ರಾವಣ ಕುಬೇರನಿಂದ ಕಿತ್ತುಕೊಂಡಿದ್ದ ಚಂದ್ರಕಾಂತ ಮಣಿ ಈಗ ಎಲ್ಲಿದೆ?

Story of Chandrakanta Mani: ದೇವಾಲಯದ ಅರ್ಚಕರಿಂದ ಹಿಡಿದು ಧರ್ಮದ ಬಗ್ಗೆ ಜ್ಞಾನವುಳ್ಳ ಎಲ್ಲರೂ ಈ ವಿಷಯವನ್ನು ಶಿವ ಪುರಾಣ, ಸ್ಕಂದ ಪುರಾಣ, ರಾವಣ ಸಂಹಿತೆ ಮತ್ತು ಇತರ ಗ್ರಂಥಗಳ ಆಧಾರದ ಮೇಲೆ ತುಲನೆ ಮಾಡಲು ಮುಂದಾದರು. ಅವುಗಳಲ್ಲಿ ಚಂದ್ರಕಾಂತ ಮಣಿ ಉಲ್ಲೇಖಗಳು, ಇನ್ನಿತರೆ ಗುಣಲಕ್ಷಣಗಳು ಈದೇವಸ್ಥಾನದಲ್ಲಿ ಕಂಡುಬಂದ ವಸ್ತುವಿನ ಗುಣಲಕ್ಷಣಗಳಿಗೆ ಹೊಂದಿಕೆಯಾಗುವುದು ಕಂಡುಬಂದಿತು

ರಾವಣ ಕುಬೇರನಿಂದ ಕಿತ್ತುಕೊಂಡಿದ್ದ ಚಂದ್ರಕಾಂತ ಮಣಿ ಈಗ ಎಲ್ಲಿದೆ?
ಚಂದ್ರಕಾಂತ ಮಣಿ ಈಗ ಎಲ್ಲಿದೆ?
Follow us
ಸಾಧು ಶ್ರೀನಾಥ್​
|

Updated on: Jul 27, 2024 | 6:06 AM

Story of Chandrakanta Mani: ನೀವು ಬೈಜನಾಥ ಧಾಮಕ್ಕೆ ಹೋಗಿದ್ದರೆ, ಅಲ್ಲಿನ ದೇವಾಲಯದ ಶಿಖರದಲ್ಲಿ ಹೊಳೆಯುವ ವಸ್ತುವೊಂದನ್ನು ನೋಡಿರಬೇಕು. ದೂರದಿಂದ ಹೊಳೆಯುತ್ತಿರುವ ಈ ವಸ್ತುವು ವಿದ್ಯುತ್ ಬಲ್ಬ್ ಅಥವಾ ಕೃತಕ ಬೆಳಕಿನದ್ದಲ್ಲ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ರಾವಣೇಶ್ವರ ದೇವಾಲಯದ ಶಿಖರದ ಮೇಲೆ ಕುಳಿತಿರುವ ಈ ಮಣಿಯು ವಾಸ್ತವವಾಗಿ ಚಂದ್ರಕಾಂತ ಮಣಿಯಾಗಿದೆ. ಅದೇ ಚಂದ್ರಕಾಂತ ಮಣಿಯ ಬಗ್ಗೆ ಶಿವಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಅನೇಕ ಬಾರಿ ಉಲ್ಲೇಖಿಸಲಾಗಿದೆ. ಮೊದಲು ಈ ಚಂದ್ರಕಾಂತ ರತ್ನವು ಶಿವನ ಮುಡಿಯಲ್ಲಿತ್ತು. ಅಲ್ಲಿಂದ ಅದು ಕುಬೇರನ ಖಜಾನೆಗೆ ಬಂದಿತು ಮತ್ತು ನಂತರ ರಾಕ್ಷಸ ರಾಜ ರಾವಣ ಅದನ್ನು ಕುಬೇರನಿಂದ ಕಿತ್ತುಕೊಂಡಿದ್ದ.

ಈ ಚಂದ್ರಕಾಂತ ರತ್ನವು ಲಂಕಾ ಪತಿ ರಾವಣನ ಖಜಾನೆಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಬೈಜನಾಥ ಧಾಮದ (Baidyanath Dham Deoghar Jharkhand) ಶಿಖರವನ್ನು ಹೇಗೆ ತಲುಪಿತು ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಉತ್ತರಿಸುವ ಕಥೆಯು ಸ್ವಲ್ಪ ಉದ್ದವಾಗಿದೆ, ಆದರೆ ಇಲ್ಲಿ ನಾವು ನಿಮಗೆ ಸಂಕ್ಷಿಪ್ತವಾಗಿ ಹೇಳುತ್ತೇವೆ. ಜಾರ್ಖಂಡ್‌ನ ದಿಯೋಘರ್‌ನ ಈ ಪ್ರಸಿದ್ಧ ಜ್ಯೋತಿರ್ಲಿಂಗಕ್ಕೆ ಮೊದಲಿನಿಂದಲೂ ಶಿವಭಕ್ತರ ದಂಡೇ ಬರುತ್ತಿತ್ತು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶ ಮತ್ತು ಪ್ರಪಂಚದಾದ್ಯಂತದ ಭಕ್ತರು ಇಲ್ಲಿಗೆ ಬರಲು ಪ್ರಾರಂಭಿಸಿದರು. ಇಂತಹ ಪರಿಸ್ಥಿತಿಯಲ್ಲಿ ದೇವಸ್ಥಾನದ ಒಂದೇ ಬಾಗಿಲಿನಿಂದ ಎಲ್ಲ ಶಿವಭಕ್ತರ ಪ್ರವೇಶ ಮತ್ತು ನಿರ್ಗಮನದಲ್ಲಿ ಸಮಸ್ಯೆ ಉಂಟಾಗಿತ್ತು.

ಚಂದ್ರಕಾಂತ ರತ್ನವು 1962 ರಲ್ಲಿ ಉತ್ಖನನದ ಸಮಯದಲ್ಲಿ ಕಂಡುಬಂದಿತು: ಅಂತಹ ಪರಿಸ್ಥಿತಿಯಲ್ಲಿ, ದೇವಾಲಯದ ಆಡಳಿತ ಮತ್ತು ಜಾರ್ಖಂಡ್ ಸರ್ಕಾರವು ದೇವಾಲಯದ ಒಂದು ಗೋಡೆಯನ್ನು ಕೆಡವಿ ಮತ್ತೊಂದು ಬಾಗಿಲನ್ನು ನಿರ್ಮಿಸುವ ಕೆಲಸವನ್ನು 1962 ರಲ್ಲಿ ಪ್ರಾರಂಭಿಸಿತು. ಇದಕ್ಕಾಗಿ ಸತತ ಮೂರು ದಿನಗಳ ಕಾಲ ಉತ್ಖನನ ನಡೆಸಲಾಯಿತು. ಮೂರನೇ ದಿನ ಮಧ್ಯಾಹ್ನ ಅಗೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಲೋಹದಂತಹ ವಸ್ತುವೊಂದು ಕೆಲಸಗಾರನ ಸಲಿಕೆಗೆ ತಗುಲಿತು. ಶಬ್ದ ಬಹಳ ಜೋರಾಗಿತ್ತು. ಕಾರ್ಮಿಕರು ಅಲ್ಲಿಂದ ಮಣ್ಣನ್ನು ತೆಗೆದಾಗ, ಭೂಮಿಯ ಆಳದಲ್ಲಿ ಒಂದು ವಿಚಿತ್ರವಾದ, ಹೊಳೆಯುವ ವಸ್ತುವು ಬಿದ್ದಿರುವುದು ಕಂಡುಬಂದಿತು. ಕೂಡಲೇ ಕಾರ್ಮಿಕರು ಗುತ್ತಿಗೆದಾರರಿಗೆ ಮಾಹಿತಿ ನೀಡಿದ್ದು, ಗುತ್ತಿಗೆದಾರರು ದೇವಸ್ಥಾನದ ಆಡಳಿತ ಮಂಡಳಿಗೆ ಮಾಹಿತಿ ನೀಡಿದರು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯು ತಕ್ಷಣ ಸ್ಥಳೀಯ ಪೊಲೀಸರು, ಆಡಳಿತ ಮಂಡಳಿ ಹಾಗೂ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿತ್ತು.

ಮತ್ತಷ್ಟು ಓದಿ: ಆ ದೇಶದಲ್ಲಿ ಸೊಳ್ಳೆಗಳೇ ಇಲ್ಲಾ, ಡೆಂಗ್ಯೂ ಮಾತೂ ಇಲ್ಲ! ಯುರೋಪ್ ಕುರಿತಾದ ಅನೇಕ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ

ವಿದ್ವಾಂಸರ ಅಭಿಪ್ರಾಯದ ಮೇರೆಗೆ ದೇವಾಲಯದ ಶಿಖರದಲ್ಲಿ ಅದನ್ನು ಸ್ಥಾಪಿಸಲಾಯಿತು: ರಾಜ್ಯ ಸರ್ಕಾರದ ಸೂಚನೆಯಂತೆ ಈ ವಸ್ತುವನ್ನು ಗುರುತಿಸಲು ವಿಜ್ಞಾನಿಗಳು, ಪುರಾತತ್ವಶಾಸ್ತ್ರಜ್ಞರು ಮತ್ತು ದೇವತಾಶಾಸ್ತ್ರದ ವಿದ್ವಾಂಸರನ್ನು ಕರೆಯಲಾಯಿತು. ಪ್ರತಿಯೊಬ್ಬರೂ ಅದನ್ನು ತಮ್ಮದೇ ಆದ ರೀತಿಯಲ್ಲಿ ತನಿಖೆ ಮಾಡಿದರು. ಆ ಸಮಯದಲ್ಲಿ, ಪುರಾತತ್ವ ಇಲಾಖೆಯ ಅಧಿಕಾರಿಗಳು ಇದನ್ನು ಬಹಳ ಪ್ರಾಚೀನವೆಂದು ಪರಿಗಣಿಸಿದರು, ಆದರೆ ಅದನ್ನು ನಿಖರವಾಗಿ ಗುರುತಿಸಲು ನಿರಾಕರಿಸಿದರು.

ಅದೇ ಸಮಯದಲ್ಲಿ ವಿಜ್ಞಾನಿಗಳು ಈ ವಸ್ತುವಿನ ಸರಿಯಾದ ವಯಸ್ಸನ್ನು ಲೆಕ್ಕಾಚಾರ ಮಾಡಲು ತಮ್ಮ ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದಾರೆ. ಇದಾದ ನಂತರ, ದೇವಾಲಯದ ಅರ್ಚಕರಿಂದ ಹಿಡಿದು ಧರ್ಮದ ಬಗ್ಗೆ ಜ್ಞಾನವುಳ್ಳ ಎಲ್ಲರೂ ಈ ವಿಷಯವನ್ನು ಶಿವ ಪುರಾಣ, ಸ್ಕಂದ ಪುರಾಣ, ರಾವಣ ಸಂಹಿತೆ ಮತ್ತು ಇತರ ಗ್ರಂಥಗಳ ಆಧಾರದ ಮೇಲೆ ತುಲನೆ ಮಾಡಲು ಮುಂದಾದರು. ಅವುಗಳಲ್ಲಿ ಚಂದ್ರಕಾಂತ ಮಣಿ ಉಲ್ಲೇಖಗಳು, ಇನ್ನಿತರೆ ಗುಣಲಕ್ಷಣಗಳು ಈದೇವಸ್ಥಾನದಲ್ಲಿ ಕಂಡುಬಂದ ವಸ್ತುವಿನ ಗುಣಲಕ್ಷಣಗಳಿಗೆ ಹೊಂದಿಕೆಯಾಗುವುದು ಕಂಡುಬಂದಿದೆ. ಕೊನೆಗೆ ಈ ವಸ್ತು ಬೇರೇ ಯಾವುದೋ ಅಲ್ಲ, ಅದು ನಿಜವಾದ ಚಂದ್ರಕಾಂತ ಮಣಿ ಎಂದು ಅಂತಿಮ ನಿರ್ಧಾರಕ್ಕೆ ಬಂದರು.

ಪುರಾಣದಲ್ಲಿ… ರಾವಣನು ಕುಬೇರನಿಂದ ಈ ರತ್ನವನ್ನು ಕಿತ್ತುಕೊಂಡನು: ಮುಂದೆ… ವಿದ್ವಾಂಸರೊಂದಿಗೆ ಚರ್ಚಿಸಿದ ನಂತರ, ದೇವಸ್ಥಾನದಲ್ಲಿ ದೊರೆತ ರತ್ನವನ್ನು ಬೈಜನಾಥ ದೇವಾಲಯದ ಶಿಖರದಲ್ಲಿ ಸ್ಥಾಪಿಸಲಾಯಿತು. ಈ ರತ್ನವನ್ನು ಸಂರಕ್ಷಿಸಲು ಶಿವನ ತಲೆಗಿಂತ ಉತ್ತಮವಾದ ಸ್ಥಳವಿಲ್ಲ ಎಂದು ಹೇಳಲಾಗಿದೆ. ಎರಡನೆಯದಾಗಿ, ಇಲ್ಲಿಗೆ ಬರುವ ಭಕ್ತರು ಸುಲಭವಾಗಿ ಈ ರತ್ನದ ದರ್ಶನವನ್ನು ಹೊಂದಲು ಸಾಧ್ಯವಾಗುತ್ತದೆ. ಪೌರಾಣಿಕ ನಂಬಿಕೆಯ ಪ್ರಕಾರ ಈ ರತ್ನವು ಇಲ್ಲಿಗೆ ಹೇಗೆ ಬಂದಿತು ಎಂದರೆ…

ಒಂದು ಕಾಲದಲ್ಲಿ ಈ ರತ್ನವು ಎರಡು ಭಾಗಗಳಾಗಿ ಇತ್ತು. ಶಿವನು ಅದನ್ನು ದೇವತೆಗಳಿಗೆ ಕೊಟ್ಟನು. ದೇವತೆಗಳು ಈ ರತ್ನಗಳಲ್ಲಿ ಒಂದನ್ನು ಲಕ್ಷ್ಮಿ ದೇವಿಗೆ ನೀಡಿದರು ಮತ್ತು ಇನ್ನೊಂದು ರತ್ನವನ್ನು ಕುಬೇರನ ಖಜಾನೆಯಲ್ಲಿಟ್ಟರು. ಈ ರತ್ನವು ಕುಬೇರನ ಖಜಾನೆಯಲ್ಲಿ ದೀರ್ಘಕಾಲ ಉಳಿಯಿತು. ಆದರೆ ಅತ್ತ ರಾವಣನ ಶಕ್ತಿ ಹೆಚ್ಚಾದಂತೆ ಪುಷ್ಪಕ ವಿಮಾನವನ್ನು ಕುಬೇರನಿಂದ ಕಿತ್ತುಕೊಂಡನು. ಅದೇ ಸಮಯದಲ್ಲಿ, ಕುಬೇರನ ಖಜಾನೆಯಲ್ಲಿದ್ದ ಈ ಚಂದ್ರಕಾಂತ ರತ್ನದ ಮೇಲೆ ರಾವಣನ ಕಣ್ಣು ಬಿತ್ತು. ತಕ್ಷಣ ಅದನ್ನು ತನ್ನ ವಶಕ್ಕೆ ತೆಗೆದುಕೊಂಡುಬಿಟ್ಟನು.

ಮತ್ತಷ್ಟು ಓದಿ: Also Read: No Entry for Men Devotees – ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ, ಅದರಲ್ಲಿ 2 ಪುರುಷರದ್ದೇ ದೇವಾಲಯಗಳು! ಯಾಕೀ ಶಾಪ, ಕಟ್ಟುಪಾಡು?

ಈ ರತ್ನವು ಜ್ಯೋತಿರ್ಲಿಂಗದ ಸಮಯದಲ್ಲಿ ನೆಲದಲ್ಲಿ ಹೂತುಹೋಗಿತ್ತು:

ರಾವಣ ಈ ರತ್ನವನ್ನು ಯಾವಾಗಲೂ ತನ್ನ ಬಳಿ ಇಟ್ಟುಕೊಂಡಿದ್ದನು. ಒಮ್ಮೆ, ಕೈಲಾಸ ಪರ್ವತದಿಂದ ಲಂಕೆಗೆ ಶಿವಲಿಂಗವನ್ನು ತೆಗೆದುಕೊಂಡು ಹೋಗುವಾಗ, ಈ ಜ್ಯೋತಿರ್ಲಿಂಗವು ದೇವಘಡದ ಭೂಮಿಯಲ್ಲಿಯೇ ಸ್ಥಾಪನೆಗೊಂಡುಬಿಟ್ಟಿತು. ಆ ಸಮಯದಲ್ಲಿ ರಾವಣ ಅದನ್ನು ಎತ್ತಲು ಪ್ರಯತ್ನಿಸಿದನು. ಆದರೆ ಈ ಯತ್ನದಲ್ಲಿ ಸೋತು, ಚಂದ್ರಕಾಂತ ಮಣಿಯನ್ನು ಕಳೆದುಕೊಂಡ. ಶಿವಲಿಂಗದ ಜೊತೆಗೆ ಈ ರತ್ನವೂ ಭೂಮಿಯಲ್ಲಿ ಹುದುಗಿ ಹೋಯಿತು ಎಂದು ನಂಬಲಾಗಿದೆ. ನಂತರ, ಬೈಜು ಎಂಬ ಕುರುಬನು ಮಣ್ಣನ್ನು ತೆಗೆದು ಶಿವಲಿಂಗವನ್ನು ಹೊರತೆಗೆದನಾದರೂ ಚಂದ್ರಕಾಂತ ಮಣಿಯು ನೆಲದಲ್ಲಿಯೇ ಹೂತುಹೋಯಿತು. ಇದನ್ನು ಮುಂದೆ 1962 ರಲ್ಲಿ ತೆಗೆಯಲಾಯಿತು.

ಇನ್ನಷ್ಟು  ಪ್ರೀಮಿಯಂ ಲೇಖನಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್