಕಟ ಅನುಭವಕ್ಕೆ ಬಂದಾಗ ದೇವರನ್ನು ನೆನೆಯುವವನು ಈತ. ಬೇರೆ ಸಮಯದಲ್ಲಿ ಇವನಿಗೆ ಭಗವಂತನ ಸೇವೆಯ ನೆನಪೂ ದುರ್ಲಭ. ಸಂಕಟ ಇವರನ್ನು ಬೆನ್ನಟ್ಟಿ ಬಂದಾಗ ಪೂರ್ವಾಪರ ಯೋಚಿಸದೇ ಹೇಗೆಂದರೆ ಹಾಗೆ ದೇವತಾನುಗ್ರಹವನ್ನು ಬಯಸುವವರು ಇವರು. ಇವರ ಭಕ್ತಿ ಪೂರ್ಣವಲ್ಲ.ಇದು ಕೇವಲ ಸಂಕಟದ ನಾಶಕ್ಕಾಗಿ ಮಾತ್ರ ಇರುವುದರಿಂದ ಇದು ಒಂದರ್ಥದಲ್ಲಿ ಶುದ್ಧ ನಿಸ್ವಾರ್ಥ(ಭಕ್ತಿಯಲ್ಲ) ಭಾವವಲ್ಲ.

ಎರಡನೇಯವನು ಅರ್ಥಾರ್ಥಿ . ಇವನು ಧನದ/ ಸಂಪತ್ತಿನ ಆಕಾಂಕ್ಷೆಯುಳ್ಳವನು. ಇವನ ಪ್ರಕಾರ ದೇವನು ಕಲ್ಪತರು . ಅವನ ಬಳಿ ನಾವು ಕೇಳಿ ಪಡೆಯಬೇಕು ಎಂಬ ಯೋಚನೆಯುಳ್ಳವನು. ವ್ಯವಹಾರ,ಮನೆವಾರ್ತೆ ಇಂತಹ ಕಡೆಯಲ್ಲಿ ನನ್ನಿಚ್ಛೆಯಂತೆ ಆದರೆ ಉತ್ಸವ,ಸೇವೆ ಅಥವಾ ವಸ್ತು ರೂಪದಲ್ಲಿ ಸಮರ್ಪಿಸುವೆ ಎಂದು ಬೇಡುವವನು. ಇದೂ ಶುದ್ಧಭಾವವಲ್ಲ.

ಮೂರನೆಯವನು ಜಿಜ್ಞಾಸು. ಇವನದ್ದು ವಿಚಾರ ಪ್ರಧಾನವಾದ ವ್ಯಕ್ತಿತ್ವ. ಈ ವಿಭಾಗದವರು ಪ್ರಪಂಚದಲ್ಲಿ ದೇವರು ಅಥವಾ ಅಲೌಕಿಕವಾದ ಒಂದು ಶಕ್ತಿ ಇದೆಯೇ? ಇದ್ದರೆ ಅದು ಹೇಗಿದೆ? ಎಂಬ ಜಿಜ್ಞಾಸೆಗಳಿಂದ ಕೂಡಿದ ಯಾವುದೇ ಸಂಕಟದ ನಿವಾರಣೆಯಾಗಲಿ,ಸಂಪತ್ತಿನ ಬಯಕೆಯಾಗಲಿ ಇವರ ಉದ್ದೇಶಿತ ಭಾವವಲ್ಲ. ಇಲ್ಲಿ ಇದೆಯೋ ಇಲ್ಲವೋ ? ಇದ್ದರೆ ಹೇಗೆಂದರ ಅನುಭವ ಎಂಬ ಸಂದೇಹ ನಿವಾರಣೆಯೇ ಇವರ ಉದ್ದೇಶ. ಇಲ್ಲಿ ಪ್ರಾಮಾಣಿಕ ಪ್ರಯತ್ನವಿದ್ದರೆ ಸಂದೇಹ ನಿವಾರಣೆ ನಿಶ್ಚಿತ. ಇದು ಒಂದು ಹಂತದ ಉತ್ತಮ ಭಾವವೇ.

ನಾಲ್ಕನೇಯವನು ಜ್ಞಾನಿ. ಇವನಿಗೆ ಏನೂ ಬೇಡ. ಆದರೂ ಭಗವಂತನ ಸೇವೆಯ ರೂಪದಲ್ಲಿ ಕಾರ್ಯ (ಕರ್ಮ)ವನ್ನು ಮಾಡುತ್ತಿರುತ್ತಾನೆ. ಭಗವಂತನ ಸಾಕ್ಷಾತ್ಕಾರವೇ ಇವನ ಮೂಲ ಉದ್ದೇಶ. ಇಲ್ಲಿ ಪರಿಶುಭ್ರವಾದ ಪ್ರೇಮ ಭಗವಂತನೆಡೆಗೆ ಸಾಗುತ್ತಿರುತ್ತದೆ. ಇಲ್ಲಿ ಸಂಕಟ,ಆಸೆ,ಜಿಜ್ಞಾಸೆ ಯಾವುದೂ ಇರುವುದಿಲ್ಲ. ಯಾವ ಪಾಶವೂ ಇಲ್ಲ ಇಲ್ಲಿ.ಅವನೆಂಬವನ ಭಗವಂತ ಸಿಕ್ಕರೆ ಎಲ್ಲಾ ಸಿಕ್ಕಂತೆ. ಭಗವತ್ಪ್ರೀತಿಯೊಂದೇ ಇಲ್ಲಿ ಕಾಣುವುದರಿಂದ ಇದು ಪರಿಶುದ್ಧ ಭಾವದ ಭಕ್ತಿ.

ಇಲ್ಲಿ ಒಂದು ರಾಮಾಯಣದ ಘಟನೆಯೊಂದನ್ನು ಹೇಳಲೇ ಬೇಕು ಎಂದೆನಿಸುತ್ತದೆ. ಶಬರಿ ತನ್ನ ಹದಿನಾರನೇ ವಯಸ್ಸಿನಿಂದ ಇಳಿವಯಸ್ಸಿನವರೆಗೆ ಭಗವಂತ ಬರುವ ಎಂಬ ಶುದ್ಧಭಾವದಿಂದ ಕಾದಳು. ಆ ಭಾವದ ಫಲವೇ ಶ್ರೀರಾಮನು ಬಂದ ಅವಳು ನೀಡಿದ ಎಂಜಲು ಹಣ್ಣನ್ನು ತಿಂದ. ಇಲ್ಲಿ ನಮಗೆ ನಿಮಗೆ ಮಾತ್ರ ಎಂಜಲು ಎಂದು ಕಾಣುತ್ತಿರುವುದು. ಆ ಸಂದರ್ಭದಲ್ಲಿ ಭಕ್ತಿಯ ಪ್ರೇಮಭಾವ ರಾಮಶಬರಿಯಲ್ಲಿ ಅದ್ವೈತವಾಗಿತ್ತು (ಭಕ್ತ ಭಗವಂತರಿಬ್ಬರೂ ಒಂದೇ ಎಂಬ ಭಾವದ ಉದಯವಾಗಿತ್ತು). ಅಂತಹ ಸ್ಥಿತಿಯೇ ಆನಂದದ ಪರಾಕಾಷ್ಠೆ.

ಭಾಗವತ ಮಹಾಪುರಾಣದ ಪ್ರಕಾರ ಭಕ್ತಿ

ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ |

ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಂ ||

ಭಕ್ತಿಯಲ್ಲಿ ಒಂಭತ್ತು ವಿಧ

ಶ್ರವಣಂ ,ಕೀರ್ತನಂ,ಸ್ಮರಣಂ, ಪಾದಸೇವನಂ,ಅರ್ಚನಂ,ವಂದನಂ,ದಾಸ್ಯಂ,ಸಖ್ಯಂ,ಆತ್ಮನಿವೇದನಮ್ ಎಂದು ವಿಭಾಗ. ಇಲ್ಲಿ ವಿಷ್ಣೋಃ ಎನ್ನುವುದು ಭಗವಂತ (ಅವನ) ಎನ್ನುವ ಅರ್ಥದಲ್ಲಿ ಹೇಳಲಾಗಿದೆ. ಇದೆಲ್ಲದರಲ್ಲೂ ಭಗವದ್ಗೀತೆಯಲ್ಲಿ ಹೇಳಿದಂತೆ ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |

ಯಾರೇ ಆಗಲಿ ಎಲೆ,ಹೂವು,ಹಣ್ಣು,ನೀರು ಇವುಗಳನ್ನು ಶುದ್ಧಪ್ರೇಮ(ಸ್ವಾರ್ಥವಿರದ ಭಕ್ತಿ) ಭಾವದಿಂದ ಅರ್ಪಿಸುತ್ತಾನೋ ಅಂತಹ ಭಕ್ತ ಸಮರ್ಪಿಸಿದ ವಸ್ತುವನ್ನು ನಾನು ಸ್ವೀಕರಿಸುವೆ ಎಂದು ಭಗವಂತನ ಮಾತು. ಅಂದರೆ ನಾನು ಮಾಡುವ ಭಗವಂತನ ಕುರಿತಾದ ಯಾವುದೇ ಕಾರ್ಯವಿರಲಿ ಅಲ್ಲಿ ಎಲ್ಲಾ ಮರೆತು ಅವನೊಬ್ಬನೇ ಸತ್ಯ,ಅದೊಂದೇ ಆನಂದ, ನಾನೆಂಬುದು ಶೂನ್ಯ ಎಂದು ತಿಳಿದು ಅವನನ್ನು ಪರಿಶುದ್ಧ ಪ್ರೇಮಭಾವದಿಂದ ಕಾಣುವುದೇ ನಿಜವಾದ ಭಕ್ತಿ. ಯಾರು ಮನಸ್ಸನ್ನು ಭಗವಂತನ ಮೇಲೆ ಇಟ್ಟು ಯಾವುದೇ ಕೀರ್ತಿ,ಲಾಭ ಇತ್ಯಾದಿ ಫಲ ಬಯಸದೇ ಸಗುಣೋಪಾಸನೆ ಮಾಡುವರೋ ಅಂತಹ ಭಕ್ತರ ಸಂಪೂರ್ಣ ರಕ್ಷಣೆಯ ಹೊಣೆ ಭಗವಂತ ನೋಡಿಕೊಳ್ಳುತ್ತಾನೆ.

ಮಹಾಭಾರತದ ಒಂದು ಸಂದರ್ಭ – ಒಂದು ದಿನ ಸಂಜೆ ಶ್ರೀಕ್ರಷ್ಣ , ದ್ರೌಪದೀ, ಸುಭದ್ರೆ ಗಾಳಿಪಟ ಹಾರಿಸುತ್ತಿರುತ್ತಾರೆ. ಆಗ ಹಠಾತ್ತಾಗಿ ಭಗವಂತನ ಕೈಗೆ ಗಾಯವಾಗುತ್ತದೆ. ಅದನ್ನು ನೋಡಿದ ಅವನ ಒಡಹುಟ್ಟಿದ ಸಹೋದರಿ ಸುಭದ್ರೆ ಅರಮನೆಯ ಒಳಗೆ ವಸ್ತ್ರ ತರಲು ಹೋಗುವಳು. ಅದೇ ಕೆಲವು ಕ್ಷಣಗಳ ನಂತರ ಗಮನಿಸಿದ ದ್ರೌಪದಿ ತಾನುಟ್ಟ ಸೀರೆಯ ಸೆರಗನ್ನೇ ಹರಿದು ಅವನ ಕೈಗೆ ಸುತ್ತುವಳು. ಈ ಭಾವ ತುಂಬಿದ ತ್ಯಾಗವೇನಿದೆ ಇಲ್ಲಿ ಭಗವಂತನ ಅರ್ಥಾತ್ ತನ್ನ ಗೆಳೆಯನ ಉಪಚಾರಕ್ಕೆ ಸ್ವಲ್ಪವೂ ಯೋಚಿಸದೆ ಯಾವುದೇ ಫಲಾಪೇಕ್ಷೆ ಇಲ್ಲದೆ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ ದ್ರೌಪದಿ. ಅದರ ಫಲವೇ ಅವಳಿಗೆ ಅಕ್ಷಯವಾದ ಸೆರಗನ್ನು ಭಗವಂತ ಕರುಣಿಸುವನು. ಎಲ್ಲಾ ನೋಡಿದಾಗ ಬರುವ ಯೋಚನೆಯೆಂದರೆ ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಶುದ್ಧಪ್ರೇಮ ಭಾವದಿಂದ ಭಗವಂತನ ಆರಾಧನೆಯೇ ನಿಜವಾದ ಭಕ್ತಿ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College, Honnavar

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?