Ram Navami 2022: ಶ್ರೀ ರಾಮನನ್ನು ರಾಮಚಂದ್ರ ಎಂಬ ಅನ್ವರ್ಥ ನಾಮದಿಂದ ಕರೆದವರು ಯಾರು, ಯಾಕೆ?

Naming: ಆ ಒಂದು ಪುಟ್ಟ ಶ್ಲೋಕದಲ್ಲಿ ಶ್ರೀ ರಾಮನ ಹತ್ತಾರು ಹೆಸರುಗಳು ನಿಗೂಢವಾಗಿ ಉಲ್ಲೇಖವಾಗಿವೆ. ಆದರೆ ಆ ಪದ ಪ್ರಯೋಗಗಳ ಹಿಂದಿರುವ ಗೂಢಾರ್ಥ ಮನಸ್ಸಿಗೆ ಮುದವನ್ನುಂಟು ಮಾಡುವಂತಹುದು. ಅದನ್ನು ಅರಿಯುವ ಪ್ರಯತ್ನ ಇಲ್ಲಿ ನಡೆದಿದೆ.

Ram Navami 2022: ಶ್ರೀ ರಾಮನನ್ನು ರಾಮಚಂದ್ರ ಎಂಬ ಅನ್ವರ್ಥ ನಾಮದಿಂದ ಕರೆದವರು ಯಾರು, ಯಾಕೆ?
Ram Navami 2022: ಶ್ರೀ ರಾಮನನ್ನು ರಾಮಚಂದ್ರ ಎಂಬ ಅನ್ವರ್ಥನಾಮದಿಂದ ಕರೆದವರು ಯಾರು, ಯಾಕೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 09, 2022 | 5:42 PM

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ । ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ॥ ಇದು ಬಹು ಪ್ರಸಿದ್ಧವಾದ ಶ್ಲೋಕ. ಶ್ರೀ ರಾಮನ ಹತ್ತಾರು ಹೆಸರುಗಳು (Naming) ಇದರಲ್ಲಿ ನಿಗೂಢವಾಗಿ ಉಲ್ಲೇಖವಾಗಿವೆ. ಆದರೆ ಆ ಪದ ಪ್ರಯೋಗಗಳ ಹಿಂದಿರುವ ಗೂಢಾರ್ಥ ಮನಸ್ಸಿಗೆ ಮುದವನ್ನುಂಟು ಮಾಡುವಂತಹುದು. ಅದನ್ನು ಅರಿಯುವ ಪ್ರಯತ್ನ ಇಲ್ಲಿ ನಡೆದಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ದೇವಾನುದೇವತೆಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ತ್ವ, ಮಹ್ವತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀ ರಾಮ ನವಮಿಯಂದು ಶ್ರೀ ರಾಮ ತತ್ತ್ವವು ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮ ನಾಮ ಜಪ, ಶ್ರೀ ರಾಮನ ಉಪಾಸನೆಗಳನ್ನು ಮಾಡುವುದರಿಂದ ಬಹಳ ಪ್ರಯೋಜನ ಪಡೆಯಬಹುದೆಂದು ಹೇಳಲಾಗುತ್ತದೆ. ಶ್ರೀರಾಮ ಜನಿಸಿದ ನವಮಿ ದಿನ ಶ್ರೀ ರಾಮ ನವಮಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ನಾಳೆ ಭಾನುವಾರ ಏಪ್ರಿಲ್ 10ರಂದು ಆಚರಿಸಲಾಗುವುದು. ಈ ದಿನ ಪುನರ್ವಸು ನಕ್ಷತ್ರದಲ್ಲಿ, ಕಟಕ ರಾಶಿಯಲ್ಲಿ, ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ (Muhurat) ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿ ಶ್ರೀ ರಾಮ ನವಮಿ ಎಂದರೆ ಹಬ್ಬದ ಸಂಭ್ರಮ (Spiritual). ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ (Ram Navami 2022).

  1. ರಾಮಾ: ಶ್ರೀರಾಮಚಂದ್ರನನ್ನು ದಶರಥ ಚಕ್ರವರ್ತಿ ಮಾತ್ರ ರಾಮಾ ಎಂದು ಕರೆಯುತ್ತಿದ್ದನಂತೆ. ಆ ರೀತಿಯ ಅಧಿಕಾರ ತಂದೆಯಾದವನಿಗೆ ಮಾತ್ರ.
  2. ರಾಮಭದ್ರ: ಇನ್ನು ತಾಯಿಯಾದ ಕೌಸಲ್ಯೆ ಮಗನನ್ನು ರಾಮಭದ್ರ ಎನ್ನುತ್ತಿದ್ದಳಂತೆ. ಅದು ವಾತ್ಸಲ್ಯಭರಿತವಾದ ಸಂಬೋಧನೆ.
  3. ರಾಮಚಂದ್ರ: ಚಿಕ್ಕಮ್ಮ ಕೈಕೇಯಿ ರಾಮಚಂದ್ರ ಎನ್ನುತ್ತಿದ್ದಳು. ಬಾಲ್ಯದಲ್ಲಿ ಬಾನಿನಲ್ಲಿರುವ ಚಂದ್ರ ಬೇಕೆಂದು ಅಳುತ್ತಿದ್ದ ಶ್ರೀರಾಮನಿಗೆ ಕೈಕೇಯಿ-ಮಂಥರೆಯರು ಕನ್ನಡಿಯೊಳಗೆ ಚಂದ್ರಬಿಂಬ ತೋರಿಸಿ ಸಮಾಧಾನಪಡಿಸಿದ್ದರು! ಆ ಕಾರಣದಿಂದ ರಾಮಚಂದ್ರ ಎಂಬ ಅನ್ವರ್ಥನಾಮ.
  4. ಪರತತ್ತ್ವ: ಬ್ರಹ್ಮರ್ಷಿಗಳಾದ ವಶಿಷ್ಠರು ಶ್ರೀರಾಮನನ್ನು ಪರತತ್ತ್ವವೆಂದು ತಿಳಿದು ವೇಧಸೇ ಎಂದು ಕರೆಯುತ್ತಿದ್ದರು.
  5. ರಘುನಾಥ: ಆದರೆ ಅಯೋಧ್ಯೆಯ ಪುರಜನರೆಲ್ಲಾ ’ನಮ್ಮ ರಘುವಂಶದ ಅರಸು’ ಎಂಬರ್ಥದಲ್ಲಿ ರಘುನಾಥ ಎಂದು ಕರೆಯುತ್ತಿದ್ದರು.
  6. ನಾಥ: ಇನ್ನು ನಾಥ ಎಂದಷ್ಟೆ ಕರೆಯುತ್ತಿದ್ದವಳು ಸೀತಾದೇವಿ ಮಾತ್ರ. ಹಾಗೆ ಕರೆಯುವುದು ಅವಳೊಬ್ಬಳ ಹಕ್ಕು!
  7. ಸೀತಾಯಾಃ ಪತಯೇ: ಆದರೆ ಮಿಥಿಲೆಯ ಜನರೆಲ್ಲರೂ ’ನಮ್ಮ ಸೀತೆಯ ಗಂಡ’ ಎಂಬ ಅಭಿಮಾನದಿಂದ ಸೀತಾಯಾಃ ಪತಯೇ ಎನ್ನುತ್ತಿದ್ದರು. ಇಂತಹ ಪುರುಷೋತ್ತಮನಾದ ರಾಮನಿಗೆ ಅಭಿಮಾನಪೂರ್ವಕ ನಮಸ್ಕಾರ ಸಲ್ಲಿಸೋಣ. (ಬರಹ – ಸದ್ವಿಚಾರ ಮೂಲ)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್